Lal Kitab remedies: ಕರ್ಕಾಟಕ, ವೃಶ್ಚಿಕ ರಾಶಿ ನಿಮ್ಮದಾದರೆ, ಶನಿ ಧೈಯ್ಯಾದಿಂದ ಬಿಡುಗಡೆಗೆ ಹೀಗೆ ಮಾಡಿ..

By Suvarna News  |  First Published Feb 4, 2023, 1:00 PM IST

ಜನವರಿ 17, 2023ರಂದು ಶನಿ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿದೆ. ಅಂದಿನಿಂದ ಕರ್ಕಾಟಕ ಮತ್ತು ವೃಶ್ಚಿಕ ರಾಶಿಗೆ ಶನಿ ಧೈಯ್ಯಾ ಶುರುವಾಗಿದೆ. ನೀವು ಈ ಎರಡು ರಾಶಿಗಳಿಗೆ ಸೇರಿದವರಾಗಿದ್ದರೆ ಶನಿ ಧೈಯ್ಯಾದ ನಕಾರಾತ್ಮಕ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಲಾಲ್ ಕಿತಾಬ್‌ನ ಈ ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ. 


ಮಂಗಳವಾರ, ಜನವರಿ 17, 2023ರಂದು, ಶನಿದೇವನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯಲ್ಲಿ ಸಂಕ್ರಮಿಸಿದಾಗ, ಮಿಥುನ ಮತ್ತು ತುಲಾ ರಾಶಿಯ ಧೈಯವು ಮುಗಿದಿದೆ . ಕರ್ಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿಯ ಧೈಯಾ ಪ್ರಾರಂಭವಾಗಿದೆ. ಹಾಗಂಥ ನಿಮ್ಮ ರಾಶಿಯು ಕರ್ಕಾಟಕ ಅಥವಾ ವೃಶ್ಚಿಕ ರಾಶಿಯಾಗಿದ್ದರೆ, ಭಯಪಡುವ ಅಗತ್ಯವಿಲ್ಲ. ಲಾಲ್ ಕಿತಾಬ್ ಜ್ಯೋತಿಷ್ಯದ ಪ್ರಕಾರ, ಕೇವಲ 5 ಖಚಿತ ಪರಿಹಾರಗಳನ್ನು ಮಾಡಿದರೆ ಸಾಕು, ಶನಿ ಧೈಯ್ಯಾದ ನಕಾರಾತ್ಮಕ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು.

ಕರ್ಕಾಟಕ ರಾಶಿಯವರಿಗೆ ಲಾಲ್ ಕಿತಾಬ್‌ನ 5 ಖಚಿತ ಪರಿಹಾರಗಳು:
1. ಪ್ರತಿ ಬುಧವಾರದಂದು ಶ್ರೀ ದುರ್ಗಾ ಚಾಲೀಸಾವನ್ನು ಪಠಿಸಿ ಮತ್ತು ಗಣೇಶನಿಗೆ ದೂರ್ವೆಯನ್ನು ಅರ್ಪಿಸಿ.
2. ಎರಡೂವರೆ ವರ್ಷಗಳಲ್ಲಿ ಎರಡು ಬಾರಿ 11 ಹುಡುಗಿಯರಿಗೆ ಆಹಾರ ನೀಡಿ ಮತ್ತು ಅವರಿಗೆ ಹಸಿರು ಬಟ್ಟೆ ನೀಡಿ.
3. ದೇವಸ್ಥಾನದಲ್ಲಿ ಅಥವಾ ಬಡವರಿಗೆ ಒಮ್ಮೆ ಕಪ್ಪು ಮತ್ತು ಬಿಳಿ ಎರಡು ಬಣ್ಣದ ಹೊದಿಕೆಯನ್ನು ದಾನ ಮಾಡಿ.
4. ಶನಿವಾರದಂದು ಶನಿ ದೇವಸ್ಥಾನದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚಿ. ಇದನ್ನು 5 ಶನಿವಾರ ಮಾಡಿ.
5. ನಾಯಿಗಳು, ಕಾಗೆಗಳು ಅಥವಾ ಹಸುಗಳಿಗೆ ಬ್ರೆಡ್ ತಿನ್ನಿಸಿ.

Tap to resize

Latest Videos

Lucky Zodiac Signs: 12 ರಾಶಿಗಳಲ್ಲಿ ಇವು ಹೆಚ್ಚು ಅದೃಷ್ಟವಂತ ರಾಶಿಗಳು, ಎಲ್ಲದರಲ್ಲೂ ಅಗ್ರಸ್ಥಾನ ಇವರದೇ!

ಕರ್ಕಾಟಕ ರಾಶಿಯವರಿಗೆ ಸಲಹೆಗಳು:
ಸಹೋದರ ಸಹೋದರಿಯರೊಂದಿಗೆ ಚೆನ್ನಾಗಿ ವರ್ತಿಸಿ.
ನಿಮ್ಮ ಆಲೋಚನೆಗಳು ಮತ್ತು ಯೋಜನೆಗಳನ್ನು ರಹಸ್ಯವಾಗಿಡಿ.
ಎಲ್ಲಾ ರೀತಿಯ ಕೆಟ್ಟ ಚಟಗಳನ್ನು ತಪ್ಪಿಸಿ ಮತ್ತು ಸುಳ್ಳು ಹೇಳಬೇಡಿ.
ಬಡ್ಡಿ ವ್ಯವಹಾರ ಮಾಡಬೇಡಿ.
 
ವೃಶ್ಚಿಕ ರಾಶಿಗೆ ಲಾಲ್ ಕಿತಾಬ್‌ನ 5 ಖಚಿತ ಪರಿಹಾರಗಳು:
1. ನೀವು ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸಬೇಕು.
2. ನಿಮ್ಮ ಕುತ್ತಿಗೆಗೆ ಬೆಳ್ಳಿಯ ಸರಪಣಿಯನ್ನು ಧರಿಸಿ ಮತ್ತು ಯಾರಿಂದಲೂ ಉಚಿತವಾಗಿ ಏನನ್ನೂ ತೆಗೆದುಕೊಳ್ಳಬೇಡಿ.
3. ಗುಲಾಬಿ ಅಥವಾ ಕೆಂಪು ಬಣ್ಣದ ಹಾಸಿಗೆ ಬಟ್ಟೆ ಬಳಸಿ.
4. ಶನಿ ದೇವಸ್ಥಾನದಲ್ಲಿ ಕನಿಷ್ಠ 11 ಶನಿವಾರದಂದು ಎಣ್ಣೆ ದಾನ ಮಾಡಿ.
5. ಕಾಲಕಾಲಕ್ಕೆ ಕುರುಡರಿಗೆ ಆಹಾರವನ್ನು ನೀಡುತ್ತಿರಿ ಅಥವಾ ತೋಟಿ, ಕಾರ್ಮಿಕರು ಮತ್ತು ವಿಧವೆಯರಿಗೆ ಏನಾದರೂ ದಾನ ಮಾಡುತ್ತಿರಿ.

Mahashivratri 2023: ಕನಸಿನಲ್ಲಿ ಹಾವು ಬರುತ್ತಾ? ಹಬ್ಬಕ್ಕೂ ಮುನ್ನ ಹಾವಿನ ಕನಸು ಬಿದ್ದರೆ ಸಂಪತ್ತಿನ ಸೂಚನೆ!

ವೃಶ್ಚಿಕ ರಾಶಿಯವರಿಗೆ ಸಲಹೆ:
ಮದ್ಯಪಾನ ಮಾಡಬೇಡಿ, ಬಡ್ಡಿ ವ್ಯವಹಾರ ಮಾಡಬೇಡಿ, ಸುಳ್ಳು ಹೇಳಬೇಡಿ.
ಬೇರೆ ಹೆಂಗಸರೊಂದಿಗೆ ಅನೈತಿಕ ಸಂಬಂಧ ಬೇಡ. ನೈತಿಕವಾಗಿ ಶುದ್ಧವಾಗಿರಿ.
ಸ್ವಲ್ಪ ಬೆಲ್ಲ ತಿಂದ ನಂತರವೇ ಮನೆಯಿಂದ ಹೊರಡಿ.
ಸಹೋದರರು ಮತ್ತು ಸ್ನೇಹಿತರೊಂದಿಗಿನ ಸಂಬಂಧವನ್ನು ಚೆನ್ನಾಗಿ ನಿರ್ವಹಿಸಬೇಕು. ಕೋಪಗೊಳ್ಳಬೇಡಿ.

ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರು ಈ ಕೆಳಗಿನ ಕ್ರಮಗಳನ್ನು ಮಾಡಬೇಕು:
ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ತಲೆದಿಂಬಿನ ಮೇಲೆ ಇಟ್ಟುಕೊಂಡು ಮಲಗಿ ಬೆಳಗ್ಗೆ ಎದ್ದ ತಕ್ಷಣ ಹೊರಗೆ ಸುರಿಯಬೇಕು ಅಥವಾ ಅಶ್ವತ್ಥ ಮರಕ್ಕೆ ಹಾಕಬೇಕು. ಇದನ್ನು ಕನಿಷ್ಠ 11 ಮತ್ತು ಗರಿಷ್ಠ 43 ದಿನಗಳವರೆಗೆ ಮಾಡಿ. ಇದು ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಗುಣಪಡಿಸುತ್ತದೆ. ಇದು ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಚಂದ್ರನ ದೋಷವನ್ನು ನಿವಾರಿಸುತ್ತದೆ. ಮನಸ್ಸಿನ ಚಂಚಲತೆಯೂ ದೂರವಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!