ಹೊಸ ವರ್ಷಕ್ಕೆ ಶಿರಡಿಗೆ ಹರಿದುಬಂತು ಕೋಟಿ ಕೋಟಿ ನಗದು, ಚಿನ್ನ, ಬೆಳ್ಳಿ: 2 ಕೋಟಿಯ ಪ್ರಸಾದ ಸ್ವೀಕರಿಸಿದ ಭಕ್ತರು!

By Suchethana D  |  First Published Jan 5, 2025, 5:19 PM IST

ಹೊಸ ವರ್ಷಕ್ಕೆ ಶಿರಡಿಗೆ ಹರಿದುಬಂತು ಕೋಟಿ ಕೋಟಿ ನಗದು, ಚಿನ್ನ, ಬೆಳ್ಳಿ: 2 ಕೋಟಿಯ ಪ್ರಸಾದ ಸ್ವೀಕರಿಸಿದ ಭಕ್ತರು. ಡಿಟೇಲ್ಸ್‌ ಇಲ್ಲಿದೆ ನೋಡಿ..
 


ಹೊಸ ವರ್ಷದ ಸಂದರ್ಭದಲ್ಲಿ ದೇವಾಲಯಗಳಿಗೆ ಜನರು ಭೇಟಿ ಕೊಡುವುದು ಸಾಮಾನ್ಯ. ಅದರಲ್ಲಿಯೂ ಹೊಸ ವರ್ಷದ ಮುಂಚೆ ಕ್ರಿಸ್‌ಮಸ್‌ ಸುದೀರ್ಘ ರಜೆ ಬೇರೆ. ಇದೇ ಕಾರಣಕ್ಕೆ ಕ್ರಿಸ್‌ಮಸ್‌ ರಜೆಗೆ ದೇವಾಲಯಗಳಿಗೆ ಭೇಟಿ ಕೊಡುವವರು ಒಂದಿಷ್ಟು ಮಂದಿಯಾದರೆ, ಹೊಸ ವರ್ಷದ ದಿನವೇ ದೇವಾಲಯಗಳಲ್ಲಿ   ವಿಶೇಷ ಪೂಜೆ ನೆರವೇರಿಸುವವರು ಹಲವು ಮಂದಿ. ಇದೇ ಕಾರಣಕ್ಕೆ ಪ್ರಖ್ಯಾತ ದೇವಾಲಯಗಳಲ್ಲಿ ಕೋಟಿ ಕೋಟಿ ಹಣದ ಹೊಳೆ ಉಡುಗೊರೆ ರೂಪದಲ್ಲಿ ಬರುವುದು ಸಾಮಾನ್ಯ.

ಇದೀಗ ಮಹಾರಾಷ್ಟ್ರದ ಶಿರಡಿಯ ಸಾಯಿಬಾಬಾ ದೇವಾಲಯಕ್ಕೆ ಹೊಸ ವರ್ಷದ ನಿಮಿತ್ತ ಹರಿದು ಬಂದಿರುವ ದೇಣಿಗೆಯ ಮೊತ್ತವನ್ನು ದೇವಾಲಯದ ಆಡಳಿತ ಮಂಡಳಿ ಹೊರಹಾಕಿದೆ. ಡಿಸೆಂಬರ್ 25, 2024 ಮತ್ತು ಜನವರಿ 2, 2025 ರ ನಡುವೆ, ಬಂದಿರುವ ದೇಣಿಗೆ ಇದಾಗಿದೆ.  ಈ ಅವಧಿಯಲ್ಲಿ ದೇವಸ್ಥಾನಕ್ಕೆ ₹17 ಕೋಟಿಯಷ್ಟು ನಗದು, ಸುಮಾರು ಮೂರು ಕೋಟಿ ರೂಪಾಯಿ ಬೆಲೆ ಬಾಳುವ 809.22 ಗ್ರಾಂ ಚಿನ್ನ ಮತ್ತು 14 ಕೆ.ಜಿಯಷ್ಟು ಬೆಳ್ಳಿಯನ್ನು ಕಾಣಿಕೆಯಾಗಿ ನೀಡಲಾಗಿದೆ. ಮಹಿಳೆಯೊಬ್ಬರು ದೇವಸ್ಥಾನದಲ್ಲಿ ಬಾಬಾನಿಗೆ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಹಾರವನ್ನು ಕಾಣಿಕೆಯಾಗಿ ನೀಡಿದ್ದಾರೆ. 

Tap to resize

Latest Videos

ಹುತ್ತಕ್ಕೂ, ಹಾಲಿಗೂ, ಸಂತಾನಕ್ಕೂ ಇದೆ ವೈಜ್ಞಾನಿಕ ಸಂಬಂಧ: ಆಯುರ್ವೇದ ವೈದ್ಯೆ ಡಾ. ಗೌರಿ ಮಾತು ಕೇಳಿ

ಈ ಅವಧಿಯಲ್ಲಿ  8 ಲಕ್ಷಕ್ಕೂ ಅಧಿಕ ಜನರು ಶಿರಡಿ ಸಾಯಿಬಾಬಾ ದರ್ಶನಕ್ಕೆ ಬಂದಿದ್ದು,  6 ಲಕ್ಷಕ್ಕೂ ಹೆಚ್ಚು ಭಕ್ತರು ಉಚಿತ ಪ್ರಸಾದ ವಿತರಣೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಮಾರಾಟವಾಗಿರುವ ಪ್ರಸಾರದ ಮೊತ್ತವೇ   2 ಕೋಟಿ ರೂಪಾಯಿ. 9,47,750 ಲಾಡು ಪ್ರಸಾದ ಪ್ಯಾಕೆಟ್‌ಗಳು ಮಾರಾಟವಾಗಿವೆ. ಈ ಸಂದರ್ಭದಲ್ಲಿ  ವಿಶೇಷ ದರ್ಶನ ಹಾಗೂ ಸಾಮಾನ್ಯ ಭಕ್ತರಿಗೆ ವಿಐಪಿ ಪಾಸ್‌ಗೆ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿತ್ತು. 

 ಸಾಯಿಬಾಬಾ ಸಂಸ್ಥಾನದ ಪ್ರಕಾರ ಸಂಸ್ಥಾನದಿಂದ ಬರುವ ದೇಣಿಗೆಯನ್ನು ಸಾಯಿಬಾಬಾ ಆಸ್ಪತ್ರೆ ಮತ್ತು ಸಾಯಿನಾಥ ಆಸ್ಪತ್ರೆ, ಸಾಯಿ ಪ್ರಸಾದಾಲಯ, ಉಚಿತ ಅನ್ನಸಂತರ್ಪಣೆ, ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ, ಹೊರ ರೋಗಿಗಳು, ಸಾಯಿಯವರ ಅನುಕೂಲಕ್ಕಾಗಿ ವಿವಿಧ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತದೆ. ಇದರ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತದೆ. 

ಸರ್ಪ ದೋಷ ಎಂದರೇನು? ಯಾರಿಗೆ ಬರುತ್ತದೆ? ಖ್ಯಾತ ಜ್ಯೋತಿಷಿ ಡಾ. ಗೌರಿ ಸುಬ್ರಹ್ಮಣ್ಯ ಮಾಹಿತಿ...

click me!