ತಮ್ಮ ಕೆಲಸಕಾರ್ಯಗಳನ್ನು ಬದಿಗಿಟ್ಟು ಇನ್ನೊಬ್ಬರ ಸಹಾಯಕ್ಕೆ ಧಾವಿಸುವ ಮಂದಿಯನ್ನು ನಾವೆಲ್ಲ ನೋಡಿರುತ್ತೇವೆ ಅಥವಾ ನಮ್ಮಲ್ಲೇ ಯಾರಾದರೊಬ್ಬರು ಈ ಗುಣ ಹೊಂದಿರುತ್ತೇವೆ. ತಮ್ಮ ಅಗತ್ಯವನ್ನೂ ಲೆಕ್ಕಿಸದೆ ಪ್ರೀತಿಪಾತ್ರರಿಗಾಗಿ ಏನಾದರೂ ಮಾಡಬಲ್ಲ ಅಂಥವರು ಈ ನಾಲ್ಕು ರಾಶಿಗಳಿಗೆ ಸೇರಿರುವುದು ದಿಟ.
ಯಾರಾದರೂ ನಿಮ್ಮ ಬಳಿ ಸಹಾಯ ಯಾಚಿಸಿದರೆ ಅಥವಾ ಏನಾದರೊಂದು ಕೆಲಸ ಹೇಳಿದರೆ “ನೋ, ನನ್ನಿಂದ ಅದು ಸಾಧ್ಯವಿಲ್ಲ’ ಎನ್ನಲು ನಿಮ್ಮಿಂದ ಸಾಧ್ಯವಾಗುವುದಿಲ್ಲವೇ? ನಿಮಗೆ ಕಷ್ಟವಾದರೂ ಅದನ್ನು ಈಡೇರಿಸಲು ಶತಾಯಗತಾಯ ಪ್ರಯತ್ನಿಸುತ್ತೀರಾ? ನಿಮ್ಮ ಇಷ್ಟಾನಿಷ್ಟಗಳನ್ನು ಬದಿಗೊತ್ತಿ ನಿಮ್ಮ ಪ್ರೀತಿಪಾತ್ರರ ಆಸೆಗಳನ್ನು ಪೂರೈಸಲು ಮುಂದಾಗುತ್ತೀರಾ? ಹಾಗಾದ್ರೆ ಖಂಡಿತವಾಗಿ ನೀವು ಕೆಲವೇ ಕೆಲವು ನಿರ್ದಿಷ್ಟ ರಾಶಿಗಳಿಗೆ ಸೇರಿರುತ್ತೀರಿ. ಏಕೆಂದರೆ, ಈ ಗುಣ ಸಹ ಈ ಕೆಲವು ರಾಶಿಗಳಲ್ಲಿ ಮಾತ್ರ ಕಂಡುಬರುತ್ತದೆ. ಈ ರಾಶಿಗಳ ಜನ ಹೃದಯದಲ್ಲಿ ತುಂಬ ಕರುಣಾಭಾವ ಹೊಂದಿರುತ್ತಾರೆ. ಇನ್ನೊಬ್ಬರಿಗೆ ಸಹಾಯ ಮಾಡಲು ಬಯಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಸನಿಹದವರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡೇ ತಮ್ಮ ಆದ್ಯತೆಗಳನ್ನು ರೂಪಿಸಿಕೊಳ್ಳುವಷ್ಟು ಇವರು ತ್ಯಾಗಮಯಿ ಆಗಿರುತ್ತಾರೆ. ಕೆಲವೊಮ್ಮೆ ಇವರ ಕಾರ್ಯದಲ್ಲಿ ಸ್ವಾರ್ಥ ಇಣುಕಬಹುದಾದರೂ ನಿಜಾರ್ಥದಲ್ಲಿ ಇವರು ಜನರನ್ನು ಸಂಪ್ರೀತಿಗೊಳಿಸಲು, ಅವರನ್ನು ಖುಷಿಯಾಗಿ ಇರಿಸಲು ಕಾಳಜಿ ವಹಿಸುತ್ತಾರೆ. ಇವರು ಯಾವತ್ತೂ ಯಾರನ್ನೂ ನಿರಾಸೆಗೊಳಿಸುವುದಿಲ್ಲ. ಯಾರಿಗೂ “ನೋ’ ಎನ್ನಲು ಇವರಿಂದ ಸಾಧ್ಯವಿಲ್ಲ. ಕೆಲವೊಮ್ಮೆ ಸಾಕುಸಾಕಾಗಿ ಹೋದರೂ ಇವರ ಪ್ರಯತ್ನ ಮಾತ್ರ ನಿಲ್ಲುವುದಿಲ್ಲ.
ಧನು (Sagittatius): ಸಾಹಸಿ ಪ್ರವೃತ್ತಿಯವರಾದ ಧನು ರಾಶಿಯವರು ಹೃದಯದಾಳದಿಂದ ಮೃದು (Soft) ಸ್ವಭಾವದವರು. ನೇರವಾಗಿ ಯಾರಿಗಾದರೂ “ಇಲ್ಲ’ ಎನ್ನಲು ಇವರಿಂದ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಇವರು ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಓಲೈಸಬಲ್ಲರು (Please People). ಆದರೆ, ತಾವು ಯಾವುದೇ ಸ್ಥಿತಿಯಲ್ಲಿ ಇರಲಿ, ತಮ್ಮ ಸನಿಹದ ಜನರ ಆಸೆ ಈಡೇರಿಸಲು ಬದ್ಧತೆ (Commit) ಹೊಂದಿರುತ್ತಾರೆ. ತಮ್ಮ ಪ್ರೀತಿಪಾತ್ರರ (Loved) ಅಗತ್ಯವನ್ನು ಪೂರೈಸಲು ತಮ್ಮ ಕೆಲಸಕಾರ್ಯಗಳನ್ನು (Works) ಪಕ್ಕಕ್ಕೆ ಇಡುತ್ತಾರೆ. ಈ ರಾಶಿಯ ಜನರಲ್ಲಿ ಸಾಕಷ್ಟು ವಿನೋದದ (Funny) ಸ್ವಭಾವವೂ ಇರುವುದರಿಂದ ತಮ್ಮ ಸುತ್ತ ಇರುವ ಜನರನ್ನು ಖುಷಿಯಾಗಿಯೂ ಇರಿಸಬಲ್ಲರು. ಧನು ರಾಶಿಯ ಜನರ ಸಮೀಪವರ್ತಿಗಳು ನೆಮ್ಮದಿಯಿಂದ ಇರಬಲ್ಲರು.
ನಿಮಗೂ ನಿಮ್ಮ ಸಂಸ್ಥೆಗೂ ಅದೃಷ್ಟ ತರೋ Alphabets ಇವು..
ಸಿಂಹ (Leo): ಮೇಲ್ನೋಟಕ್ಕೆ ಒರಟಾಗಿ (Rough), ಆಕ್ರಮಣಕಾರಿ ಸ್ವಭಾವ ಹೊಂದಿದ್ದಂತೆ ಕಂಡುಬಂದರೂ ಇವರ ಹೃದಯ ಕುಷನ್ ನಂತೆ ಮೃದುವಾಗಿ ಇರುತ್ತದೆ. ತಮ್ಮ ಸುತ್ತಲಿನ ಜನರನ್ನು ನೋಯಿಸಲು ಯಾವುದೇ ಕಾರಣಕ್ಕೂ ಇಷ್ಟಪಡುವುದಿಲ್ಲ. ತಮ್ಮ ಪ್ರೀತಿಪಾತ್ರರ ಅಗತ್ಯಗಳನ್ನು ಪೂರೈಸಲು ಮೊದಲು ಆದ್ಯತೆ (Prefer) ನೀಡುತ್ತಾರೆ. ತಮಗೆ ಇಷ್ಟವಾದವರ ಕೆಲಸಕ್ಕಾಗಿ ಯಾವುದೇ ಸಂಕಷ್ಟಗಳನ್ನೂ (Take Risk) ಎದುರಿಸಲು ಬೇಸರ ಪಡುವುದಿಲ್ಲ. ಈ ಪ್ರಯತ್ನದಲ್ಲಿ ಇವರು ತಮ್ಮ ಅಗತ್ಯಗಳನ್ನು ಸಾಕಷ್ಟು ಬಾರಿ ದೂರವಿಡುತ್ತಾರೆ. ಹಾಗೂ ತಮ್ಮ ಇಷ್ಟಾನಿಷ್ಟಗಳ ಬಗ್ಗೆ ನಿರ್ಲಕ್ಷ್ಯ (Neglect) ತೋರುತ್ತಾರೆ. ಇವರ ಈ ಸ್ವಭಾವವೇ ಇವರಿಗೆ ಕೆಲವೊಮ್ಮೆ ನೋವನ್ನೂ ತರುತ್ತದೆ. ಯಾರಾದರೂ ತಮ್ಮ ಬಗ್ಗೆ ಆಡಿಕೊಂಡರೆ ಬೇಸರ ಮಾಡಿಕೊಳ್ಳುವ ಜತೆಗೆ, “ತಾನು ಇಷ್ಟೊಂದೆಲ್ಲ ನಿಸ್ವಾರ್ಥದಿಂದ ಮಾಡಿದರೂ ಅವರು ಹೀಗೆ ಮಾಡಿದರಲ್ಲ’ ಎಂದುಕೊಂಡು ನೋವನ್ನು (Pain) ಅನುಭವಿಸುತ್ತಾರೆ.
ಕನ್ಯಾ (Virgo): ಕನ್ಯಾ ರಾಶಿಯ ಜನ ಶಿಸ್ತುಬದ್ಧತೆಯನ್ನು ಬಯಸುತ್ತಾರೆ, ಸಂಘರ್ಷ (Conflict) ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಪ್ರತಿಯೊಬ್ಬರೊಂದಿಗೂ ಪ್ರಬುದ್ಧತೆಯಿಂದ (Mature) ವರ್ತಿಸುತ್ತಾರೆ. ಯಾರೊಂದಿಗೂ ತಮ್ಮ ಬೇಕುಬೇಡಗಳ ಬಗ್ಗೆ ಹೇಳಿಕೊಳ್ಳುವುದಿಲ್ಲ. ಸದಾಕಾಲ ಧನಾತ್ಮಕ (Positive) ಸಂಗತಿಗಳ ಬಗ್ಗೆ ಮಾತನಾಡುತ್ತಾರೆ ಹಾಗೂ ಜನರಲ್ಲಿ ಉತ್ಸಾಹ ತುಂಬಲು ಯತ್ನಿಸುತ್ತಾರೆ. ಸನಿಹದ ಜನರಿಗೆ ಸಹಾಯ ಮಾಡಲು ಮುಂದಿರುತ್ತಾರೆ ಹಾಗೂ ತಮ್ಮ ಸುತ್ತಮುತ್ತ ನಕಾರಾತ್ಮಕ ವಾತಾವರಣ ನಿವಾರಿಸಲು ಬಯಸುತ್ತಾರೆ.
New Year 2023: ರಾಶಿಗೆ ತಕ್ಕಂತೆ ಬಣ್ಣ ಬಳಸಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ
ಮೀನ (Pisces): ಈ ರಾಶಿಯ ಜನ ಭಾವನೆಗಳಿಗೆ (Emotions) ಮತ್ತೊಂದು ರೂಪ. ಇವರು ತಮ್ಮ ಸುತ್ತಲಿನ ಜನರ ಸ್ಥಿತಿಗತಿಯನ್ನು ಸರಿಯಾಗಿ ಅರಿತುಕೊಳ್ಳುತ್ತಾರೆ ಹಾಗೂ ಅವರಿಗೆ ಸೂಕ್ತ ಬೆಂಬಲ (Support) ನೀಡುತ್ತಾರೆ. ಪ್ರೀತಿಪಾತ್ರರಲ್ಲಿ ಪ್ರೇರಣೆ ತುಂಬುತ್ತಾರೆ. ಇತರರಿಗಾಗಿ ತಮ್ಮ ಕೆಲಸಕಾರ್ಯಗಳ ಯೋಜನೆ ಬದಲಿಸಿಕೊಳ್ಳುತ್ತಾರೆ.