Zodiac Sign: ಅನಾರೋಗ್ಯವೂ ಈ ರಾಶಿ ಜನರಿಗೆ ಸಂಗಾತಿ ಗಮನ ಸೆಳೆಯೋ ಮಾರ್ಗ

By Suvarna NewsFirst Published Aug 22, 2022, 10:43 AM IST
Highlights

ಮತ್ತೊಬ್ಬರನ್ನು ಸೆಳೆಯುವುದಕ್ಕಾಗಿ ಬಹುತೇಕ ಜನ ಏನಾದರೊಂದು ಪ್ರಯತ್ನ ನಡೆಸುವುದು ಕಂಡುಬರುತ್ತದೆ. ಹುಷಾರಿಲ್ಲದೆ ಇರುವಾಗ ಈ ಗುಣ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮನೆಯವರು, ಪ್ರೀತಿಪಾತ್ರರು ಕಾಳಜಿ ಮಾಡಲಿ ಎಂದು ಬಯಸುವುದು ಸಹಜ. ಆದರೆ, ಕೆಲವು ರಾಶಿಗಳ ಜನ ತಮ್ಮ ಅನಾರೋಗ್ಯವನ್ನು ಸ್ವಲ್ಪ ಹೆಚ್ಚಾಗಿಯೇ ತೋರಿಸಿಕೊಂಡು ಸಂಗಾತಿಯ ಗಮನ ಸೆಳೆಯಲು ಯತ್ನಿಸುತ್ತಾರೆ.
 

ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮತ್ತೊಬ್ಬರ ಗಮನ ಸೆಳೆಯಲು ಕೆಲಸ ಮಾಡುತ್ತಿರುತ್ತೇವೆ. ಇದು ಮಾನವ ಸಹಜ ವರ್ತನೆ. ಇತರರ ಗಮನ ಸೆಳೆಯುವುದಕ್ಕೆಂದೇ ಸಾಕಷ್ಟು ಜನ ಏನೇನೋ ಪ್ರಯತ್ನ ಪಡುತ್ತಿರುತ್ತಾರೆ. ಇದು ಬಹುದೊಡ್ಡ ಮಾರ್ಕೆಟಿಂಗ್ ಸ್ಟ್ರಾಟೆಜಿ ಕೂಡ ಆಗಿದೆ. ಈ ಧೋರಣೆ ದೊಡ್ಡವರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲೂ ಕಾಣಬಹುದು. ಅಪ್ಪ-ಅಮ್ಮನನ್ನು ಸೆಳೆಯಲೆಂದೇ ವಿವಿಧ ವರ್ತನೆ ತೋರುವ ಮಕ್ಕಳಿದ್ದಾರೆ. ಈ ವರ್ತನೆ ಹೆಚ್ಚಾದಾಗಲೇ ಅದು ಸಮಸ್ಯೆಯಾಗಿ ಕಾಡುವುದೂ ಇದೆ. ಇದನ್ನೇ ಅಟೆನ್ಷನ್ ಸೀಕಿಂಗ್ ಬಿಹೇವಿಯರ್ ಎಂದು ಹೇಳಲಾಗುತ್ತದೆ. ಪತಿ ತನ್ನ ಪತ್ನಿಯ ಗಮನ ಸೆಳೆಯಲೆಂದು ಏನೋ ಹೇಳುವುದು ಅಥವಾ ಮಾಡುವುದು, ಪತ್ನಿಯಾದವಳು ಪತಿ ತನ್ನತ್ತ ಗಮನ ಹರಿಸಲೆಂದು ಪ್ರಯತ್ನ ಪಡುವುದು ಎಲ್ಲವೂ ಸಹಜ. ಹಾಗೆಯೇ ಹುಷಾರಿಲ್ಲದೆ ಇರುವಾಗ ನಾವೆಲ್ಲರೂ ಮತ್ತೊಬ್ಬರ ಗಮನ ಸೆಳೆದು “ಅಯ್ಯೊ. ಪಾಪ’ ಎನಿಸಿಕೊಳ್ಳುವ ಹಂಬಲದಲ್ಲಿರುತ್ತೇವೆ. ಇದೂ ಸಹ ಎಲ್ಲರಲ್ಲೂ ಕಂಡುಬರುವ ಗುಣ. ಹುಷಾರಿಲ್ಲದೆ ಇರುವಾಗ, ಅನಾರೋಗ್ಯವಾದಾಗ ಪ್ರೀತಿಪಾತ್ರರು ತಮ್ಮನ್ನು ನೋಡಿಕೊಳ್ಳಲಿ, ಸ್ವಲ್ಪ ಕಾಳಜಿ ಮಾಡಲಿ ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಈ ಸಮಯದಲ್ಲಿ ಸಂಗಾತಿ ಹೆಚ್ಚು ಪ್ರೀತಿ ತೋರಲಿ ಎನ್ನುವ ಬಯಕೆ ಸಹಜವಾಗಿ ಇರುತ್ತದೆ. ಆದರೆ, ಕೆಲವು ರಾಶಿಗಳ ಜನರಲ್ಲಿ ಈ ಗುಣ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಈ ಕೆಲವು ರಾಶಿಗಳ ಜನ ತಮ್ಮ ಸಂಗಾತಿ ಅಥವಾ ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಸೆಳೆಯಲು  ತಮ್ಮ ಅನಾರೋಗ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳುತ್ತಾರೆ. ಈ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ.

·       ಕನ್ಯಾ (Vigro)
ಕನ್ಯಾ ರಾಶಿಗಳ ಜನ ಶ್ರಮಜೀವಿಗಳು (Hard Worker). ಆದರೆ, ಇವರ ಶ್ರಮ ಮನೆಯವರ ಗಮನ ಸೆಳೆಯುವುದಿಲ್ಲ. ಮನೆಯ ಯಾವುದೇ ಸದಸ್ಯರು (Family Member) ಇವರ ಶ್ರಮವನ್ನು ಪರಿಗಣಿಸುವುದಿಲ್ಲ. ಹೀಗಾಗಿ, ಈ ಭೂಮಿ ತತ್ವದ ರಾಶಿಯ ಜನ ಏನು ಮಾಡುತ್ತಾರೆ ಎಂದರೆ, ತಮಗೆ ಚಿಕ್ಕದೊಂದು ಜ್ವರ (Fever), ತಲೆನೋವು (Headache) ಬಂದರೂ ಸಾಕು, ಅದನ್ನು ಉತ್ಪ್ರೇಕ್ಷಿತವಾಗಿ ಹೇಳಿಕೊಳ್ಳುತ್ತಾರೆ. ಇವರ ಉದ್ದೇಶ ಪ್ರೀತಿಪಾತ್ರರನ್ನು (Loved) ತಮ್ಮತ್ತ ಸೆಳೆಯುವುದರ ಹೊರತಾಗಿ ಮತ್ತೇನೂ ಇರುವುದಿಲ್ಲ. ತಮ್ಮನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎನ್ನುವ ಆಶಯವೂ ಇರುತ್ತದೆ. ಹಾಗೆಯೇ, ಸಂಗಾತಿ (Partner) ಸನಿಹದಲ್ಲಿರಬೇಕೆಂದು ಬಯಸುತ್ತಾರೆ.

Ex Love ಮರೆಯಲು ಬೇರೊಬ್ಬರನ್ನು ಪ್ರೀತಿಸುವ ರಾಶಿಗಳಿವು

·       ಮಿಥುನ (Gemini)
ಮಿಥುನ ರಾಶಿಯವರು ಉತ್ಸಾಹಭರಿತ (Vivacious) ವ್ಯಕ್ತಿತ್ವ (Personality) ಹೊಂದಿರುತ್ತಾರೆ. ತಮ್ಮ ಸ್ನೇಹ ವಲಯದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿರುತ್ತಾರೆ. ಸಾಮಾಜಿಕವಾಗಿ (Social) ಹೇಗೆ ಎಲ್ಲ ಗಮನ ಸೆಳೆಯಬಲ್ಲರೋ ಹಾಗೆಯೇ ಉದ್ಯೋಗದ ಸ್ಥಳದಲ್ಲೂ ತಮ್ಮತ್ತ ಎಲ್ಲರೂ ಲಕ್ಷ್ಯ ಹರಿಸುವಂತೆ ಮಾಡಬಲ್ಲರು. ಒಂದೊಮ್ಮೆ ಕಚೇರಿಯಲ್ಲಿ (Office) ಇವರಿಗೆ ಸಣ್ಣದೊಂದು ಪೇಪರ್ ಕಟ್ ಆದರೂ ಸಾಕು, ಜವಾನನಿಂದ ಹಿಡಿದು ಮ್ಯಾನೇಜರ್ ವರೆಗೆ ಅದನ್ನು ಸುದ್ದಿಯನ್ನಾಗಿಸುತ್ತಾರೆ. “ಕೈ ಕತ್ತರಿಸಿಯೇ ಹೋಗುತ್ತಿತ್ತು’ ಎನ್ನುವಂತೆ ಕತೆಯನ್ನು ಉತ್ಪ್ರೇಕ್ಷಿತವಾಗಿ (Exaggerate) ಬಣ್ಣಿಸುತ್ತಾರೆ.

·       ಧನು (Sagittarius)
ಧನು ರಾಶಿಯ ಜನರಿಗೆ ಆಪ್ತವಾಗಿರುವ ಮಂದಿಗೆ ಇವರು ತಮ್ಮ ವೃತ್ತಿ ಬದುಕಲ್ಲಿ ಎಷ್ಟು ಬದ್ಧತೆ ಹೊಂದಿರುತ್ತಾರೆ ಹಾಗೆಯೇ ತಮ್ಮ ಸ್ನೇಹ (Friends) ವಲಯದಲ್ಲಿ ಎಷ್ಟು ನಿಷ್ಠೆ ಹೊಂದಿದ್ದಾರೆ ಎನ್ನುವುದು ತಿಳಿದಿರುತ್ತದೆ. ಇದು ನಿಜವಾಗಿದ್ದರೂ, ಧನು ರಾಶಿಯ ಜನ ಮಾತ್ರ ತಮಗೆ ಹುಷಾರಿಲ್ಲದೆ ಇರುವಾಗ ತಮ್ಮ ಆಪ್ತರು ತಮ್ಮನ್ನು ಕಾಳಜಿ ಮಾಡಲಿ ಎಂದು ಬಯಸುತ್ತಾರೆ. ಬದಲಾಯಿಸುವ ತಮ್ಮ ಕುಶಲ ಗುಣದಿಂದಾಗಿ ಇವರು ಈ ಸಮಯದಲ್ಲಿ ಹೆಚ್ಚಿನ ನಾಟಕ (Drama) ಮಾಡಬಲ್ಲರು. ಮನೆಯವರೆಯಲ್ಲರೂ ಹೆಚ್ಚಿನ ಸಹಾನುಭೂತಿ  ತೋರಲೆಂದು, ಕಾಳಜಿ (Care) ವಹಿಸಲೆಂದು ಅನಾರೋಗ್ಯವಾಗಿರುವುದಕ್ಕಿಂತಲೂ ಹೆಚ್ಚಿನ ನೋವನ್ನು ವ್ಯಕ್ತಪಡಿಸುತ್ತಾರೆ.  

ಈ ತರದ ಫ್ಲ್ಯಾಟಿನಲ್ಲಿ ಅಪ್ಪಿತಪ್ಪಿಯೂ ವಾಸಿಸಬೇಡಿ

click me!