ಅಚಾನಕ್ ಮನೆಯೊಳಗೆ ಕೆಲ ಪಕ್ಷಿಗಳು ಬರ್ತಿರುತ್ತವೆ. ಅವುಗಳನ್ನು ನಾವು ಹೊರಗೆ ಹಾಕ್ತೆವೆಯೇ ವಿನಃ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ. ಆದ್ರೆ ಕೆಲ ಪಕ್ಷಿಗಳು ಮನೆ ಪ್ರವೇಶ ಮಾಡುವ ಮೂಲಕ ಅಥವಾ ನಮ್ಮ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ಕೆಲವೊಂದು ಸೂಚನೆಯನ್ನು ನಮಗೆ ನೀಡುತ್ವೆ.
ಪುಟ್ಟ ಪುಟ್ಟ ಕಾಲು, ಪುಟ್ಟ ಪುಟ್ಟ ಕೈ ಹೊಂದಿರುವ ಅಳಿಲು ನೋಡೋಕೆ ಚೆಂದ. ಅಳಿಲಿನ ಬಾಲ ಮುಟ್ಟಿದ್ರೆ ಹಣದ ಮಳೆಯಾಗುತ್ತದೆ ಎಂಬ ಮಾತಿದೆ. ಹಿಂದೂ ಧರ್ಮದಲ್ಲಿ ಅಳಿಲು ಮಂಗಳಕರವೆಂದು ಭಾವಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಳಿಲನ್ನು ಭಗವಂತ ರಾಮನ ಒಡನಾಡಿ ಎಂದು ಪರಿಗಣಿಸಲಾಗುತ್ತದೆ. ಅಳಿಲನ್ನು ನೋಡೋದ್ರಿಂದ ಹಾಗೂ ಸ್ಪರ್ಶಿಸೋದ್ರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ ಎಂದು ನಂಬಲಾಗಿದೆ. ಅಳಿಲು ನಮಗೆ ಕೆಲ ಸಂಕೇತವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಕೆಲ ಪ್ರದೇಶಗಳಲ್ಲಿ ಅಳಿಲಿ (Squirrel) ನ ಸಂಖ್ಯೆ ಹೆಚ್ಚಿದೆ. ಮನೆಯಂಗಳದಲ್ಲಿ, ಪಾರ್ಕ್ ನಲ್ಲಿ ನೀವು ಸಾಕಷ್ಟು ಅಳಿಲನ್ನು ನೋಡ್ಬಹುದು. ನಾವಿಂದು ಅಳಿಲು ಮನೆಗೆ ಬಂದ್ರೆ ಯಾವೆಲ್ಲ ಸೂಚನೆ ಸಿಗುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ. ಮೊದಲನೇಯದಾಗಿ ಅಳಿಲನ್ನು ಲಕ್ಷ್ಮಿ (Lakshmi) ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಳಿಲು ಮನೆಗೆ ಬಂದ್ರೆ ಸಂಪತ್ತು ಮತ್ತು ಸಮೃದ್ಧಿ ತರುತ್ತದೆ.
ಸಂತಾನ ಪ್ರಾಪ್ತಿ – ಶೀಘ್ರವೇ ಒಳ್ಳೆಯ ಸುದ್ದಿ : ಒಂದ್ವೇಳೆ ನಿಮ್ಮ ಮನೆಯ ಅಂಗಳಕ್ಕೆ ಅಳಿಲು ಬಂದಿದ್ದನ್ನು ನೀವು ನೋಡಿದ್ರೆ ಇದು ಶುಭ . ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿ ನಿಮಗೆ ಸಿಗಲಿದೆ. ಮನೆಯೊಳಗೆ ಬರುವ ಅಳಿಲು, ಅಲ್ಲಿ – ಇಲ್ಲಿ ಸುತ್ತಾಡಿದ್ರೆ ಇದನ್ನು ಮಂಗಳವೆಂದು ಭಾವಿಸಲಾಗುತ್ತದೆ. ಸಂತಾನದ ನಿರೀಕ್ಷೆಯಲ್ಲಿರುವ ಜನರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಪ್ರತಿದಿನ ಒಂದೇ ಅಳಿಲು ನಿಮ್ಮ ಕಣ್ಣಿಗೆ ಬೀಳ್ತಿದ್ದರೆ ಅದನ್ನು ಲಕ್ಷ್ಮಿ ಎನ್ನಬಹುದು. ಲಕ್ಷ್ಮಿ ದೇವಿಯು ನಿಮಗೆ ಆಶೀರ್ವಾದ ನೀಡುತ್ತಾಳೆ ಎಂಬುದು ಇದರ ಅರ್ಥವಾಗಿದೆ.
ಮನೆಯೊಳಗೆ ಅಳಿಲು ಬಂದ್ರೆ ಯಾವ ಸೂಚನೆ : ಮನೆಯೊಳಗೆ ಅಳಿಲು ಬಂದ್ರೆ ಮನೆಗೆ ಲಕ್ಷ್ಮಿ ಬಂದಂತೆ ಅರ್ಥ. ಮನೆಯ ಮುಖ್ಯ ಬಾಗಿಲಿನಲ್ಲಿ ನೀವು ಅಳಿಲನ್ನು ಕಂಡ್ರೆ ಲಕ್ಷ್ಮಿ ನಿಮ್ಮ ಮನೆ ಪ್ರವೇಶ ಮಾಡ್ತಿದ್ದಾಳೆ ಎನ್ನಬಹುದು. ಹಾಗೆಯೇ ನಿಮ್ಮ ಅಡುಗೆ ಮನೆಯಲ್ಲಿ ಅಳಿಲು ಕಂಡ್ರೆ ಮನೆಯಲ್ಲಿರುವ ಎಲ್ಲ ಕೊರತೆ ನೀಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಬೆಳಿಗ್ಗೆ ಅಳಿಲು ನೋಡೋದು ಶುಭವೇ? : ಮುಂಜಾನೆ ನಿಮ್ಮ ಕಣ್ಣಿಗೆ ಅಳಿಲು ಕಂಡರೆ ಇಡೀ ದಿನ ಉತ್ತಮವಾಗಿರುತ್ತದೆ ಎಂದೇ ಅರ್ಥ. ಮುಂಜಾನೆ ನಿಮ್ಮ ಕನಸಿನಲ್ಲಿ ಅಳಿಲು ಕಂಡರೆ, ಶೀಘ್ರದಲ್ಲೇ ನಿಮಗೆ ಹಣ ಪ್ರಾಪ್ತಿಯಾಗುತ್ತದೆ ಎಂಬ ಸಂಕೇತವಾಗಿದೆ. ಮುಂಜಾನೆ ಮನೆಗೆ ಅಳಿಲು ಬಂದರೆ, ಆ ದಿನ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂದು ನೀವು ಅರ್ಥೈಸಿಕೊಳ್ಳಬಹುದು.
ಹಣವೋ, ಪ್ರೀತಿಯೋ ಎಂದರೆ ಪ್ರೀತಿಯನ್ನೇ ಆರಿಸಿಕೊಳ್ಳುವ ಭಾವುಕ ರಾಶಿಗಳಿವು..
ಅಳಿಲು ಮೈಮೇಲೆ ಹತ್ತಿದ್ರೆ ಏನು ಅರ್ಥ? : ಮನೆ ಸುತ್ತಮುತ್ತ ಅಳಿಲಿದ್ರೂ ಎಲ್ಲ ದಿನ ನಮ್ಮ ಕಣ್ಣಿಗೆ ಬೀಳೋದಿಲ್ಲ. ಹಾಗೆಯೇ ಯಾವಾಗೆಂದ್ರೆ ಆವಾಗ ಮನೆ ಪ್ರವೇಶ ಮಾಡೋದಿಲ್ಲ. ಅದೇ ರೀತಿ ಅದು ಮನುಷ್ಯನ ಮೈಮೇಲೆ ಕೂಡ ಬೀಳೋದಿಲ್ಲ. ಒಂದ್ವೇಳೆ ನಿಮ್ಮ ಮೈ ಮೇಲೆ ಅಳಿಲು ಬಿದ್ರೆ ಅದು ಮಂಗಳಕರ ಸೂಚನೆಯಾಗಿದೆ. ಅಳಿಲು ನಿಮ್ಮನ್ನು ಸ್ಪರ್ಶಿಸಿದ್ರೆ ನಿಮ್ಮ ಸುತ್ತಲಿರುವ ನಕಾರಾತ್ಮಕ ಶಕ್ತಿ ದೂರವಾಯ್ತು ಎಂದರ್ಥ. ನಿಮ್ಮ ಮೈಯನ್ನು ಅಳಿಲು ಹತ್ತಿದ್ರೆ ವಿಷ್ಣುವಿನ ವಿಶೇಷ ಆಶೀರ್ವಾದ ನಿಮಗೆ ಸಿಕ್ಕಿದೆ ಎಂದುಕೊಳ್ಳಿ. ನಿಮ್ಮ ತಲೆ ಮೇಲೆ ಅಳಿಲು ಬಿದ್ರೆ ಅದು ಕೂಡ ಮಂಗಳಕರ. ನಿಮ್ಮ ಮೇಲೆ ಹಣದ ಮಳೆ ಸುರಿಯಲಿದೆ ಎಂಬ ಸೂಚನೆ. ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ. ಅರ್ಧಕ್ಕೆ ನಿಂತಿದ್ದ ಕೆಲಸ ಪೂರ್ಣಗೊಳ್ಳುವ ಸೂಚನೆ. ಮನೆಯೊಳಗೆ ಅಳಿಲು ಗೂಡು ಮಾಡಿದ್ರೆ ಇದು ಕೂಡ ಶುಭವೆನ್ನಲಾಗುತ್ತದೆ. ಹಣದ ಸಮಸ್ಯೆ ಬಗೆಹರಿಯುವ ಜೊತೆಗೆ ಸಂತೋಷ ಪ್ರಾಪ್ತಿಯಾಗುತ್ತದೆ.
VASTU TIPS: ಈ ಗಿಡಗಳು ಮನೆಯಲ್ಲಿದ್ರೆ ದಾರಿದ್ರ್ಯನ್ನ ಕೈ ಬೀಸಿ ಕರೆಯುತ್ತವೆ!
ಇದು ಅಶುಭ : ಅದೇ ನಿಮ್ಮ ಮನೆಯೊಳಗೆ ಅಥವಾ ಅಂಗಳದಲ್ಲಿ ಅಳಿಲು ಸಾವನ್ನಪ್ಪಿದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದ್ರಿಂದ ಆರ್ಥಿಕ ನಷ್ಟ, ಮನೆಯ ಸದಸ್ಯರಿಗೆ ಅನಾರೋಗ್ಯ ಕಾಡಬಹುದು. ಸತ್ತ ಅಳಿಲನ್ನು ಮಣ್ಣಿನಲ್ಲಿ ಹೂಳಬೇಕು. ಅಳಿಲನ್ನು ನೀವು ಎಂದಿಗೂ ಸಾಯಿಸ್ಬೇಡಿ. ಮನೆಯ ಹೊರಗೆ ಪಾರ್ಕ್ ನಲ್ಲಿ ಸತ್ತ ಅಳಿಲು ಕಂಡ್ರೆ ಹೆಚ್ಚು ಚಿಂತಿಸಬೇಕಾಗಿಲ್ಲ.