30 ವರ್ಷಗಳ ನಂತರ ಯೋಗ ತಂದ ಶನಿದೇವ; ಈ ಮೂರು ರಾಶಿಯವರು ಇದೀಗ ರಾಜರು..!

By Sushma Hegde  |  First Published Jul 18, 2023, 3:52 PM IST

ಶನಿ ಗ್ರಹವು ಕಾಲಕಾಲಕ್ಕೆ ತನ್ನ ಪಥವನ್ನು ಬದಲಾಯಿಸುತ್ತದೆ. ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿದೆ. ಇದರಿಂದ ಕೆಲವು ರಾಶಿಗಳಿಗೆ ಶುಭ ಫಲಿತಾಂಶ ಸಿಗಲಿದೆ . ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.


ಶನಿ ಗ್ರಹವು ಕಾಲಕಾಲಕ್ಕೆ ತನ್ನ ಪಥವನ್ನು ಬದಲಾಯಿಸುತ್ತದೆ. ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿದೆ. ಇದರಿಂದ ಕೆಲವು ರಾಶಿಗಳಿಗೆ ಶುಭ ಫಲಿತಾಂಶ ಸಿಗಲಿದೆ . ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ವೈದಿಕ ಜ್ಯೋತಿಷ್ಯದ ಪ್ರಕಾರ ಶನಿಯು ಕರ್ಮ ಮತ್ತು ನ್ಯಾಯವನ್ನು ನೀಡುವ ದೇವರು. ಒಬ್ಬ ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ ಫಲಿತಾಂಶಗಳನ್ನು ಶನಿದೇವನು ನೀಡುತ್ತಾನೆ. ಕೆಲವೊಮ್ಮೆ ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಶನಿಯ ಸ್ಥಾನವು ಅನುಕೂಲಕರವಾಗಿದ್ದರೂ, ಅದು ಅವರಿಗೆ ಇನ್ನೂ ಬಹಳಷ್ಟು ತೊಂದರೆಗಳನ್ನು ತರುತ್ತದೆ. ಆದುದರಿಂದ ಶನಿದೇವನ ಕ್ರೋಧದ ದುಷ್ಪರಿಣಾಮಗಳನ್ನು ತಪ್ಪಿಸಲು ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.

Tap to resize

Latest Videos

ಮೂವತ್ತು ವರ್ಷಗಳ ನಂತರ ಶನಿ ಗ್ರಹವು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿದೆ. ಮತ್ತು ಹಿಮ್ಮುಖ ಚಲನೆಯಲ್ಲಿದೆ.  ಶನಿಯ ಈ ಚಲನೆಯು 3 ನವೆಂಬರ್‌ 2023ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಶನಿಯು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಶನಿಯು ಈ ಚಿಹ್ನೆಗಳಿಗೆ ಅನುಕೂಲಕರ ಮತ್ತು ಪ್ರತಿಕೂಲ ಪರಿಣಾಮಗಳನ್ನು ತರುತ್ತದೆ.

ಕೆಲವು ಚಿಹ್ನೆಗಳು ಹೆಚ್ಚು ಧನಾತ್ಮಕ ಫಲಿತಾಂಶಗಳನ್ನು ಅನುಭವಿಸುತ್ತವೆ ಈ ಹಿಮ್ಮುಖ ಶನಿ ಹಂತದಲ್ಲಿ ಯಾವ ರಾಶಿಚಕ್ರದ ಚಿಹ್ನೆಗಳು ಸಂಪತ್ತು, ಯಶಸ್ಸು ಮತ್ತು ಐಷಾರಾಮಿ ಜೀವನವನ್ನು ಪಡೆಯುತ್ತವೆ. ಎಂಬುದನ್ನು ನೋಡೋಣ.

ವೃಷಭ ರಾಶಿ ( Taurus) 

ಶನಿಯ ಈ ಚಲನೆಯು ವೃಷಭ ರಾಶಿಯವರಿಗೆ ಹೊಸ ಯುಗದ ಆರಂಭವನ್ನು ಸೂಚಿಸಬಹುದು. ನೀವು ತುಂಬಾ ಪ್ರಗತಿ ಹೊಂದುತ್ತೀರಿ. ದೊಡ್ಡ ಹುದ್ದೆಗಳು ಮತ್ತು ಉತ್ತಮ ಸಂಬಳದ ಪ್ಯಾಕೇಜ್‌ ಅನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿನ ಸ್ಥಿತಿಯು ಗಮನಾರ್ಹವಾಗಿ ಸುಧಾರಿಸುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ನೀವು ಇತರರಿಂದ ಗೌರವ ಮತ್ತು ಮೆಚ್ಚುಗೆಯನ್ನು ಪಡೆಯುತ್ತೀರಿ. 

ನಿಮ್ಮ ಅಂಗೈಯಲ್ಲಿ ಈ ರೇಖೆ ಇದ್ರೆ ನೀವು ಅಂಬಾನಿಯಂತೆ ಶ್ರೀಮಂತರು ಆಗುವಿರಿ..!

 

ತುಲಾ ರಾಶಿ (Libra ) 

ಹಿಮ್ಮುಖ ಶನಿಯು ತುಲಾ ರಾಶಿಯ ಜನರ ಜೀವನದಲ್ಲಿ ಸಂತೋಷದ ಮಳೆಯನ್ನು ಸುರಿಸುತ್ತಾನೆ. ಅವರು ತಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಕೆಲವು ಉತ್ತಮ ಸುದ್ದಿಗಳನ್ನು ಕಾಣಬಹುದು. ಹೊಸ ಮನೆ ಅಥವಾ ಕಾರು ಖರೀದಿಸುವ ಅವಕಾಶವಿರುತ್ತದೆ. ಐಷಾರಾಮಿ ಜೀವನ ಶೈಲಿಯನ್ನು ಆನಂದಿಸಿ ಮತ್ತು ಆರ್ಥಿಕ ಲಾಭಗಳನ್ನು ಅನುಭವಿಸಿ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಮತ್ತು ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿ. 

ಮಕರ ರಾಶಿ ( Capricorn  ) 

ಶನಿಯು ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ಗಮನಾರ್ಹ ಪ್ರಯೋಜನಗಳನ್ನು ತರುತ್ತದೆ. ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ನಿಮಗೆ ಸಾಕಷ್ಟು ಸಮಾಧಾನ ಸಿಗುತ್ತದೆ. ಉದ್ಯೋಗಿಗಳು ಬಡ್ತಿಗಳು ಮತ್ತು ಏರಿಕೆಗಳನ್ನು ನೀರಿಕ್ಷಿಸಬಹುದು. ವ್ಯಾಪಾರ ಮಾಲೀಕರು ಲಾಭವನ್ನು ಗಳಿಸುತ್ತಾರೆ. ನಿಮ್ಮ ಜೀವನವು ಪೂರ್ಣ ಮತ್ತು ತೃಪ್ತಿಕರವಾಗಿ ಕಾಣುತ್ತದೆ.

ಮಂಗಳ-ಶುಕ್ರ ಸಂಯೋಗ; ಈ ಮೂರು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!