Scorpions ಸಂಬಂಧದಲ್ಲಿ ಈ ತಪ್ಪು ಮಾಡುತ್ತಾರೆ!

By Suvarna News  |  First Published Mar 4, 2022, 5:46 PM IST

ನಿಮ್ಮ ಸಂಬಂಧ ಪ್ರಾರಂಭವಾದ ದಿನಗಳಿಂದಲೂ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತೀರಿ ಹಾಗೂ ಪದೇ ಪದೇ ಜಗಳವಾಡುತ್ತಿರುತ್ತಾರೆ ಎಂದಾದರೆ ಅದಕ್ಕೆ ನಿಮ್ಮ ರಾಶಿಯಲ್ಲಿರುವ ಈ ಗುಣಗಳೇ ಕಾರಣವಾಗಿರಬಹುದು. ನೀವು ಈ ತಪ್ಪುಗಳನ್ನು ಮಾಡುವುದರಿಂದಲೇ ನಿಮ್ಮ ಸಂಗಾತಿ ದೂರಾಗುತ್ತಾ ಇರಬಹುದು..


ನಿಮ್ಮ ಹಾಗೂ ನಿಮ್ಮ ಸಂಗಾತಿಯ ರಾಶಿ ನಕ್ಷತ್ರಗಳು ಸರಿಯಾಗಿ ಜೋಡಣೆಯಾಗಿದೆ (Combine) ಇದ್ದಾಗ ಸಂಬಂಧದಲ್ಲಿ ಹೆಚ್ಚು ಬಿರುಕು ಮೂಡುತ್ತದೆ. ನೀವು ಯಾವುದೇ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಲು ಹೋದರು ಕೂಡ ನಿಮಗರಿವಿಲ್ಲದೆ ನೀವು ಮಾಡುವ ಈ ಸಾಮಾನ್ಯ ತಪ್ಪಿನಿಂದಾಗಿ ಯಾವುದೇ ಸಂಬಂಧವನ್ನು (Relationship) ಉಳಿಸಿಕೊಳ್ಳಲು ಸಾಧ್ಯವಾಗಿದೆ ಇರಬಹುದು. ಯಾವ ತಪ್ಪುಗಳನ್ನು ನೀವು ಪದೇಪದೇ ಮರುಕಳಿಸುತ್ತಿದ್ದೀರಿ (Repeat) ಎಂಬುದರ ಬಗ್ಗೆ ಗಮನ ನೀಡಿ. ವೃಶ್ಚಿಕ ರಾಶಿಯವರು ಸಂಗಾತಿಯ ವಿಷಯದಲ್ಲಿ ಮಾಡುವ ಈ ಸಾಮಾನ್ಯ ತಪ್ಪುಗಳಿಗೆ ಅವರ ರಾಶಿಯ ಗುಣಗಳು ಕಾರಣವಾಗಿರುತ್ತವೆ ಎಂಬುದು ಜೋತಿಷ್ಯದ ಪ್ರಕಾರ ಸಾಭಿತಾಗಿದೆ.

 ನಂಬಲು (Trust) ಹಿಂಜರಿಕೆ
ವೃಶ್ಚಿಕ  ರಾಶಿಯವರು ಯಾವುದೇ ವ್ಯಕ್ತಿಯನ್ನು ನಂಬಲು ಹಿಂಜರಿಯುತ್ತಾರೆ (Hesitate). ತಮ್ಮ ಸಂಗಾತಿಯನ್ನು ಅಥವಾ ತಾವು ಅತಿ ಹೆಚ್ಚು ಪ್ರೀತಿ ಮಾಡುವವರನ್ನು ಆದರೂ ಅಷ್ಟು ಸುಲಭವಾಗಿ ನಂಬುವುದಿಲ್ಲ. ಬಹಳ ಕಷ್ಟಪಡುತ್ತಾರೆ. ಇದೇ ಕಾರಣದಿಂದಾಗಿ ಅವರ ಸಂಗಾತಿಯಾದವರು ಅವರನ್ನು ದ್ವೇಷಿಸುವ (Hate) ಸಾಧ್ಯತೆ ಇದೆ. ಅದಷ್ಟದ ಮಟ್ಟಿಗೆ ನೀವು ಈ ಸ್ವಭಾವದಿಂದ ಹೊರಬರಲು ಪ್ರಯತ್ನಿಸುವುದು ಒಳಿತು. ನಿಮ್ಮವರನ್ನು ನೀವು ನಂಬುವುದಿಲ್ಲ ಎಂದಾದರೆ, ಆ ಸಂಬಂಧಕ್ಕೆ ಅರ್ಥವಿರುವುದಿಲ್ಲ. ಇದನ್ನು ಅರ್ಥಮಾಡಿಕೊಂಡು ಆದಷ್ಟರ ಮಟ್ಟಿಗೆ ಇತರರ ಬಗ್ಗೆ ನಂಬಿಕೆ ಇಟ್ಟುಕೊಳ್ಳಲು ಪ್ರಯತ್ನಿಸಿ. ಅನುಮಾನಿಸುವುದು (Doubting) ಕಡಿಮೆ ಮಾಡಿ. ಹಾಗೂ ನಿಮ್ಮ ಸಂಗಾತಿಗೆ ನೀವು ಅವರ ಬಗ್ಗೆ ಎಷ್ಟು ಪ್ರೀತಿ (Love) ಇಟ್ಟಿದ್ದೀರಾ ಹಾಗೂ ಕಳಜಿ ಹೊಂದಿದ್ದೀರ ಎಂಬುದನ್ನು ಅರ್ಥ ಮಾಡಿಸಿ.

Character of Zodiac signs: ಬೆನ್ನಿಗೆ ಚೂರಿ ಹಾಕೋದು ಅಂತಾರಲ್ಲ, ಆ ತರ ಇವರು!

Latest Videos

undefined

 ಎಲ್ಲಾ ವಿಷಯಗಳನ್ನು ವೈಯಕ್ತಿಕವಾಗಿ ಪರಿಗಣಿಸುವುದು
ಈ ರಾಶಿಯವರಲ್ಲಿ ಹೆಚ್ಚಿನ ಜನರು ಪ್ರತಿಯೊಂದು ವಿಷಯವನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ವೃಶ್ಚಿಕ ರಾಶಿಯ ಸಂಕೇತ (Sign) ನೀರು (Water) ಅದೇ ರೀತಿ ಅವರು ಕೂಡ ಭಾವನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದೇ ಕಾರಣದಿಂದಾಗಿ ಎಲ್ಲಾ ವಿಷಯಗಳನ್ನು ಬಹಳ ವಯಕ್ತಿಕವಾಗಿ ಪರಿಗಣಿಸುತ್ತಾರೆ. ಅವರಿಗೆ ಎಷ್ಟೇ ಭಾವನೆಗಳು (Feelings) ಇದ್ದರೂ ಅದರ ಮೇಲೆ ಹಿಡಿತ ಸಾಧಿಸುತ್ತಾರೆ. ಹಾಗೂ ಅದನ್ನು ಇತರರಿಗೆ ತೋರಿಸಿಕೊಳ್ಳುವುದಿಲ್ಲ. ಇವರ ಈ ಗುಣದಿಂದಾಗಿಯೇ ತಮ್ಮ ಸಂಗಾತಿಯ ಸ್ವಭಾವ (Character) ಹಾಗೂ ನಡತೆಯನ್ನು ಓದಲು (Reading) ಬಯಸುತ್ತಾರೆ. ಇದು ಮುಂದೆ ಇಬ್ಬರ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತದೆ.

ಅತಿಯಾದ  ಪೋಸೆಸಿವ್ (Possessive) ಗುಣ
ವೃಶ್ಚಿಕ  ರಾಶಿಯವರು ಅತಿಯಾದ ತಮ್ಮ ಸಂಗಾತಿಯ (Partner) ಬಗ್ಗೆ ಅತಿಯಾದ ಪೊಸೆಸಿವ್ನೆಸ್ ಹೊಂದಿರುತ್ತಾರೆ. ತಮ್ಮವರನ್ನು ಪ್ರೀತಿ, ಕಾಳಜಿ (Care) ತೋರಿಸುವುದು ಒಳ್ಳೆಯ ವಿಚಾರವೇ ಆದರೆ, ಇದು ಅತಿಯಾದರೆ ಹಾಗೂ ನಿಮ್ಮ ಸಂಗಾತಿ ನಿಮ್ಮೊಂದಿಗೆ ಮಾತ್ರ ಸ್ನೇಹದಿಂದ (Friendly) ಇರಬೇಕು, ನಿಮ್ಮೊಂದಿಗೆ ಮಾತ್ರ ಸಮಯ (Time) ಕಳೆಯಬೇಕು (Spending) ಎಂದು ಅತಿಯಾದ ಕಡಿವಾಣ ಹಾಕಲು ಮುಂದಾದಾಗ ಇದು ಅವರ ನಡುವಿನ ಸಂಬಂಧವನ್ನು ಹಾಳು ಮಾಡುತ್ತದೆ. ಯಾವುದೇ ವ್ಯಕ್ತಿಯಾದರೂ ಪೊಸೆಸಿವ್ನೆಸ್ ಅನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ಇಂತಹ ಸ್ವಭಾವದಿಂದ ಅದಷ್ಟದ ಮಟ್ಟಿಗೆ ದೂರವಿರಲು ಪ್ರಯತ್ನಿಸಿ ಇಲ್ಲವಾದರೆ ನೀವು ನಿಮ್ಮ ಸಂಗಾತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

Powerful Zodiac Signs: ಕನ್ನಡತಿಯ ಭುವಿ ಪಾತ್ರದಂತೋರು ಯಾವ ರಾಶಿಯಲ್ಲಿ ಹುಟ್ಟಿರುತ್ತಾರೆ ಗೊತ್ತಾ?

ವೃಶ್ಚಿಕ ರಾಶಿಯವರು ಮಾಡುವ ಈ ಮೂರು ಮುಖ್ಯ ತಪ್ಪುಗಳಿಂದಾಗಿ (Mistakes) ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಬಹುಬೇಗ ಕಳೆದುಕೊಳ್ಳುತ್ತಾರೆ ಹಾಗೂ ಪ್ರತಿಬಾರಿಯೂ ನೋವನ್ನು (Pain) ಅನುಭವಿಸುವುದರ ಜೊತೆಗೆ ತಮ್ಮ ಅವರಿಗೂ ಕೂಡ ನೋವಾಗುವ ಹಾಗೆ ಮಾಡಿಬಿಡುತ್ತಾರೆ ಅದರಿಂದಾಗಿ ಅದಷ್ಟದ ಮಟ್ಟಿಗೆ ನಿಮ್ಮ ಈ ಸ್ವಭಾವವನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ ಹಾಗೂ ಇದರಿಂದಾಗಿ ನಿಮ್ಮ ನಡುವಿನ ಸಂಬಂಧದಲ್ಲಿ ಮೂಡುವ ಬಿರುಕುಗಳನ್ನು ತಪ್ಪಿಸಿ..

click me!