ಭಾರತದಲ್ಲಿ ಹಾವಿನ ಸಂಖ್ಯೆ ಕಡಿಮೆ ಏನಿಲ್ಲ. ಹಾವು ಕಚ್ಚಿ ಸಾವನ್ನಪ್ಪುವವರ ಸಂಖ್ಯೆ ಕೂಡ ಬಹಳಷ್ಟಿದೆ. ಮಳೆಗಾಲದಲ್ಲಿ ಈ ಸುದ್ದಿಯನ್ನು ನಾವು ಸಾಕಷ್ಟು ಕೇಳ್ತೇವೆ. ಆದ್ರೆ ಗರ್ಭಿಣಿಯರಿಗೆ ಹಾವು ಕಚ್ಚುವ ಸಂಖ್ಯೆ ಬಹಳ ಕಡಿಮೆ. ಯಾಕೆ ಗೊತ್ತಾ?
ವಿಷಪೂರಿತ ಹಾವು (Venomous snake) ಗಳು ಕಚ್ಚಿದ್ರೆ ಬದುಕುಳಿಯೋ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಹಾವಿನ ವಿಷ ಇಡೀ ದೇಹವನ್ನು ಸೇರುವ ಮೊದಲೇ ಅನೇಕರಿಗೆ ಹೃದಯಾಘಾತ (Heart Attack) ವಾಗುತ್ತದೆ. ಒಂದು ಸಮೀಕ್ಷೆ ಪ್ರಕಾರ, ಗರ್ಭಿಣಿಯರಿಗೆ ಹಾವು ಕಚ್ಚೋದು ಬಹಳ ಕಡಿಮೆ. ವಿಜ್ಞಾನಿಗಳು ಇದಕ್ಕೆ ಸ್ಪಷ್ಟ ಕಾರಣ ಹೇಳಿಲ್ಲ. ಆದ್ರೆ ಹಿಂದೂ ಧರ್ಮ (Hinduism) ದಲ್ಲಿ ಹಾವು, ಗರ್ಭಿಣಿಯರಿಗೆ ಏಕೆ ಕಚ್ಚೋದಿಲ್ಲ ಎಂಬುದಕ್ಕೆ ಸ್ಪಷ್ಟವಾದ ಕಾರಣವನ್ನು ನೀಡಲಾಗಿದೆ.
ಗರ್ಭಿಣಿಯರಿಗೆ ಕಚ್ಚೋದಿಲ್ಲ ಹಾವು : ಹಿಂದೂ ನಂಬಿಕೆಗಳ ಪ್ರಕಾರ, ಗರ್ಭಿಣಿಯರಿಗೆ ಹಾವು ಕಚ್ಚೋದಿಲ್ಲ ಎಂದು ಬಲವಾಗಿ ನಂಬಲಾಗಿದೆ. ಹಾವು ಗರ್ಭಿಣಿಯರ ಬಳಿ ಬರ್ತಾ ಇದ್ದಂತೆ ಕುರುಡಾಗುತ್ತದೆ. ಅದಕ್ಕೆ ದಾರಿ ಮಾಡುವುದಿಲ್ಲ. ಕೆಲವೊಮ್ಮೆ ಹಾವು, ಗರ್ಭಿಣಿಯರನ್ನು ನೋಡಿದ ತಕ್ಷಣ ತನ್ನ ದಾರಿಯನ್ನು ಬದಲಿಸುತ್ತದೆ ಎಂದು ನಂಬಲಾಗಿದೆ.
3 ರಾಶಿಗೆ ಸುವರ್ಣ ಸಮಯ ಅಂತ್ಯ, ಇನ್ಮುಂದೆ ದುಃಖ, ಆರೋಗ್ಯ ಸಮಸ್ಯೆ ಹಣದ ನಷ್ಟ
ಹಾವು ಗರ್ಭಿಣಿಯರಿಗೆ ಕಚ್ಚದಿರಲು ಕಾರಣ : ಬ್ರಹ್ಮವೈವರ್ತ ಪುರಾಣದಲ್ಲಿ ಈ ವಿಷ್ಯವನ್ನು ವಿವರಿಸಲಾಗಿದೆ. ಹಾವುಗಳು ಗರ್ಭಿಣಿಯರ ಹತ್ತಿರವೂ ಬರುವುದಿಲ್ಲ ಎಂದು ಅಲ್ಲಿ ಹೇಳಲಾಗಿದೆ. ಬ್ರಹ್ಮವೈವರ್ತ ಪುರಾಣ (Brahmavaivarta Purana )ದ ಒಂದು ಕಥೆಯ ಪ್ರಕಾರ, ಒಬ್ಬ ಗರ್ಭಿಣಿ, ಶಿವನ ದೇವಾಲಯದಲ್ಲಿ ತಪಸ್ಸು ಮಾಡುತ್ತಿದ್ದಳು. ತಪಸ್ಸಿನಲ್ಲಿ ಮಗ್ನಳಾಗಿದ್ದ ಅವಳಿಗೆ ಹಾವುಗಳು ತನ್ನ ಬಳಿ ಬಂದಿದ್ದು ತಿಳಿಯಲಿಲ್ಲ. ಎರಡು ಹಾವು, ಗರ್ಭಿಣಿ ಬಳಿ ಬಂದು ಆಕೆಗೆ ತೊಂದರೆ ನೀಡಲು ಶುರು ಮಾಡಿದವು. ಇದ್ರಿಂದ ಮಹಿಳೆ ಪ್ರಾರ್ಥನೆಗೆ ಅಡ್ಡಿಯಾಯ್ತು. ಆಕೆ ಗರ್ಭದಲ್ಲಿದ್ದ ಶಿಶುಗೆ ಕೋಪ ಬಂತು. ಹಾವಿನ ಕಾಟ ಸಹಿಸದ ಶಿಶು, ಯಾವುದೇ ಹಾವು ಗರ್ಭಿಣಿಯ ಬಳಿ ಹೋದರೆ ಕುರುಡರಾಗುತ್ತಾರೆ ಎಂದು ಇಡೀ ನಾಗ ಕುಲಕ್ಕೆ ಶಾಪ ನೀಡಿದವು. ಅದರ ನಂತ್ರ ಹಾವುಗಳು ಗರ್ಭಿಣಿಯನ್ನು ಕಂಡಾಗ ಕುರುಡಾಗುತ್ತವೆ ಮತ್ತು ಗರ್ಭಿಣಿಯನ್ನು ಕಚ್ಚುವುದಿಲ್ಲ ಎಂಬ ನಂಬಿಕೆ ಜನಪ್ರಿಯವಾಗಿದೆ. ಕಥೆಯ ಪ್ರಕಾರ, ಈ ಗರ್ಭದಿಂದ ಜನಿಸಿದ ಮಗು ನಂತರ ಶ್ರೀ ಗೋಗಾ ಜಿ ದೇವ್, ಶ್ರೀ ತೇಜಾ ಜಿ ದೇವ್ ಮತ್ತು ಜಹರ್ವೀರ್ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು ಎಂದು ಪುರಾಣದಲ್ಲಿ ಹೇಳಲಾಗುತ್ತದೆ,
ಗರ್ಭಿಣಿಯರಿಗೆ ಹಾವು ಕಚ್ಚುವ ವಿಷ್ಯದಲ್ಲಿ ಸಂಶೋಧನೆ ಏನು ಹೇಳುತ್ತದೆ? : ವಿಶ್ವಾದ್ಯಂತ ಗರ್ಭಿಣಿಯರಿಗೆ ಹಾವು ಕಡಿತದ ಪ್ರಕರಣಗಳು ಕೇವಲ 5 ಪ್ರತಿಶತದಷ್ಟು ಮಾತ್ರ ಕಂಡುಬರುತ್ತವೆ ಎಂದು ಸಂಶೋಧನೆ ಹೇಳುತ್ತದೆ. ಇದಕ್ಕೆ ಸಂಶೋಧಕರು ಕೆಲ ಕಾರಣವನ್ನು ನೀಡುತ್ತಾರೆ. ಸಾಮಾನ್ಯವಾಗಿ ಗರ್ಭಧಾರಣೆಯ ನಂತರ, ಮಹಿಳೆಯರು ತಮ್ಮ ಮನೆಯಿಂದ ಹೊರಗೆ ಹೋಗುವುದು ಕಡಿಮೆ. ಅವರು ತನ್ನ ಸ್ವಂತ ರಕ್ಷತೆ ಮತ್ತು ತನ್ನ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಸುರಕ್ಷತೆಗೆ ಹೆಚ್ಚು ಕಾಳಜಿವಹಿಸುತ್ತಾರೆ. ಗದ್ದೆ, ತೋಟ, ಕಾಡು ಸೇರಿದಂತೆ ಹಾವು ಹೆಚ್ಚಾಗಿ ಕಂಡುಬರುವ ಜಾಗಕ್ಕೆ ಗರ್ಭಿಣಿಯರು ಹೋಗದ ಕಾರಣ ಅವರಿಗೆ ಹಾವು ಕಚ್ಚೋದು ಕಡಿಮೆ ಎಂದು ಸಂಶೋಧಕರು ಹೇಳ್ತಾರೆ.
ಗರ್ಭಿಣಿಯರಿಗೆ ಹಾವು ಕಚ್ಚೋದು ಏಕೆ ಕಡಿಮೆ ಎನ್ನುವ ಬಗ್ಗೆ ಕೆಲ ವರದಿಗಳಿವೆ. ಅದ್ರ ಪ್ರಕಾರ, ಗರ್ಭಧರಿಸಿದ ನಂತರ ದೇಹದಲ್ಲಿ ಕೆಲವು ಬದಲಾವಣೆ ಆಗುತ್ತದೆ. ಇದ್ರಿಂದ ಹಾರ್ಮೋನುಗಳು ಸ್ರವಿಸುತ್ತವೆ. ಹಾವು ಈ ಹಾರ್ಮೋನುಗಳನ್ನು ಪತ್ತೆ ಮಾಡುತ್ತದೆ. ಅದಕ್ಕಾಗಿಯೇ ಗರ್ಭಿಣಿಯರ ಹತ್ತಿರ ಹೋಗದೆ ಮಾರ್ಗ ಬದಲಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದ್ರೆ ಇದ್ರ ಬಗ್ಗೆ ಯಾವುದೇ ವೈಜ್ಞಾನಿಕ ಸಂಶೋಧನೆ ನಡೆದಿಲ್ಲ.
ಗಣೇಶ ಚತುರ್ಥಿಯಂದು ಈ ರಾಶಿಗೆ ಅದೃಷ್ಟ, ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಪಕ್ಕಾ
ಭಾರತದಲ್ಲಿ 350ಕ್ಕೂ ಹೆಚ್ಚು ಹಾವುಗಳಿವೆ. ಭಾರತದಲ್ಲಿ ಶೇಕಡಾ ಹತ್ತಕ್ಕಿಂತ ಕಡಿಮೆ ಹಾವುಗಳು ವಿಷಪೂರಿತವಾಗಿವೆ. ಸಾಮಾನ್ಯ ಹಾವು ಕಚ್ಚಿದರೆ, ಗರಿಷ್ಠ ಎಂಟು ಗಂಟೆಗಳ ಒಳಗೆ ಒಬ್ಬ ವ್ಯಕ್ತಿಯನ್ನು ಉಳಿಸಬಹುದು. ಇದರ ನಂತರ ದೇಹವು ಕ್ಷೀಣಿಸಲು ಪ್ರಾರಂಭಿಸುತ್ತದೆ. ಹಾವು ಕಡಿತದ ಸಂದರ್ಭದಲ್ಲಿ, ರೋಗಿಯನ್ನು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯಬೇಕು.