Janmashtami 2022: ಕಳ್ಳ ಕೃಷ್ಣನಂತೆ ಮೇಲಿಟ್ಟ ಮಡಿಕೆ ಒಡೆವ 'ದಹಿ ಹಂಡಿ' ಉತ್ಸವ

Published : Aug 15, 2022, 11:33 AM IST
Janmashtami 2022: ಕಳ್ಳ ಕೃಷ್ಣನಂತೆ ಮೇಲಿಟ್ಟ ಮಡಿಕೆ ಒಡೆವ 'ದಹಿ ಹಂಡಿ' ಉತ್ಸವ

ಸಾರಾಂಶ

ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಭಾರತದೆಲ್ಲೆಡೆ ನಡೆವ ದಹಿ ಹಂಡಿ ಕಾರ್ಯಕ್ರಮದ ಮಹತ್ವ ಶ್ರೀ ಕೃಷ್ಣನ ಬಾಲ್ಯದ ಕತೆಗೆ ಸಂಬಂಧಿಸಿರುವುದು ಎಂಬುದು ನಿಮಗೆ ಗೊತ್ತೇ?

ದಹಿ ಹಂಡಿ ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಆಚರಿಸಲಾಗುತ್ತದೆ. ಈ ವರ್ಷ ಇದನ್ನು ಆಗಸ್ಟ್ 18ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಮುಖ್ಯವಾಗಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಣ್ಣಿನ ಮಡಕೆಯಲ್ಲಿ ಮೊಸರು ಅಥವಾ ಬೆಣ್ಣೆಯನ್ನು ತುಂಬಿ ಎತ್ತರದಲ್ಲಿ ನೇತು ಹಾಕಲಾಗುತ್ತದೆ. ಪುರುಷರು ಮತ್ತು ಮಹಿಳೆಯರ ಗುಂಪು, ಮಣ್ಣಿನ ಮಡಕೆಯನ್ನು ಒಡೆಯಲು ಮಾನವ ಪಿರಮಿಡ್ ಅನ್ನು ರೂಪಿಸುತ್ತಾರೆ. ಇದು ಮುಖ್ಯವಾಗಿ ಸ್ಪರ್ಧಾತ್ಮಕ ಚಟುವಟಿಕೆಯಾಗಿದೆ.  ಈ ಸಂದರ್ಭದಲ್ಲಿ ಜನರು ಗುಂಪನ್ನು ಸುತ್ತುವರೆದಿರುತ್ತಾರೆ ಮತ್ತು ಸ್ಪರ್ಧಿಗಳನ್ನು ಹುರಿದುಂಬಿಸಲು ಸಂಗೀತ, ಬಾಜಾಭಜಂತ್ರಿ ನುಡಿಸುತ್ತಾರೆ.

ದಹಿ ಹಂಡಿಯ ಮಹತ್ವವು ಬೆಣ್ಣೆಕಳ್ಳ ಶ್ರೀಕೃಷ್ಣನ ದಂತಕಥೆಯನ್ನು ಆಧರಿಸಿದೆ. ಬಾಲ್ಯದಲ್ಲಿ, ಕೃಷ್ಣನು ತುಂಬಾ ಚೇಷ್ಟೆ ಮಾಡುತ್ತಿದ್ದನು. ಬೆಣ್ಣೆ ಅಂದರೆ ಅವನಿಗೆ ಇನ್ನಿಲ್ಲದಷ್ಟು ಪ್ರಾಣ. ಹಾಗಾಗಿ, ಆತ ಯಾವಾಗಲೂ ತನ್ನ ಸ್ನೇಹಿತರ ಗುಂಪು ಕಟ್ಟಿಕೊಂಡು ಹೋಗಿ ನೆರೆಹೊರೆಯ ಮನೆಯಿಂದ ಬೆಣ್ಣೆ ಕದಿಯುತ್ತಿದ್ದನು. ಕೃಷ್ಣನ ಈ ಕಳ್ಳತನದಿಂದ ತಪ್ಪಿಸಿಕೊಳ್ಳಲು ಜನರು ಬೆಣ್ಣೆ ತುಂಬಿದ ಮಣ್ಣಿನ ಮಡಕೆಗಳನ್ನು ಮೇಲೆ ಚಾವಣಿಯಲ್ಲಿ ನೇತು ಹಾಕಲಾರಂಭಿಸಿದರು. ಆದರೆ, ಅತ್ಯಂತ ಚುರುಕಾದ, ಬುದ್ಧಿವಂತ ಮತ್ತು ತುಂಟನಾದ ಕೃಷ್ಣ ಸ್ನೇಹಿತರೊಂದಿಗೆ ಪಿರಮಿಡ್ ರಚಿಸಿ ಮೇಲೆ ಹತ್ತಿ ಮಡಕೆ ಒಡೆದು ಬೆಣ್ಣೆ ಕದಿಯುತ್ತಿದ್ದನು. 

ದಹಿ ಹಂಡಿ
ಕೃಷ್ಣನ ಈ ತುಂಟಾಟದ ನೆನಪಿಗಾಗಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ದಹಿ ಹಂಡಿ ಆಚರಣೆಗೆ ಬಂದಿತು. ಈಗಂತೂ ಇದೊಂದು ಬಹಳ ಮೋಜಿನ ಆಟವಾಗಿದೆ. ಜೂಜಿನ ಪಂದ್ಯವೂ ಆಗಿದೆ. ಪಿರಮಿಡ್ ನಿರ್ಮಿಸುವಾಗ ಕೆಳಗಿನ ಹಂತಗಳು ತಮ್ಮ ಭುಜದ ಮೇಲೆ ಭಾರವನ್ನು ಹೊತ್ತುಕೊಳ್ಳಬಲ್ಲ ಗಟ್ಟಿಮುಟ್ಟಾದ ಜನರನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಹಂಡಿ ಒಡೆಯಬಲ್ಲ ಚುರುಕಾದ ಮಗುವನ್ನು ಹತ್ತಿಸಲಾಗುತ್ತದೆ. ಪಿರಮಿಡ್ ರೂಪಿಸುವ ಜನರನ್ನು 'ಗೋವಿಂದಾ ಪಾಠಕ್' ಅಥವಾ 'ಗೋವಿಂದಾ' ಎಂದು ಕರೆಯಲಾಗುತ್ತದೆ.

Janmastami 2022: ರಾತ್ರಿ ವಧು, ಮುಂಜಾನೆ ವಿಧವೆ!

ಹಂಡಿಯನ್ನು ನೆಲದಿಂದ 30 ಅಡಿ ಅಥವಾ 40 ಅಡಿಗಳಷ್ಟು ಮೇಲೆ ಇರಿಸಲಾಗುತ್ತದೆ. ವಿವಿಧ ತಂಡಗಳು ಅತ್ಯುನ್ನತ ಪಿರಮಿಡ್ ಅನ್ನು ರೂಪಿಸಲು ಸ್ಪರ್ಧಿಸುತ್ತವೆ ಮತ್ತು ಜನಸಮೂಹವು ಅವರನ್ನು ಹುರಿದುಂಬಿಸುತ್ತದೆ, ಅದೇ ಉತ್ಸಾಹದಿಂದ ಆಚರಣೆ ನಡೆಯುತ್ತದೆ.

ದಹಿ ಹಂಡಿಯಲ್ಲೇನಿರುತ್ತೆ?
ಗುಜರಾತ್ ಮತ್ತು ದ್ವಾರಕಾದಂತಹ ಸ್ಥಳಗಳಲ್ಲಿ, ಮೊಸರು, ಬಾದಾಮಿ, ತುಪ್ಪ ಮತ್ತು ಡ್ರೈ ಫ್ರೂಟ್‌ಗಳಂತಹ ಕೃಷ್ಣನಿಗೆ ಪ್ರಿಯವಾದ ವಸ್ತುಗಳಿಂದ ಮಣ್ಣಿನ ಮಡಕೆಯನ್ನು ತುಂಬಿಸಲಾಗುತ್ತದೆ!

ಇದು ಯುವ ಕೃಷ್ಣನ ಜೀವನ ಮತ್ತು ಕಾರ್ಯಗಳನ್ನು ಪ್ರತಿನಿಧಿಸುತ್ತದೆ. ಜನರು ನಿಜವಾದ ದಹಿ ಹಂಡಿ ನಡೆವ ಒಂದು ವಾರದ ಮೊದಲಿಂದ ಅಭ್ಯಾಸ ಮಾಡುತ್ತಾರೆ. ಈ ಆಚರಣೆಯಲ್ಲಿ, ಮಾನವ ಪಿರಮಿಡ್‌ಗಳು ಗಮನ, ಶಕ್ತಿ, ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ರೂಪುಗೊಳ್ಳುತ್ತವೆ. ಒಂದು ಪಿರಮಿಡ್ ಒಂಬತ್ತು ಪದರಗಳನ್ನು ಹೊಂದಿರಬಹುದು. 

Weekly Love Horoscope: ಈ ರಾಶಿಗೆ ವೈವಾಹಿಕ ಜೀವನದಲ್ಲಿ ಜಗಳ, ರಗಳೆ..

ಉತ್ಲೋತ್ಸವ
ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರು ಈ ಹಬ್ಬವನ್ನು ಉತ್ಲೋತ್ಸವ ಎಂದು ಆಚರಿಸುತ್ತಾರೆ. ಇದನ್ನು ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗುವುದು ಮತ್ತು ಜನ್ಮಾಷ್ಟಮಿ ನಂತರದ ದಿನ ಆಚರಿಸಲಾಗುತ್ತದೆ. ಶ್ರೀ ಕೃಷ್ಣ  ಮತ್ತು ಶ್ರೀ ಮಲಯಪ್ಪ ಸ್ವಾಮಿಯ ಮೆರವಣಿಗೆಯನ್ನು ಉತ್ಲೋತ್ಸವದಲ್ಲಿ ನಡೆಸಲಾಗುತ್ತದೆ. ಸ್ಥಳೀಯ ಯುವಕರು ಆಡುವ ಕ್ರೀಡೆಯನ್ನು ದೇವತೆಗಳು ವೀಕ್ಷಿಸುತ್ತಾರೆ ಎಂಬ ನಂಬಿಕೆ ಇದೆ. 

PREV
click me!

Recommended Stories

Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?
ಡಿಸೆಂಬರ್ 8 ರಿಂದ 14 ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ಸಂಪತ್ತಿನ ಲಾಭ-ಉತ್ತಮ ಯಶಸ್ಸು