ಡಾ.ರಾಜ್ ಕುಟುಂಬದ ಸಾವಿನ ನಿಗೂಢ ತಿಳಿಯಲು ಅಷ್ಟಮಂಗಲ ಪ್ರಶ್ನೆ; ಏನಿದು? ಮಹತ್ವ ಏನು?

By Sushma Hegde  |  First Published Aug 10, 2023, 11:14 AM IST

Ashtamangala Prashne: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಕಾಲಿಕ ಮರಣ ಹೊಂದಿದ್ದು, ರಾಜ್ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅಪ್ಪು ಮತ್ತು ಸ್ಪಂದನಾ ಸಣ್ಣ ವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಏನೆಂದು ತಿಳಿಯಲು ಅಷ್ಟಮಂಗಳ ಪ್ರಶ್ನೆ ಕೇಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.


ವರನಟ ಡಾ.ರಾಜ್‌ಕುಮಾರ್‌  (Dr Rajkumar) ಕುಟುಂಬದಲ್ಲಿ ಪವರ್‌ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಹಾಗೂ ಸ್ಪಂದನಾ ವಿಜಯ್‌ ರಾಘವೇಂದ್ರ ಚಿಕ್ಕ ವಯಸ್ಸಿಗೆ ಮೃತಪಟ್ಟಿದ್ದಾರೆ. ಈ ಅಕಾಲ ಮೃತ್ಯುವಿಗೆ ಸಂಬಂಧಿಸಿದಂತೆ ಕೇರಳ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳ ( astamangala) ವನ್ನು ಕೇಳುತ್ತೇವೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಹಾಗಾದರೆ ಅಷ್ಟಮಂಗಳ ಪ್ರಶ್ನೆ ಅಂದರೆ ಏನು ಎಂಬ ಮಾಹಿತಿ ಇಲ್ಲಿದೆ.

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಕಾಲಿಕ ಮರಣ ಹೊಂದಿದ್ದು, ರಾಜ್ ಕುಟುಂಬಕ್ಕೆ ಮತ್ತೊಂದು ಆಘಾತ (shock) ಎದುರಾಗಿದೆ. ಅಪ್ಪು ಮತ್ತು ಸ್ಪಂದನಾ ಸಣ್ಣ ವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಏನೆಂದು ತಿಳಿಯಲು ಅಷ್ಟಮಂಗಳ ಪ್ರಶ್ನೆ ಕೇಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

Tap to resize

Latest Videos

ಈ ಹಿಂದೆ ಡಾ. ರಾಜ್‌ ಕುಮಾರ್‌ ಕುಟುಂಬದಲ್ಲಿ ಪುನೀತ್‌ ರಾಜ್‌ ಕುಮಾರ್‌ ಹೃದಯ ಸಂಬಂಧಿಸಿದ ಕಾಯಿಲೆಯಿಂದ ಮೃತಪಟ್ಟಿದ್ದರು. ಆದರೆ, ಈಗ ಮತ್ತದೇ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಣ್ಣ ವಯಸ್ಸಿನಲ್ಲಿ ಸ್ಪಂದನಾ ಮೃತಪಟ್ಟಿದ್ದಾರೆ. ಇಂತಹ ಅಕಾಲ ಮೃತ್ಯು ಸಂಭವಿಸುತ್ತಿರುವುದಕ್ಕೆ ಪರಿಹಾರ ಅಷ್ಟಮಂಗಳದಲ್ಲಿ ದೊರೆಯಲಿದೆ ಎಂದು ಈಡಿಗ ಸಮುದಾಯದ ಸ್ವಾಮಿ ತಿಳಿಸಿದ್ದಾರೆ.

ಅಷ್ಟಮಂಗಲ ಪ್ರಶ್ನೆ ಎಂದರೇನು?

ಅಷ್ಟಮಂಗಲ ಅಂದರೆ, ಅಕ್ಕಿಯ ಮಧ್ಯೆ ದೀಪ - ಕನ್ನಡಿ (mirror) - ಬಂಗಾರ- ಹಾಲು, ಮೊಸರು (Yogurt) , ಫಲ, ಪುಸ್ತಕ, ಬಿಳಿಯ ವಸ್ತ್ರ- ಈ ಎಂಟೂ ಮಂಗಲ ವಸ್ತುಗಳ ಆಯಾ ಅಭಿಮಾನಿ ದೇವತೆಗಳ ಆವರಣ- ಸ್ಥಾನ- ಕಲ್ಪೋಕ್ತ ಪೂಜೆ ಮಾಡಿ- ರಾಶಿ ಬರೆದು ಪ್ರಶ್ನಾವಳಿ  (Questionnaire) ನಡೆಸುವುದು.

ಕರ್ನಾಟಕದ ಕರಾವಳಿ ಪ್ರದೇಶ ಮತ್ತು ಕೇರಳ (Kerala) ದಲ್ಲಿ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಇಂತಹ ಸಾವಿಗೆ ಕಾರಣ ಏನು ಎಂದು ಪ್ರಶ್ನೆ ಹಾಕಿ ನೋಡಲಾಗುತ್ತದೆ. ಪೂಜೆ ಮಾಡಿ- ರಾಶಿ ಬರೆದು ಪ್ರಶ್ನಾವಳಿ ನಡೆಸಿ ಸಮಸ್ಯೆ (problem) ಗೆ ಪರಿಹಾರ ಕಂಡು ಕೊಳ್ಳುತ್ತಾರೆ.

ಆಶ್ಲೇಷಾ ನಕ್ಷತ್ರದಲ್ಲಿ ಸಂಕ್ರಮಣ; ಈ 4 ರಾಶಿಯವರ ಜೀವನ ಬೆಳಗುತ್ತಾನೆ ಸೂರ್ಯದೇವ..!

 

ಅಷ್ಟಮಂಗಲ ಪ್ರಶ್ನೆ ನಡೆಸುವ ವಿಧಾನ

ಅಷ್ಟಮಂಗಲ ಪ್ರಶ್ನೆ ಮಾಡಲು ಜ್ಯೋತಿಷಿಗೆ ಔಪಚಾರಿಕ ಆಹ್ವಾನವನ್ನು ನೀಡುವ ಮೂಲಕ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ನಂತರ ಜ್ಯೋತಿಷಿಯು ಜ್ಯೋತಿಷ್ಯ (Astrology) ದ ತತ್ವಗಳ ಆಧಾರದ ಮೇಲೆ ಪ್ರಶ್ನೆಗೆ ದಿನಾಂಕವನ್ನು ನಿಗದಿಪಡಿಸುತ್ತಾನೆ. ಪ್ರಶ್ನೆ ನಡೆಸಲು ಇಬ್ಬರು ಜ್ಯೋತಿಷಿಗಳ ಸೇವೆಯ ಅಗತ್ಯವಿದೆ. ಪ್ರಶ್ನೆಗೆ ನಿಗದಿಪಡಿಸಿದ ದಿನದಂದು, ಒಬ್ಬ ಅರ್ಚಕನು ರಾಶಿಚಕ್ರ (Zodiac) ದ ಪೂಜೆಯನ್ನು ಮಾಡುತ್ತಾನೆ. ಬಳಿಕ ರಾಶಿ ಬರೆದು ಪ್ರಶ್ನಾವಳಿ ನಡೆಸಿ ಸಮಸ್ಯೆಗೆ ಪರಿಹಾರ  (solution) ಕಂಡು ಕೊಳ್ಳುತ್ತಾರೆ.

ಭದ್ರ ರಾಜಯೋಗದಿಂದ ಬದುಕು ಬಂಗಾರ; ಈ ರಾಶಿಯವರ ಕಷ್ಟವೆಲ್ಲ ಮಾಯ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!