ದೀಪಾವಳಿ ವಿಶೇಷ ಸ್ವೀಟ್ಸ್‌ಗೆ ಸಿಹಿ ಮುತ್ತು, ಬೇಕರಿ ಮಾಲಕನಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ನಷ್ಟ

Published : Nov 09, 2026, 08:55 PM IST
Diwali Special Sweets Bring Huge Losses to Bakery Owner

ಸಾರಾಂಶ

ದೀಪಾವಳಿಗೆ ವಿಶೇಷ ಸ್ವೀಟ್ಸ್ ತಯಾರಿಸಲಾಗಿದೆ. ಭಾರಿ ಬೇಡಿಕೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಟ್ಸ್ ರೆಡಿ ಮಾಡಲಾಗಿದೆ. ಬೇಕರಿಯಲ್ಲಿ ಡಿಸ್‌ಪ್ಲೇ ಮಾಡುತ್ತಿದ್ದಂತೆ ಜನರು ಖರೀದಿಯಲ್ಲಿ ತೊಡಗಿದ್ದಾರೆ. ಇದರ ನಡುವೆ ನಡೆದ ಒಂದು ಸಣ್ಣ ಮುತ್ತು ಬೇಕರಿ ಮಾಲೀಕನ 2 ಲಕ್ಷ ರೂಪಾಯಿ ನಷ್ಟಕ್ಕೆ ಕಾರಣವಾಗಿದೆ.

ಹರ್ಯಾಣ (ನ.09) ದೀಪಾವಳಿ ಹಬ್ಬದಲ್ಲಿ ಸಿಹಿ ತಿನಿಸು ಅತೀ ಮುಖ್ಯ. ಹಲವು ಬಗೆಯ ಸ್ವೀಟ್ಸ್ ಇದ್ದೇ ಇರುತ್ತೆ. ಮನೆಯಲ್ಲೇ ಈ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವರಿಗೆ ಮನೆಯಲ್ಲೇ ಸಿಹಿ ತಿನಿಸು ತಯಾರಿಸುವುದು ಕಷ್ಟ. ಹೀಗಾಗಿ ಬಹುತೇಕರು ಬೇಕರಿ ಮೂಲಕ ಸಿಹಿ ತಿನಿಸು ಖರೀದಿಸಿ ತರುತ್ತಾರೆ. ಹೀಗಾಗಿ ಬೇಕರಿಯಲ್ಲಿ ಸ್ವೀಟ್ಸ್ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತದೆ. ದೀಪಾವಳಿಗೆ ಹರ್ಯಾಣದ ಫತೇಬಾದ್ ಥಾಣಾ ರಸ್ತೆಯಲ್ಲಿ ಇರುವ ಅತ್ಯಂತ ಜನಪ್ರಿಯ ಬೇಕರಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ಅಂಗಡಿ ಮಾಲೀಕ ತಯಾರಿಸಿದ ಹಲವು ವಿಶೇಷ ಸಿಹಿ ತಿಂಡಿಗಳಿಗೆ ಸಿಹಿ ಮುತ್ತಿನ ಸುರಿಮಳೆಯಾಗಿದೆ. ಇದರಿಂದ ಬರೋಬ್ಬರಿ 2 ಲಕ್ಷ ರೂಪಾಯಿ ನಷ್ಟವಾಗಿದೆ.

ಏನಿದು ಸಿಹಿ ಮುತ್ತಿನ ಘಟನೆ

ಹಬ್ಬದ ಕಾರಣ ಅಂಗಡಿ ಮಾಲೀಕ ಹೆಚ್ಚಿನ ಸ್ವೀಟ್ಸ್ ತಯಾರಿಸಿದ್ದರು. ಇದಕ್ಕಾಗಿ ತಾತ್ಕಾಲಿಕ ಮಳಿಗೆ ತೆರೆಯಲಾಗಿತ್ತು. ಗುಲಾಬ್ ಜಾಮೂನ್, ಲಡ್ಡು, ರಸಗುಲ್ಲಾ ಸೇರಿದಂತೆ ಹಲವು ಸ್ವೀಟ್ಸ್ ಗ್ರಾಹಕರ ಆಕರ್ಷಿಸಿತ್ತು. ಈ ಸ್ವೀಟ್ಸ್ ಬೇಕರಿಯ ವಿಶೇಷತೆ ಅಂದರೆ ನೈಸರ್ಗಿಕ ಸಾಮಾಗ್ರಿಗಳ ಬಳಸಿ ಸ್ವೀಟ್ಸ್ ತಯಾರಿಸುತ್ತಾರೆ. ಹೀಗಾಗಿ ಅತೀ ಹೆಚ್ಚಿನ ಗ್ರಾಹಕರು ಇಲ್ಲಿಂದಲೇ ಸಿಹಿ ತಿಂಡಿಗಳನ್ನು ಖರೀದಿಸುತ್ತಾರೆ. ತಾತ್ಕಾಲಿಕ ಮಳಿಗೆಯಲ್ಲಿ ಸ್ವೀಟ್ಸ್ ಪ್ರದರ್ಶನಕ್ಕೆ ಇಟ್ಟ ಕೆಲವೇ ಹೊತ್ತಲ್ಲಿ ಜೇನು ನೊಣಗಳು ಆಕರ್ಷಿತಗೊಂಡಿದೆ. ಒಂದೇ ಸಮನೆ ಜೇನು ನೊಣಗಳು ಬಂದು ಮುತ್ತಿಕೊಂಡಿದೆ.

ಕೆಲವೇ ಹೊತ್ತಲ್ಲಿ ಜೇನು ನೊಣಗಳು ಸಿಹಿ ತಿಂಡಿಗಳನ್ನು ಮುತ್ತಿಕೊಂಡಿದೆ. ಸ್ವೀಟ್ಸ್ ಕಾಣದಂತೆ ಜೇನು ನೊಣಗಳು ಮುತ್ತಿಕೊಂಡಿದೆ. ಹೀಗಾಗಿ ಗ್ರಾಹಕರು ದೂರ ಸರಿದಿದ್ದಾರೆ. ಜೇನು ನೊಣಗಳು ಮುತ್ತಿಕೊಂಡು ಸಿಹಿ ಹೀರಲು ಆರಂಭಿಸಿದೆ. ಓಡಿಸುವ ಪ್ರಯತ್ನಗಳು ಫಲ ನೀಡಲಿಲ್ಲ. ಬೆಂಕಿ, ಹೊಗೆ ಸೇರಿದಂತೆ ಇತರ ಪ್ರಯತ್ನಗಳ ಮೂಲಕ ಜೇನು ನೊಣಗಳನ್ನು ಓಡಿಸಲು ಪ್ರಯತ್ನ ಮಾಡಿದ್ದಾರೆ. ಜೇನು ನೊಣಗಳು ಮತ್ತೆ ಮತ್ತೆ ಸಿಹಿ ತಿಂಡಿಯಲ್ಲಿ ಮುತ್ತಿಕ್ಕಿದೆ. ಎಲ್ಲಾ ಪ್ರಯತ್ನಗಳು ವಿಫಲಗೊಂಡಿತು. ಇತ್ತ ಗ್ರಾಹಕರು ಜೇನು ನೊಣ ಮುತ್ತಿಕ್ಕುತ್ತಿದ್ದಂತೆ ಜಾಗ ಖಾಲಿ ಮಾಡಿದ್ದಾರೆ.

2 ಲಕ್ಷ ರೂಪಾಯಿ ಮೌಲ್ಯದ ಸಿಹಿ ತಿಂಡಿ ನಷ್ಟ

ಜೇನು ನೊಣ ಸಿಹಿತಿಂಡಿ ಮುತ್ತಿಕ್ಕಿದ್ದ ಕಾರಣ ಬೇಕರಿ ಮಾಲಿಕನಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ನಷ್ಟವಾಗಿದೆ. ಸಿಹಿ ತಿಂಡಿಗಳ ಸಿಹಿಯನ್ನು ಜೇನು ನೊಣಗಳು ಹೀರಿಕೊಂಡಿದೆ. ಅಂಗಡಿ ಮಾಲೀಕ ಇದೀಗ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾದಿದೆ. ಬರೋಬ್ಬರಿ 2 ಲಕ್ಷ ರೂಪಾಯಿ ಸಿಹಿ ತಿಂಡಿಗಳು ವ್ಯರ್ಥವಾಗಿದೆ. ದೀಪಾವಳಿ ಹಬ್ಬದ ವೇಳೆ ಉತ್ತಮ ವ್ಯಾಪಾರ ನಿರೀಕ್ಷಿಸಿದ್ದ ಮಾಲೀಕ ಇದೀಗ ತಲೆಮೇಲೆ ಕೈಹೊತ್ತುಕೊಳ್ಳುವಂತಾಗಿದೆ.

PREV
Read more Articles on
click me!

Recommended Stories

ರಜನೀ ಸ್ಟೈಲ್​ನಲ್ಲಿ ದೀಪಾವಳಿ ಶುಭಾಶಯ ಕೋರಿದ ಮಲೇಷ್ಯಾ ಪ್ರಧಾನಿ: ವಿಡಿಯೋ ವೈರಲ್​
ಕ್ಯೂಟ್ ಗೆಳತಿ ಜತೆ ದೀಪಾವಳಿ ಶುಭಾಶಯ ಕೋರಿದ ಅರ್ಶದೀಪ್ ಸಿಂಗ್..! ಆದ್ರೆ ಈ ಪೋಸ್ಟ್‌ನಲ್ಲಿ ಪಾಕ್ ಲಿಂಕ್..!