ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಜಾತಕ ಏನು ಹೇಳುತ್ತೆ, ಹೇಗಿದೆ ಭವಿಷ್ಯ!

Published : Mar 19, 2025, 09:03 AM ISTUpdated : Mar 19, 2025, 11:52 AM IST
ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್ ಜಾತಕ ಏನು ಹೇಳುತ್ತೆ, ಹೇಗಿದೆ ಭವಿಷ್ಯ!

ಸಾರಾಂಶ

ಬಾಹ್ಯಾಕಾಶದಲ್ಲಿ 285 ದಿನ ಕಳೆದ ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಿದ್ದಾರೆ. ಅವರ ಜಾತಕ ಬಲದ ಬಗ್ಗೆ ದೈವಜ್ಞ ಹರೀಶ್ ಕಾಶ್ಯಪ ವಿಶ್ಲೇಷಿಸಿದ್ದಾರೆ, ಯಶಸ್ಸಿಗೆ ದೈವಬಲವೇ ಕಾರಣವೆಂದು ಹೇಳಿದ್ದಾರೆ.

ಬೆಂಗಳೂರು (ಮಾ.19): ಬಾಹ್ಯಾಕಾಶದಲ್ಲಿ 285 ದಿನ ಕಳೆದ ಬಳಿಕ ಇಂದು ಮುಂಜಾನೆ ಭೂಮಿಗೆ ವಾಪಾಸ್‌ ಆಗಿದ್ದಾರೆ. ಇದರ ಬೆನ್ನಲ್ಲಿಯೇ ವಿಶ್ವದಾದ್ಯಂತ ಸಂಭ್ರಮ ವ್ಯಕ್ತವಾಗಿದೆ.  ಈ ನಡುವೆ ಸುನೀತಾ ವಿಲಿಯಮ್ಸ್‌ ಅವರ ಜಾತಕ ಬಲ ಹೇಗಿದೆ ಅನ್ನೋದರ ಬಗ್ಗೆ ದೈವಜ್ಞ ಹರೀಶ್ ಕಾಶ್ಯಪ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಅಂತರಿಕ್ಷದಲ್ಲಿ ಅತಂತ್ರ ತ್ರಿಶಂಕು ಸ್ಥಿತಿಯಲ್ಲಿ ಕಳೆದು ಇಂದಿಗೆ 285 ಭೂ ದಿನಗಳು ಕಳೆದಿದೆ. ಟ್ರಂಪ್ , ಎಲಾನ್ ಮಸ್ಕ್ ರ ಹೊಸ ಸರ್ಕಾರದ ಮಹಾಪ್ರಯತ್ನದಿಂದ ಇಲ್ಲಿಂದ ಹೊಸ ಗಗನ ನೌಕೆ ಕಳಿಸಿ ವಾಪಸ್ ಕರೆತರಲು ಅಮಾನುಷ ಸಾಹಸ ಮಾಡಿ ಅದರಲ್ಲೂ ಯಶಸ್ವಿಯೂ ಆಗಿದ್ದಾರೆ. ಇಂದು ಮುಂಜಾನೆ ಅವರು ಭೂಮಿಗೆ ಅತ್ಯಂತ ಯಶಸ್ವಿಯಾಗಿ ಬಂದಿಳಿದಿದ್ದಾರೆ.  ಇದೆಲ್ಲಾ ಸರಿ..

ಆದರೆ, ಈಕೆಯ ಜಾತಕ ಬಲ ಹೇಗಿದೆ ಅನ್ನೋದನ್ನು ನೊಡೋದಾದರೆ... ಲಭ್ಯ ಜನ್ಮ ವಿವರ ಪ್ರಕಾರ , 19.9.1965 ಅಮೆರಿಕದ ಓಹಿಯೋದಲ್ಲಿ ಜನನ. ಅಪರಾಹ್ನ ಕಾಲ. ಧನುರ್ ಲಗ್ನ , ಪುನರ್ವಸು ನಕ್ಷತ್ರ , ಮಿಥುನ ರಾಶಿಯ ಸುನೀತಾರ ಜಾತಕ ಬಲ ದೈವಬಲ ಯೋಗದಿಂದ ಕೂಡಿದೆ. ಅವರ ಯಶಸ್ಸಿಗೆ ಇದೇ ಮುಖ್ಯ ವಾಗಿದೆ. ಎಂತೆಂಥ ಘಟಾನುಘಟಿ ನಾಯಕರು ದೈವವಿಲ್ಲದೆ ಮರಣ ಹೊಂದಿದ್ದಾರೆ. ಪೂರ್ವ ಕರ್ಮ ಪುಣ್ಯ ಬೇಕು, ಭೂಮಿಯ ಋಣ ಬೇಕು. ಸುನೀತಾ ವಿಲಿಯಮ್ಸ್‌ಗೆ ಇದು ಇರೋದು ಗೊತ್ತಾಗಿದೆ.

ಸದ್ಯ ಶುಕ್ರ ದಶೆಯ ಆರಂಭ ಇದ್ದು, ಶುಕ್ರನು ಷಷ್ಠ ಪತಿಯಾಗಿ , ತುಲಾ ಕುಜನ ಬಾಧೆಯೊಂದಿಗೆ ಇರುವ ದಶಾ, ಅಲ್ಲಿ ನೀಚ ಆವರೋಹಿ(ಕನ್ಯಾ) ಮುಂದೆ ರವಿಯ ಭುಕ್ತಿ  ಇದೆ. ಭುಕ್ತೀಶ ಬಲವತ್ತರಂ" ಎಂಬಂತೆ ರವಿಯ ಅನುಕೂಲವಿಲ್ಲ. ಸದ್ಯ ರವಿಯು ಮೀನ ಸಂಚಾರ, ಶುಕ್ರ ಅಸ್ತ.

ಸುನೀತಾ ವಿಲಿಯಮ್ಸ್ ಸೇರಿ ಗಗನಯಾತ್ರಿಗಳಿದ್ದ ಸ್ಪೇಸ್‌ಎಕ್ಸ್‌ ನೌಕೆ ಸಮುದ್ರಕ್ಕಪ್ಪಳಿಸಿದ ಆ ಕ್ಷಣಗಳ ವೀಡಿಯೋ ವೈರಲ್‌

ರವಿ ಶುಕ್ರರು ಆಯು ಆರೋಗ್ಯ ದೇಹಸುಖ ಜ್ಞಾನಗಳಿಗೆ ಕಾರಕರು. ಅವರ ದಶಾ ಭುಕ್ತಿ.... ಸೇಫ್ ಆಗಿ ಬಂದಿದ್ದರೂ ಆಕೆಗೆ ಬಾಧೆ ಇದೆ. ಗುರು ಅನುಕೂಲದಿಂದ ಭುವಿಗೆ ಬಂದಿದ್ದರೂ, ಮರಳಿ ಸಾಮಾನ್ಯ ದೇಹಭಾವ ಸ್ವಸ್ಥವಾಗುವುದು ಕಷ್ಟವಿದೆ.

Sunita Williams: 9 ತಿಂಗಳ ಬಾಹ್ಯಾಕಾಶ ಯಾತ್ರೆ ನಂತರ ಸುರಕ್ಷಿತವಾಗಿ ಬಂದಿಳಿದ ಸುನೀತಾ ವಿಲಿಯಮ್ಸ್, ಅಪಾಯಗಳೇನಿದ್ದವು?

ಇಂಥ ಕ್ಲಿಷ್ಟಕರವಾದ ಗಗನಯಾನ ಫಲವು, ಚಂದ್ರ , ಶನಿಯ ಕಾರಕತ್ವವನ್ನು ಮತ್ತು ಈ ಮೇಲೆ ಹೇಳಿದ ದಶಾ ಭಾವವನ್ನೂ , ನವಾಂಶ ಮತ್ತು ಆಯು ದ್ರೆಕ್ಕಾಣ ಗಳನ್ನೂ ವಿಸ್ತಾರ ವಿಮರ್ಶೆ ಮಾಡಿಯೇ ಹೇಳಬೇಕು. ಜೀವಗಳು ವಾಪಸ್ ಬರುವುದು ಮುಖ್ಯ, ನಂತರ ಅವರನ್ನು ಕಾಪಾಡಿಕೊಳ್ಳುವುದು ಅಲ್ಲಿನ ವ್ಯವಸ್ಥೆಯ ಜವಾಬ್ದಾರಿ , ಅಷ್ಟೇ.
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ