ಜಾತಕದಲ್ಲಿ ನೀಚ ಭಂಗ ರಾಜಯೋಗ ಅಂದ್ರೆ ಏನು..?

By Web Desk  |  First Published Oct 7, 2019, 5:49 PM IST

ಜಾತಕದಲ್ಲಿ ರಾಜಯೋಗ, ನೀಚ ಫಲ, ಶನಿ ಕಾಟ... ಹೀಗೆ ಗ್ರಹ ಗತಿಗಳು ಪ್ರಭಾವ ಬೀರುತ್ತವೆ. ಮನುಷ್ಯನ ಜೀವನವೇ ಬದಲಾಗುವುದು ಈ ಜಾತಕದಿಂದ. ಅಷ್ಟಕ್ಕೂ ಜಾತಕದಲ್ಲಿ ಹೇಳುವ ಈ ರಾಜಯೋಗ ಎಂದರೇನು? ಇಲ್ಲಿದೆ ಮಾಹಿತಿ... 


ನೀಚ ಭಂಗವಾಗುವುದು ಸಂತೋಷದ ವಿಚಾರ. ಆದರೆ ನೀಚ ಸ್ಥಿತಿ ಎಂದರೇನು..? ನೀಚ ಸ್ಥಿತಿಯು ರಾಜಯೋಗವಾಗುವುದು ಹೇಗೆ..? ಅದು ಅರ್ಥವಾಗಬೇಕು. ನಿಮ್ಮ ಜಾತಕದಲ್ಲಿ ಯಾವುದಾದರೂ ಗ್ರಹ ನೀಚ ಸ್ಥಿತಿಯಲ್ಲಿದ್ದರೆ ಆ ಗ್ರಹ ತಾನು ಕೊಡಬೇಕಾದ ಉತ್ತಮ ಫಲವನ್ನು ಕೊಡುವುದಿಲ್ಲ. ನೀಚ ಸ್ಥಿತಿ ಎಂದರೆ ಹೆಸರೇ ಹೇಳುವ ಹಾಗೆ ಗ್ರಹಗಳು ನಿಕೃಷ್ಟ ಸ್ಥಿತಿಯಲ್ಲಿರುತ್ತವೆ. ಯಾವ ಗ್ರಹಗಳು ಯಾವ ರಾಶಿಯಲ್ಲಿದ್ರೆ ನೀಚವಾಗುತ್ತವೆ ಅನ್ನುವುದು ಗೊತ್ತಾದ್ರೆ ನಿಮಗೊಂದು ಸ್ಪಷ್ಟ ಕಲ್ಪನೆ ಬರುತ್ತದೆ. 

ಗ್ರಹಗಳ ನೀಚ ಸ್ಥಿತಿ

Latest Videos

undefined

ರವಿ - ತುಲಾ ರಾಶಿ

ಚಂದ್ರ - ವೃಶ್ಚಿಕ ರಾಶಿ

ಕುಜ - ಕರ್ಕಟಕ ರಾಶಿ

ಬುಧ - ಮೀನ ರಾಶಿ

ಗುರು - ಮಕರ ರಾಶಿ

ಶುಕ್ರ - ಕನ್ಯಾ ರಾಶಿ

ಶನಿ - ಮೇಷ ರಾಶಿ

ಈ ಗ್ರಹಗಳು ಈ ರಾಶಿಯಲ್ಲಿದ್ದಾಗ ಉತ್ತಮ ಫಲ ಕೊಡಲಿಕ್ಕೆ ಅಸಮರ್ಥವಾಗಿರುತ್ತವೆ. ಆಗ ಗ್ರಹಗಳಿಗೆ ಬಲವಿರುವುದಿಲ್ಲ. ಹಾಗಾಗಿ ಈ ನೀಚ ಗ್ರಹಗಳ ದಶೆ-ಭುಕ್ತಿ ಅಂದರೆ ಆ ಗ್ರಹಗಳು ಲೀಡ್ ಮಾಡುವ ಟೈಮ್ ಬಂದಾಗ ಕೆಟ್ಟ ಫಲಗಳನ್ನು ಕೊಡುತ್ತವೆ. ಆಗಲೇ ಮನುಷ್ಯನಿಗೆ ಕಷ್ಟ ಕೋಟಲೆಗಳು ಬಂದೆರಗುವುದು. 

ರುದ್ರಾಕ್ಷಿ ಮಹತ್ವವೇನು?

ನೀಚತ್ವ ಭಂಗವಾಗುದು ಹೇಗೆ..?

ಅದೇ ತಿಳಿದುಕೊಳ್ಳಬೇಕಾದ ಮುಖ್ಯ ವಿಚಾರ. ಒಂದು ಗ್ರಹ ನೀಚ ಸ್ಥಿತಿಯಲ್ಲಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ನೀಚತ್ವ ಕಳೆದುಕೊಂಡು ರಾಜಯೋಗವನ್ನು ತಂದು ಕೊಡುತ್ತವೆ. ಹೇಗೆ ಎಂದರೆ 

ನೀಚಸ್ಥಿತೋ ಜನ್ಮನಿ ಯೋ ಗ್ರಹ: 
ಸ್ತ್ಯಾತ್ತದ್ರಾಶಿನಾಥೋಪಿ ತದುಚ್ಚನಾಥ:

ಸ ಚಂದ್ರಲಗ್ನಾದ್ಯದಿಕೇಂದ್ರವರ್ತೀ ರಾಜಾ ಭವೇದ್ಧಾರ್ಮಿಕ ಚಕ್ರವರ್ತಿ

ಎಂಬ ಆಧಾರದ ಹಾಗೆ  ಜನ್ಮ ಕಾಲದಲ್ಲಿ ಒಂದು ಗ್ರಹ ನೀಚನಾಗಿದ್ದರೆ, ಉದಾಹರಣೆಗೆ ಒಂದು ಜಾತಕದಲ್ಲಿ ಶುಕ್ರ ನೀಚನಾಗಿದ್ದಾನೆ ಎಂದಿಟ್ಟುಕೊಳ್ಳಿ. ಅಲ್ಲಿಗೆ ಶುಕ್ರ ಕನ್ಯಾರಾಶಿಯಲ್ಲಿರುತ್ತಾನೆ. ಅದು ಅವನ ನೀಚ ಮನೆ. ಹಾಗಿದ್ದಾಗ ಕನ್ಯಾರಾಶಿಯ ಅಧಿಪತಿ ಬುಧ. ಆ ಬುಧ ಗ್ರಹ ಚಂದ್ರನಿಂದ ಕೇಂದ್ರ ಸ್ಥಾನದಲ್ಲಿ ಅಂದರೆ ಚಂದ್ರನಿರುವ ಮನೆಯಿಂದ  1, 4, 7, 10 ನೇ ಮನೆಯಲ್ಲಿದ್ದರೆ ಅದು ಶುಕ್ರನ ನೀಚತ್ವವನ್ನು ಭಂಗ ಮಾಡಿ ರಾಜಯೋಗವನ್ನು ತಂದುಕೊಡುತ್ತದೆ. ಅಥವಾ ಜನ್ಮ ಲಗ್ನದಿಂದ ಕೇಂದ್ರ ಸ್ಥಾನದಲ್ಲಿ ಬುಧನಿದ್ದರೂ ನೀಚ ಭಂಗವಾಗಿ ರಾಜಯೋಗ ತರುತ್ತದೆ.

ಲೈಂಗಿಕತೆ-ಮಾತೃತ್ವ-ಯೋನಿಗಿಲ್ಲ ಪೂಜೆ

ಇನ್ನೂ ಒಂದು ಕ್ರಮವಿದೆ : ನೀಚ ನಾಗಿರುವ ಶುಕ್ರನ ಉಚ್ಛ ಮನೆಯ ಅಧಿಪತಿ ಅಂದ್ರೆ ಶುಕ್ರನಿಗೆ ಉಚ್ಛ ಮನೆ ಮೀನ. ಆ ಮೀನ ರಾಶಿಯ ಅಧಿಪತಿ ಚಂದ್ರ ಅಥವಾ ಲಗ್ನ ಕೇಂದ್ರದಲ್ಲಿದ್ದರೂ ನೀಚತ್ವ ಭಂಗವಾಗಿ ರಾಜಯೋಗ ತಂದುಕೊಡುತ್ತದೆ. ಹೀಗೆ ನಿಮ್ಮ ಜಾತಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈ ರಾಜಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
 

click me!