ಉಡುಪಿಯ ಮಣಿಪಾಲ ಸಮೀಪ ಇರುವ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನ ಅಪಾಯದಲ್ಲಿದೆ. ದೇವಾಲಯದ ಸ್ನಾನ ಘಟ್ಟ ಸಂಪೂರ್ಣ ಕುಸಿದಿದ್ದು, ದೇವಾಲಯದ ಮೇಲಿರುವ ಗುಡ್ಡವು ಜರಿಯಲು ಪ್ರಾರಂಭಿಸಿದೆ.
ಉಡುಪಿ (ಜು.18): ಉಡುಪಿಯ ಮಣಿಪಾಲ ಸಮೀಪ ಇರುವ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನ ಅಪಾಯದಲ್ಲಿದೆ. ದೇವಾಲಯದ ಸ್ನಾನ ಘಟ್ಟ ಸಂಪೂರ್ಣ ಕುಸಿದಿದ್ದು, ದೇವಾಲಯದ ಮೇಲಿರುವ ಗುಡ್ಡವು ಜರಿಯಲು ಪ್ರಾರಂಭಿಸಿದೆ.
ಇನ್ನೊಂದು ಭಾರಿ ಮಳೆ ಬಂದರೆ ದೇವಸ್ಥಾನದ ಸಂಪರ್ಕ ಕಡಿದು ಹೋಗಲಿದೆ.ಸೋದೆ ಮಠದ ಆಡಳಿತಕ್ಕೆ ಒಳಪಟ್ಟ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಪ್ರಕೃತಿ ರಮಣೀಯ ಸ್ಥಳವಾಗಿದೆ. ಅಪರೂಪದ ದೇವಸ್ಥಾನ ಉಡುಪಿಯ ಜೀವನದಿ ಸ್ವರ್ಣೆಯ ತಟದಲ್ಲಿದೆ.
undefined
ಫ್ಲಾಟ್ ನೋಂದಣಿ ಮಾಡದೆ ಸತಾಯಿಸಿದ ಬಿಲ್ಡರ್‌ಗೆ ಬಿತ್ತು ಭರ್ಜರಿ ದಂಡ
ಈ ಹಿಂದೆ ಇದ್ದ ದೇವಸ್ಥಾನದ ಸ್ನಾನಘಟ್ಟವನ್ನು, ಕೆಡವಿ ನೂತನ ಸ್ನಾನ ಘಟ್ಟ ನಿರ್ಮಾಣಕ್ಕೆ ಸರಕಾರ ಮುಂದಾಗಿತ್ತು. ಮೂರು ವರ್ಷದಿಂದ ಆರಂಭವಾದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡು ಈಗ ಸ್ನಾನಘಟ್ಟವೇ ಧರಾಶಾಹಿಯಾಗಿದೆ. ಹರಿಯುವ ನೀರಿನಲ್ಲಿ ಮುಳುಗಲು ಬರುವ ಭಕ್ತರಿಗೆ ಸಂಪರ್ಕ ಇಲ್ಲವಾಗಿದೆ.
ಇನ್ನೊಂದೆಡೆ ದೇವಸ್ಥಾನದ ಮೇಲ್ಭಾಗದ ಗುಡ್ಡ ಜರಿಯಲು ಪ್ರಾರಂಭಿಸಿದೆ. ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಗುಡ್ಡಜರಿದು ರಸ್ತೆಯ ಮೇಲೆ ಬಿದ್ದಿತ್ತು. ಖಾಸಗಿ ಸ್ಥಳಕ್ಕೆ ಹೊಸತಾಗಿ ರಸ್ತೆ ನಿರ್ಮಾಣವಾಗುತ್ತಿರುವುದರಿಂದ ಈ ಅವೈಜ್ಞಾನಿಕ ಕಾಮಗಾರಿ ಸಿದ್ಧಿವಿನಾಯಕನಿಗೆ ಆಪತ್ತು ತಂದಿದೆ. ದೇವಾಲಯದ ಕೆಳಗೆ ಕುಸಿಯುತ್ತಿರುವ ಸ್ನಾನಘಟ್ಟ ಮೇಲ್ಭಾಗದಲ್ಲಿ ಜರಿಯುತ್ತಿರುವ ಗುಡ್ಡ, ಒಟ್ಟಾರೆ ಶೀಂಭ್ರ ದೇವಸ್ಥಾನವೇ ಅಪಾಯದಲ್ಲಿದೆ.
ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ!
ನಾನ್ನೂರು ವರ್ಷಗಳ ಹಿಂದೆ ಸೋದೆ ಮಠಾಧೀಶರಾಗಿದ್ದ ಶ್ರೀ ವಾದಿರಾಜ ಗುರು ಸಾರ್ವಭೌಮ ರು, ಕ್ಷೇತ್ರದ ಬಗ್ಗೆ ತೀರ್ಥ ಪ್ರಬಂಧದಲ್ಲಿ ವಿಶೇಷ ಉಲ್ಲೇಖ ಮಾಡಿದ್ದಾರೆ. ಇಲ್ಲಿ ಹರಿಯುವ ಸ್ವರ್ಣ ನದಿಯಲ್ಲಿ ಕೃಷ್ಣಾಂಗಾರ್ಕ ಚತುರ್ದಶಿಯ ದಿನ ಮಿಂದರೆ ಪಾಪಗಳೆಲ್ಲಾ ತೊಳೆದು ಹೋಗುತ್ತೆ ಅನ್ನೋ ನಂಬಿಕೆ ಇದೆ. ಆಗಸ್ಟ್ 15 ರಂದು ಉಡುಪಿ ಮಾತ್ರವಲ್ಲದೆ ನಾಡಿನ ಅನೇಕ ಭಾಗಗಳಿಂದ ಸಾವಿರಾರು ಜನ ಇಲ್ಲಿ ಪುಣ್ಯ ಸ್ನಾನ ಕೈಗೊಳ್ಳಲು ಬರುತ್ತಾರೆ.
ಹೀಗೆ ಬಂದವರು ನೀರಿಗಿಳಿಯಲು ಸದ್ಯ ಯಾವುದೇ ಸಂಪರ್ಕವಿಲ್ಲ. ಸ್ನಾನಘಟ್ಟ ಕುಸಿಯುತ್ತಿರುವುದರಿಂದ ದೇವಾಲಯದ ಅಂಚಿನ ಮಣ್ಣು ಕೂಡ ಸಂಪೂರ್ಣ ಜರಿದಿದೆ. ತಾತ್ಕಾಲಿಕವಾಗಿ ಮಠದವರು ತರ್ಪಾಲ್ ಅಳವಡಿಸಿ ಮಣ್ಣು ಕುಸಿಯದಂತೆ ಎಚ್ಚರಿಕೆವಹಿಸಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿ.
ಅರ್ಧಕ್ಕೆ ಒಟಕ ಕೊಂಡ ಸ್ನಾನಘಟ್ಟದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಕರಾವಳಿಯ ಪ್ರಸಿದ್ಧ ಕ್ಷೇತ್ರವನ್ನು ಅಪಾಯದಿಂದ ಪಾರು ಮಾಡಬೇಕು ಎಂದು ಭಕ್ತರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.