ಮಹಾಕುಂಭ ಮೇಳದಲ್ಲಿ ಎಲ್ಲರ ಗಮನಸೆಳೆದಿರುವ ರಷ್ಯಾದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬ

Published : Jan 18, 2025, 04:08 PM ISTUpdated : Jan 18, 2025, 04:21 PM IST
ಮಹಾಕುಂಭ ಮೇಳದಲ್ಲಿ ಎಲ್ಲರ ಗಮನಸೆಳೆದಿರುವ ರಷ್ಯಾದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬ

ಸಾರಾಂಶ

ರಷ್ಯಾದಿಂದ ಆಗಮಿಸಿರುವ 7 ಅಡಿ ಎತ್ತರ, ಕಟ್ಟುಮಸ್ತಾದ ದೇಹದ ಆತ್ಮ ಪ್ರೇಮ್ ಗಿರಿ ಮಹರಾಜ್ ಬಾಬಾ ಭಾರಿ ಜನಪ್ರಿಯರಾಗಿದ್ದಾರೆ. ಆಧುನಿಕ ಪರಶುರಾಮ ಎಂದೇ ಕರೆಯಿಸಿಕೊಳ್ಳುತ್ತಿರುವ ಈ ಮಸ್ಕ್ಯುಲರ್ ಬಾಬಾ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ.  

ಪ್ರಯಾಗರಾಜ್(ಜ.18) ಮಹಾಕುಂಭಮೇಳಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳಲು ಪ್ರತಿ ದಿನ ಕೋಟಿ ಕೋಟಿ ಭಕ್ತರು ಪ್ರಯಾಗರಾಜ್‌ಗೆ ಆಗಮಿಸುತ್ತಿದ್ದಾರೆ. ಹಿಂದೂ ಸಮುದಾಯ ಮಾತ್ರವಲ್ಲ, ವಿದೇಶಗಳಿಂದ ಈಗಾಗಲೇ ಹಲವರು ಹಿಂದೂ ಆಚಾರ ಹಾಗೂ ಪದ್ಧತಿಯಂತೆ ವೃತ ಕೈಗೊಂಡು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಸ್ಟೀವ್ ಜಾಬ್ಸ್ ಪತ್ನಿ ಇದೇ ರೀತಿ ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ಈ ಪೈಕಿ ರಷ್ಯಾದಿಂದ ಮಹಾಕುಂಭ ಮೇಳಕ್ಕೆ ಆಗಮಿಸಿದ ಮಸ್ಕ್ಯುಲರ್ ಬಾಬಾ ಇದೀಗ ಭಾರಿ ಜನಪ್ರಿಯರಾಗಿದ್ದಾರೆ. 7 ಅಡಿ ಎತ್ತರ, ಕಟ್ಟು ಮಸ್ತಾದ ದೇಹ, ಖಾವಿ, ರುದ್ರಾಕ್ಷಿಗಳನ್ನು ಧರಿಸಿರುವ ಈ ಮಸ್ಕ್ಯುಲರ್ ಬಾಬ ಇದೀಗ ಆಧುನಿಕ ಪರಶುರಾಮ ಎಂದೇ ಗುರುತಿಸಿಕೊಂಡಿದ್ದಾರೆ.

ಮಸ್ಕ್ಯುಲರ್ ಬಾಬಾ ಮೂಲ ರಷ್ಯಾ. ಇವರ ಹೆಸರು ಆತ್ಮ ಪ್ರೇಮಗಿರಿ ಮಹಾರಾಜ್. 30 ವರ್ಷಗಳ ಹಿಂದೆ ಈ ಬಾಬ ಸನಾತನದ ಧರ್ಮ ಅನುಸರಿಸಲು ಆರಂಭಿಸಿದ್ದಾರೆ. ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಪ್ರೇಮಗಿರಿ ಮಹಾರಾಜ್, ಕಳೆದ 30 ವರ್ಷಗಳಿಂದ ಸನಾತನ ಧರ್ಮ ಅನುಸರಿಸುತ್ತಿದ್ದಾರೆ. ರಷ್ಯಾದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಈ ಬಾಬಾ, ಆಧ್ಯಾತ್ಮದ ಕಡೆ ಒಲವು ಮೂಡಿತ್ತು. ಹೀಗಾಗಿ ವೃತ್ತಿ ತೊರೆದು ಹಿಂದೂ ಧರ್ಮ ಸೇರಿಕೊಂಡ ಪ್ರೇಮ್ ಗಿರಿ ಮಹಾರಾಜ್ ಇದೀಗ ಮಹಾಕುಂಭ ಮೇಳೆದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಮಹಾಕುಂಭ ಮೇಳದಲ್ಲಿ ವಿದೇಶಿ ಪ್ರತಿನಿಧಿಗಳಿಂದ ಪವಿತ್ರ ಸ್ನಾನ, ಸೂಕ್ತ ವ್ಯವಸ್ಥೆಗೆ ಮೆಚ್ಚುಗೆ

ಹರ ಹರ ಮಹದೇವ್ ಘೋಷಣೆಯೊಂದಿಗೆ ಸಕ್ರಿಯವಾಗಿ ಮಹಾಕುಂಭ ಮೇಳದಲ್ಲಿ ಪೇಮ್ ಗಿರಿ ಮಹಾರಾಜ್ ಪಾಲ್ಗೊಂಡಿದ್ದಾರೆ. ಕೆವಿನ್ ಬುಬ್ರಿಸ್ಕಿ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಾಬಾ ಫೋಟೋ ಪೋಸ್ಟ್ ಮಾಡಲಾಗಿದೆ. ಪ್ರೇಮ್ ಗಿರಿ ಮಹಾರಾಜ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಬೆನ್ನಲ್ಲೇ ಭಾರಿ ಜನಪ್ರಿಯರಾಗಿದ್ದಾರೆ. ಪ್ರೇಮ್ ಗಿರಿ ಮಹಾರಾಜ್ ಪ್ರತಿ ದಿನ ಹಿಂದೂ ಧರ್ಮದ ಆಚರಣೆ, ಪದ್ಧತಿಗನ್ನು ಅನುಸರಿಸುತ್ತಾರೆ. ಜೊತಗೆ ಪ್ರತಿ ದಿನ ವ್ಯಾಯಾಮ ಮಾಡಿ ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಟ್ಟಿದ್ದಾರೆ.

 

 

ಮಸ್ಕ್ಯುಲರ್ ಬಾಬಾರನ್ನು ಹಲವು ಭಕ್ತರು ಭೇಟಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಐತಿಹಾಸಿಕ ಮಹಾಕುಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದೆ ಭಾಗ್ಯ ಎಂದು ಪ್ರೇಮ್ ಗಿರಿ ಮಹಾರಾಜ್ ಹೇಳಿದ್ದಾರೆ. ಮಸ್ಕ್ಯುಲರ್ ಬಾಬಾ ಮೂಲ ರಷ್ಯ ಆದರೆ ಕಳೆದ ಕೆಲ ವರ್ಷಗಳಿಂದ ಬಾಬಾ ನೇಪಾಳದಲ್ಲಿ ನೆಲೆಸಿದ್ದಾರೆ. ನೇಪಾಳದ ತಪೋವನಗಳಲ್ಲಿ ಪ್ರತಿ ದಿನ ಆಧ್ಯಾತ್ಮ, ಧ್ಯಾನ, ಪೂಜೆಗಳ ಮೂಲಕ ಹಲವು ಅನುಯಾಯಿಗಳನ್ನು ಪಡೆದಿದ್ದಾರೆ.

ಮಹಾಕುಂಭ ಮೇಳೆ ಜನವರಿ 13ರಂದು ಆರಂಭಗೊಂಡಿದೆ. 45 ದಿನಗಳ ಕಾಲ ನಡೆಯಲಿರುವ ಈ ಮಹಾಕುಂಭ ಮೇಳೆ ಫೆಬ್ರವರಿ 26ರ ವರೆಗೆ ನಡೆಯಲಿದೆ. ಕೋಟ್ಯಾಂತರ ಭಕ್ತರು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ಒಟ್ಟು 40 ರಿಂದ 45 ಕೋಟಿ ಮಂದಿ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಮಹಾಕುಂಭದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್, ವಿಡಿಯೋ ಆಸಲಿಯತ್ತೇನು?

PREV
click me!

Recommended Stories

ಡಿಸೆಂಬರ್ 29 ಕ್ಕೆ ಬುಧ ಕೇತು ನಕ್ಷತ್ರದಲ್ಲಿ, ಹೊಸ ವರ್ಷದಲ್ಲಿ ಈ 3 ರಾಶಿಗೆ ಶ್ರೀಮಂತಿಕೆ
ನಾಳೆ ಡಿಸೆಂಬರ್ 23 ರಂದು ಆದಿತ್ಯ ಮಂಗಲ ಯೋಗ, 5 ರಾಶಿಗೆ ಅದೃಷ್ಟ, ಸಂಪತ್ತು