ಇನ್ನು ಎರಡು ವರ್ಷ ಈ ರಾಶಿಯವರು ಚಿಂತೆ ಬಿಡಿ; ಶನಿದೇವ ನೀಡಲಿದ್ದಾನೆ ಅದೃಷ್ಟ..!

By Sushma Hegde  |  First Published Aug 10, 2023, 1:27 PM IST

ಶನಿಯು ತನ್ನ ಮೂಲ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಶನಿಯು 30 ವರ್ಷಗಳ ನಂತರ ತನ್ನ ರಾಶಿಚಕ್ರಕ್ಕೆ ಮರಳಿದ್ದಾನೆ. ಶನಿಯ ಈ ರಾಶಿ ಬದಲಾವಣೆಯಿಂದ ಈ ರಾಶಿಚಕ್ರ ಚಿಹ್ನೆಗಳು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಹಾಗಾಗಿ ಆ ಅದೃಷ್ಟದ ರಾಶಿಗಳು ಯಾವುವು ನೋಡಿ.


ಶನಿಯು ತನ್ನ ಮೂಲ ರಾಶಿಯಾದ ಕುಂಭ ರಾಶಿಯನ್ನು ಪ್ರವೇಶಿಸಿದ್ದು, ಶನಿಯು 30 ವರ್ಷಗಳ ನಂತರ ತನ್ನ ರಾಶಿಚಕ್ರ (Zodiac) ಕ್ಕೆ ಮರಳಿದ್ದಾನೆ. ಶನಿಯ ಈ ರಾಶಿ ಬದಲಾವಣೆಯಿಂದ ಈ ರಾಶಿಚಕ್ರ ಚಿಹ್ನೆಗಳು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಹಾಗಾಗಿ ಆ ಅದೃಷ್ಟದ ರಾಶಿಗಳು ಯಾವುವು ನೋಡಿ.

ಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಶನಿಯು ಯಾವುದೇ ಒಂದು ರಾಶಿಯಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಇರುತ್ತಾನೆ. ಜನವರಿಯಿಂದ ಶನಿ ತನ್ನದೇ ಆದ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ.  ಶನಿಯು 2025ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾನೆ. ಇದರ ನಂತರ ಶನಿ ಗುರುವಿನ ರಾಶಿಚಕ್ರದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಕುಂಭ ರಾಶಿಯಲ್ಲಿ ವಾಸಿಸುತ್ತಿರುವಾಗ, ಶನಿಯು ಮೂಲ ತ್ರೀಕೋನದಲ್ಲಿದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥತಿಯಲ್ಲಿ ಈ ಅವಧಿಯಲ್ಲಿ ಕೆಲವು ರಾಶಿಚಕ್ರದ ಅದೃಷ್ಟವು ಬೆಳಗಬಹುದು. ಶನಿದೇವನು ಯಾವ ರಾಶಿಯವರಿಗೆ ದಯೆ ತೋರುತ್ತಾನೆ ಎಂದು ತಿಳಿಯೋಣ.

Tap to resize

Latest Videos

ಮೇಷ ರಾಶಿ (Aries)

ಪ್ರಸ್ತುತ ಶನಿದೇವನು ಮೇಷ ರಾಶಿಯ ಜನರ ಜಾತಕ (Horoscope) ದ 11ನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಕುಂಭ ರಾಶಿಯಲ್ಲಿ ಶನಿದೇವನ ಸಂಚಾರದ ಸಮಯದಲ್ಲಿ, ಮೇಷ ರಾಶಿಯ ಜನರ ಆರ್ಥಿಕ (financial)  ಸ್ಥಿತಿಯು ಏಳಿಗೆಯಾಗುತ್ತದೆ ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಹೊಂದುತ್ತಾರೆ. ಅವರು ಹೊಸ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಹಾಗೂ ಸಮಾಜದಲ್ಲಿ ಅವರ ಗೌರವವು ಹೆಚ್ಚಾಗುತ್ತದೆ.

ಬೆಂಗಳೂರಿನ ಮಂದಿ ಕಾಲಿಗೆ ಕಪ್ಪು ದಾರ ಏಕೆ ಕಟ್ಟಿಕೊಳ್ಳುತ್ತಾರೆ? ಇಲ್ಲಿದೆ ಬಲವಾದ ನಂಬಿಕೆ..!

 

ವೃಷಭ ರಾಶಿ (Taurus)

ಶನಿದೇವನ ಸಂಚಾರದ ಸಮಯದಲ್ಲಿ ವೃಷಭ ರಾಶಿಯ ಜನರು ದಕ್ಷತೆಯಿಂದ ಮಾಡುವ ಕೆಲಸದಲ್ಲಿ ಯಶಸ್ಸ (success) ನ್ನು ಪಡೆಯುತ್ತಾರೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರ (business) ದ ದೃಷ್ಟಿಯಿಂದ ಇದು ಅದ್ಭುತ ಸಮಯವಾಗಿರುತ್ತದೆ.

ಸಿಂಹ ರಾಶಿ (Leo)

ಶನಿಯ ಸಂಚಾರದ ಸಮಯದಲ್ಲಿ ಸಿಂಹ ರಾಶಿಯ ವಿವಾಹಿತರು ಉತ್ತಮ ಗ್ರಹ (planet) ಜೀವನವನ್ನು ಹೊಂದಿರುತ್ತಾರೆ. ಹಣವು ಲಾಭದ ಸಂಕೇತವಾಗಿದೆ. ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಸಂತೋಷ (happiness) , ಅದೃಷ್ಟ (good luck)  ಮತ್ತು ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

ಕುಂಭ ರಾಶಿ (Aquarius)

ಶನಿಯ ಸಂಚಾರವು ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಸಂತಾನ  (offspring) ಸುಖ ಪ್ರಾಪ್ತಿಯಾಗುತ್ತದೆ. ವೃತ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಇದು ಉತ್ತಮ ಸಮಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ. ಹೊಸ ಉದ್ಯೋಗಾವಕಾಶ ಸಿಗಲಿದೆ. ರಿಯಲ್‌ ಎಸ್ಟೇಟ್‌' (Real estate) ನಿಂದ ಲಾಭವಾಗಬಹುದು.

ಡಾ.ರಾಜ್ ಕುಟುಂಬದ ಸಾವಿನ ನಿಗೂಢ ತಿಳಿಯಲು ಅಷ್ಟಮಂಗಲ ಪ್ರಶ್ನೆ; ಏನಿದು? ಮಹತ್ವ ಏನು?

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!