Swapna Shastra : ನೀವು ಸತ್ತಂತೆ ಕನಸು ಬಿದ್ರೆ ಏನದರ ಸೂಚನೆ?

By Suvarna NewsFirst Published Feb 9, 2023, 3:15 PM IST
Highlights

ಕನಸುಗಳು ನಮ್ಮ ಮನಸ್ಥಿತಿ, ನಮ್ಮ ಭವಿಷ್ಯದ ಜೊತೆ ನಂಟು ಹೊಂದಿದೆ. ಕೆಲ ಕನಸಿಗೆ ಅರ್ಥವಿರೋದಿಲ್ಲ. ಮತ್ತೆ ಕೆಲ ಕನಸು ನಮಗೆ ಮುನ್ಸೂಚನೆಯನ್ನು ನೀಡುತ್ತದೆ. ಇನ್ನೊಂದಿಷ್ಟು ಕನಸು ಖುಷಿಯ ಆಗಮನವನ್ನು ಸೂಚಿಸುತ್ತದೆ.
 

ರಾತ್ರಿ ಮಲಗಿದಾಗ ಕನಸು ಬೀಳೋದು ಸಹಜ. ಕೆಲ ಕನಸುಗಳು ಮನಸ್ಸಿಗೆ ಮುದ ನೀಡುವಂತಿರುತ್ತವೆ. ಇನ್ನು ಕೆಲ ಕನಸುಗಳು ಭಯಾನಕವಾಗಿರುತ್ತವೆ. ಮತ್ತೆ ಕೆಲ ಸ್ವಪ್ನಗಳು ಪ್ರಶ್ನೆಯನ್ನು ಹುಟ್ಟು ಹಾಕುತ್ತವೆ. ಕನಸಿನಲ್ಲಿ ಬೇರೊಬ್ಬರು ಸಾವನ್ನಪ್ಪಿದಂತೆ ಕಂಡ್ರೆ ನಾವು ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸದೆ ಇರಬಹುದು. ಆದ್ರೆ ಕನಸಿನಲ್ಲಿ ನಾವೇ ಸಾವನ್ನಪ್ಪಿದಂತೆ ನಮಗೆ ಕಂಡ್ರೆ ಹೆಚ್ಚಿನ ಆತಂಕವಾಗುತ್ತದೆ. ಇದ್ರಿಂದ ಶುಭ ಫಲ ಪ್ರಾಪ್ತಿಯಾಗುತ್ತಾ ಇಲ್ಲ ಅಶುಭ ಘಟನೆಯ ಸೂಚನೆಯೇ ಎಂಬ ಗೊಂದಲ ಮೂಡೋದು ಸಾಮಾನ್ಯ. ನಾವು ಸತ್ತಂತೆ ನಮಗೆ ಕನಸು ಬಿದ್ರೆ ಅದು ಏನು ಸೂಚಿಸುತ್ತದೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೆವೆ.

ಅದಕ್ಕಿಂತ ಮೊದಲು ಕನಸು (Dream) ನಮ್ಮ ಮನಸ್ಥಿತಿಯನ್ನು ಅವಲಂಭಿಸಿದೆ ಎಂಬುದು ನಿಮಗೆ ತಿಳಿದಿರಬೇಕು. ಕನಸುಗಳು ಒಂದು ವಿಶೇಷ ಮನಸ್ಸಿನ ಸ್ಥಿತಿಯಾಗಿದ್ದು, ಇದರಲ್ಲಿ ವಾಸ್ತವವನ್ನು ಅನುಭವಿಸಲಾಗುತ್ತದೆ. ಕನಸುಗಳು ಎಚ್ಚರದ ಸ್ಥಿತಿಯಲ್ಲಿ ಅಥವಾ ನಿದ್ರೆ (Sleep) ಯಲ್ಲಿ ಬರುವುದಿಲ್ಲ. ಇದು ಎರಡರ ನಡುವಿನ ಸ್ಥಿತಿಯಾಗಿದೆ.  ಕನಸು ಬೀಳಲು ನಮ್ಮ ಆಹಾರ (food) , ಜೀವನಶೈಲಿ (Lifestyle) ಹಾಗೂ ಆಲೋಚನೆ ಕೂಡ ಕಾರಣವಾಗಿದೆ. ಗ್ರಹ ಹಾಗೂ ರಾಶಿಗಳ ದೋಷವೂ ಇದಕ್ಕೆ ಕಾರಣವಾಗಿರುತ್ತದೆ.  

Latest Videos

ಕೆಲ ಕನಸುಗಳು ನಮ್ಮ ಆರೋಗ್ಯವನ್ನು ಅಥವಾ ಮನಸ್ಸಿನ ವಿಚಾರವನ್ನು ಅವಲಂಬಿಸಿ ಬಿದ್ದಿರುತ್ತದೆ. ಅದಕ್ಕೆ ಹೆಚ್ಚಿನ ಯಾವುದೇ ವಿಶೇಷ ಅರ್ಥವಿರೋದಿಲ್ಲ. ಕೆಲ ಸ್ವಪ್ನಗಳು ನಮಗೆ ಎಚ್ಚರಿಕೆಯ ರೂಪದಲ್ಲಿರುತ್ತವೆ. ಆ ಕನಸು ಹೆಚ್ಚು ಮಹತ್ವದ್ದಾಗಿರುತ್ತದೆ. ಬೆಳಗಿನ ಜಾವ ಕಾಣುವ ಕನಸು ಬಹುತೇಕ ಸತ್ಯವಾಗುತ್ತದೆ ಎಂದು ನಂಬಲಾಗಿದೆ. ಕನಸಿನ ಬಗ್ಗೆ ಸ್ವಪ್ನ ಶಾಸ್ತ್ರದಲ್ಲಿ ಸಾಕಷ್ಟು ವಿವರಣೆಯಿದೆ.

Good Luck Dreams: ಕನಸಿನಲ್ಲಿ ಕಾಣುವ ಈ 8 ಸಂಗತಿ, ಬರಲಿರುವ ಶ್ರೀಮಂತಿಕೆಯ ಸೂಚನೆ

ಏನು ಸೂಚಿಸುತ್ತೆ ನಮ್ಮ ಸಾವಿನ ಕನಸು :

ಇದು ಶುಭ ಸಂಕೇತ : ಕನಸಿನಲ್ಲಿ ನೀವು ಸಾವನ್ನಪ್ಪಿದಂತೆ ಕಂಡರೆ ಭಯಪಡುವ ಅಗತ್ಯವಿಲ್ಲ. ಇದು ಶುಭ ಸೂಚನೆಯಾಗಿದೆ. ನೀವು ಸತ್ತಂತೆ ಕಂಡ್ರೆ ಅದು ಮಂಗಳಕರವಾಗಿದ್ದು, ನಿಮ್ಮ ಚೇತರಿಕೆ ಹಾಗೂ ಉತ್ತಮ ಆರೋಗ್ಯವನ್ನು ಇದು ಸೂಚಿಸುತ್ತದೆ.

ಹೊಸ ಆರಂಭ : ಕನಸಿನಲ್ಲಿ ನೀವು ಸತ್ತಂತೆ ಕಂಡ್ರೆ ದೀರ್ಘ ಕಾಲದ ಸಮಸ್ಯೆಯೊಂದಕ್ಕೆ ಪರಿಹಾರ ಸಿಗುತ್ತದೆ ಎಂದರ್ಥ. ನಿಮಗೆ ಹೊಸ ಆರಂಭ ಸಿಗುತ್ತದೆ. ಹೊಸ ಬದುಕನ್ನು ನೀವು ಆರಂಭಿಸಲಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ.

ಹೆಚ್ಚಾಗುತ್ತೆ ಆಯಸ್ಸು : ಕನಸಿನಲ್ಲಿ ನಿಮ್ಮ ಮೃತದೇಹ ಕಂಡ್ರೆ ಅದು ಕೂಡ ಒಳ್ಳೆಯದು. ನಿಮ್ಮ ಆಯಸ್ಸು ಹೆಚ್ಚಾಗುತ್ತದೆ. ನೀವು ಇನ್ನೊಂದಿಷ್ಟು ವರ್ಷ ಬದುಕುತ್ತೀರಿ ಎಂಬುದನ್ನು ಇದು ಸೂಚಿಸುತ್ತದೆ.

ಕೊನೆಗೊಳ್ಳುತ್ತೆ ತೊಂದರೆ : ವಿಜ್ಞಾನದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ತಜ್ಞರ ಪ್ರಕಾರ, ನಿಮ್ಮ ಕನಸಿನಲ್ಲಿ ನಿಮ್ಮ ಸಾವು ಅಂದ್ರೆ ಅದು ತೊಂದರೆ ಕೊನೆಗೊಳ್ಳುವ ಸಂಕೇತ. 

ದೂರವಾಗುತ್ತೆ ಚಿಂತೆ : ಕನಸಿನಲ್ಲಿ ನೀವು ಹಾರುತ್ತಿದ್ದು, ಅಲ್ಲಿಯೇ ನಿಮ್ಮ ಸಾವು ಕಂಡ್ರೆ ಅದು ನಿಮ್ಮನ್ನು ಕಾಡ್ತಿರುವ ಚಿಂತೆಯೆಲ್ಲ ದೂರವಾಗುತ್ತದೆ ಎಂಬುದನ್ನು ಅರ್ಥೈಸುತ್ತದೆ. 

MahaShivratri 2023: ಶಿವನ ಕುರಿತ ಈ ಆಸಕ್ತಿಕರ ಕತೆಗಳನ್ನು ಕೇಳಿದ್ದೀರಾ?

ಬದಲಾಗಲಿದೆ ಅದೃಷ್ಟ : ಸಾವಿನ ಕನಸು ಕಂಡ್ತು ಅಂದ್ರೆ ನೀವು ಬೆವರಬೇಕಾಗಿಲ್ಲ. ಮುಂದೇನೋ ಕೆಟ್ಟದ್ದಾಗಲಿದೆ ಎಂದುಕೊಳ್ಳಬೇಕಾಗಿಲ್ಲ. ಸಾವಿನ ಕನಸು ಮಂಗಳವನ್ನು ಸೂಚಿಸುತ್ತದೆ. ನಿಮ್ಮ ಅದೃಷ್ಟ ಬದಲಾಗಲಿದೆ, ಕಷ್ಟ ದೂರವಾಗಲಿದೆ ಎಂಬದುನ್ನು ಇದು ಅರ್ಥೈಸುತ್ತದೆ.

ಕನಸು ಹಾಗೂ ಆರೋಗ್ಯ : ತಜ್ಞರ ಪ್ರಕಾರ, ನಮ್ಮ ದೇಹದಲ್ಲಾಗುವ ಕೆಲ ಏರುಪೇರು ಕನಸು ಬೀಳಲು ಕಾರಣವಾಗುತ್ತದೆಯಂತೆ. ಆಕಾಶ ಅಥವಾ ಗಾಳಿಗೆ ಸಂಬಂಧಿಸಿದ ಕನಸುಗಳು ನಮ್ಮ ವಾತ ಸಮತೋಲನದ ಏರುಪೇರನ್ನು ತೋರಿಸುತ್ತದೆ. ನೀರು, ಜಲಪಾತ ಅಥವಾ ನದಿಗೆ ಸಂಬಂಧಿಸಿದ ಕನಸು ಬಿದ್ರೆ ಕಫದ ಅಂಶದಲ್ಲಿ ಬದಲಾವಣೆಯಾಗಿದೆ ಎಂದರ್ಥ. ಬೆಂಕಿ, ಸೂರ್ಯ ಅಥವಾ ಜ್ವಾಲಾಮುಖಿ ಕನಸು ಪಿತ್ತವನ್ನು ಸೂಚಿಸುತ್ತದೆ. 
 

click me!