ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುತ್ತವೆ ಎಂದು ಈ ವರ್ಷದ ಕಡೆಯ ಕೆಲ ತಿಂಗಳ ಬಗ್ಗೆ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಇದೀಗ ಈ ಮಾತು ನಿಜವಾಗುತ್ತಿರುವಂತೆ ತೋರುತ್ತಿದೆ.
ಈ ವರ್ಷ ಕಾರ್ತಿಕ ಮಾಸದಿಂದ ಜನವರಿವರೆಗೆ ಲೋಕ ಕಂಟಕವಿದೆ, ದೇಹ ಅಶಕ್ತಿಯಿಂದ ಬಿದ್ದು ಸಾಯುತ್ತವೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದರು.
'ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ' ಎಂದು ಕೋಡಿಶ್ರೀ ನುಡಿದಿದ್ದರು. ಇತ್ತೀಚಿನ ಪ್ರಕರಣಗಳನ್ನು ಗಮನಿಸುತ್ತಿದ್ದರೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಸ್ವಾಮೀಜಿ(Kodi mutt seer) ನುಡಿದಿದ್ದ ಈ ಸ್ಪೋಟಕ ಭವಿಷ್ಯ ಈಗ ನಿಜವಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.
undefined
ಹೌದು, ಇತ್ತೀಚೆಗೆ ಎಳೆ ಪ್ರಾಯದ ಯುವಕ ಯುವತಿಯರು ನೋಡು ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ(sudden death) ಪ್ರಕರಣಗಳು ಹೆಚ್ಚಾಗಿವೆ.
ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬರು ಸಾಯಿಬಾಬಾ ದರ್ಶನ ಪಡೆದ ಬಳಿಕ ದೇವಸ್ಥಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಹಾಗೆಯೇ ಸ್ನೇಹಿತರೊಂದಿಗೆ ರಸ್ತೆಯಲ್ಲಿ ಆರಾಮಾಗಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಉತ್ತರಪ್ರದೇಶದ ಮೀರತ್‌ನಲ್ಲಿ ಕುಸಿದು ಬಿದ್ದು ಸಾವಿಗೀಡಾದದ್ದು ಮೊನ್ನೆಯಷ್ಟೇ ಸುದ್ದಿಯಾಗಿತ್ತು. ನವರಾತ್ರಿಯ ವೇಳೆ ಗರ್ಬಾ ನೃತ್ಯ ಮಾಡುತ್ತಲೇ ಯುವಕನೋರ್ವ ಕುಸಿದು ಬಿದ್ದು ಸಾವು ಕಂಡ ಘಟನೆ ಗುಜರಾತ್‌ನಲ್ಲಿ ನಡೆದಿತ್ತು.
ನಿಮ್ಮದು ಕೃತಿಕಾ ನಕ್ಷತ್ರನಾ? ನಿಮಗೆ ಈ ವೃತ್ತಿಯಿಂದ ಯಶಸ್ಸು
ಡಿ.23ರಂದು ಕಟೀಲು ನಾಲ್ಕನೇ ಮೇಳದ ತ್ರಿಜನ್ಮ ಮೋಕ್ಷ ಯಕ್ಷಗಾನ ಪ್ರಸಂಗ ನಡೆಯುತ್ತಿರುವಾಗಲೇ ಕಲಾವಿದ ಗುರುವಪ್ಪ ಬಾಯಾರು ಕುಸಿದು ಬಿದ್ದು ಮೃತಪಟ್ಟರು. ಇದೀಗ, ಇಂದು ಡಿ.27ರಂದು ಕನಕಪುರದ ಪ್ರೈಡ್ ಹೋಟೆಲ್‌ನಲ್ಲಿ ಊಟ ಮಾಡುವಾಗಲೇ ಕುಸಿದು ಬಿದ್ದು ಮೈಸೂರಿನ ಪ್ರೀತಂ ಎಂಬ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ನವೆಂಬರ್‌ನಲ್ಲಿ ನಡೆಯುತ್ತಿದ್ದ ಮಹಿಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದು..ಮದುವೆ ಮಂಟಪದಲ್ಲೇ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದು, ಪೂಜೆ ಮಾಡುವಾಗಲೇ ಸ್ವಾಮೀಜಿ ಕುಸಿದು ಬಿದ್ದು ಸಾವಿಗೀಡಾಗಿದ್ದು ಸೇರಿದಂತೆ ನಮ್ಮ ಸುತ್ತಮುತ್ತಲೇ ಪ್ರತಿನಿತ್ಯ ನಡೆದು ಹೋಗುತ್ತಿರುವವರು, ಕೂತು ಮಾತಾಡುತ್ತಿರುವವರು ಇದ್ದಕ್ಕಿದ್ದಂತೆ ಬಿದ್ದು ಸಾಯುವ ಪ್ರಕರಣಗಳನ್ನು ಕೇಳುತ್ತಲೇ ಇದ್ದೇವೆ.
ಈ ರೀತಿಯ ಸಡನ್ ಡೆತ್ 2001ರಿಂದ 2021ರವರೆಗೂ 0-10ರಷ್ಟು ಸಂಖ್ಯೆಯಲ್ಲಿದ್ದರೆ, 2021ರಲ್ಲಿ ಕೇವಲ ಕ್ರೀಡಾ ವಲಯದಲ್ಲಿ ಸಡನ್ ಡೆತ್‌ಗಳ ಸಂಖ್ಯೆಯೇ 325 ತಲುಪಿದೆ.
ಕೋವಿಡ್ ಕಾರಣ?(Covid)
ಬಹಳಷ್ಟು ಜನ ಈ ಸಡನ್ ಡೆತ್‌ಗೆ ಕೋವಿಡ್ ಕಾರಣ ಎಂದು ಅಂದಾಜಿಸುತ್ತಾರೆ. ಮತ್ತೆ ಕೆಲವರು ಕೋವಿಡ್‌ಗೆ ತೆಗೆದುಕೊಂಡ ಲಸಿಕೆ ಕಾರಣ ಎಂದೂ ವಾದಿಸುತ್ತಾರೆ. ಕಾರಣ ಏನು ಎಂಬ ಬಗ್ಗೆ ನಿಜಕ್ಕೂ ಸಂಶೋಧನೆಗಳಾಗಬೇಕಿದೆ.
Mercury Transit 2022: ಮೂರು ರಾಶಿಗಳಿಗೆ ಅಪಾರ ಲಾಭ ತರುವ ಬುಧ
ನಿಜವಾದ ಕೋಡಿ ಶ್ರೀ ಭವಿಷ್ಯ
ಇದೆಲ್ಲದರ ಹೊರತಾಗಿಯೂ ಕೋಡಿ ಮಠ ಶ್ರೀ ಹೇಳಿದ ಭವಿಷ್ಯ ನಿಜವಾಗುತ್ತಿದೆ ಎಂಬುದು ಕೂಡಾ ಗಮನಿಸಬೇಕಾದ ಸಂಗತಿ. ನಡೆದು ಹೋಗುತ್ತಿರುವವರು ಸಾಯುವ ಬಗ್ಗೆಯಷ್ಟೇ ಅಲ್ಲದೆ, ಕಾರ್ತಿಕದವರೆಗೂ ಮಳೆ ಇರುತ್ತೆ ಎಂದು ಸಹ ಭವಿಷ್ಯ ನುಡಿದಿದ್ದರು. ಅದೂ ಕೂಡಾ ನಿಜವಾಗಿದೆ.
ದಿಢೀರ್ ಹೃದಯಾಘಾತ
ಈ ರೀತಿ ದಿಢೀರ್ ಹೃದಯಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಲೇ ಇದೆ. ಇದ್ದಕ್ಕಿದ್ದಂತೆ ಹೃದಯಾಘಾತವಾಗುವುದು, ಅವರಿಗೆ ಈ ಹಿಂದೆ ಯಾವುದೇ ಹೃದಯದ ತೊಂದರೆ ಇಲ್ಲದಿದ್ದರೂ, ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಮೃತಪಡುವಂತಹ ಘಟನೆಗಳು ವರದಿಯಾಗುತ್ತಿವೆ. ಈ ವೇಳೆ ರೋಗ ಲಕ್ಷಣಗಳು ಸೈಲೆಂಟ್ ಆಗಿರುತ್ತದೆ. ಅಂದರೆ, ಹೆಚ್ಚು ಎದೆ ನೋವು ಬರುವುದಿಲ್ಲ, ಹೃದಯದಲ್ಲಿ ಹೆಚ್ಚು ಒತ್ತಡ ಕಂಡುಬರುವುದಿಲ್ಲ, ಹಠಾತ್ ಉಸಿರಾಟದ ತೊಂದರೆ, ಮತ್ತು ತಲೆತಿರುಗುವಿಕೆ ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ.