ಸುದೀಪ್ತೋ ಸೇನ್ ಅವರ ನಿರ್ದೇಶನದ ಚಿತ್ರ 'ದಿ ಕೇರಳ ಸ್ಟೋರಿ' ಸುತ್ತ ಇತ್ತೀಚಿನ ವಿವಾದದೊಂದಿಗೆ ಸದ್ಗುರುವಿನ ಹಳೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದ ಗಮನವನ್ನು ಸೆಳೆಯುತ್ತಿದೆ. 2022ರ ಮಹಾಶಿವರಾತ್ರಿಯ ಸಮಯದಲ್ಲಿ ಸದ್ಗುರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ, ಇತ್ತೀಚಿನ ವಿವಾದಕ್ಕೆ ಕೂಡಾ ಸರಿಯಾದ ಉತ್ತರವಾಗಿದೆ.
ಸುದೀಪ್ತೋ ಸೇನ್ ಅವರ ನಿರ್ದೇಶನದ ಚಿತ್ರ 'ದಿ ಕೇರಳ ಸ್ಟೋರಿ'ಯಲ್ಲಿ ಬರುವ ಹಿಂದೂಗಳ ಧಾರ್ಮಿಕ ನಂಬಿಕೆ ಕೆಣಕುವ ಡೈಲಾಗ್‌ವೊಂದಕ್ಕೆ ಸಮರ್ಪಕ ಉತ್ತರವಾಗಿ 2022ರಲ್ಲಿ ಸದ್ಗುರು ಜಗ್ಗಿ ವಾಸುದೇವ್ ಆಡಿದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು, ಚಿತ್ರ ಬರುವ ಮುನ್ನವೇ, ಕಳೆದ ವರ್ಷ ವ್ಯಕ್ತಿಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ಸದ್ಗುರು, ಶಿವನ ಕುರಿತಾಗಿ ಕೆಲ ಮಾತುಗಳನ್ನು ಆಡಿದ್ದರು. ಅದೀಗ 'ದಿ ಕೇರಳ ಸ್ಟೋರಿ'ಯಲ್ಲಿ ಬರುವ ಶಿವನ ಗೇಲಿ ಮಾಡುವಿಕೆಗೆ ತಕ್ಕ ಉತ್ತರವಾಗಿ ಸೋಷ್ಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಚಿತ್ರದಲ್ಲಿ ತನ್ನ ಹಿಂದೂ ಸ್ನೇಹಿತನನ್ನು ಮತಾಂತರಿಸುವ ಉದ್ದೇಶದಿಂದ ಮುಸ್ಲಿಂ ಮಹಿಳೆಯೊಬ್ಬಳು ಶಿವನನ್ನು ಗೇಲಿ ಮಾಡುವುದನ್ನು ಕಾಣಬಹುದು - 'ಹೆಂಡತಿ ಸತ್ತಾಗ ಸಾಮಾನ್ಯ ಮನುಷ್ಯನಂತೆ ಅಳುವವನು ಹೇಗೆ ದೇವರಾಗುತ್ತಾನೆ?' ಎಂದು ಆಕೆ ಕೇಳುತ್ತಾಳೆ.
ಇದೇ ಪ್ರಶ್ನೆಗೆ ಸದ್ಗುರುಗಳು 2022ರ ಮಹಾಶಿವರಾತ್ರಿಯ ಸಮಯದಲ್ಲಿ ಉತ್ತರಿಸಿದ್ದಾರೆ- 'ಸತಿಯ ಭೀಕರ ನಿಧನದ ಬಗ್ಗೆ ಶಿವನು ದುಃಖಿಸದಿದ್ದರೆ, ನಾನು ಅವನನ್ನು ದೈವಿಕ ಎಂದು ಪರಿಗಣಿಸುವುದಿಲ್ಲ. ಅವvg ಅಮಾನವೀಯ ಅಲ್ಲ, ಆದರೆ ಸೂಪರ್ ಹ್ಯೂಮನ್' ಎಂದು ಸದ್ಗುರು ಹೇಳಿದ್ದರು. ಸದ್ಗುರು ಈ ಉತ್ತರ ನೀಡಿದ ವಿಡಿಯೋ ಕ್ಲಿಪ್ ಈಗ 'ದಿ ಕೇರಳ ಸ್ಟೋರಿ' ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದ ಗಮನವನ್ನು ಸೆಳೆಯುತ್ತಿದೆ.
If Shiva did not grieve over Sati’s terrible demise, I would not consider him Divine at all. He was not inhuman, but Super Human. -Sg pic.twitter.com/9IckBT3OyJ
— Sadhguru (@SadhguruJV)ದಿ ಕೇರಳ ಸ್ಟೋರಿ
ಈ ಚಲನಚಿತ್ರವು ಉಗ್ರಗಾಮಿ ಇಸ್ಲಾಮಿಸ್ಟ್ ಗುಂಪು - ISISಗಾಗಿ ಹೋರಾಡಲು, ಬಲವಂತವಾಗಿ ಕೇರಳದ ಹಿಂದೂ ಹುಡುಗಿಯರ ಧಾರ್ಮಿಕ ಮತಾಂತರ ಮಾಡುವ ವಿಷಯವನ್ನು ಆಧರಿಸಿದೆ. 'ಹೆಂಡತಿ ಸತ್ತಾಗ ಸಾಮಾನ್ಯ ಮನುಷ್ಯನಂತೆ ಅಳುವವನು ದೇವರಾಗುವುದು ಹೇಗೆ?' ಎಂದು ಮುಸ್ಲಿಂ ಮಹಿಳೆ ಚಿತ್ರದಲ್ಲಿ ಪ್ರಶ್ನಿಸುವ ಸೀನ್ ಇದೆ.
ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ 2022 ರ ಮಹಾಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಸದ್ಗುರುವಿನ ಬಳಿ, 'ಶಿವನು ಸತಿಯನ್ನು ಕಳೆದುಕೊಂಡಾಗ ದುಃಖಿಸುತ್ತಾನೆ ಎಂದು ತಿಳಿದಿದೆ. ಶಿವನಂಥ ದಿವ್ಯ ಜೀವಿ ಮೋಹದಲ್ಲಿ ಸಿಲುಕಿ ದುಃಖಿತನಾದದ್ದು ಹೇಗೆ?' ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ ಸದ್ಗುರು, 'ಅವನು ಏನು ಮಾಡಬೇಕೆಂದು ನೀವು ಬಯಸಿದ್ದೀರಿ? ದುರದೃಷ್ಟಕರ ಘಟನೆಯಲ್ಲಿ, ಅವನ ಪತ್ನಿ ಸಜೀವ ದಹನವಾಗಿದ್ದಾಳೆ. ನೀವು ಪ್ರೀತಿಸುವವರು ಸುಟ್ಟು ಸುಟ್ಟು ಸಾಯುವುದನ್ನು ನೋಡಿದಾಗ ಮತ್ತು ಬೆಂಕಿಯು ನಿಮ್ಮನ್ನು ಸಿಹಿಯಾಗಿ ಕೊಲ್ಲುವುದಿಲ್ಲ ಎಂದು ನಿಮಗೆ ತಿಳಿದಿದ್ದಾಗ ದುಃಖವಾಗದೆ ಇರುತ್ತದೆಯೇ?. ಪ್ರೀತಿಯ ಹೆಂಡತಿ ಜೀವಂತವಾಗಿ ಸುಟ್ಟುಹೋದಾಗ, ಅವನನ್ನು ಏನು ಮಾಡಬೇಕೆಂದು ನೀವು ಬಯಸುತ್ತೀರಿ?' ಎಂದು ಕೇಳಿದ್ದಾರೆ.
ವಾಲುತ್ತಿದೆ ಜಗತ್ತಿನ ಅತಿ ಎತ್ತರದ ಶಿವ ದೇವಾಲಯ; ಪುರಾತತ್ವ ಇಲಾಖೆ ಎಚ್ಚರಿಕೆ
ಮುಂದುವರಿದು, 'ಅವನು ದುಃಖಿಸದಿದ್ದರೆ, ನಾನು ಅವನನ್ನು ದೈವಿಕ ಎಂದು ಪರಿಗಣಿಸುವುದಿಲ್ಲ. ಅದು ನಿರ್ಜೀವ ಮಾರ್ಗವಾಗಿದೆ. ಕೆಲವು ದುಃಖಗಳು ತಮ್ಮದೇ ಆದ ರೀತಿಯಲ್ಲಿ ಸಂಭವಿಸಿದಾಗ ಮರಗಳು, ಪ್ರಾಣಿಗಳು ದುಃಖಿಸುತ್ತವೆ. ಶಿವನು ಅದಕ್ಕಿಂತ ಕಡಿಮೆ ಎಂದು ನೀವು ಭಾವಿಸುತ್ತೀರಾ? ಇಲ್ಲ! ಅವನ ದುಃಖವು ತುಂಬಾ ತೀವ್ರವಾಗಿದೆ, ಆದರೆ ಅವನು ಅದರಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಅವನಿಗೆ ಸ್ವಲ್ಪ ಸಮಯದ ತೀವ್ರ ದುಃಖ ಸಂಭವಿಸಿದೆ, ಮತ್ತು ಅವನು ಅಮಾನವೀಯನಲ್ಲದ ಕಾರಣ ನಾವು ಅವನನ್ನು ಗೌರವಿಸುತ್ತೇವೆ. ನೀವು ನನ್ನನ್ನು ಕೇಳಿದರೆ ಅವನು ಅತಿಮಾನುಷ, ಆದ್ದರಿಂದ ಅವನಲ್ಲಿ ಎಲ್ಲವೂ ಉತ್ತುಂಗಕ್ಕೇರಿದೆ' ಎಂದಿದ್ದಾರೆ.
ಏತನ್ಮಧ್ಯೆ, ಅದಾ ಶರ್ಮಾ ನಟನೆಯ 'ದಿ ಕೇರಳ ಸ್ಟೋರಿ' ಬಾಲಿವುಡ್ ದಾಖಲೆಗಳನ್ನು ಮುರಿಯುತ್ತಿದೆ ಮತ್ತು 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ. ಚಿತ್ರ ಬಿಡುಗಡೆಯಾದಾಗಿನಿಂದ, ಅದಾ ಶರ್ಮಾ ಚಿತ್ರದ ಸುತ್ತ ನಡೆಯುತ್ತಿರುವ ವಿವಾದಗಳಿಂದಾಗಿ ಸಾಕಷ್ಟು ಕೊಲೆ ಬೆದರಿಕೆಗಳನ್ನು ಸ್ವೀಕರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸದ್ಗುರುಗಳ ವೀಡಿಯೊವನ್ನು ಇಲ್ಲಿ ವೀಕ್ಷಿಸಿ -