ರಷ್ಯಾ ಉಕ್ರೇನ್ ಸಂತರಿಂದ ಮಹಾಕುಂಭದಲ್ಲಿ ಶಾಂತಿಯ ಸಂದೇಶ, ವೈರಿಗಳ ಒಗ್ಗೂಡಿಸಿದ ಸಂಗಮ

Published : Jan 23, 2025, 11:48 AM IST
ರಷ್ಯಾ ಉಕ್ರೇನ್ ಸಂತರಿಂದ ಮಹಾಕುಂಭದಲ್ಲಿ ಶಾಂತಿಯ ಸಂದೇಶ, ವೈರಿಗಳ ಒಗ್ಗೂಡಿಸಿದ ಸಂಗಮ

ಸಾರಾಂಶ

ರಷ್ಯಾ ಹಾಗೂ ಉಕ್ರೇನ್ ಯುದ್ಧ ಸಾವಿರ ದಿನ ದಾಟಿದೆ. ಬದ್ಧ ವೈರಿಗಳನ್ನು ಮಹಾಕುಂಭ ಮೇಳದ ತ್ರಿವೇಣಿ ಸಂಗಮ ಒಗ್ಗೂಡಿಸಿದೆ. ಉಭಯ ದೇಶದ ಸಂತರು ಕುಂಭ ಮೇಳದಲ್ಲಿ ಶಾಂತಿ, ಪ್ರೀತಿಯ ಸಂದೇಶ ಸಾರಿದ್ದಾರೆ.

ಪ್ರಯಾಗರಾಜ್(ಜ.23) ಆಧ್ಯಾತ್ಮಿಕತೆಯಲ್ಲಿ ಭಾರತ ವಿಶ್ವಗುರು. ಹೀಗಾಗಿ ಭಾರತದ ಆಧ್ಯಾತ್ಮಿಕತೆಗೆ ಯಾವುದೇ ಗಡಿಗಳ ಹಂಗಿಲ್ಲ. ಹೀಗಾಗಿಯೇ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ದೇಶ ವಿದೇಶಗಳಿಂದ ಭಕ್ತರು, ಸಾಧು ಸಂತರು ಆಗಮಿಸುತ್ತಿದ್ದಾರೆ. ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಸರಿಸುಮಾರು 10 ಕೋಟಿಷ್ಟು ಭಕ್ತರು ತ್ರಿವೇಣಿ ಸಂಗದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಮಾಜಿ ಆ್ಯಪಲ್ ಸಿಇಒ ಸ್ಟೀವ್ಸ್ ಜಾಬ್ಸ್ ಪತ್ನಿ ಸೇರಿದಂತೆ ಹಲವು ಗಣ್ಯರು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅಂದರೆ ಬದ್ಧವೈರಿಗಳಂತೆ ಹೋರಾಡುತ್ತಿರುವ ರಷ್ಯಾ ಹಾಗೂ ಉಕ್ರೇನ್ ದೇಶದಿಂದ ಮಹಾಕುಂಭ ಮೇಳಕ್ಕೆ ಆಗಮಿಸಿರುವ ಇಬ್ಬರು ಸಾಧು ಸಂತರು ಶಾಂತಿ ಹಾಗೂ ಪ್ರೀತಿಯ ಸಂದೇಶ ಸಾರುತ್ತಿದ್ದಾರೆ. ವಿಶೇಷ ಅಂದರೆ ತಮ್ಮ ದೇಶದಲ್ಲಿ ಇಬ್ಬರು ಬದ್ಧವೈರಿಗಳಾಗಿದ್ದರೆ. ತ್ರಿವೇಣಿ ಸಂಗಮದಲ್ಲಿ ಒಂದೇ ಕ್ಯಾಂಪ್‌ನಲ್ಲಿ ಶಾಂತಿಯ ಸಂದೇಶ ಸಾರುತ್ತಿದ್ದಾರೆ.

ಉಕ್ರೇನ್‌ನಿಂದ ಆಗಮಿಸಿರುವ ಸ್ವಾಮಿ ವಿಷ್ಣುದೇವಾನಂದ ಗಿರಿರಾಜ್ ಮಹಾರಾಜ್ ಹಾಗೂ ರಷ್ಯಾದಿಂದ ಆಗಮಿಸಿರುವ ಆನಂದ್ ಲೀಲಾ ಮಾತಾ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಇವರ ಜೊತೆಗೆ ಉಭಯ ದೇಶಗಳಿದಂದ ಸಾಕಷ್ಟು ಅನುಯಾಯಿಗಳು ಆಗಮಿಸಿದ್ದಾರೆ. ಸದ್ಯ ಸೆಕ್ಟರ್ 18ರ ಕ್ಯಾಂಪಿನಲ್ಲಿ ಉಕ್ರೇನ್ ಹಾಗೂ ರಷ್ಯಾದಿಂದ 70 ಅನುಯಾಯಿಗಳು ತಂಗಿದ್ದಾರೆ. ಇವರ ಪ್ರವಚನಗಳನ್ನು, ಭಾರತದ ಸಾಧು ಸಂತರ ಪ್ರವಚನ ಕೇಳುತ್ತಿದ್ದಾರೆ. ಇದೇ ವಾರದಲ್ಲಿ 100ಕ್ಕೂ ಹೆಚ್ಚು ಅನುಯಾಯಿಗಳು ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಉಕ್ರೇನ್‌ನ ಕಾರ್ಕೀವ್ ನಗರದ ನಿವಾಸಿಯಾಗಿರುವ ಗಿರಿರಾಜ್ ಮಹರಾಜ್ ಮೊದಲ ಹೆಸರು ವೆಲೆರಿಯ್. ಆದರೆ ಸನಾತನ ಹಿಂದೂ ಧರ್ಮ ಸ್ವೀಕರಿಸಿರುವ ಗಿರಿರಾಜ್ ಮಹಾರಾಜ್ ಜುನಾ ಅಖರದ ಮಹಾಮಂಡಲೇಶ್ವರ ಅನುಯಾಯಿಯಾಗಿದ್ದಾರೆ. ಮಹಾಕುಂಭ ಮೇಳ ಕುರಿತು ಮಾತನಾಡಿರುವ  ವಿಷ್ಣುದೇವಾನಂದ ಗಿರಿರಾಜ್ ಮಹಾರಾಜ್, ಇದು ವಿಶೇಷ ಅನುಭವ. ಪವಿತ್ರ ತ್ರಿವೇಣಿ ಸಂಗದಲ್ಲಿ ಪುಣ್ಯಸ್ನಾನ ಮಾಡಿದ್ದೇವೆ. ಸಾಧು ಸಂತರ ಪ್ರವಚನ ಕೇಳುತ್ತಿದ್ದೇವೆ. ಹಲವು ದೇಶಗಳಿಂದ ಸಾಧು ಸಂತರು ಮಹಾಕುಂಭ ಮೇಳಕ್ಕೆ ಆಗಮಿಸಿ ಕೃಪೆಗೆ ಪಾತ್ರರಾಗುತ್ತಿದ್ದಾರೆ. ನನಗೆ ಈ ಅವಕಾಶ ಒಲಿದು ಬಂದಿದೆ. ಇದಕ್ಕೆ ಅತೀವ ಸಂತಸವಿದೆ ಎಂದು ವಿಷ್ಣುದೇವಾನಂದ ಗಿರಿರಾಜ್ ಮಹಾರಾಜ್ ಹೇಳಿದ್ದಾರೆ. ಸನಾತನ ಧರ್ಮ ಅನುಸರಿಸಿ,ಪ್ರಚಾರದಲ್ಲಿ ತೊಡಗಿದ್ದೇನೆ. ವಿವಿಧ ದೇಶದಲ್ಲಿರುವ ನನ್ನ ಶಿಷ್ಯರು ಇದೀಗ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಅವರೆಲ್ಲರನ್ನು ಭೇಟಿಯಾಗಲು ಇಲ್ಲಿಗೆ ಆಗಮಿಸಿದ್ದೇನೆ. ಶಿಷ್ಯರಿಗೆ ಸನಾತನ ಧರ್ಮದ ಮಹತ್ವ ಹಾಗೂ ವೈಜ್ಞಾನಿಕ ಹಿನ್ನಲೆ ತಿಳಿಸಲು ಈ ಮಹಾಕುಂಭ ಮೇಳೆ ಪ್ರಮುಖವಾಗಿದೆ. ಇದರ ಜೊತೆಗೆ ಶಿಷ್ಯರಿಗೆ ಅದ್ವೈತ ವೇದಾಂತ, ಶೈವಿಸಮ್, ಯೋಗ, ಧ್ಯಾನದ ಕುರಿತು ತಿಳಿ ಹೇಳಬೇಕಿದೆ ಎಂದಿದ್ದಾರೆ.

ರಷ್ಯಾದಿಂದ ಆಗಮಿಸಿರುವ ಆನಂದ್ ಲೀಲಾ ಮಾತಾ ಮೊದಲಿನ ಹೆಸರು ಒಲ್ಗಾ. ರಷ್ಯಾದ ನಿಝ್ನಿ ಮೂಲದವರರು. 2010ರಲ್ಲಿ ಮೊದಲ ಬಾರಿಗೆ ಕುಂಭಮೇಳಕ್ಕೆ ಆಗಮಿಸಿದ್ದೆ. ಮಹಾಮಂಡಲೇಶ್ವರ ಪೈಲೆಟ್ ಬಾಬಾಜಿ ಆಮಂತ್ರಣ ಮೇರೆಗೆ ಇಲ್ಲಿಗೆ ಆಗಮಿಸಿದ್ದೆ. ಮೊದಲ ಬಾರಿಗೆ ಕುಂಭಮೇಳ ನಗೆ ಹೊಸದಾಗಿದ್ದರು, ಭಾರಿ ಪ್ರಭಾವ ಬೀರಿತ್ತು. ಹೀಗಾಗಿ 2010ರಲ್ಲೇ ಸನಾತನ ಧರ್ಮ ಸ್ವೀಕರಿಸಿದ್ದೇನೆ. ಬಳಿಕ ಪ್ರತಿ ಕುಂಭ ಮೇಳಕ್ಕೆ ನಾನು ಆಗಮಿಸಿದ್ದೇನೆ. ಇಲ್ಲೀಗ ರಷ್ಯಾ ಹಾಗೂ ಉಕ್ರೇನ್‌ನಲ ಹಲವರಿದ್ದಾರೆ. ನಾವೆಲ್ಲಾ ಒಂದೇ ಕ್ಯಾಂಪಿನಲಿದ್ದೇವೆ. ನಮ್ಮ ದೇಶದಲ್ಲಿ ಯುದ್ದದ ವಾತಾವರಣವಿದ್ದರೆ, ಇಲ್ಲಿ ಶಾಂತಿ, ಪ್ರೀತಿ, ವಿಶ್ವಾಸವಿದೆ. ಇದು ದೇಶದ ಎಲ್ಲೆಡೆ ಹರಡಬೇಕು. ಯುದ್ಧದಿಂದ ಎಲ್ಲರಿಗೂ ಆಪತ್ತು. ಆದರೆ ಪ್ರೀತಿಯಿಂದ, ಶಾಂತಿಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯವಿದೆ. ದೇಶದ ಅಮಾಯಕರು ಘನಘೋರ ಯುದ್ಧದಿಂದ ತತ್ತರಿಸಿದ್ದಾರೆ. ಬುದುಕಿನಲ್ಲಿ ನಗು, ಸಂತೋಷ ಮರೆತಿದ್ದಾರೆ ಎಂದಿದ್ದಾರೆ.
 

PREV
Read more Articles on
click me!

Recommended Stories

ಡಿಸೆಂಬರ್‌ನಲ್ಲಿ ಮಂಗಳನ ಕೋಪದಿಂದಾಗಿ 5 ರಾಶಿಗೆ ಕೆಟ್ಟ ಸಮಯ ಪ್ರಾರಂಭ, ಜಾಗರೂಕರಾಗಿರಿ
ಜನವರಿಯ 3 ಅದೃಷ್ಟ ರಾಶಿ, ಮುಂದಿನ ತಿಂಗಳು ಶುಭ ಗ್ರಹದಿಂದ ಭರ್ಜರಿ ಲಾಟರಿ