ಇಂದು ಕಾಲಾಷ್ಟಮಿ… ಕಾಲ ಭೈರವನನ್ನು ಈ ರೀತಿಯಾಗಿ ಪೂಜಿಸಿದ್ರೆ ಯಶಸ್ಸು ನಿಮ್ಮದೇ

Published : Feb 20, 2025, 12:06 PM ISTUpdated : Feb 20, 2025, 12:27 PM IST
ಇಂದು ಕಾಲಾಷ್ಟಮಿ… ಕಾಲ ಭೈರವನನ್ನು ಈ ರೀತಿಯಾಗಿ ಪೂಜಿಸಿದ್ರೆ ಯಶಸ್ಸು ನಿಮ್ಮದೇ

ಸಾರಾಂಶ

ಪ್ರತಿ ತಿಂಗಳ ಕೃಷ್ಣಪಕ್ಷದ ಅಷ್ಟಮಿಯಂದು ಬರುವ ಕಾಲಾಷ್ಟಮಿಯಂದು ಭೈರವನನ್ನು ಆರಾಧಿಸಿದರೆ, ಜೀವನದ ತೊಂದರೆಗಳು ನಿವಾರಣೆಯಾಗಿ, ಯಶಸ್ಸು ಲಭಿಸುತ್ತದೆ. ಉಪವಾಸ, ದೇವಾಲಯ ಭೇಟಿ, ದಾನ, ಅಷ್ಟಕ ಪಠಣದಿಂದ ಆಶೀರ್ವಾದ ಪಡೆಯಬಹುದು. 

2025 ಈ ವರ್ಷವು ಅನೇಕ ರೀತಿಯಲ್ಲಿ ಮಹತ್ವದ್ದಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಶನಿ, ಗುರು, ರಾಹು ಮತ್ತು ಕೇತು ಎಂಬ ನಾಲ್ಕು ಪ್ರಮುಖ ಆಕಾಶಕಾಯಗಳ ಸಂಚಾರವು ಎದ್ದು ಕಾಣಲು ಆರಂಭವಾಗುತ್ತದೆ. ಶನಿಯ ಸಂಕ್ರಮಣದ ಮೊದಲು, ಶನಿ ದೇವರ (Shani Dev) ಆಶೀರ್ವಾದವನ್ನು ಪಡೆಯಲು ಒಂದು ಮಾರ್ಗವನ್ನು ನಾವು ಇವತ್ತು ನಿಮಗೆ ಸೂಚಿಸುತ್ತೇವೆ. ಶನಿ ದೇವರನ್ನು ಮೆಚ್ಚಿಸುವ ಒಂದು ಮಾರ್ಗವೆಂದರೆ ಭೈರವನನ್ನು ಪೂಜಿಸುವುದು.  ಯಾವ ರೀತಿಯಾಗಿ ಭೈರವ ಪೂಜೆ ಮಾಡುವ ಮೂಲಕ ಶನಿಯನ್ನು ಮೆಚ್ಚಿಸಬಹುದು ನೋಡೋಣ. 

ಉಜ್ಜಯಿನಿಯ ಕಾಲ ಭೈರವ ದೇವಾಲಯದಲ್ಲಿ ಅಡಗಿದೆ ದೇವರ ಮದಿರ ಪಾನದ ರಹಸ್ಯ

ಕಾಲಾಷ್ಟಮಿ ಎಂದರೇನು?
ಕಾಲ ಅಷ್ಟಮಿ ಎಂದೂ ಕರೆಯಲ್ಪಡುವ ಕಾಲಾಷ್ಟಮಿ , ಶಿವನ ಉಗ್ರ ರೂಪವಾಗಿರುವ ಭೈರವನಿಗೆ (Kala Bhairava)ಸಮರ್ಪಿತವಾದ ಒಂದು ಪ್ರಮುಖ ದಿನವಾಗಿದೆ. ಈ ದಿನದಂದು ವಿಶೇಷವಾಗಿ ಭೈರವನನ್ನು ಪೂಜಿಸಲಾಗುತ್ತದೆ. ಪ್ರತಿ ತಿಂಗಳು ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು (ಚಂದ್ರನ ಕ್ಷೀಣಿಸುವ ಹಂತ) ಕಾಲಾಷ್ಟಮಿ ಆಚರಿಸಲಾಗುತ್ತದೆ, ಭಕ್ತರು ಭೈರವನನ್ನು ಪೂಜಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ವಿಶೇಷ ಆಚರಣೆಗಳನ್ನು ಮಾಡುತ್ತಾರೆ.

ಫೆಬ್ರವರಿ 2025 ರಲ್ಲಿ ಕಾಲಾಷ್ಟಮಿ 
ಅಷ್ಟಮಿ ತಿಥಿ ಪ್ರಾರಂಭ: ಫೆಬ್ರವರಿ 20, 2025, ಮಧ್ಯಾಹ್ನ 12:00 ಗಂಟೆಗೆ

ಅಷ್ಟಮಿ ತಿಥಿ ಕೊನೆ : ಫೆಬ್ರವರಿ 21, 2025, ಬೆಳಿಗ್ಗೆ 10:30 ಗಂಟೆಗೆ

ಈ ದೇವಸ್ಥಾನಕ್ಕೆ ಬರೀ ನಾರಿಯರೇ ಅರ್ಚಕರು, ಪಿರಿಯಡ್ಸ್ ಆದ್ರೂ ನಿಲ್ಲೋಲ್ಲ ಪೂಜೆ


ಕಾಲಾಷ್ಟಮಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ: 
ಭೈರವ ದೇವರನ್ನು ಪೂಜಿಸುವವರಿಗೆ ಕಾಲಾಷ್ಟಮಿ (Kalastami) ತುಂಬಾನೆ ವಿಶೇಷವಾದ ದಿನವಾಗಿದೆ. ಈ ದಿನದಂದು ಭೈರವನ ಪೂಜೆ ಮಾಡೊದ್ರಿಂದ ಏನೇನು ಆಗುತ್ತೆ ಅನ್ನೋದನ್ನು ನೋಡೋಣ ಬನ್ನಿ… 

  • ಜೀವನದ ಎಲ್ಲಾ ತೊಂದರೆಗಳನ್ನು, ಸವಾಲುಗಳಾನ್ನು, ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. 
  • ನೆಗೆಟಿವ್ ಎನರ್ಜಿ ಅಥವಾ ಜೀವನದಲ್ಲಿ ತುಂಬಿರುವ ನಕಾರಾತ್ಮಕತೆಯನ್ನು ದೂರ ಮಾಡುತ್ತೆ. 
  • ಜೀವನದ ವಿವಿಧ ಹಂತದಲ್ಲಿ ಯಶಸ್ಸನ್ನು ನೀಡುತ್ತದೆ. 
  • ಆಧ್ಯಾತ್ಮಿಕ ರಕ್ಷಣೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತೆ. 

ಭಗವಾನ್ ಭೈರವನನ್ನು ದೇವಾಲಯಗಳ ರಕ್ಷಕ ಮತ್ತು ಸಮಯ ಮತ್ತು ಮರಣವನ್ನು ನಿಯಂತ್ರಿಸುವ ದೇವತೆ ಎಂದು ಪೂಜಿಸಲಾಗುತ್ತದೆ. ರಕ್ಷಣೆ ಮತ್ತು ಮಾರ್ಗದರ್ಶನವನ್ನು ಬಯಸುವವರು ಈ ದಿನ ವಿಶೇಷ ಪೂಜೆ ಮಾಡಿದರೆ, ಎಲ್ಲವೂ ಮಂಗಳಕರವಾಗುತ್ತೆ. 

ಕಾಲಭೈರವ ದೇವರನ್ನು ಪೂಜಿಸಿದರೆ ಈ ಪ್ರಾಣಿ ಕಚ್ಚುವ ಭಯವಿಲ್ಲ!

ಕಾಲಾಷ್ಟಮಿಗೆ ಸಂಬಂಧಿಸಿದ ಆಚರಣೆಗಳು

  • ಒಂದು ದಿನದ ಉಪವಾಸವನ್ನು ಆಚರಿಸೋದು (ಆಹಾರವನ್ನು ಸಂಪೂರ್ಣವಾಗಿ ತ್ಯಜಿಸೋದು, ಕೆಲವು ಸಂದರ್ಭಗಳಲ್ಲಿ ನೀರನ್ನು ತ್ಯಜಿಸಲಾಗುತ್ತೆ)
  • ಭೈರವ ದೇಗುಲಕ್ಕೆ ಭೇಟಿ ನೀಡಿ, ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ
  • ಅಗತ್ಯ ಇರುವವರಿಗೆ ಕಪ್ಪು ಬಣ್ಣದ ಬಟ್ಟೆ, ಛತ್ರಿ ಅಥವಾ ಔಷಧಿಗಳನ್ನು ನೀಡಿ ಸಹಕರಿಸಿ. 
  • ಎಷ್ಟು ಸಲ ಸಾಧ್ಯವೋ ಅಷ್ಟು ಸಲ ಕಾಲ ಭೈರವ ಅಷ್ಟಕವನ್ನು ಪಠಿಸಿ. 

ಈ ಆಚರಣೆಗಳನ್ನು ಅನುಸರಿಸುವ ಮೂಲಕ, ಭಕ್ತರು ದೈವಿಕ ರಕ್ಷಣೆ , ಆಧ್ಯಾತ್ಮಿಕ ಬೆಳವಣಿಗೆ ಮತ್ತು ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು.

PREV
click me!

Recommended Stories

ಶೀಘ್ರದಲ್ಲೇ ಶುಭ ಫಲಗಳು ದೊರೆಯುವ 3 ರಾಶಿ, ಬೊಂಬಾಟ್‌ ಅದೃಷ್ಟ
ಪೂಜೆಗೆ ಬಳಸುವ ಗಂಟೆಯಲ್ಲಿದೆ ಮಹಾನ್ ಶಕ್ತಿ, ತಪ್ಪಾಗಿ ಬಳಸಿದ್ರೆ ಕಷ್ಟ ಗ್ಯಾರಂಟಿ