Nanajangud: ವೈಭವದ ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ ದೇವಿ ಪಲ್ಲಕ್ಕಿ ಮೆರವಣಿಗೆ

By Govindaraj S  |  First Published Nov 23, 2022, 8:07 AM IST

ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿ ಮತ್ತು ಪಾರ್ವತಿ ದೇವಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ಮೂರ್ತಿಯ ಮೆರವಣಿಗೆಯು ಸೋಮವಾರ ರಾತ್ರಿ ರಥಬೀದಿಯಲ್ಲಿ ವೈಭವಿತವಾಗಿ ಜರುಗಿತು. 


ನಂಜನಗೂಡು (ನ.23): ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿ ಮತ್ತು ಪಾರ್ವತಿ ದೇವಿಯವರ ಮುತ್ತಿನ ಪಲ್ಲಕ್ಕಿ ಉತ್ಸವ ಮೂರ್ತಿಯ ಮೆರವಣಿಗೆಯು ಸೋಮವಾರ ರಾತ್ರಿ ರಥಬೀದಿಯಲ್ಲಿ ವೈಭವಿತವಾಗಿ ಜರುಗಿತು. ಮುತ್ತಿನ ಪಲ್ಲಕ್ಕಿ ಉತ್ಸವ ಮೂರ್ತಿಯನ್ನು ದೇವಾಲಯ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥವನ್ನು ವಿವಿಧ ಬಗೆಯ ಹೂಗಳಿಂದ ಮತ್ತು ವಿದ್ಯುತ್‌ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಮುತ್ತಿನ ಪಲ್ಲಕ್ಕಿ ಉತ್ಸವವು ರಥ ಬೀದಿಯಲ್ಲಿ ಚಲಿಸಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ದೇವಸ್ಥಾನದ ಸನ್ನಿಧಿಯಲ್ಲಿರುವ ದಾಸೋಹ ಭವನದ ಆವರಣಕ್ಕೆ ಬರುತ್ತಿದ್ದಂತೆ, ಪಟಾಕಿ ಬಾಣ ಬಿರುಸುಗಳ ಸೇವೆ ಆರಂಭಗೊಂಡಿತು.

ಕಡೇ ಕಾರ್ತಿಕ ಸೋಮವಾರದ ಹಿನ್ನೆಲೆ ನಯನಜ ಕ್ಷತ್ರಿಯ ಸಮುದಾಯದವರು ಕಳೆದ ನೂರಾರು ವರ್ಷಗಳಿಂದ ಸಂಪ್ರದಾಯ ಬದ್ದವಾಗಿ ಬಾಣ-ಬಿರುಸು ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಣ ಬಿರುಸುಗಳ ಸೇವೆ ನಡೆದು ಸಾವಿರಾರು ಭಕ್ತಾಧಿಗಳು ವೀಕ್ಷಿಸಿ ಸಂಭ್ರಮಿಸಿ, ರೋಮಾಂಚನಗೊಂಡರು. ನಯನಕ್ಷತ್ರೀಯ ಸಮುದಾಯದಿಂದ ಏರ್ಪಡಿಸಿದ್ದ ಪಲ್ಲಕ್ಕಿ ಉತ್ಸವ ಮತ್ತು ಪಟಾಕಿ ಬಾಣ ಬಿರುಸುಗಳ ಕಾರ್ಯಕ್ರಮವನ್ನು ನಗರಸಭಾಧ್ಯಕ್ಷ ಎಚ್‌.ಎಸ್‌. ಮಹದೇವಸ್ವಾಮಿ ಚಾಲನೆ ನೀಡಿದರು.

Latest Videos

undefined

ಕಾಡಾನೆ ಹಿಮ್ಮೆಟ್ಟಿಸಲು 4 ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ರಚನೆ

ಮನಮೋಹಕ ಬಾಣ-ಬಿರುಸು: ಆಕರ್ಷಕ ಬಾಣ-ಬಿರುಸು ಕಾರ್ಯಕ್ರಮವು ದಾಸೋಹ ಭವನ ಆವರಣದಲ್ಲಿ ಆರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಹರ್ಷೋದ್ಘಾರ, ಕರತಾಡನಗಳಿಂದ ಸ್ವಾಗತಿಸಿದರು. ರಾತ್ರಿ 7.30ರಿಂದ ಆರಂಭವಾದ ಪಟಾಕಿ ಬಾಣ ಬಿರುಸು ಕಾರ್ಯಕ್ರಮ ರಾತ್ರಿ 9 ರವರೆಗೆ ನಡೆಯಿತು. ಭಕ್ತಾದಿಗಳು ಪಟಾಕಿಗಳ ಸದ್ದಿಗೆ ರೋಮಾಂಚನಗೊಂಡು, ಬಾನಂಗಳದಲ್ಲಿ ಮೂಡುವ ಮನೋಹರ ಚಿತ್ತಾರದ ಪಟಾಕಿ ಸಿಡಿತವನ್ನು ಕಂಡು ಬೆರಗುಗೊಂಡರು. ಈ ವಿಹಂಗಮ ನೋಟವನ್ನು ನೋಡುವ ಸಲುವಾಗಿಯೆ ತಾಲೂಕಿನ ಅಕ್ಕ-ಪಕ್ಕದ ಗ್ರಾಮ ಹಾಗೂ ನಗರದ ಪ್ರದೇಶದಿಂದ ಆಗಮಿಸಿದ ಭಕ್ತರು ಹೆಂಗಸರು, ಮಕ್ಕಳು ಮೈನವಿರೇಳುಸುವ, ಕಣ್ಣು ಕೂರೈಸುವ ಬಣ್ಣ-ಬಣ್ಣದ ಚಿತ್ತಾರದ ಆಕಾಶದಲ್ಲಿ ನಡೆಯುವ ವಿಚಿತ್ರಗಳನ್ನು ನೋಡುತ್ತಾ ಮನರಂಜನೆಯಲ್ಲಿ ಮುಳುಗಿ ತಲ್ಲೀನರಾಗಿ ಚಪ್ಪಾಳೆ ಮೂಲಕ ಸ್ವಾಗತಿಸಿದರು.

ಎಚ್‌.ಡಿ.ಕೋಟೆ: ಗ್ರಾಮ ವಾಸ್ತವ್ಯ ನನಗೆ ಪಾಠಶಾಲೆ ಇದ್ದಂತೆ, ಸಚಿವ ಅಶೋಕ್‌

ನಯನಕ್ಷತ್ರಿಯ ಮಂಡಳಿಯ ಮುಖಂಡ ನಾಗೇಶ್‌ ಮಾತನಾಡಿ, ಕಳೆದ ನೂರಾರು ವರ್ಷಗಳಿಂದ ನಯನಕ್ಷತ್ರಿಯ ಮಂಡಳಿಯವರು ಬಾಣ ಬಿರುಸುಗಳ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ, ಅಲ್ಲದೆ ಶ್ರೀಕಂಠೇಶ್ವರ ಪಲ್ಲಕ್ಕಿ ಉತ್ಸವ ಬಾಣಬಿರುಸು ಕಾರ್ಯಕ್ರಮ ನಯನಕ್ಷತ್ರಿಯರ ಸೇವಾರ್ಥ ಇದು ವೈಶಿಷ್ಟಪೂರ್ಣವಾದ ಕಾರ್ಯಕ್ರಮ ಎಂದರು.ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಬಿಗಿಬಂದೋಬಸ್‌್ತ ನಿಯೋಜಿಸಲಾಗಿತ್ತು. ನಗರಸಭಾ ಅಧ್ಯಕ್ಷ ಎಚ್‌.ಎಸ್‌. ಮಹದೇವಸ್ವಾಮಿ, ಸದಸ್ಯರಾದ ಯೋಗೀಶ್‌, ಮಹದೇವಮ್ಮ, ನಯನಕ್ಷತ್ರಿಯ ಮಂಡಳಿ ಜಿಲ್ಲಾ ಸಂಘದ ಅಧ್ಯಕ್ಷ ಎನ್‌.ಆರ್‌. ನಾಗೇಶ್‌, ತಾಲೂಕು ಅಧ್ಯಕ್ಷ ಶ್ರೀನಿವಾಸ್‌, ಕೃಷ್ಣಂರಾಜು, ವಿಷಕಂಠ, ಮಂಜುನಾಥ್‌, ಶಿವಪ್ಪ, ಪ್ರಕಾಶ್‌, ನಿಂಗರಾಜು, ಎನ್‌.ಆರ್‌. ನಾಗೇಶ್‌ ಇದ್ದರು.

click me!