30 ವರ್ಷದ ಬಳಿಕ ಕುಂಭ ರಾಶಿಯಲ್ಲಿ ಶನಿ ಇಂದಿನಿಂದ 2 ತಿಂಗಳು ಹುಷಾರ್..!

By Suvarna News  |  First Published Feb 14, 2024, 12:50 PM IST

ಗ್ರಹಗಳ ರಾಜ ಸೂರ್ಯ ಇಂದು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಆದರೆ ಈ ಸೂರ್ಯನ ಸಂಕ್ರಮಣಕ್ಕೂ ಮುನ್ನ ಶನಿಯು ಅಸ್ತಮಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಶನಿಯ ಪ್ರಭಾವವು ಗಣನೀಯವಾಗಿ ಕಡಿಮೆಯಾಗುತ್ತದೆ. 


ದೈವಜ್ಞ ಹರೀಶ್ ಕಶ್ಯಪ್

ಗ್ರಹಗಳ ರಾಜ ಸೂರ್ಯ ಇಂದು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಆದರೆ ಈ ಸೂರ್ಯನ ಸಂಕ್ರಮಣಕ್ಕೂ ಮುನ್ನ ಶನಿಯು ಅಸ್ತಮಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಶನಿಯ ಪ್ರಭಾವವು ಗಣನೀಯವಾಗಿ ಕಡಿಮೆಯಾಗುತ್ತದೆ. ಆದ್ದರಿಂದ, ಸೂರ್ಯನ ಈ ಸಂಕ್ರಮಣವು ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಯಾವ ಪರಿಣಾಮ ಬೀರಲಿದೆ.

Latest Videos

undefined

 ಶನಿಯನ್ನು ಹಾದು ಹೋಗುವ ಗ್ರಹಗಳಿಂದಾಗಿ ಗ್ರಹಾರಿಷ್ಟ ಬಾಧೆ ಏರ್ಪಡಲಿದೆ ಇಂದಿನಿಂದ ಏಪ್ರಿಲ್ ಯುಗಾದಿವರೆಗೂ ಕಷ್ಟ, ಸಂಕಷ್ಟ, ದುರ್ದಿನಗಳು ಹೆಚ್ಚಾಗುತ್ತದೆ. ಚಂದ್ರ ಎರಡು ಬಾರಿ ಮೀನ ರಾಹು ಸೇರಿವುದು (ಗ್ರಹಣ). ಮತ್ತು  ಕುಂಭ ರಾಶಿಯಲ್ಲಿ ರವಿ ಸಂಚಾರದಿಂದ ಶನಿಯ ಬಲಹೀನನಾಗುತ್ತಾನೆ.  ಸ್ವಕ್ಷೇತ್ರದಲ್ಲಿ ಶನಿ ಬಲಹೀನನಾಗುವುದರಿಂದ ಆಡಳಿತಗಾರರಿಗೆ ಶಕ್ತಿ. ಮೀನ ರಾಶಿಗೆ ಸೂರ್ಯ ಬದಲಾವಣೆಯಾದಾಗ ನಂತರ ಕುಂಭದ ಶನಿಯಿಂದಾಗಿ ಶಕ್ತಿ ವೃದ್ಧಿಸುವುದು. ಮೀನದಲ್ಲಿ ರವಿ- ರಾಹು ಗ್ರಹಣದೋಷ ಸದ್ಯ ಕುಜನು ಉಚ್ಚನಾಗಿ ಬುಧ-ಶುಕ್ರರ ಪೀಡಿಸುವನು.

ಮಾರ್ಚ್ ಕೊನೆಗೆ ಕುಂಭದ ಶನಿಯ ಸೇರುವ ಅವಯೋಗ ಆ ನಂತರ ಮೇಷದಲ್ಲಿ ಗುರು ಅಸ್ತನಾಗುವನು. ಗುರು ಮೇಷದಲ್ಲಿ ಇರುವವರೆಗೂ ಶನಿದೃಷ್ಟಿ ತಪ್ಪದು ಇದೆಲ್ಲವೂ ಶನಿಮಹಾರಾಜನ ಕೇಂದ್ರದಿಂದಲೇ ಹಾದು ಆಗುವಂಥ ಗ್ರಹಚಾರ ಬದಲಾವಣೆ ಪರಿವರ್ತನೆಗಳು ಇನ್ನೆರಡು ತಿಂಗಳಲ್ಲೇ ಆಗುವುದು.  ಗ್ರಹಾರಿಷ್ಠದಿಂದಾಗಿ ಅಗ್ನಿ ದುರಂತಗಳು, ದಿಢೀರ್ ಅಡ್ಡಮಳೆ, ವಿಪರೀತ ಬಿಸಿಲು ಏರುವುದು, ಯುದ್ಧಗಳಿಗೆ ಕುಮ್ಮಕ್ಕು, ಭೂಕಂಪನಗಳು, ವೃದ್ಧರಿಗೆ ಪೀಡೆ , ರಾಜರಿಗೆ ಪೀಡೆ , ಬಂಧನದ ಆತಂಕ, ಆರ್ಥಿಕ ಮಾರ್ಕೆಟ್ ಕುಸಿತ , ದವಸ ಧಾನ್ಯಗಳಿಗೆ ಕೊರತೆ, ಜನಾಂಗೀಯ ಗಲಾಟೆಗಳು, ಭಯೋತ್ಪಾದನೆಯ ಆತಂಕ , ಸರ್ಕಾರಗಳು ಹೈರಾಣಗಾವುದು, ಅನಾರೋಗ್ಯ ಕಾಡುವುದು , ಸಾವು ನೋವು ಮಾನಸಿಕ ವಿಭ್ರಮೆಗಳೇ ಮುಂತಾಗಿ ಅನೇಕ ಗ್ರಹಚಾರದೋಷಗಳು ಕಾಡುವ ಸಮಯ.

ಯಾವ ರಾಶಿಗೆ ಕಂಟಕ ?
ಮೇಷ, ಮಕರ, ಕುಂಭ, ಮೀನ ರಾಶಿಯವರಿಗೆ ಅಧಿಕ ದೋಷ
ಕರ್ಕ , ತುಲಾ ರಾಶಿಯವರಿಗೂ ದೋಷ
ಆರೋಗ್ಯದ ಮೇಲೆ ಗಮನವಿರಲಿ, ಮಾತು, ಹಣದ ಮೇಲೆ ಹಿಡಿತವಿರಲಿ

ಪರಿಹಾರಗಳು
ಅಶ್ವತ್ಥ ಪ್ರದಕ್ಷಿಣೆ, ಶ್ರೀವಿಷ್ಣು ಮೂರ್ತಿಗಳ ದರ್ಶನ , ನಾಮ ಸ್ಮರಣ ಅವಿರತವಾಗಿ ಮಾಡುತ್ತಿರಬೇಕು.
ಮಹಾಕ್ಷೇತ್ರಗಳಲ್ಲಿ ಶ್ರೀಚಂಡಿಕಾ, ಮಹಾರುದ್ರ ಯಾಗಗಳ ನಡೆಸುವುದು ದೇವತಾ ರಕ್ಷೆ ಹೆಚ್ಚಿಸುತ್ತದೆ

click me!