Garuda Purana : ಹೆಂಡತಿಗೆ ವಂಚಿಸೋರು, ಸುಳ್ಳು ಹೇಳೋರು ಮುಂದಿನ ಜನ್ಮದಲ್ಲೇನಾಗುತ್ತಾರೆ?

By Suvarna NewsFirst Published Jun 17, 2022, 1:35 PM IST
Highlights

ಈ ಜನ್ಮದಲ್ಲಿ ಮಾಡಿದ ಕೆಲಸ ಮುಂದಿನ ಜನ್ಮಕ್ಕೆ ವರ್ಗವಾಗುತ್ತೆ. ಈ ಜನ್ಮದಲ್ಲಿ ಪಾಪದ ಕೆಲಸ ಮಾಡಿದ್ರೆ ಮುಂದಿನ ಜನ್ಮದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಗರುಡ ಪುರಾಣದಲ್ಲಿ ಇದ್ರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ.
 

ಇಲ್ಲಿ ಮಾಡಿದ ಪಾಪ – ಪುಣ್ಯದ ಆಧಾರದ ಮೇಲೆ ಸ್ವರ್ಗ (Heaven) – ನರಕ (Hell) ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸ್ವರ್ಗ ಪ್ರಾಪ್ತಿಯಾಗ್ಬೇಕು, ಮೋಕ್ಷ ಸಿಗಬೇಕು ಎನ್ನುವವರು ಪುಣ್ಯದ ಕೆಲಸಗಳನ್ನು ಸದಾ ಮಾಡ್ಬೇಕು ಎನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ಗರುಡ ಪುರಾಣ (Garuda Purana) ಕ್ಕೆ ಮಹತ್ವದ ಸ್ಥಾನವಿದೆ. ಮನುಷ್ಯನ ಜನನದಿಂದ ಹಿಡಿದು ಮರಣದ ನಂತ್ರದ ಜೀವನದ ಬಗ್ಗೆಯೂ ಇದ್ರಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿ ಹೇಗೆ ನರಕಕ್ಕೆ ಹೋಗ್ತಾನೆ? ಹೇಗೆ ಸ್ವರ್ಗ ಸೇರುತ್ತಾನೆ ಎಂಬೆಲ್ಲ ವಿಷ್ಯಗಳು ಗರುಡ ಪುರಾಣದಲ್ಲಿದೆ. ಹಿಂದಿನ ಜನ್ಮದಲ್ಲಿ ಏನಾಗಿದ್ದೆವು ಎಂಬುದು ನಮಗೆ ತಿಳಿದಿಲ್ಲ. ಆದ್ರೆ ಮುಂದಿನ ಜನ್ಮದಲ್ಲಿ ಏನಾಗಬಲ್ಲೆವು ಎಂಬುದನ್ನು ನಾವು ತಿಳಿಯಬಹುದು. ಗರುಡ ಪುರಾಣದಲ್ಲಿ ಇದ್ರ ಬಗ್ಗೆ ಹೇಳಲಾಗಿದೆ. ಯಾವ ಕೆಲಸ  ಮಾಡಿದ ವ್ಯಕ್ತಿ ಮುಂದಿನ ಜನ್ಮದಲ್ಲಿ ಏನಾಗ್ತಾನೆ ಎಂಬುದನ್ನು ನಾವಿಂದು ಹೇಳ್ತೇವೆ.

ಗರುಡ ಪುರಾಣದ ಪ್ರಕಾರ ಹೀಗೆ ನಿಶ್ಚಯವಾಗುತ್ತೆ ಮುಂದಿನ ಜನ್ಮ: 
ಹತ್ಯೆ ಮಾಡುವ ವ್ಯಕ್ತಿ :
ಯಾವುದೇ ಹತ್ಯೆ ಮಾಡಿ ಜೀವನ ಸಾಗಿಸುವ ವ್ಯಕ್ತಿ ಅಂದ್ರೆ ಪ್ರಾಣಿಗಳನ್ನು ಹತ್ಯೆ ಮಾಡಿ ಅಥವಾ ಪ್ರಾಣಿಗಳನ್ನು ಭೇಟೆಯಾಡಿ ತನ್ನ ಹಾಗೂ ಕುಟುಂಬದವರ ಜೀವನ ಸಾಗಿಸುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಕಸಾಯಿ ಖಾನೆಯಲ್ಲಿರುವ ಕುರಿಯಾಗಿ ಜನಿಸುತ್ತಾನೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. 

ಈ ನಾಲ್ಕು ರಾಶಿಯ ಗಂಡೈಕ್ಳಿಗೆ ಹೆಣ್ಮಕ್ಳು ಬೇಗ ಆಕರ್ಷಿತರಾಗ್ತಾರೆ!

ಮಹಿಳೆಗೆ ಹಿಂಸೆ : ಯಾವ ವ್ಯಕ್ತಿ ಮಹಿಳೆಯರಿಗೆ ಹಿಂಸೆ ನೀಡ್ತಾನೋ ಅಥವಾ ಹಿಂಸೆ ನೀಡುವಂತೆ ಬೇರೆಯವರಿಗೆ ಸೂಚನೆ ನೀಡ್ತಾನೋ ಆ ವ್ಯಕ್ತಿ ಮುಂದಿನ ಜನ್ಮದಲ್ಲಿ ಭಯಾನಕ ರೋಗದಿಂದ ಬಳಲುತ್ತಾನಂತೆ. ಬೇರೆ ಮಹಿಳೆ ಜೊತೆ ಸಂಬಂಧ ಬೆಳೆಸುವ ವ್ಯಕ್ತಿ ಮುಂದಿನ ಜನ್ಮದಲ್ಲಿ ನಪುಂಸಕನಾಗಿ ಜನಿಸ್ತಾನೆ. ಹಾಗೆ ಗುರುವಿನ ಪತ್ನಿ ಜೊತೆ ಸಂಬಂಧ ಬೆಳೆಸುವ ಅಥವಾ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಕುಷ್ಠ ರೋಗದಿಂದ ಬಳಲುತ್ತಾನೆಂದು ಹೇಳಲಾಗಿದೆ.

ಪುರುಷರ ವರ್ತನೆ : ಈ ಜನ್ಮದಲ್ಲಿ ಮಹಿಳೆಯಂತೆ ವರ್ತಿಸುವ ಪುರುಷ ಅಥವಾ ಮಹಿಳೆಯರ ಸ್ವಭಾವ ಹೊಂದಿರುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಮಹಿಳೆಯಾಗಿ ಜನಿಸುತ್ತಾನಂತೆ.

ಗರ್ಭಪಾತ – ಹತ್ಯೆ (Abortion) : ಗರ್ಭಪಾತ ಅಥವಾ ಹತ್ಯೆ ಮಾಡಿದ ವ್ಯಕ್ತಿ ಅಥವಾ ಮಾಡಲು ಪ್ರೇರಣೆ ನೀಡಿದ ವ್ಯಕ್ತಿ ಮುಂದಿನ ಜನ್ಮದಲ್ಲಿ ಬೆಕ್ಕಾಗಿ ಜನಿಸ್ತಾರೆ. ಮುಂದಿನ ಜನ್ಮಕ್ಕೆ ಹೋಗುವ ಮೊದಲು ನರಕವನ್ನು ಅವರು ಅನುಭವಿಸಬೇಕಾಗುತ್ತದೆ. 

ಈ ರಾಶಿ ಹುಡುಗಿಯರ ಮೇಲೆ ತಾಯಿ ಲಕ್ಷ್ಮಿ ಕೃಪೆ ಸದಾ ಇರುತ್ತೆ !

ಸಾಯುವ ಮುನ್ನ ದೇವರ ನಾಮ : ಸಾವು ಸಮೀಪಿಸುತ್ತಿದ್ದಂತೆ ದೇವರ ನಾಮವನ್ನು ಜಪಿಸುವ ವ್ಯಕ್ತಿ ಮರಣದ ನಂತರ, ಮೋಕ್ಷದ ಹಾದಿಯಲ್ಲಿ ಮುಂದುವರಿಯುತ್ತಾನೆ. ಅದಕ್ಕಾಗಿಯೇ ಸಾಯುವಾಗ ದೇವರ ಹೆಸರನ್ನು ತೆಗೆದುಕೊಳ್ಳಬೇಕು ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. 

ತಂದೆ, ತಾಯಿ, ಮಕ್ಕಳಿಗೆ ಹಿಂಸೆ : ಗರುಡ ಪುರಾಣದ ಪ್ರಕಾರ ಯಾರು ತಂದೆ, ತಾಯಿ ಹಾಗೂ ಮಕ್ಕಳಿಗೆ ಹಿಂಸೆ ನೀಡುತ್ತಾರೋ ಅವರು ಮುಂದಿನ ಜನ್ಮದಲ್ಲಿ ಈ ಭೂಮಿಯಲ್ಲಿ ಜನಿಸುವುದಿಲ್ಲ. ಅಂದ್ರೆ ಅವರು ತಾಯಿಯ ಹೊಟ್ಟೆಯಲ್ಲಿಯೇ ಸಾವನ್ನಪ್ಪುತ್ತಾರೆ. ಅವರಿಗೆ ಮತ್ತೊಂದು ಜನ್ಮತಾಳಿ ಭೂಮಿಗೆ ಬರಲು ಸಾಧ್ಯವಾಗುವುದಿಲ್ಲ.

ಗುರುವಿನ ನಿಂದನೆ : ಗುರುವಿನ ನಿಂದನೆ ಮಾಡುವ ವ್ಯಕ್ತಿಗೆ ನರಕದಲ್ಲಿ ಸ್ಥಾನ ಸಿಗುತ್ತದೆ. ಗುರುವನ್ನು ಅವಮಾನಿಸುವ, ಅಗೌರವ ತೋರಿಸುವ ವ್ಯಕ್ತಿ ದೇವರನ್ನು ಅವಮಾನಿಸಿದಂತೆ. ಹಾಗಾಗಿ ಆತ ಬ್ರಹ್ಮ ರಾಕ್ಷಸನಾಗಿ ಜನಿಸುತ್ತಾನೆಂದು ಹೇಳಲಾಗಿದೆ. 

ಮೋಸ, ಸುಳ್ಳು (Cheating) : ಮೋಸ, ಸುಳ್ಳು, ವಂಚನೆ ಮಾಡುವ ವ್ಯಕ್ತಿಗಳ ಬಗ್ಗೆಯೂ ಹೇಳಲಾಗಿದೆ. ಯಾವ ವ್ಯಕ್ತಿ ಸುಳ್ಳು ಹೇಳ್ತಾನೋ ಆತ ಮುಂದಿನ ಜನ್ಮದಲ್ಲಿ ಗೂಬೆಯಾಗಿ ಜನಿಸ್ತಾನೆ. ಸುಳ್ಳಿಗೆ ಸಾಕ್ಷಿಯಾಗುವ ವ್ಯಕ್ತಿ ಕುರುಡನಾಗಿ ಜನಿಸ್ತಾನೆಂದು ಪುರಾಣದಲ್ಲಿ ಹೇಳಲಾಗಿದೆ. 

click me!