Vijayapura: ನಾಲ್ವತವಾಡದಲ್ಲಿ ವರುಣ ಕೃಪೆಗಾಗಿ ಮಕ್ಕಳಿಗೆ ಮದುವೆ!

By Govindaraj S  |  First Published Jun 17, 2022, 11:31 AM IST

ಮಳೆಗಾಗಿ ಕಪ್ಪೆಗಳ ಮದುವೆ, ಕತ್ತೆ ಮದುವೆಗಳನ್ನ ಮಾಡಿಸೋದನ್ನ ನಾವು ನೋಡಿದ್ದೇವೆ. ಗ್ರಾಮೀಣ ಭಾಗಗಳಲ್ಲಿ ಈ ರೀತಿಯ ಆಚರಣೆಗಳು ಕಾಣಸಿಗ್ತವೇ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ನಡೆದು ಅದೊಂದು ಮದುವೆ ಜನರನ್ನ ಹುಬ್ಬೇರಿಸುವಂತೆ ಮಾಡಿದೆ.


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಜೂ.17): ಮಳೆಗಾಗಿ ಕಪ್ಪೆಗಳ ಮದುವೆ, ಕತ್ತೆ ಮದುವೆಗಳನ್ನ ಮಾಡಿಸೋದನ್ನ ನಾವು ನೋಡಿದ್ದೇವೆ. ಗ್ರಾಮೀಣ ಭಾಗಗಳಲ್ಲಿ ಈ ರೀತಿಯ ಆಚರಣೆಗಳು ಕಾಣಸಿಗ್ತವೇ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ನಡೆದು ಅದೊಂದು ಮದುವೆ ಜನರನ್ನ ಹುಬ್ಬೇರಿಸುವಂತೆ ಮಾಡಿದೆ.

Latest Videos

undefined

ಮಳೆಗಾಗಿ ಮಕ್ಕಳಿಗೆ ಮದುವೆ: ಮುಂಗಾರು ಪೂರ್ವ ಮಳೆ ರಾಜ್ಯದಲ್ಲಿ ಆರ್ಭಟಿಸಿತ್ತು. ಆದ್ರೆ ಬಳಿಕ ಜೂನ್‌ ಶುರುವಾಗಿ ತಿಂಗಳ ಮಧ್ಯಕ್ಕೆ ಬಂದು ಮಳೆರಾಯಣನ ದರ್ಶನವೇ ಆಗಿಲ್ಲ. ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಜೂನ್‌ ಸಾತ್‌ ಕಳೆದರು ಮಳೆ ಆಗಮನವಾಗಿಲ್ಲ. ಹೀಗಾಗಿ ಸಹಜವಾಗಿಯೇ ರೈತರಲ್ಲಿ ಆತಂಕ ಮನೆ ಮಾಡಿದೆ. ಮಳೆರಾಯನನ್ನ ಸಂತುಷ್ಟಗೊಳಿಸಲು ನಡೆಸುವ ಕಪ್ಪೆ ಮದುವೆ, ಕತ್ತೆಗಳ ಮದುವೆಯಂತೆ ವಿಜಯಪುರ ಜಿಲ್ಲೆಯ ನಾಲ್ವತವಾಡ ಪಟ್ಟಣದಲ್ಲಿ ಮಕ್ಕಳಿಗೆ ಮದುವೆ ಮಾಡಿಸಲಾಗಿದೆ.. ಇಬ್ಬರು ಪುಟಾಣಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡಲಾಗಿದೆ.

ನಿಮ್ಮ ವಾಹನಕ್ಕೆ ಇನ್ಶುರೆನ್ಸ್‌ ಮಾಡಿಸುವ ಮುನ್ನ ಎಚ್ಚರ: ಸ್ವಲ್ಪ ಯಾಮಾರಿದ್ರೂ ದಂಡ ಕಟ್ಟಿಟ್ಟ ಬುತ್ತಿ..!

ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ರೆ ಮಳೆಯಾಗುತ್ತಾ?: ನಾಲ್ವವತವಾಡದ ಹಟ್ಟಿ ಓಣಿಯಲ್ಲಿ ಪ್ರತಿವರ್ಷ ಕಾರಹುಣ್ಣಿಮೆಯ ಮರುದಿನ ಸಸಿ ಹಬ್ಬ ಮಾಡುವ ಪದ್ದತಿ ಇದೆ. ಪ್ರತಿ ವರ್ಷ ನಡೆಯೋ ಈ ಸಸಿ ಹಬ್ಬದಲ್ಲಿ ಮಳೆಗಾಗಿ ವಿಶೇಷವಾಗಿ ಪ್ರಾರ್ಥನೆಯನ್ನ ಮಹಿಳೆಯರು ಮಾಡ್ತಾರೆ. ಈ ಬಾರಿ ಮುಂಗಾರು ಶುರುವಾದ್ರು ಮಳೆಯ ಆಗಮನ ಆಗದೇ ಇರೋದ್ರಿಂದ ಹೆಣ್ಣು ಮಕ್ಕಳಿಬ್ಬರಿಗೆ ಮದುವೆ ಮಾಡುವ ಮೂಲಕ ಮಳೆಗಾಗಿ ಮಳೆಯರು ಪ್ರಾರ್ಥನೆ ಮಾಡಿದ್ದಾರೆ. ಹೀಗೆ ಮಾಡೋದ್ರಿಂದ ಮಳೆರಾಯಣ ದೃಷ್ಟಿ ಬೀಳುತ್ತೆ ಎನ್ನುವ ನಂಬಿಕೆ ಇದೆ.

ಮಕ್ಕಳನ್ನ ಸಿಂಗರಿಸುವ ಪೋಷಕರು: ಇನ್ನು ಸಸಿ ಹಬ್ಬದಂತು ಮಳೆಗಾಗಿ ಪ್ರಾರ್ಥನೆ ಸಲ್ಲಿಸುವ ಮಹಿಳೆಯರು ತಮ್ಮ ಪ್ರದೇಶದ ಇಬ್ಬರು ಹೆಣ್ಣು ಮಕ್ಕಳನ್ನ ಸಿಂಗರಿಸುತ್ತಾರೆ. ಒಂದು ಹೆಣ್ಣು ಮಗಳನ್ನ ಗಂಡಾಗಿ ಇನ್ನೊಂದು ಹೆಣ್ಣು ಮಗುವನ್ನ ಹೆಣ್ಣಾಗಿ ಸಿಂಗರಿಸುತ್ತಾರೆ. ಬಳಿಕ ಪದ್ದತಿಯಂತೆ ಪೂಜೆ ಪುನಸ್ಕಾರಗಳನ್ನ ಮಾಡ್ತಾರೆ. ಅಸಲಿ ಮದುವೆಗಳು ನಡೆಯುವಂತೆಯೇ ಪದ್ದತಿಗಳನ್ನ ಅನುಸರಿಸಲಾಗುತ್ತೆ. ಇಬ್ಬರು ಪರಸ್ಪರ ಹೂವುಗಳನ್ನ ಬದಲಾಯಿಸಿಕೊಳ್ತಾರೆ. ತಾಳಿ ಕಟ್ಟಿಸುವ ಮೂಲಕ ಮದುವೆಯನ್ನ ಪೂರ್ಣಗೊಳಿಸಲಾಗುತ್ತೆ. ಇದು ಮೊದಲಿನಿಂದ ನಡೆದುಕೊಂಡು ಬಂದ ಸಂಪ್ರದಾಯ ಎನ್ತಾರೆ ಸ್ಥಳೀಯ ಮಹಿಳೆಯರು.

ಗುಮ್ಮಟನಗರಿಯಲ್ಲಿ ಕಾರಹುಣ್ಣಿಮೆ; ಎತ್ತಿನ ಮೇಲೆ ಅಪ್ಪು ಭಾವಚಿತ್ರ ಬಿಡಿಸಿ ರೈತನಿಂದ ಮೆರವಣಿಗೆ

ಕಪ್ಪೆ ಮದುವೆ, ಕತ್ತೆ ಮದುವೆಯಂತೆಯೆ ಪದ್ದತಿ: ಮಳೆಗಾಗಿ ಗ್ರಾಮೀಣ ಭಾಗಗಳಲ್ಲಿ ನಡೆಸಲಾಗುವ ಕಪ್ಪೆ ಮದುವೆ, ಕತ್ತೆ ಮದುವೆಗಳಂತೆ ಮಳೆಗಾಗಿ ನಡೆಯೊ ಮಕ್ಕಳ ಮದುವೆ ಇದು. ಹೀಗೆ ಮಾಡಿದ್ರೆ ಮಳೆಯಾಗುತ್ತೆ ಎನ್ನುವ ನಂಬಿಕೆಯನ್ನ ಹಿರಿಯರು ಇಟ್ಟುಕೊಂಡಿದ್ದಾರೆ. ಕತ್ತೆ ಮದುವೆಯಲ್ಲಿ ಗಂಡು-ಹೆಣ್ಣು ಕತ್ತೆಗಳನ್ನ ತಂದು ಶಾಸ್ತ್ರೋಕ್ತವಾಗಿ ಮೆರವಣಿಗೆ ಮಾಡಿ ಗಂಡಿನ ಕಡೆಯವರು, ಹೆಣ್ಣಿನ ಕಡೆಯವರು ಸೇರಿ  ಮದುವೆ ಮಾಡ್ತಾರೆ. ಬಳಿಕ ಭೋಜನದ ವ್ಯವಸ್ಥೆಯನ್ನು ಮಾಡಿರ್ತಾರೆ. ಕಪ್ಪೆಗಳ ಮದುವೆ ಕೂಡ ಇದೆ ರೀತಿ ನಡೆಯುತ್ತೆ. ಈ ಪದ್ದತಿಗಳಂತೆಯೆ ಮಕ್ಕಳ ಮದುವೆಯನ್ನ ಮಾಡುವ ಪದ್ದತಿಯು ಹಲವೆಡೆ ರೂಢಿಯಲ್ಲಿದೆ.

click me!