ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಗಳು ಮತ್ತು ಸಿಖ್ ಗುರುಗಳಿಗೆ ಮಾಡಲಾಗುತ್ತಿರುವ ಅಗೌರವವನ್ನು ಈ ಲೇಖನ ಖಂಡಿಸುತ್ತದೆ. ಶಾಂತಿ, ಸಂಯಮ ಮತ್ತು ಸಹನೆಯನ್ನು ಕಾಪಾಡಿಕೊಳ್ಳುವಂತೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಕರೆ ನೀಡಿದ್ದಾರೆ.
ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಮತ್ತು ಸಿಖ್ ಗುರುಗಳಿಗೆ ಮಾಡಲಾಗುತ್ತಿರುವ ಅಗೌರವವನ್ನು ಈ ಲೇಖನ ಖಂಡಿಸುತ್ತದೆ. ಶಾಂತಿ, ಸಂಯಮ ಮತ್ತು ಸಹನೆಯನ್ನು ಕಾಪಾಡಿಕೊಳ್ಳುವಂತೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಕರೆ ನೀಡಿದ್ದಾರೆ.
ಅನೇಕ ಪೀಳಿಗೆಗಳಿಂದ ಕೆನಡಾ ಎಲ್ಲಾ ಹಿನ್ನಲೆಗಳುಳ್ಳ, ಎಲ್ಲಾ ಧರ್ಮಗಳ ಜನರೂ ಶಾಂತಿಯಿಂದ, ಸಾಮರಸ್ಯದಿಂದ ಜೀವಿಸುವ ಒಂದು ಸ್ಥಳವಾಗಿದೆ. ಇಂತಹ ದೇಶದಲ್ಲಿ ಇತ್ತೀಚೆಗೆ ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸುತ್ತಿರುವುದು ಅತೀ ಶೋಚನೀಯವಾದ ವಿಷಯ. ಇಂತಹ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಎಚ್ಚರ ವಹಿಸಬೇಕು ಮತ್ತು ಇದಕ್ಕೆ ಜವಾಬದ್ದಾರರಾಗಿರುವವರು, ಅವರ ಕೃತ್ಯಗಳಿಗೆ ಜವಾಬ್ದಾರಿಯನ್ನು ತೆಗೆದುಕೊಂಡು, ಕಾನೂನನ್ನು ಎದುರಿಸಲೇಬೇಕು.
ಘಾಟಿ ಚಿತ್ರದ ಫಸ್ಟ್ ಟೀಸರ್ ರಿಲೀಸ್, ಅನುಷ್ಕಾ ಶೆಟ್ಟಿ ರಗಡ್ ಲುಕ್, ಕನ್ನಡದಲ್ಲೂ ಬರುತ್ತಿದೆ ಈ ಚಿತ್ರ!
ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಅವರು ಕೇವಲ ಹಿಂದೂ ಗಳಿಗೆ ಮಾತ್ರ ಅಪಮಾನ ಮಾಡುತ್ತಿರುವುದಲ್ಲದೆ, ಸಿಖ್ ಧರ್ಮದ ಗುರುಗಳಿಗೂ ಅವರ ಅಪಮಾನ ಮಾಡುತ್ತಿದ್ದಾರೆ. ಹತ್ತು ಸಿಖ್ ಗುರುಗಳು ತಮ್ಮ ಜೀವನಗಳನ್ನು ದೇವಸ್ಥಾನಗಳ ರಕ್ಷಣೆಗಾಗಿ ಮತ್ತು ಸನಾತನ ಧರ್ಮದ ರಕ್ಷಣೆಗಾಗಿ ಮುಡುಪಾಗಿಟ್ಟಿದ್ದರು. ಐತಿಹಾಸಿಕವಾಗಿ ಹಿಂದೂ ಕುಟುಂಬಗಳು ಗುರುಗಳೊಡನೆ ನಿಂತರು ಮತ್ತು ತಮ್ಮ ಕುಟುಂಬದವರನ್ನು ಅನ್ಯಾಯದ, ಭಯೋತ್ಪಾದನೆಯ ವಿರುದ್ಧ, ತೀವ್ರವಾದದ ವಿರುದ್ಧ ಹೋರಾಡಲು ಕಳುಹಿಸಿಕೊಟ್ಕರು.
ಬಿಗ್ ಬಾಸ್ ಕನ್ನಡ 11, ಹನುಮಂತನ ಆಟಕ್ಕೆ ಬೆಚ್ಚಿದ ಮನೆ, ರಿಯಲ್ ಹನುಮನಂತೆ ಎದುರಾಳಿಗಳಿಗೆ ಟಾರ್ಗೆಟ್
ಸಿಖ್ ಗುರುಗಳನ್ನು ಮತ್ತು ಅವರ ಜೀವನದ ಧ್ಯೇಯವನ್ನು ಅಗೌರವಿಸುವುದು ಅತೀ ದುರದೃಷ್ಟಕರವಾದ ಮತ್ತು ಒಪ್ಪಲು ಅಸಾಧ್ಯವಾದಂತಹ ವಿಷಯ. ಈ ಘಟನೆಯು ನೈತಿಕತೆಯ ತೀವ್ರ ಅಭಾವವನ್ನು ಸೂಚಿಸುತ್ತದೆ. ಈ ಸವಾಲುಮಯ ಸಮಯಗಳಲ್ಲಿ ಎಲ್ಲರೂ ಶಾಂತಿಯಿಂದ, ಸಂಯಮದಿಂದ , ಸಹನೆಯಿಂದ ಇರಬೇಕೆಂಬುದೇ ನಮ್ಮ ಆಗ್ರಹ ಎಂದು ಶ್ರೀ ಶ್ರೀ ರವಿಶಂಕರ್ ಗುರೂಜಿ ಆಗ್ರಹಿಸಿದ್ದಾರೆ.