ಈ ರಾಶಿಯವರ ಸುದ್ದಿಗೆ ಹೋಗ್ಬೇಡಿ, ಹಗೆತನ ಸಾಧಿಸಿ ನಿಮ್ಮನ್ನ ಹೈರಾಣಾಗಿಸ್ತಾರೆ

By Suvarna News  |  First Published Nov 15, 2023, 5:31 PM IST

ಯಾರಾದರೂ ನಮಗೆ ನೋವು ನೀಡಿದರೂ ನಮ್ಮನ್ನೇ ಸಂತೈಸಿಕೊಂಡು, ಸುಧಾರಿಸಿಕೊಂಡು ಮುಂದೆ ಸಾಗುತ್ತೇವೆ. ದ್ವೇಷ ಸಾಧಿಸುವುದು ಕಡಿಮೆ. ಹಗೆತನ ಸಾಧಿಸುವ ಗುಣ ಎಲ್ಲರಲ್ಲೂ ಕಂಡುಬರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐದು ರಾಶಿಗಳ ಜನರಲ್ಲಿ ಹಗೆ ಸಾಧಿಸುವ ಗುಣ ಹೆಚ್ಚಾಗಿರುತ್ತದೆ. 


“ಅವನ್ನ ಮಾತ್ರ ಯಾವತ್ತೂ ಬಿಡೋದಿಲ್ಲ, ಎಂದಾದ್ರೂ ಕೈಗೆ ಸಿಗದೇ ಇರೋದಿಲ್ಲʼ ಎನ್ನುವವರನ್ನು ನಾವೆಲ್ಲರೂ ನೋಡುತ್ತಿರುತ್ತೇವೆ. ಅಥವಾ ಕೆಲವರು ಮಾತಿನಲ್ಲಿ ಏನೂ ಹೇಳದೆಯೂ ಸುಮ್ಮನಿದ್ದು ಸಾಧಿಸಬಹುದು. ಯಾರಾದರೂ ಇವರನ್ನು ನೋಯಿಸಿದ್ದರೆ, ಅಪಮಾನಿಸಿದ್ದರೆ ಇವರು ಸುಮ್ಮನೆ ಇರೋ ಪೈಕಿಯಲ್ಲ. ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಮನದಲ್ಲೇ ದ್ವೇಷ ಸಾಧಿಸ್ತಾರೆ. ಹಗೆತನಕ್ಕೂ ಇವರಿಗೂ ಭಾರೀ ನಂಟು. ಹಾಗೆಂದು ಇವರ ಬಳಿ ಬೇರೆ ಒಳ್ಳೆಯ ಗುಣಗಳು ಇರೋದಿಲ್ಲ ಎಂದಲ್ಲ. ಆದ್ರೆ, ಹಿಂದೆ ಆದ ಘಟನೆಯನ್ನು “ಹೋಗಲಿ ಬಿಡು, ಏನೋ ಆಯಿತು, ಇನ್ನಾದರೂ ಚೆನ್ನಾಗಿರೋಣʼ ಎಂದು ಬಿಡೋ ಜನ ಇವರಲ್ಲ. ಈ ಗುಣ ಮತ್ತೊಬ್ಬರಿಗೆ ಅಚ್ಚರಿ ಮೂಡಿಸಬಹುದು. ಅಯ್ಯೋ, ಎಲ್ಲ ಮರೆತು ಹಾಯಾಗಿರೋಕೆ ಏನು ಧಾಟಿ ಅನ್ನಿಸಬಹುದು. ಆದರೆ, ಇವರಿಗೆ ಮಾತ್ರ ಮನದಲ್ಲಿರೋದನ್ನು ತೀರಿಸಿಕೊಂಡಾಗ ಮಾತ್ರ ನೆಮ್ಮದಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐದು ರಾಶಿಗಳ ಜನರಲ್ಲಿ ಹಗೆತನದ ಬುದ್ಧಿಯನ್ನು ಹೆಚ್ಚಾಗಿ ಕಾಣಬಹುದು. ಇದು ಜನ್ಮಜಾತವಾಗಿ ಬಂದಿರೋ ಗುಣವಾಗಿರುವುದರಿಂದ ಬೇರೆಯವರಿಗಿಂತ ಸ್ವಲ್ಪ ಹೆಚ್ಚು ಸಮಯ ದ್ವೇಷ ಸಾಧಿಸ್ತಾರೆ. 

•    ವೃಶ್ಚಿಕ (Scorpio)
ನೀವು ಎಂದಾದರೂ ವೃಶ್ಚಿಕ ರಾಶಿಯವರನ್ನು ಸಮೀಪದಿಂದ ಗಮನಿಸಿದ್ದರೆ ಅವರ ಭಾವತೀವ್ರತೆಯ (Intense) ಮನಸ್ಥಿತಿಯನ್ನು ಗಮನಿಸಿರಬಹುದು. ಬದ್ಧತೆಗೆ ಇವರು ಮತ್ತೊಂದು ಹೆಸರು.  ದ್ವೇಷವನ್ನು (Grudge) ಸಾಧಿಸುವಲ್ಲೂ ಮುಂದಿರುತ್ತಾರೆ. ಒಮ್ಮೆ ನಿಮ್ಮಿಂದ ಏನಾದರೂ ತಪ್ಪಾದರೆ ವೃಶ್ಚಿಕ ರಾಶಿಯ ಜನ ಅದನ್ನು ಮರೆತುಬಿಟ್ಟು (Forget) ಹಾಯಾಗಿರುವುದಿಲ್ಲ, ನಿಮ್ಮನ್ನು ಕ್ಷಮಿಸುವುದೂ (Forgive) ಇಲ್ಲ. ನಿಮ್ಮಿಂದ ದೂರವುಳಿದುಬಿಡುತ್ತಾರೆ. ನಿಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳದೇ ಇದ್ದರೂ ನಿಮ್ಮಿಂದಾದ ತಪ್ಪಿಗೆ ಬೇಗ ಕ್ಷಮೆ ನೀಡುವುದಿಲ್ಲ.

Latest Videos

undefined

ಕುಂಭ ರಾಶಿಯಲ್ಲಿ ಶನಿ, ಸೂರ್ಯ ಪುತ್ರನ ಆಶೀರ್ವಾದ ಯಾವ ರಾಶಿಗೆ ಗೊತ್ತಾ..?

•     ಕರ್ಕಾಟಕ (Cancer)
ರಾಶಿಚಕ್ರದ ಪೈಕಿ ಅತ್ಯಂತ ಭಾವನಾತ್ಮಕ (Emotional) ರಾಶಿ ಎಂದರೆ ಕರ್ಕಾಟಕ. ಆಳವಾದ ಭಾವನಾತ್ಮಕ ಸಂಬಂಧ ಹೊಂದಬಲ್ಲ ಸಾಮರ್ಥ್ಯ ಇವರದ್ದು. ಈ ಮನಸ್ಥಿತಿಯೇ ಕೆಲವೊಮ್ಮೆ ಹಗೆಯನ್ನು ಸಾಧಿಸುವಂತೆ ಮಾಡಿಬಿಡುತ್ತದೆ. ಯಾರಿಂದಲಾದರೂ ಮೋಸ (Cheat) ಹೋದರೆ, ಅವರು ನೋವು ನೀಡಿದರೆ ಅವರ ಬಗ್ಗೆ ದ್ವೇಷ ಸಾಧಿಸುತ್ತಾರೆ. ಅವರನ್ನು ಕಂಡರೆ ಇವರಿಗೆ ಆಗುವುದೇ ಇಲ್ಲ. ಹೀಗಾಗಿಯೇ, ಹಳೆಯ ನೋವುಗಳಿಂದ (Pain) ಬೇಗ ಹೊರಬರಲು ಇವರಿಗೆ ಸಾಧ್ಯವಾಗುವುದಿಲ್ಲ. 

•    ವೃಷಭ (Taurus)
ಹಠಮಾರಿ (Stubborn) ಗುಣದ ವೃಷಭ ರಾಶಿಯ ಜನ ಬದ್ಧತೆಯುಳ್ಳವರು. ಲೌಕಿಕ ಸುಖಕ್ಕೆ ಆದ್ಯತೆ ನೀಡುತ್ತಾರೆ. ಹಾಗೆಯೇ, ದ್ವೇಷವನ್ನೂ ಸಾಧಿಸುವಲ್ಲಿ ಮುಂದಿದ್ದಾರೆ. ಒಂದೊಮ್ಮೆ ಯಾರಾದರೂ ಇವರ ಬಗ್ಗೆ ತಪ್ಪು ಮಾತನಾಡಿದರೆ, ಕಡೆಗಣಿಸಿದರೆ ಅವರ ಬಗ್ಗೆ ದ್ವೇಷ ಸಾಧಿಸುತ್ತಾರೆ. ತಕ್ಷಣಕ್ಕೆ ಏನಾದರೂ ದೃಢ ನಿರ್ಧಾರ (Decision) ಕೈಗೊಳ್ಳಬಲ್ಲ ಇವರು “ಅವರು ಹೀಗೆಯೇ, ಅವರಿಂದ ದೂರವಿರಬೇಕುʼ ಎಂದು ನಿರ್ಧರಿಸಿಬಿಡುತ್ತಾರೆ. ಅವರು ಎಷ್ಟೇ ಸಮೀಪವರ್ತಿಗಳಾಗಿದ್ದರೂ ಅಷ್ಟೆ. 

ಪಕ್ಕಾ ಬಾಯ್‌ಫ್ರೆಂಡ್ ಮೆಟಿರಿಯಲ್‌ಯಂತೆ ಈ ರಾಶಿಯವರು, ಇವರೇ ದಿ ಬೆಸ್ಟ್ ಲೈಫ್‌ ಪಾರ್ಟನರ್‌..!

•    ಸಿಂಹ (Leo)
ಸಾಮಾನ್ಯವಾಗಿ ಸೌಹಾರ್ದ (Generous) ಗುಣದಿಂದ ಕೂಡಿರುವ ಸಿಂಹ ರಾಶಿಯ ಜನರಿಗೆ ತಮ್ಮ ಬಗ್ಗೆ ಭಾರೀ ಹೆಮ್ಮೆ (Pride) ಇರುತ್ತದೆ. ಸಿಂಹವನ್ನು ಕಡೆಗಣಿಸಲು ಸಾಧ್ಯವಿಲ್ಲ. ನಿರ್ಲಕ್ಷ್ಯ ಮಾಡಿದರೆ ಅದು ಅವರನ್ನೇ ಹೊಸಕಿ ಹಾಕುತ್ತದೆ. ಹಾಗೆಯೇ ಇವರ ಬುದ್ಧಿ ಕೂಡ. ಯಾರ ಬಗ್ಗಾದರೂ ಇವರು ಹಗೆತನ ಮಾಡುತ್ತಿದ್ದಾರೆ ಎಂದರೆ ಅದು ಸಿಂಹದ ಘನತೆಗೆ ಆದ ಪೆಟ್ಟಾಗಿರುತ್ತದೆ. ಈ ಗುಣದಿಂದಾಗಿ ಇವರು ಸುಲಭವಾಗಿ ಯಾರನ್ನಾದರೂ ದ್ವೇಷ ಮಾಡಬಲ್ಲರು.

•    ಮೇಷ (Aries)
ಅತ್ಯಂತ ಸ್ಪರ್ಧಾತ್ಮಕ (Competitiveness) ಹಾಗೂ ಬೋಲ್ಡ್‌ ಆಗಿರುವ ಮೇಷ ರಾಶಿಯ ಜನರಿಗೆ ತಾವು ಯಾವಾಗಲೂ ಟಾಪ್‌ (Top)ನಲ್ಲೇ ಇರಬೇಕು. ಆ ಸ್ಥಾನವನ್ನು ಕಳೆದುಕೊಳ್ಳುವ ಭಯದಿಂದ ಇವರಲ್ಲಿ ದ್ವೇಷ ಆರಂಭವಾಗುತ್ತದೆ. ಇವರ ಸಾಧನೆಯನ್ನು ಯಾರಾದರೂ ಕಡೆಗಣಿಸಿದರೆ ಸಿಡಿದೇಳುತ್ತಾರೆ. ತೀವ್ರವಾಗಿರುವ ಸ್ಪರ್ಧಾತ್ಮಕ ಮನಸ್ಥಿತಿಯಿಂದಾಗಿ ದ್ವೇಷ ಮಾಡುವ ಪರಿಪಾಠ ಹೊಂದಿರುತ್ತಾರೆ.

click me!