ಇಂದು ರಾತ್ರಿ ಸ್ಟ್ರಾಬೆರಿ ಮೂನ್ ಗೋಚರ, ಗ್ರಹ ಗತಿ ಬದಲಾವಣೆಯಿಂದ ಯಾವ ರಾಶಿಗೆ ಒಳೀತು?

By Chethan Kumar  |  First Published Jun 21, 2024, 12:07 PM IST

ಜೂನ್ 21 ಖಗೋಳದ ಪ್ರಮುಖ ದಿನ. ಕಾರಣ ಇಂದು ರಾತ್ರಿ ಸ್ಟ್ರಾಬೆರ್ ಮೂನ್ ಗೋಚರಿಸಲಿದೆ. ಬೇಸಿಗೆ ಕಾಲ ಋತುವಿನ ಅಂತ್ಯದ ಬಳಿಕ ಗೋಚರಿಸುವ ಸ್ಟ್ರಾಬೆರಿ ಮೂನ್‌ನಿಂದ ಗ್ರಹ ಗತಿಗಳಲ್ಲಿ ಮಹತ್ವದ ಬದಲಾವಣೆ ತರಲಿದೆ. ಸ್ಟ್ರಾಬೆರಿ ಮೂನ್‌ನಿಂದ ಯಾವ ರಾಶಿ ಒಳೀತು, ಯಾರಿಗೆ ಲಾಭ?


ಹುಣ್ಣಿಮೆ, ಅಮಾವಾಸ್ಯೆ, ಚಂದ್ರಗ್ರಹಣ ಹೀಗೆ ಚಂದ್ರನ ಚಲನೆ, ಪಥ ಬದಲಾವಣೆಗಳ ಕುರಿತು ಹೆಚ್ಚಾಗಿ ಕೇಳುತ್ತಲೇ ಇರುತ್ತೇವೆ. ಆದರೆ ಸ್ಟ್ರಾಬೆರಿ ಮೂನ್(ಸ್ಟ್ರಾಬೆರಿ ಚಂದ್ರ) ಕುರಿತು ಕೇಳಿದ ಮಾಹಿತಿಗಳು ಕಡಿಮೆ. ಇದು ಪ್ರತಿ ವರ್ಷ ಜೇಷ್ಠ ಮಾಸದಲ್ಲಿ ಘಟಿಸುವ ಕೌತುಕ. ಬೇಸಿಗೆ ಕಾಲ ಋತು ಅಂತ್ಯಗೊಂಡ ಬಳಿಕ ಮುಂದಿನ ಋತುವಿಗೆ ಹೊರಳುವಾಗ ಗೋಚರಿಸುವ ಚಂದ್ರನನ್ನು ಸ್ಟ್ರಾಬೆರಿ ಚಂದ್ರ ಎಂದು ಕರೆಯಲಾಗುತ್ತದೆ. ಇಂದು ರಾತ್ರಿ 7ರಿಂದ ಸ್ಟ್ರಾಬೆರಿ ಮೂನ್ ಪೂರ್ಣಚಂದ್ರವಾಗಿ ಗಚರಿಸಲಿದ್ದಾನೆ. ಇಷ್ಟೇ ಅಲ್ಲ ಹಳದಿ ಮಿಶ್ರಿತ ಚಿನ್ನದ ಬಣ್ಣದಲ್ಲಿ ಚಂದ್ರ ಗೋಚರಿಸಲಿದ್ದಾರೆ. ಸ್ಟ್ರಾಬೆರಿ ಮೂನ್ ಗೋಚರದಿಂದ ಗ್ರಹಗತಿಗಳು ಬದಲಾಗಲಿದೆ. ಇದು ರಾಶಿಗಳ ಮೇಲೂ ಪರಿಣಾಮ ಬೀರಲಿದೆ.

ಮೇಷ(ಮಾ.21 -ಎ.19)
ಚಂದ್ರನ ಆಕಾಶದಲ್ಲಿ ಪೂರ್ಣವಾಗಿ ಗೋಚರಿಸುತ್ತಿದ್ದಂತೆ ಮೇಷ ರಾಶಿಯವರಲ್ಲಿ ಮಹತ್ತರ ಅದೃಷ್ಟ ಕೈಸೇರಲಿದೆ. ವೃತ್ತಿ ಜೀವನದಲ್ಲಿ ಯಸಶಸ್ಸು, ಲಾಭಾದಾಯಕ ವ್ಯವಹಾರ, ಪ್ರಶಸ್ತಿ ಸೇರಿದಂತೆ ಇತರ ಯಶಸ್ಸುಗಳು ಈ ರಾಶಿಯವರಿಗೆ ಲಭಿಸಲಿದೆ.

Tap to resize

Latest Videos

undefined

ಜೂ. 21ಕ್ಕೆ ಸ್ಟ್ರಾಬೆರಿ ಮೂನ್ ಗೋಚರ, ಮಿಸ್ ಮಾಡಬೇಡಿ ಇದಕ್ಕೂ ಹನಿಮೂನ್‌ಗೂ ಇದೆ ಸಂಬಂಧ!

ವೃಷಭ(ಏ.20-ಮೇ.20)
ಗ್ರಹಹತಿಯಲ್ಲಿ ಬದಲಾವಣೆಯಿಂದ ವೃಷಭ ರಾಶಿಗೆ ಚಂದ್ರನು ಚೈತನ್ಯ ನೀಡಲಿದೆ. ದೂರ ಪ್ರಯಾಣ ಯೋಜನೆ ಈಡೇರಲಿದೆ. ಸಾಗರೋತ್ತರ ಸಂಬಂಧ, ವ್ಯಾಪಾರದಲ್ಲಿ ಅಭವೃದ್ಧಿಯಾಗಲಿದೆ. ಉದ್ಯಮ ಆರಂಭಕ್ಕಾಗಿ ವಲಸೆ ಹೋಗುವ ಸಾಧ್ಯತೆಗಳಿವೆ.  

ಮಿಥುನ (ಮೇ. 21 - ಜೂ. 20)
ಪೂರ್ಣ ಚಂದಿರ ಗೋಚರದ ಬೆನ್ನಲ್ಲೇ ಮಿಥುನ ರಾಶಿಯಲ್ಲಿ ಪ್ರಮುಖವಾಗಿ ಸಮಸ್ಯೆಗಳಿಂದ ಬಳಲಿದವರಿಗೆ ಶುಭ ಸುದ್ದಿ ಸಿಗಲಿದೆ. ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರೆ, ಮನಸ್ತಾಪಗಳು ಮೂಡಿದ್ದರೆ ಸರಿಪಡಿಸಿಕೊಳ್ಳಲು ಇದು ಸೂಕ್ತ ಸಮಮಯವಾಗಿದೆ.  ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಸೂಕ್ತ ಸಮಯ. ಆದರೆ ಪ್ರಯತ್ನ ಮುಖ್ಯ.

ಕರ್ಕಾಟಕ ರಾಶಿ(ಜೂ.21 ರ- ಜು.22)
ಮಕರ ರಾಶಿಯವರಿಗೆ ಸಂಭ್ರಮ, ಸಂತೋಷಗಳ ಸಮಯಗಳು ಹೆಚ್ಚಾಗಲಿದೆ. ಇದರ ಜೊತೆಗೆ ಬದ್ಧತೆ, ಜವಾಬ್ದಾರಿಯೂ ಹೆಚ್ಚಾಗಲಿದೆ.  ಆದರೆ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಜೊತೆಗೆ ನಿರ್ಲಕ್ಷ್ಯಿಸಿದರೆ ಅಥವಾ ಮುತುವರ್ಜಿ ವಹಿಸದಿದ್ದರೆ ಈ ಸಮಸ್ಯೆಗಳು  ಮುಂದುವರಿಯುವ ಸಾಧ್ಯತೆಗಳಿವೆ. 

ಸಿಂಹ ರಾಶಿ(ಜು.23 - ಆ.22)
ಮಹತ್ವದ ಯೋಜನೆ ಪೂರ್ಣಗೊಳಿಸುವ ಅವಕಾಶ ಸಿಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿನ ಬದಲಾವಣಗೂ ಕಾರಣವಾಗಬಹುದು. ಇದರೊಂದಿಗೆ ಸಂತೋಷ ಕ್ಷಣ ಆಗಮಿಸಲಿದೆ.  ಆದರೆ ಕೆಲಸ ಹಾಗೂ ವೈಯುಕ್ತಿಕ ಬದುಕನ್ನು ಸಮತೋಲನದಿಂದ ನಿರ್ವಹಿಸಬೇಕಾದ ಜವಾಬ್ದಾರಿ ಹೆಗಲೇರಲಿದೆ.

ಕನ್ಯಾ ರಾಶಿ(ಆ.23- ಸೆ.22)
ಕನ್ಯಾ ರಾಶಿಯವರು ವಿಶೇಷ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆಗಳು ಹೆಚ್ಚಿದೆ. ಸಂಗಾತಿಯೂ ಆಗಿರಬಹುದು. ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚು. ಪ್ರೀತಿ ಪಾತ್ರರು ಆಕರ್ಷಿತಗೊಳ್ಳುವ ಸಾಧ್ಯತೆಗಳಿವೆ. ಏಕಾಂಗಿಯಾಗಿರುವವರು ಸಂಗಾಂತಿಯ ಗ್ರೀನ್ ಸಿಗ್ನಲ್ ಪಡೆಯುಲು ಇದು ಸಕಾಲ.  

ತುಲಾ ರಾಶಿ(ಸೆ.23 - ಅ.22)
ಸ್ಥಳಾಂತರ ಸಾಧ್ಯತೆಗಳಿವೆ. ವೃತ್ತಿಯಲ್ಲಾದರೆ ಬದಲಾವಣೆ, ಖಾಸಗಿ ಉದ್ಯೋಗದಲ್ಲಿ ಬೇರೆಡೆಗೆ ಸ್ಥಳಾಂತರ ಅಥವಾ ಬೇರೆ ಉದ್ಯೋಗ, ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಕೌಟುಂಬಿಕ ಸಮಸ್ಯೆಗಳು ಎದುರಾದರೆ ಅವುಗಳನ್ನು ತಕ್ಷಣವೇ ಪರಿಹರಿಸುವತ್ತ ಗಮನ ನೀಡಿ. 

ವೃಶ್ಚಿಕ( ಅ.23 - ನ.21)
ಬರವಣಿಗೆ, ಸಂವಹನ, ನಿರೂಪಣೆ ಸೇರಿದಂತೆ ಇತರ ಸಂವಹಾನಾತ್ಮಕ ವೃತ್ತಿಗಳಲ್ಲಿ ಯಶಸ್ಸು ಸಿಗಲಿದೆ. ನಿಮಿಗಿಷ್ಠವಾದ ಪ್ರಯಾಣ, ದೂರ ಪ್ರಯಾಣ ಸಿದ್ಧಿಯಾಗಲಿದೆ.

ಧನು ರಾಶಿ(ನ.22 - ಡಿ.21)
ಧನು ರಾಶಿಯವರು ಈ ಅವಧಿಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಖರ್ಚು ವೆಚ್ಚಗಳ ಕುರಿತು ಎಚ್ಚರಿಕೆ ವಹಿಸುವುದು ಮುಖ್ಯ. ಉದ್ಯೋಗದಲ್ಲಿ ಹೊಸ ಪ್ರಸ್ತಾವನೆ, ಹೊಸಬರ ಸಂಪರ್ಕ ಸಾಧ್ಯತೆಗಳಿವೆ.  

ಅಕ್ಟೋಬರ್ 3 ರವರೆಗೆ 5 ರಾಶಿಗೆ ರಾಜಯೋಗ ಶ್ರೀಮಂತಿಕೆ ಅದೃಷ್ಟ

ಮಕರ(ಡಿ.22 -ಜ.19)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ಟ್ರಾಬೆರಿ ಚಂದ್ರನು ಈ ವರ್ಷ ಮಕರ ರಾಶಿ ಚಕ್ರದಲ್ಲಿ ಬರಲಿದೆ. ಹೀಗಾಗಿ ಈ ರಾಶಿಯವರು ಚಂದಿರನಂತೆ ಹೊಳೆಯಲಿದ್ದಾರೆ. ಗುರಿ ಸಾಧಿಸುವ ಸಾಧ್ಯತೆ, ಕನಸು ನನಸಾಗಿಸುವ ಸಾಧ್ಯತೆಗಳು ಹೆಚ್ಚು.  

ಕುಂಭ ರಾಶಿ(ಜ.20 - ಫೆ.18)
ಕುಂಭ ರಾಶಿಯವರಿಗೆ ಸಮಸ್ಯೆಗಳು ಎದುರಾಗಲಿದೆ. ಕೋಪ, ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಹಿಂದಿನ ರಹಸ್ಯಗಳು ಹೊರಬಂದು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ. ಹೀಗಾಗಿ ವಿಶ್ರಾಂತಿ, ಸಮಸ್ಯೆಗಳಿಂದ ದೂರವಿರಲು, ತಾಳ್ಮೆಯಿಂದ ಇರಲು ಪ್ರಯತ್ನಿಸುವುದು ಒಳೀತು.

ಮೀನ(ಫೆ.19 - ಮಾ.20)
ಹಲವರ ಭೇಟಿ, ಸ್ನೇಹಿತರು, ಪರಿಚಯಸ್ಥರ ಜೊತೆ ಒಡನಾಟ, ಬೆರೆಯುವಿಕೆ ಹೆಚ್ಚಾಗಲಿದೆ. ಹೊಸಬರ ಭೇಟಿ, ಹೊಸ ಉದ್ಯೋಗ, ಹೊಸ ವ್ಯಾಪಾರ ಹೀಗೆ ಸಂಪರ್ಕ ಬೆಳೆಯುವ ಸಾಧ್ಯತೆ ಇದೆ.  

click me!