Zodiac Sign: ವಯಸ್ಸಿಗೂ ಮೀರಿದ ಪ್ರಬುದ್ಧತೆ, ಓಲ್ಡ್‌ ಸೋಲ್‌ ಇರೋ ಜನ ಇವ್ರು

By Suvarna NewsFirst Published Jul 26, 2023, 5:23 PM IST
Highlights

ರಾಶಿಚಕ್ರಗಳ ಪೈಕಿ ಈ ಐದು ರಾಶಿಯ ಜನ ಇತರರಿಗಿಂತ ಭಿನ್ನವಾಗಿರುತ್ತಾರೆ. ಇವರಲ್ಲಿ ಅಪಾರ ಶಕ್ತಿ-ಸಾಮರ್ಥ್ಯ ಹುದುಗಿರುತ್ತದೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ, ಅರಿವು ಹೊಂದಿರುವ ಇವರು ಸಮಾಜ, ಕುಟುಂಬ ಅಥವಾ ಕಾರ್ಯಕ್ಷೇತ್ರಕ್ಕೆ ಅಪೂರ್ವ ಕೊಡುಗೆ ಸಲ್ಲಿಸುತ್ತಾರೆ.
 

ಕೆಲವರನ್ನು ಭೇಟಿಯಾದ ಸ್ವಲ್ಪ ಹೊತ್ತಿನಲ್ಲೇ ಇವರು ಸಾಕಷ್ಟು ಪ್ರಬುದ್ಧತೆ ಹೊಂದಿದ್ದಾರೆ ಎನ್ನುವ ಭಾವನೆ ಮೂಡುತ್ತದೆ. ತಮ್ಮ ಕ್ಷೇತ್ರಕ್ಕೆ ಬೇಕಾದ ಜ್ಞಾನವೂ ಅವರಲ್ಲಿ ಸಾಕಷ್ಟಿರುವುದರ ಜತೆಗೆ ತಿಳಿವಳಿಕೆಯಿಂದ ವರ್ತಿಸುತ್ತಾರೆ. ವಯಸ್ಸಿನಲ್ಲಿ ಚಿಕ್ಕವರಾದರೂ ತಮ್ಮ ವಯಸ್ಸನ್ನು ಮೀರಿದ ಪ್ರಬುದ್ಧತೆ ಎಷ್ಟೋ ಜನರಲ್ಲಿ ಕಂಡುಬರುತ್ತದೆ. ಇಂತಹ ಗುಣ ಕೆಲವು ರಾಶಿಗಳ ಜನರಲ್ಲಿ ಹೆಚ್ಚಾಗಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಈ ರಾಶಿಗಳ ಜನ ಜೀವನದ ಅರ್ಥವನ್ನು, ಮೌಲ್ಯವನ್ನು ತಿಳಿದುಕೊಂಡಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಇವರಲ್ಲಿ ಪುರಾತನ ಆತ್ಮದ ಸಾಮರ್ಥ್ಯ ಇರುತ್ತದೆ. ಇವರಲ್ಲಿ ಜೀವನದ ಬಗೆಗಿನ ದೃಷ್ಟಿಕೋನ ಇತರರಿಗಿಂತ ವಿಭಿನ್ನವಾಗಿರುತ್ತದೆ. ಐದು ರಾಶಿಗಳ ಜನರು ಈ ಬಗೆಯ ದೃಷ್ಟಿಕೋನ ಹೊಂದಿದ್ದು ತಮ್ಮ ವಯಸ್ಸಿಗೆ ಮೀರಿದ ಅರಿವು ಹೊಂದಿರುತ್ತಾರೆ. ಇವರಲ್ಲಿ ವ್ಯಕ್ತಿಗತವಾಗಿ ಯಾವುದೇ ಅಡೆತಡೆ ಇದ್ದರೂ ಇವರ ಅರಿವಿಗೆ ಸಮಸ್ಯೆ ಇರುವುದಿಲ್ಲ. 

•    ಮೀನ (Pisces)
ರಾಶಿಚಕ್ರದ (Zodiac Sign) ಕೊನೆಯ ರಾಶಿಯಾದ ಮೀನದ ಜನರು ವಿಶಿಷ್ಟ ದೃಷ್ಟಿಕೋನ (Perspective) ಮತ್ತು ಸಹಾನುಭೂತಿಯ (Sympathetic) ಪ್ರಕೃತಿ ಹೊಂದಿರುವವರು. ಸಮೀಪದವರೊಂದಿಗೆ ಆಳವಾದ (Deep) ಭಾವನಾತ್ಮಕ (Emotional) ಸಂಪರ್ಕ (Connection) ಹೊಂದುವುದು ಇವರಿಂದ ಸಾಧ್ಯವಾಗುತ್ತದೆ. ಇದು ಇವರ ಅಪೂರ್ವ ಸಾಮರ್ಥ್ಯವೂ ಹೌದು. ಇತರರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇವರಲ್ಲಿರುವ ಪುರಾತನ ಶಕ್ತಿ ಇವರನ್ನು ಅತ್ಯಂತ ಕರುಣಾಮಯಿಯನ್ನಾಗಿ ಮತ್ತು ನ್ಯಾಯವಾದಿತನವಿಲ್ಲದ ಧೋರಣೆಯ ಜನರನ್ನಾಗಿ ರೂಪಿಸುತ್ತದೆ. ಹೀಗಾಗಿ, ಅಗತ್ಯವಿರುವ ಜನರೊಂದಿಗೆ ಆಪ್ತವಾಗಿ ಒಡನಾಡಬಲ್ಲರು.

ಈ ಎರಡು Zodiac Signs ಮದ್ವಯಾದರೆ ಮುಗಿದೇ ಹೋಯಿತು ಕಥೆ, ಜೀವನವೇ ಬರ್ಬಾದ್!

Latest Videos

•    ಕರ್ಕಾಟಕ (Cancer)
ಪ್ರೀತಿಯಿಂದ (Compassion) ಪೊರೆಯುವ ಗುಣವೇ ಇವರ ಶಕ್ತಿ. ಆರೈಕೆ ಮಾಡುವ ಸ್ವಭಾವ ಮತ್ತು ಪ್ರೀತಿಭರಿತ ಧೋರಣೆಗಳ ಮೂಲಕ ತಮ್ಮ ಸುತ್ತ ಇರುವ ಜನರಿಗೆ ನೆರವಾಗುತ್ತಾರೆ. ಇತರರ ನೋವನ್ನು ಅರ್ಥ ಮಾಡಿಕೊಳ್ಳುವ ಅಂತಃಪ್ರಜ್ಞೆ (Intuition) ಹೊಂದಿರುತ್ತಾರೆ. ಭಾವನಾತ್ಮಕ ಪ್ರಬುದ್ಧತೆ (Emotional Maturity) ಹೊಂದಿದ್ದು, ಮಾನವನ ಭಾವನೆಗಳ ಆಳವನ್ನು ಅರಿತುಕೊಳ್ಳುತ್ತಾರೆ. ತಾವು ಭೇಟಿ ಮಾಡುವ ಜನರ ಜೀವನವನ್ನು ವಿಶಿಷ್ಟವಾಗಿ ಅರಿತುಕೊಳ್ಳುತ್ತಾರೆ. ಕೇವಲ ತಮಗಷ್ಟೇ ಅಲ್ಲ, ತಮ್ಮ ಪ್ರೀತಿಪಾತ್ರರೂ ಸಹ ಸ್ಥಿರತೆ ಮತ್ತು ಭದ್ರತೆ ಹೊಂದಬೇಕೆಂದು ಬಯಸುತ್ತಾರೆ.

•    ಕನ್ಯಾ (Virgo)
ವಿಮರ್ಶಾತ್ಮಕ (Analytical) ಬುದ್ಧಿಗೆ ಹೆಸರಾಗಿರುವ ಕನ್ಯಾ ರಾಶಿಯ ಜನ ಜೀವನದ ಬಗ್ಗೆ ಅತ್ಯಂತ ಪ್ರಾಯೋಗಿಕ ನಿಲುವು ಹೊಂದಿರುತ್ತಾರೆ. ಸಮಸ್ಯೆಗಳನ್ನು ನಿವಾರಿಸುವ (Problem Solving) ವಿಚಾರದಲ್ಲಿ ಇವರು ಗಮನಾರ್ಹ ಸಾಮರ್ಥ್ಯ (Capacity) ಹೊಂದಿರುತ್ತಾರೆ. ಜ್ಞಾನ ಮತ್ತು ಆಂತರಿಕ ಪ್ರಜ್ಞೆ ಹೊಂದಿರುವ ಇವರು ತಮ್ಮ ಸುತ್ತ ಇರುವ ಜನರ ಜೀವನ ಉತ್ತಮಗೊಳ್ಳಲು ಆಶಿಸುತ್ತಾರೆ. ಶಕ್ತಿಯುತವಾದ ಕಾರ್ಯಪ್ರಜ್ಞೆ (Sense of Duty) ಹೊಂದಿರುವ ಇವರು ಕುಟುಂಬಕ್ಕೆ ಅಥವಾ ಕಚೇರಿಗೆ ಆಸ್ತಿ ಎನ್ನುವಂತೆ ಕಾರ್ಯನಿರ್ವಹಿಸುತ್ತಾರೆ. 

•    ಮಕರ (Capricorn)
ಅತ್ಯಂತ ಶ್ರಮಜೀವಿಯಾಗಿದ್ದು, ಮಹತ್ವಾಕಾಂಕ್ಷೆ ಹೊಂದಿರುವ ಮಕರ ರಾಶಿಯ ಜನ ಶಿಸ್ತಿಗೆ ಮತ್ತೊಂದು ಹೆಸರು. ತಮ್ಮ ಗುರಿಗಳ ಬಗ್ಗೆ ಹಠಮಾರಿ ಆಗಿರುತ್ತಾರೆ. ಕೆಲವೊಮ್ಮೆ ಇವರು ಇತರ ರಾಶಿಗಳ ಜನರಿಗೆ ಮಾರ್ಗದರ್ಶನ (Guide) ಮಾಡುವಂತೆಯೂ ಭಾಸವಾಗುತ್ತಾರೆ. ಅತ್ಯುತ್ತಮ ಕಾರ್ಯಪ್ರಜ್ಞೆ, ಪ್ರಬುದ್ಧತೆ ಹಾಗೂ ಜೀವನದ ಬಗ್ಗೆ ವಾಸ್ತವಿಕ ದೃಷ್ಟಿಕೋನಗಳಿರುವ ಇವರು ವಿಶಿಷ್ಟವಾದ ಸಾಮರ್ಥ್ಯ ಹೊಂದಿರುತ್ತಾರೆ. ಅತ್ಯದ್ಭುತವಾಗಿ ಸಮಸ್ಯೆಗಳನ್ನು ಪರಿಹರಿಸಬಲ್ಲರು. ದೃಢವಾದ ನಿರ್ಧಾರ (Decision) ಕೈಗೊಳ್ಳಬಲ್ಲರು. 

ನಾಳೆಯಿಂದ ಶುಕ್ರ ಹಿಮ್ಮುಖ ಚಲನೆ; ಈ ರಾಶಿಯವರಿಗೆ ಇನ್ಮುಂದೆ ಬಿಂದಾಸ್ ಲೈಫ್

•    ಕುಂಭ (Aquarius)
ಮಾನವೀಯತೆಯ (Humanity) ರಾಶಿ ಎಂದೇ ಕರೆಯುವ ಕುಂಭ ರಾಶಿಯ ಜನ ಅತ್ಯಂತ ಮುಂದುವರಿದ ವಿಚಾರಧಾರೆ ಹೊಂದಿರುತ್ತಾರೆ. ಅನ್ವೇಷಣಾತ್ಮಕ ಬುದ್ಧಿ ಇವರದ್ದು. ಮುಕ್ತ ಮನಸ್ಥಿತಿಯಿಂದ ಕೂಡಿರುವ ಇವರು ಇಡೀ ಮಾನವ ಸಂಕುಲದ ಒಳಿತಿಗೆ ಶ್ರಮಿಸುವ ಗುಣ ಹೊಂದಿರುತ್ತಾರೆ. ಸಾಮಾಜಿಕ ನ್ಯಾಯ (Social Justice) ಎಲ್ಲರನ್ನೂ ಒಳಗೊಳ್ಳುವ ಶಾಂತಿಯುತ ಸಮಾಜ ನಿರ್ಮಾಣ ಇವರ ದೃಢವಾದ ಆಶಯವಾಗಿದ್ದು, ಎಲ್ಲರೂ ಈ ಕಾರ್ಯದಲ್ಲಿ ಭಾಗಿಯಾಗಬೇಕು ಎನ್ನುವ ನಿಲುವು ಹೊಂದಿರುತ್ತಾರೆ. 
 

click me!