Vedic Astrology: ಆರೋಗ್ಯದ ಜೊತೆ ಸಂಪತ್ತು ವೃದ್ಧಿಸುತ್ತೆ ಕೇಸರಿ

By Suvarna NewsFirst Published Dec 27, 2022, 3:48 PM IST
Highlights

ಕೇಸರಿ ಅಂದ್ರೆ ಅದು ಶ್ರೀಮಂತರ ಸೊತ್ತು ಎನ್ನುವ ಕಾಲವೊಂದಿತ್ತು. ಆದ್ರೀಗ ಜನಸಾಮಾನ್ಯರ ಕೈಗೂ ಕೇಸರಿ ಸಿಗ್ತಿದೆ. ಅದನ್ನು ಆರೋಗ್ಯದ ಜೊತೆ ಜ್ಯೋತಿಷ್ಯದಲ್ಲಿ ಹೇಳಿದಂತೆಯೂ ನೀವು ಬಳಸಬಹುದು. ಇದ್ರಿಂದ ಸುಖ, ಸಂಪತ್ತಿನ ಲಾಭ ನಿಮ್ಮದಾಗುತ್ತದೆ.
 

ನಾವೆಲ್ಲ ಕೇಸರಿಯ ಬಳಕೆ ಮಾಡ್ತೇವೆ. ಕೇಸರಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆಯುರ್ವೇದದಲ್ಲಿ ಕೂಡ ಕೇಸರಿ ಬಳಸಲಾಗುತ್ತದೆ. ಈ ಕೇಸರಿಯನ್ನು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸೇವನೆ ಮಾಡಬಹುದು. ಈ ಕೇಸರಿಗೂ, ಜ್ಯೋತಿಷ್ಯ ಶಾಸ್ತ್ರಕ್ಕೂ ನಂಟಿದೆ. ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಶಾಂತಿಗಾಗಿ ಮತ್ತು ಜೀವನದಲ್ಲಿ ಪ್ರಗತಿಯನ್ನು ಪಡೆಯಲು ಅನೇಕ ರೀತಿಯ ಪರಿಹಾರಗಳನ್ನು ಹೇಳಲಾಗಿದೆ. ನೀವು ಈ ಉಪಾಯಗಳನ್ನು ಪಾಲನೆ ಮಾಡಿದ್ರೆ ಮಂಗಳಕರ ಫಲಿತಾಂಶ ಪಡೆಯುತ್ತೀರಿ. ಶಾಸ್ತ್ರಗಳಲ್ಲಿ ಕೇಸರಿ ಬಗ್ಗೆಯೂ ಕೆಲ ಉಪಾಯಗಳನ್ನು ಹೇಳಲಾಗಿದೆ. ಇದನ್ನು ಸಾವಿರಾರು ವರ್ಷಗಳಿಂದ ಮಂಗಳಕರ ಕೆಲಸಗಳಿಗೆ ಮತ್ತು ದೇವರ ಪೂಜೆಗೂ ಬಳಸಲಾಗುತ್ತದೆ. ಕೇಸರಿಯ ಉಪಾಯದಿಂದ ನಾವು ದೇವ ಗುರು ಬೃಹಸ್ಪತಿಯ ಕೃಪೆಗೆ ಪಾತ್ರರಾಗಬಹುದು. ಜೊತೆಗೆ ಅನೇಕ ಗ್ರಹ ದೋಷದಿಂದ ಮುಕ್ತಿ ಪಡೆಯಬಹುದು. ಗ್ರಹವನ್ನು ಬಲಪಡಿಸಬಹುದು.  ದುರಾದೃಷ್ಟವನ್ನು ದೂರ ಮಾಡಿ ಅದೃಷ್ಟವನ್ನು ಪಡೆಯಬಹುದು. ನಾವಿಂದು ಕೇಸರಿಯ ಯಾವೆಲ್ಲ ಉಪಾಯದಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನು ನಿಮಗೆ ಹೇಳ್ತೆವೆ. 

ಅದೃಷ್ಟ (Good Luck) ಬದಲಿಸುತ್ತದೆ ಕೇಸರಿ (Saffron)ಯ ಈ ಪರಿಹಾರಗಳು : 
ಗುರು (Jupiter) ಗ್ರಹವನ್ನು ಹೀಗೆ ಬಲಗೊಳಿಸಿ :
ನಿಮ್ಮ ಜಾತಕ (Horoscope) ದಲ್ಲಿ ಗುರು ದುರ್ಬಲನಾಗಿದ್ದರೆ ಅಥವಾ ಅಶುಭ ಫಲಗಳನ್ನು ನಿಮಗೆ ನೀಡ್ತಿದ್ದರೆ ಗುರುವನ್ನು ಬಲಗೊಳಿಸುವುದು ಮುಖ್ಯ. ಇಲ್ಲವಾದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗುರು ದುರ್ಬಲನಾಗಿದ್ದಾನೆ ಎಂಬುದು ತಿಳಿದ ಸಂದರ್ಭದಲ್ಲಿ ನೀವು ಕೇಸರಿ ಬಳಸಿ ಗುರುವಿನ ಶಕ್ತಿ ಹೆಚ್ಚಿಸಬಹುದು. ಗುರುವಾರದಂದು ಖೀರ್ ಗೆ  ಕೇಸರಿಯನ್ನು ಬೆರೆಸಿ ಕುಡಿಯುವುದ್ರಿಂದ ನಿಮಗೆ ಶುಭ ಫಲ ಪ್ರಾಪ್ತಿಯಾಗುತ್ತದೆ. 

ದಾಂಪತ್ಯ ಸುಖ : ವೈವಾಹಿಕ ಜೀವನದಲ್ಲಿ ತೊಂದರೆಯಾದರೆ, ಪತಿ-ಪತ್ನಿ ಮಧ್ಯೆ ಸದಾ ಜಗಳವಾಗ್ತಿದ್ದರೆ, ದಾಂಪತ್ಯ ಜೀವನ ಬಿರುಕುಬಿಡ್ತಿದೆ ಎನ್ನುವವರು ಕೇಸರಿಯ ಸಹಾಯ ಪಡೆಯಬಹುದು. ಮೂರು ತಿಂಗಳ ಕಾಲ ಪತಿ – ಪತ್ನಿ ಕೇಸರಿ ಮಿಶ್ರಿತ ಹಾಲಿನ ಅಭಿಷೇಕವನ್ನು ಶಿವನಿಗೆ ಮಾಡಬೇಕು. ಇದ್ರಿಂದ ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗುತ್ತದೆ.

Garlic Astro: ರಾಹು ದೋಷವಿದ್ದರೆ, ಬೆಳ್ಳುಳ್ಳಿಯ ಈ ಪರಿಹಾರ ಮಾಡಿ

ಆರ್ಥಿಕ ಪರಿಸ್ಥಿತಿ ಸುಧಾರಿಸಿ : ಮನೆಯಲ್ಲಿ ಹಣ ನಿಲ್ಲುತ್ತಿಲ್ಲ, ಆರ್ಥಿಕ ಮುಗ್ಗಟ್ಟು ಎದುರಾಗುತ್ತಿದೆ ಎಂದಾದ್ರೆ  ಏಳು ಬಿಳಿ ಕವಡೆಗೆ ಕೇಸರಿ ಬಣ್ಣ ಬಳಿದು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡುವುದ್ರಿಂದ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. 

ಪಿತೃ ದೋಷಕ್ಕೂ ಪರಿಹಾರ : ಪಿತೃ ದೋಷವಿದ್ದರೆ ಚತುರ್ದಶಿ ಮತ್ತು ಅಮವಾಸ್ಯೆಯ ದಿನದಂದು ಮನೆಯ ನೈಋತ್ಯ ದಿಕ್ಕಿಗೆ ಕೇಸರಿಯನ್ನು ಹಚ್ಚಬೇಕು. ಇದು ಪಿತೃ ದೋಷವನ್ನು ಕಡಿಮೆ ಮಾಡುತ್ತದೆ.

ಹೀಗೆ ಮಾಡಿದ್ರೆ ಸಿಗುತ್ತೆ ಶುಕ್ರನ ಕೃಪೆ  : ಶುಕ್ರ ಗ್ರಹವನ್ನು ಬಲಪಡಿಸಲು ನೀವು ಕೇಸರಿಯನ್ನು ಅಲಂಕಾರ ಮತ್ತು ಮದುವೆಯ ವಸ್ತುಗಳ ಜೊತೆಗೆ ದಾನ ಮಾಡಬೇಕು. ಇದ್ರಿಂದ ಶುಕ್ರ ದೋಷ ಕಡಿಮೆಯಾಗಿ ಮನೆಗೆ ಆದಾಯ ಬರಲು ಶುರುವಾಗುತ್ತದೆ. 

ಸಂತೋಷ, ಸಮೃದ್ಧಿಗೆ ಈ ಉಪಾಯ : ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ ನೆಲೆಸಬೇಕು ಎನ್ನುವವರು ದೇವರ ಆಶೀರ್ವಾದ ಪಡೆಯಬೇಕಾಗುತ್ತದೆ. ದೇವರನ್ನು ಒಲಿಸಿಕೊಳ್ಳಲು ನೀವು ಭಗವಂತ ಶಿವ, ಹರಿ, ವಿಷ್ಣು, ಗಣೇಶ ಮತ್ತು ಲಕ್ಷ್ಮಿ ದೇವಿಗೆ ನಿಯಮಿತವಾಗಿ ಕೇಸರಿ ತಿಲಕವನ್ನು ಹಚ್ಚಬೇಕು. ಹೀಗೆ ಮಾಡಿದ್ರೆ ನೀವು ಬಯಸಿದ ಆಸೆ ಈಡೇರುತ್ತದೆ. 

ಹೊಸ ವರ್ಷದ ಮೊದಲ ದಿನ ಸಾಸಿವೆಯನ್ನು ಈ ರೀತಿ ಬಳಸಿದ್ರೆ ವರ್ಷವಿಡೀ ಅದೃಷ್ಟ!

ಚಂದ್ರನ ಶಾಂತಿಗಾಗಿ ಹೀಗೆ ಮಾಡಿ : ನಿಮ್ಮ ಜಾತಕದಲ್ಲಿ ಚಂದ್ರ ಬಲಹೀನನಾಗಿದ್ದು, ಅಶುಭ ಫಲ ನೀಡುತ್ತಿದ್ದರೆ ಕೇಸರಿ ಉಪಾಯ ಮಾಡಬಹುದು. ಒಂದು ಬೆಳ್ಳಿಯ ಪೆಟ್ಟಿಗೆಯಲ್ಲಿ ಕೇಸರಿಯನ್ನು, ಬೆಳ್ಳಿಯ ಒಂದು ಮಣಿಯ ಜೊತೆ ಇಟ್ಟರೆ ಸಮಸ್ಯೆ ದೂರವಾಗುತ್ತದೆ. 
 

click me!