'ಆತ್ಮ ಸಂಗಾತಿ'ಗಾಗಿ ಹಂಬಲ ಏಕೆ?: ಸದ್ಗುರು ಏನು ಹೇಳುತ್ತಾರೆ?

By Sushma Hegde  |  First Published Jun 8, 2023, 4:59 PM IST

ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ಆತ್ಮಸಂಗಾತಿ'ಯ ಹುಡುಕಾಟ (search) ದಲ್ಲಿ ಇರುವವರಿಗೆ ಕೆಲವು ವಿಷಯವನ್ನು ಹೇಳಿದ್ದಾರೆ. ಅದು ಏನೆಂದು ತಿಳಿದುಕೊಳ್ಳೋಣ.


ಸದ್ಗುರು ಜಗ್ಗಿ ವಾಸುದೇವ್ ಆದಿಯೋಗಿ (Sadhguru Jaggi Vasudev) ಎಂದೇ ಖ್ಯಾತಿ ಪಡೆದವರು. ಇವರು ಉತ್ತಮ ಲೇಖಕರು ಕೂಡ ಆಗಿದ್ದು, ’ಈಶಾ ಪೌಂಡೇಶನ್’ (isha foundation) ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಜೀವನ ಪರಿಸರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸದ್ಗುರುವಿನ ಮಾತುಗಳು ತುಂಬಾ ಪ್ರಸಿದ್ಧಿ ಪಡೆದಿವೆ. 'ಆತ್ಮಸಂಗಾತಿ' (soulmate)ಯ ಹುಡುಕಾಟದಲ್ಲಿ ಇರುವವರಿಗೆ ಸದ್ಗುರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.

ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ಆತ್ಮಸಂಗಾತಿ'ಯ ಹುಡುಕಾಟ (search) ದಲ್ಲಿ ಇರುವವರಿಗೆ ಕೆಲವು ವಿಷಯವನ್ನು ಹೇಳಿದ್ದಾರೆ. ಅದು ಏನೆಂದು ತಿಳಿದುಕೊಳ್ಳೋಣ.

Tap to resize

Latest Videos

ಆತ್ಮ ಸಂಗಾತಿಯನ್ನು ಏಕೆ ಹುಡುಕಲಾಗುತ್ತದೆ?

ಆತ್ಮ ಸಂಗಾತಿಯ ಹುಡುಕಾಟವು ಪ್ರಾಯಶಃ ಭೌತಿಕ (physical) ಕಾರಣಗಳಿಗಾಗಿ ಮಾತ್ರ ಎಂದು ಸದ್ಗುರು ಹೇಳುತ್ತಾರೆ. ಇದಲ್ಲದೆ, ಈ ಹುಡುಕಾಟವು ಮಾನಸಿಕ ಮತ್ತು ಭಾವನಾತ್ಮಕ (Emotional) ಕಾರಣಗಳಿಂದ ಕೂಡ ಆಗಿರಬಹುದು ಎಂಬುದು ಅವರ ಅಭಿಪ್ರಾಯ.

ಭೌತಿಕ ಮಟ್ಟದಲ್ಲಿ ಮಾಡುವ ಒಡನಾಟವು ಜೀವನ (life)ವನ್ನು ಸುಂದರವಾಗಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನೀವು ಅದನ್ನು ಎಚ್ಚರಿಕೆಯಿಂದ ನೋಡಬೇಕು. ಪರಸ್ಪರ ಪ್ರಾಮಾಣಿಕತೆ (Honesty) ಜೀವನದ ಅಡಿಪಾಯ ಆಗಲಿದೆ. ಆಗ ನಮಗೆ ಸರಿ ಆಗಬಲ್ಲ ಆತ್ಮ ಸಂಗಾತಿ ಹುಡುಕಾಟ ಮಾಡಲು ಜನರು ಬಯಸುತ್ತಾರೆ.

ಈ ರಾಶಿಯ ಮಹಿಳೆಯರಿಗೆ ಕಿರಿಯ ಯುವಕರು ಅಂದ್ರೆ ಪಂಚಪ್ರಾಣ..!

 

ವಾಸ್ತವದಲ್ಲಿ ಬದುಕು

ಮನುಷ್ಯನು ವಾಸ್ತವ (reality) ದಲ್ಲಿ ಬದುಕುವುದನ್ನು ಕಲಿಯಬೇಕು. ಸಂಬಂಧದ ಗಡಿಗಳು ಮತ್ತು ಸಂದರ್ಭಗಳ ಬಗ್ಗೆ ಪ್ರಾಮಾಣಿಕವಾಗಿರುವುದು ಬುದ್ಧಿವಂತವಾಗಿದೆ. ಅದಕ್ಕಾಗಿಯೇ ನೀವು ಭವಿಷ್ಯದಲ್ಲಿ ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಪ್ರಬುದ್ಧವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಮಗೆ ತಕ್ಕ ಆತ್ಮ ಸಂಗಾತಿಯ ಅವಶ್ಯಕತೆ ಇರುತ್ತದೆ.

ಆದರೆ ಕೆಲವರು ತಮಗಾಗಿ ಭ್ರಮೆಯ ಜಾಲವನ್ನು ಹೆಣೆಯುತ್ತಾರೆ. ಆತ್ಮ ಸಂಗಾತಿಗಳು ಮೇಡ್ ಇನ್ ಹೆವೆನ್‌ (Made in Heaven)ನಂತಹ ಸಿದ್ಧಾಂತಗಳನ್ನು ರೂಪಿಸುತ್ತಾರೆ ಮತ್ತು ಅವುಗಳನ್ನು ನಂಬುತ್ತಾರೆ.


ಮದುವೆ ಕೆಟ್ಟ ವಿಷಯವೇ?

ಮದುವೆಯು ಕೆಟ್ಟದ್ದಲ್ಲ ಎಂದು ಸದ್ಗುರು ಹೇಳುತ್ತಾರೆ. ಆದರೆ ನೀವು ಅದನ್ನು ಸಾಮಾಜಿಕ ವ್ಯವಸ್ಥೆ (Social system)ಯ ಭಾಗವಾಗಿ ನೋಡಿದರೆ ಮತ್ತು ಅದನ್ನು ಸುಲಭವಾಗಿ ತೆಗೆದುಕೊಳ್ಳಬೇಕು.

ಕನಸಿನಲ್ಲಿ 'ಎತ್ತಿನ ಗಾಡಿ' ಬಂದರೆ ಏನಾಗುತ್ತೆ?: ಕಾಗೆ ಕಂಡರೆ ವಿಪತ್ತು ಸಂಭವ

 

ಪ್ರೀತಿ ಕೇವಲ ಒಂದು ಭಾವನೆ

ಪ್ರೀತಿ ವಸ್ತುವಲ್ಲ, ಅಥವಾ ಪ್ರೀತಿಗೆ ಯಾವುದೇ ವಸ್ತು (material)ವಿನ ಅಗತ್ಯವಿಲ್ಲ. ಪ್ರೀತಿ ಕೇವಲ ಒಂದು ಭಾವನೆ. ವ್ಯಕ್ತಿಯು ದೈಹಿಕವಾಗಿ ಜೊತೆಗಿದ್ದರೂ ಅಥವಾ ಇಲ್ಲದಿದ್ದರೂ ಭಾವನೆ ಮುಂದುವರಿಯುತ್ತದೆ. ನೀವು ಪ್ರೀತಿಯನ್ನು ಮಿತಿಗೊಳಿಸಲು ಸಾಧ್ಯವಿಲ್ಲ. ಪ್ರೀತಿಯ ಪರಿಪೂರ್ಣತೆ (Perfection) ಯನ್ನು ನೀವು ಅರ್ಥಮಾಡಿಕೊಂಡಾಗ, ಆತ್ಮವು ಸಂಗಾತಿಯನ್ನು ಹುಡುಕುವುದಿಲ್ಲ ಎಂದು ಸಹ ನೀವು ಅರ್ಥಮಾಡಿಕೊಳ್ಳುತ್ತೀರಿ.

ಸದ್ಗುರು ಹೇಳುತ್ತಾರೆ, ನಾವು ಆತ್ಮ ಸಂಗಾತಿ ಎಂದು ಹೇಳಿದಾಗ, ಆತ್ಮ (soul)ವು ಸ್ವತಂತ್ರವಾಗಿದೆ ಎಂಬುದನ್ನು ನಾವು ಮರೆತುಬಿಡುತ್ತೇವೆ. ಅವನಿಗೆ ಯಾರೊಂದಿಗೂ ಸಂಬಂಧವಿಲ್ಲ. ಅವನಿಗೆ ಯಾವುದೇ ಸಹವಾಸವೂ ಬೇಕಾಗಿಲ್ಲ. ನಾವು ಆತ್ಮದ ಬಗ್ಗೆ ಮಾತನಾಡುವಾಗ, ನಾವು ಆ ಅನಂತ ದೈವತ್ವದ ಬಗ್ಗೆ ಮಾತನಾಡುತ್ತೇವೆ. ಅಪರಿಪೂರ್ಣನಾದ, ಸೀಮಿತನಾದವನಿಗೆ ಒಡನಾಡಿ ಬೇಕು. ಆಗ ಉತ್ತಮ ಆತ್ಮ ಸಂಬಂಧ ಅನಿವಾರ್ಯ ಆಗಲಿದೆ.

click me!