ಸೂರ್ಯನ ರಥದ ಬಗ್ಗೆ ನಿಮಗೆಷ್ಟು ಗೊತ್ತು?

Published : Jan 21, 2023, 01:20 PM IST
ಸೂರ್ಯನ ರಥದ ಬಗ್ಗೆ ನಿಮಗೆಷ್ಟು ಗೊತ್ತು?

ಸಾರಾಂಶ

ಸೂರ್ಯ ದೇವರನ್ನು ನಾವು ಪ್ರತಿ ದಿನ ಪೂಜೆ ಮಾಡ್ತೇವೆ. ಆತನ ಆಶೀರ್ವಾದ ಪಡೆಯಲು ಭಕ್ತರು ನಾನಾ ಕಸರತ್ತು ಮಾಡ್ತಾರೆ. ಸದಾ ರಥದ ಮೇಲಿರುವ ಸೂರ್ಯನ ಬಗ್ಗೆ ತಿಳಿಯೋದು ಸಾಕಷ್ಟಿದೆ. ಏಳು ಕುದುರೆ, ಒಂದು ಚಕ್ರದ ರಥದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ಇಲ್ಲಿದೆ.  

ಹಿಂದೂ ಧರ್ಮದಲ್ಲಿ ಸೂರ್ಯನನ್ನು ಕಣ್ಣಿಗೆ ಕಾಣುವ ದೇವರೆಂದು ಪೂಜೆ ಮಾಡಲಾಗುತ್ತದೆ. ಸೂರ್ಯನ ಕೃಪೆ ಪಡೆಯಲು ಪ್ರತಿ ದಿನ ಸೂರ್ಯನಿಗೆ ಅರ್ಘ್ಯ ಅರ್ಪಿಸಲಾಗುತ್ತದೆ. ಸೂರ್ಯದೇವರನ್ನು ಭಕ್ತಿಯಿಂದ ಪೂಜೆ ಮಾಡಿದ್ರೆ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಸೂರ್ಯ ದೇವನಿಗೆ ಸಂಬಂಧಿಸಿದಂತೆ ಅನೇಕ ಕಥೆಗಳಿವೆ. ಪುರಾಣ (Mythology) ಗಳ ಪ್ರಕಾರ, ಸೂರ್ಯ (Sun) ನ ತಂದೆಯ ಹೆಸರು ಮಹರ್ಷಿ ಕಶ್ಯಪ. ತಾಯಿಯ ಹೆಸರು ಅದಿತಿ. ಅದಿತಿಯ ಮಕ್ಕಳನ್ನು ಆದಿತ್ಯ ಎಂದು ಕರೆಯಲಾಗುತ್ತದೆ. 33 ದೇವತೆ (Goddess) ಗಳಲ್ಲಿ ಅದಿತಿಯ 12 ಪುತ್ರರು ಸೇರಿದ್ದಾರೆ. ಅದ್ರಲ್ಲಿ ಮೊದಲನೇಯವನು ಸೂರ್ಯ. ಸೂರ್ಯ ದೇವರ ಪ್ರತಿದಿನ ಬೆಳಿಗ್ಗೆ ಪೂರ್ವದಿಂದ ತನ್ನ ರಥದ ಮೇಲೆ ಬರುವ ಮೂಲಕ ಬೆಳಕನ್ನು ತರುತ್ತಾನೆ. 

ನಾವು ಯಾವಾಗ್ಲೂ ಸೂರ್ಯ ರಥ (Chariot) ದ ಮೇಲೆ ನಿಂತಿರುವುದನ್ನು ನೋಡ್ತೇವೆ. ಸೂರ್ಯ 7 ಕುದುರೆಗಳಿರುವ ರಥದಲ್ಲಿ ಪ್ರಯಾಣ ಬೆಳೆಸ್ತಾನೆ. ಏಳು ಕುದುರೆಗಳೇಕೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಯಾಕೆಂದ್ರೆ ಬೇರೆ ಯಾವ ದೇವರ ರಥದಲ್ಲೂ ಏಳು ಕುದುರೆಯಿಲ್ಲ. ಸೂರ್ಯನ ರಥ ಹಾಗೂ ಏಳು ಕುದುರೆ ಮತ್ತು ಸಾರಥಿ ಬಗ್ಗೆಯೂ ಪುರಾಣಗಳಲ್ಲಿ ಹೇಳಲಾಗಿದೆ. ನಾವಿಂದು ಸೂರ್ಯನ ರಥದಲ್ಲಿರುವ ಕುದುರೆ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಚೆಂದದ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡೋದು ಅನಿವಾರ್ಯ

ಭಗವಂತ ಸೂರ್ಯನ ರಥದಲ್ಲಿರುವ ಏಳು ಕುದುರೆಗಳ ಹೆಸರೇನು? : ಸೂರ್ಯನ ರಥ ಆಕರ್ಷಕವಾಗಿದೆ. ರಥಕ್ಕೆ ಏಳು ಕುದುರೆಗಳನ್ನು ನಾವು ನೋಡಬಹುದು. ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ ಏಳು ಕುದುರೆಗಳ ಹೆಸರಾಗಿವೆ.

ಏಳು ಕುದುರೆಗಳು ಏನು ಸೂಚಿಸುತ್ತವೆ? : ಧರ್ಮಗ್ರಂಥಗಳ ಪ್ರಕಾರ, ಸೂರ್ಯನ ರಥದಲ್ಲಿರುವ ಈ ಏಳು ಕುದುರೆಗಳು ವಾರದ ಏಳು ದಿನಗಳನ್ನು ಪ್ರತಿನಿಧಿಸುತ್ತವೆ. ಇದಲ್ಲದೆ ಈ ಏಳು ಕುದುರೆಗಳು ಬೆಳಕನ್ನು ಪ್ರತಿನಿಧಿಸುತ್ತವೆ. ಇದು ಸೂರ್ಯನಿಂದಲೇ ಹೊರಹೊಮ್ಮುವ ಬೆಳಕು. ಕಾಮನಬಿಲ್ಲನ್ನು ರೂಪಿಸುವ ಸೂರ್ಯನ ಬೆಳಕಿನಲ್ಲಿ ಏಳು ವಿಭಿನ್ನ ಬಣ್ಣಗಳ ಬೆಳಕು ಕಂಡುಬರುತ್ತದೆ. ಒಂದೇ ಬಿಂದುವಿನಿಂದ ಹೊರಹೊಮ್ಮುವ ಮತ್ತು ಆಕಾಶದಾದ್ಯಂತ ಹರಡುವ ಈ ಬೆಳಕು ಏಳು ಬಣ್ಣಗಳ ಭವ್ಯವಾದ ಕಾಮನಬಿಲ್ಲನ್ನು ಸೃಷ್ಟಿಸುತ್ತದೆ. ಈ ಕುದುರೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದೊಂದು ಕುದುರೆಯ ಬಣ್ಣವೂ ಭಿನ್ನವಾಗಿದೆ. ಸೂರ್ಯನ ರಥವನ್ನು ನಡೆಸುವ ಕುದುರೆಗಳು ಸೂರ್ಯನ ಬೆಳಕಿನ ಪ್ರತೀಕವಾಗಿವೆ. 

ಸೂರ್ಯನ ರಥದ ಸಾರಥಿ ಯಾರು? : ಧರ್ಮ ಗ್ರಂಥಗಳ ಪ್ರಕಾರ, ಸೂರ್ಯ ದೇವರ ರಥದಲ್ಲಿರುವ ಏಳು ಕುದುರೆಗಳು ಬಲವಾಗಿವೆ. ಈ ಕುದುರೆಗಳನ್ನು ಅರುಣ ದೇವ ನಿಯಂತ್ರಿಸುತ್ತಾನೆ. ಅಂದ್ರೆ ಅರುಣ ಸೂರ್ಯನ ರಥದ ಸಾರಥಿ. ಅರುಣ ಪಕ್ಷಿರಾಜ ಗರುಡನ ಅಣ್ಣ. ಅರುಣ, ರಥವನ್ನು ಸೂರ್ಯ ಹೇಳಿದಂತೆ ಚಲಾಯಿಸುತ್ತಾನೆ. ಆದ್ರೆ ರಥ ಓಡಿಸುವಾಗ್ಲೂ ಸೂರ್ಯ ದೇವರಿಗೆ ಅಭಿಮುಖವಾಗಿ ಕುಳಿತುಕೊಳ್ಳುತ್ತಾನೆ.  

ಸೂರ್ಯನ ರಥದಲ್ಲಿದೆ ಇಷ್ಟು ಚಕ್ರ : ಇನ್ನು ಸೂರ್ಯನ ರಥದಲ್ಲಿ ಒಂದು ಚಕ್ರವಿದೆ. ಇಷ್ಟು ದೊಡ್ಡ ರಥವನ್ನು ಒಂದೇ ಚಕ್ರದಲ್ಲಿ ನಡೆಸುವುದು ಪವಾಡವೇ ಸರಿ. ಆದ್ರೆ ಈ ಚಕ್ರಕ್ಕೂ ಅರ್ಥವಿದೆ. ರಥದಲ್ಲಿರುವ ಒಂದು ಚಕ್ರ ಒಂದು ವರ್ಷವನ್ನು ಸೂಚಿಸುತ್ತದೆ. ಹಾಗೆಯೇ ಚಕ್ರಕ್ಕೆ 12 ಕಡ್ಡಿಗಳಿವೆ. ಅವು ವರ್ಷದ 12 ತಿಂಗಳನ್ನು ಸೂಚಿಸುತ್ತವೆ.

ಬ್ರಹ್ಮ ಮುಹೂರ್ತದಲ್ಲೆದ್ದು ಆರೋಗ್ಯದ ಜೊತೆ ಅದೃಷ್ಟ ಪಡೆದ್ಕೊಳ್ಳಿ

ರಥದಲ್ಲಿರುವ 7 ಕುದುರೆಗಳ ಮಹತ್ವ : ಸೂರ್ಯ ದೇವರ ರಥದಲ್ಲಿರುವ 7 ಕುದುರೆಗಳು ಜೀವನದ ಏಳು ಪಾಠಗಳನ್ನು ಕಲಿಸುತ್ತವೆ. ಧೈರ್ಯ, ತಿಳುವಳಿಕೆ,ತಾಳ್ಮೆ, ಬುದ್ಧಿವಂತಿಕೆ, ಆಧ್ಯಾತ್ಮಿಕತೆ, ಪ್ರೀತಿ,ಸಂತೋಷ, ಜ್ಞಾನ, ಪರಿಶುದ್ಧತ ಎಲ್ಲವೂ ಇದ್ರಲ್ಲಿದೆ. ಹಾಗಾಗಿಯೇ ಮನೆಯಲ್ಲಿ ಸೂರ್ಯನ ರಥದ ಚಿತ್ರವನ್ನು ಹಾಕಬೇಕು ಎನ್ನಲಾಗುತ್ತದೆ.   
 

PREV
Read more Articles on
click me!

Recommended Stories

ಪೂಜೆಗೆ ಬಳಸುವ ಗಂಟೆಯಲ್ಲಿದೆ ಮಹಾನ್ ಶಕ್ತಿ, ತಪ್ಪಾಗಿ ಬಳಸಿದ್ರೆ ಕಷ್ಟ ಗ್ಯಾರಂಟಿ
ಜನಕನ ಅಳಿಯ ಶ್ರೀರಾಮನಲ್ಲವಂತೆ.. ಹಾಗಾದ್ರೆ ನಿಜವಾದ ಅಳಿಯ ಯಾರು? ಇಲ್ಲಿದೆ ರಾಮಾಯಣದ ರಹಸ್ಯ!