
ಹಿಂದೂ ಧರ್ಮ (Hinduism )ದಲ್ಲಿ ತೆಂಗಿನಕಾಯಿಗೆ ಅಪಾರ ಮಹತ್ವವಿದೆ. ಯಾವುದೇ ಶುಭ ಕಾರ್ಯದಲ್ಲಿ ತೆಂಗಿನಕಾಯಿ ಒಡೆಯುವುದು ಸಂಪ್ರದಾಯ. ತೆಂಗಿನಕಾಯಿ (coconut) ಒಡೆಯದೇ ಪೂಜೆ ಪೂರ್ಣಗೊಳ್ಳುವುದಿಲ್ಲ ಎಂಬುದು ಎಲ್ಲರ ನಂಬಿಕೆ. ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ. ಪೂಜೆಯಲ್ಲಿ ಬಳಸುವ ತೆಂಗಿನಕಾಯಿಯನ್ನು ಒಡೆದು ಪ್ರಸಾದವಾಗಿ ಎಲ್ಲರಿಗೂ ನೀಡಲಾಗುತ್ತೆ. ತೆಂಗಿನಕಾಯಿ ಒಡೆದಾಗ ಅದು ಪ್ರತಿ ಬಾರಿ ಒಂದೇ ರೀತಿ ಕಟ್ ಆಗೋದಿಲ್ಲ. ಎರಡು ಹೋಳು ಒಂದೇ ಗಾತ್ರದಲ್ಲಿ ಇರೋದಿಲ್ಲ. ತೊಟ್ಟಿಲ ಕಾಯಿಯಾಗುತ್ತೆ ಇಲ್ಲ ಅಡ್ಡಾದಿಡ್ಡಿ ಒಡೆಯುತ್ತೆ ಇಲ್ಲವೇ ಕಾಯಿ ಒಳಗೆ ಹಾಳಾಗಿರಬಹುದು. ಇದಕ್ಕೆ ಶಾಸ್ತ್ರದಲ್ಲಿ ಒಂದೊಂದು ಅರ್ಥವಿದೆ.
1.ತೆಂಗಿನಕಾಯಿ ಸರಿಯಾಗಿ ಒಡೆದ್ರೆ ಏನು ಸೂಚನೆ ? : ದೇವರ ಪೂಜೆ ಮಾಡಿ ತೆಂಗಿನ ಕಾಯಿ ಒಡೆದಾಗ ಎರಡೂ ಭಾಗ ಸಮನಾಗಿದ್ದರೆ ಇದು ಶುಭ ಸಂಕೇತವಾಗಿದೆ. ದೇವರ ಆಶೀರ್ವಾದ ನಿಮಗೆ ಸಂಪೂರ್ಣ ಇದೆ ಎಂಬುದನ್ನು ಇದು ಸೂಚಿಸುತ್ತದೆ. ಸರಿಯಾಗಿ ಒಡೆದ ತೆಂಗಿನಕಾಯಿಯನ್ನು ನೀವೊಬ್ಬರೇ ಸೇವನೆ ಮಾಡಬೇಡಿ. ಅದನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚಿ. ಇದ್ರಿಂದ ಲಾಭ ಹೆಚ್ಚು.
ದುರ್ಗೆ ಆಶೀರ್ವಾದ, ಸಂಪತ್ತು ಪ್ರಾಪ್ತಿಗೆ ನವರಾತ್ರಿ ವೇಳೆ ಈ ತೋರಣ ಹಾಕಿ
2.ಅಲ್ಲಿ ಇಲ್ಲಿ ತುಂಡಾದ್ರೆ ? : ಕೆಲವೊಮ್ಮೆ ಸರಿಯಾಗಿ ತೆಂಗಿನಕಾಯಿ ಒಡೆಯೋದಿಲ್ಲ. ಒಂದ್ಕಡೆ ಹೆಚ್ಚು, ಇನ್ನೊಂದು ಕಡೆ ಕಡಿಮೆ ಭಾಗವಾಗಿ ಒಡೆದುಕೊಳ್ಳುತ್ತದೆ. ಸಣ್ಣ ಹೋಳು ಮಾತ್ರ ಒಡೆಯಬಹುದು. ಶಾಸ್ತ್ರಗಳ ಪ್ರಕಾರ ಇದು ಕೆಟ್ಟದ್ದಲ್ಲ. ಇದು ಅಶುಭ ಸಂಕೇತದ ಸೂಚನೆಯಲ್ಲ. ಇದ್ರ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇದ್ರಿಂದಲೂ ಒಳ್ಳೆಯದೇ ಆಗುತ್ತೆ.
3.ತೊಟ್ಟಿಲು ಕಾಯಿ : ಅತೀ ಅಪರೂಪಕ್ಕೆ ತೆಂಗಿನಕಾಯಿ ತೊಟ್ಟಿಲ ಕಾಯಿಯಾಗುತ್ತದೆ. ಅಂದ್ರೆ ಒಡೆದ ಭಾಗ ತೊಟ್ಟಿಲಿನಂತೆ ಕಾಣುತ್ತದೆ. ಶಾಸ್ತ್ರಗಳ ಪ್ರಕಾರ, ತೊಟ್ಟಿಲಕಾಯಿಯಾದ್ರೆ ಮನೆಯಲ್ಲಿ ಶೀಘ್ರವೇ ತೊಟ್ಟಿಲು ತೂಗಲಿದೆ ಅಂದ್ರೆ ಮಕ್ಕಳ ಸೂಚನೆಯಾಗಿದೆ. ನಿಮ್ಮ ಮನೆಯಲ್ಲಿ ತೊಟ್ಟಿಲ ಕಾಯಿಯಾದ್ರೆ ಕುಟುಂಬಸ್ಥರು ಮಗುವನ್ನು ನಿರೀಕ್ಷಿಸಬಹುದು. ಸಂತಾನ ಅಭಿವೃದ್ಧಿಯಾಗುತ್ತದೆ.
4.ಹೂ ಕಾಯಿ : ಕೆಲವೊಮ್ಮೆ ತೆಂಗಿನಕಾಯಿ ಒಡೆದಾಗ ಹೂ ಕಾಣಿಸಿಕೊಳ್ಳುತ್ತದೆ. ಹೂಕಾಯಿ ಬಂದ್ರೆ ಇದನ್ನು ಶಾಸ್ತ್ರದಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಎಲ್ಲ ಕಾರ್ಯದಲ್ಲಿ ಯಶಸ್ಸು ಸಿಗಲಿದೆ, ಶುಭವಾಗಲಿದೆ ಎಂಬುದನ್ನು ಇದು ಸೂಚಿಸುತ್ತದೆ.
Ramayana: ರಾಮಾಯಣ ಕತೆಯಲ್ಲಿ ಸೀತೆಯ ಗೆಳತಿಯಾಗಿದ್ದಳು ಈ ರಾಕ್ಷಸಿ ತ್ರಿಜಟೆ!
5.ಕೆಟ್ಟ ಕಾಯಿ : ಕೆಲವೊಮ್ಮೆ ಪೂಜೆಗೆ ಅರ್ಪಿಸುವ ತೆಂಗಿನಕಾಯಿ ಹಾಳಾಗಿರುತ್ತದೆ. ಕೊಳೆತಿರುತ್ತದೆ. ಜನರು ಅದನ್ನು ಕೆಟ್ಟ ಶಕುನವೆಂದು ಪರಿಗಣಿಸುತ್ತಾರೆ. ಕೆಟ್ಟ ತೆಂಗಿನಕಾಯಿಯನ್ನು ಎಸೆಯುವ ಜೊತೆಗೆ ಮುಂದೇನು ಕಾದಿದೆಯೋ ಎನ್ನುವ ಆತಂಕದಲ್ಲಿರ್ತಾರೆ. ಆದ್ರೆ ಇದಕ್ಕೆ ಭಯಪಡಬೇಕಾಗಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪೂಜೆಯಲ್ಲಿ ಬಳಸಿದ ತೆಂಗಿನಕಾಯಿ ಕೆಟ್ಟದಾಗಿದ್ದರೆ ಅದನ್ನು ಶುಭ ಎನ್ನಲಾಗುತ್ತದೆ. ತೆಂಗಿನ ಕಾಯಿಯನ್ನು ತಾಯಿ ಲಕ್ಷ್ಮಿಗೆ ಹೋಲಿಸುತ್ತಾರೆ. ಕಾಯಿ ಒಡೆದಾಗ ಅದು ಹಾಳಾದ್ರೆ ದೇವರು ನೈವೇದ್ಯವನ್ನು ಸ್ವೀಕರಿಸಿದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ. ತೆಂಗಿನಕಾಯಿ ಒಡೆದಾಗ ಹಾಳಾದ್ರೆ ಅದ್ರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.
6.ಒಣಗಿದ ತೆಂಗಿನಕಾಯಿ : ನೀರಿರುವ ತೆಂಗಿನ ಕಾಯಿಯನ್ನೇ ಪೂಜೆಗೆ ಬಳಸಲಾಗುತ್ತದೆ. ಕೆಲವೊಮ್ಮೆ ಕಾಯಿ ಒಣಗಿರೋದು, ಒಡೆದ ಮೇಲೆ ಅರಿವಿಗೆ ಬರುತ್ತದೆ. ನೀವು ದೇವರಿಗೆ ಒಡೆದ ತೆಂಗಿನ ಕಾಯಿಯಲ್ಲಿ ನೀರಿಲ್ಲ ಎಂದಾದ್ರೆ ಅದು ಕೂಡ ಅಶುಭವಲ್ಲ. ಇದು ಶುಭ. ತೆಂಗಿನಕಾಯಿ ಒಣಗಿದ್ದರೆ ಶೀಘ್ರದಲ್ಲೇ ನಿಮ್ಮ ಆಸೆಗಳು ಈಡೇರುತ್ತವೆ ಎಂಬ ಅರ್ಥ.