ಮನೆ, ವಾಸಕ್ಕೆ ಮಾತ್ರ ಸೀಮಿತವಲ್ಲ. ಮನೆ ಮನುಷ್ಯನ ಜೀವನ ಬದಲಿಸುವ ಶಕ್ತಿ ಹೊಂದಿದೆ. ಮನುಷ್ಯನ ಸಂತೋಷ, ದುಃಖ ಎಲ್ಲವೂ ಈ ಮನೆಯಲ್ಲಿರುತ್ತದೆ. ಜೀವನದ ಅತಿ ಹೆಚ್ಚು ಸಮಯ ಕಳೆಯುವ ಮನೆ ಖರೀದಿ ಮಾಡ್ವಾಗ ಸಾವಿರಾರು ಬಾರಿ ಆಲೋಚನೆ ಮಾಡ್ಬೇಕು.
ಮನುಷ್ಯನ ಅತಿ ದೊಡ್ಡ ಅಗತ್ಯವೆಂದರೆ ಆಹಾರ, ಬಟ್ಟೆ ಮತ್ತು ಮನೆ. ಆಹಾರ ಮತ್ತು ಬಟ್ಟೆಯ ಕೊರತೆಯನ್ನು ವ್ಯಕ್ತಿ ಸುಲಭವಾಗಿ ನೀಗಿಸಬಲ್ಲ. ಆದ್ರೆ ಸ್ವಂತ ಮನೆ ಕನಸು ಅಷ್ಟು ಸುಲಭವಾಗಿ ಈಡೇರೋದಿಲ್ಲ. ಮನೆ ಕಟ್ಟೋದು ಒಂದು ದೊಡ್ಡ ಸವಾಲು. ಇಡೀ ಜೀವನದ ದುಡಿಮೆಯನ್ನು ಮನೆ ನಿರ್ಮಾಣಕ್ಕೆಂದು ತೆಗೆದಿಡ್ತೇವೆ. ಸಾಲ ಮಾಡಿ ಮನೆ ನಿರ್ಮಾಣ ಮಾಡ್ತೇವೆ. ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವುದಕ್ಕಿಂತ ಕಟ್ಟಿದ ಮನೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಅಪಾರ್ಟ್ಮೆಂಟ್ ಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಜಾಗ ಸಿಗ್ತಿಲ್ಲ. ಹಾಗೆ ಅಪಾರ್ಟ್ಮೆಂಟ್ ಸೇಪ್ ಎನ್ನುವ ಕಾರಣಕ್ಕೆ ಜನರು ಅಪಾರ್ಟ್ಮೆಂಟ್ ನಲ್ಲಿ ಮನೆ ಖರೀದಿ ಮಾಡ್ತಾರೆ. ಒಳ್ಳೆ ಬಿಲ್ಡರ್ಸ್, ಒಳ್ಳೆ ಜಾಗ ಹಾಗೂ ಉತ್ತಮ ವ್ಯವಸ್ಥೆ ಇದೆ ಎನ್ನುವ ಕಾರಣಕ್ಕೆ ಅನೇಕರು ಕಣ್ಮುಚ್ಚಿ ಮನೆ ಖರೀದಿ ಮಾಡ್ತಾರೆ. ಆದ್ರೆ ಹೊಸ ಮನೆ ಪ್ರವೇಶ ಮಾಡ್ತಿದ್ದಂತೆ ಅನೇಕ ಸಮಸ್ಯೆಗಳು ಮೈಮೇಲೆ ಬರುತ್ತವೆ. ಒಂದಾದ್ಮೇಲೆ ಒಂದರಂತೆ ಸಮಸ್ಯೆ, ಅನಾರೋಗ್ಯ ಕಾಡಲು ಶುರುವಾಗುತ್ತದೆ. ಹೊಸ ಮನೆಯಲ್ಲಿ ಬಾಳು ಹಸನಾಗಬೇಕು ಎಂದಾದ್ರೆ ಮನೆ ಖರೀದಿ ಮಾಡುವಾಗ ಅನೇಕ ಸಂಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ವಾಸ್ತುವನ್ನು ಗಮನಿಸುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರದಲ್ಲಿ ಮನೆ ಹೇಗಿರಬೇಕು ಎಂಬುದನ್ನು ಹೇಳಲಾಗಿದೆ. ಯಾವ ರೀತಿ ಅಪಾರ್ಟ್ಮೆಂಟ್ ನಲ್ಲಿ ಮನೆ ಖರೀದಿ ಮಾಡ್ಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ವೃತ್ತಾಕಾರದ (Circular) ಪ್ಲಾಟ್ : ಮನೆ (House) ಕಟ್ಟಲು ವೃತ್ತಾಕಾರದ ಪ್ಲಾಟ್ ಸೂಕ್ತವಲ್ಲ. ವಾಸ್ತು (Vastu) ಶಾಸ್ತ್ರದ ಪ್ರಕಾರ, ಈ ಪ್ಲಾಟ್‌ನಲ್ಲಿ ಮನೆ ನಿರ್ಮಿಸುವುದರಿಂದ ಜನರ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಾಗುತ್ತವೆ. ಏಕೆಂದರೆ ಅದರ ಶಕ್ತಿ ಒಂದೇ ಕಡೆ ಕೇಂದ್ರೀಕೃತವಾಗಿರುತ್ತದೆ. ಅಂತಹ ಸ್ಥಳದಲ್ಲಿ ಮನೆ ಕಟ್ಟುವುದು ಮನೆಯಲ್ಲಿ ವಾಸಿಸುವುದು ಅಶುಭ. ವೃತ್ತಾಕಾರದ ಪ್ಲಾಟನ್ನು ವಾಣಿಜ್ಯಿಕವಾಗಿ ಬಳಸಬಹುದು. ಕಚೇರಿ ಸೇರಿದಂತೆ ಯಾವುದೇ ವ್ಯವಹಾರ ನಡೆಸಲು ಇಂಥ ಪ್ಲಾಟ್ ಬಳಕೆ ಮಾಡ್ಬಹುದು. ವಾಸಿಸಲು ಇಂತಹ ನಿವೇಶನದಲ್ಲಿ ನಿರ್ಮಿಸಿದ ಮನೆ ಸೂಕ್ತವಲ್ಲ. ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಇದು ಹಾಳು ಮಾಡುತ್ತದೆ.
ತ್ರಿಕೋನ ಪ್ಲಾಟ್ : ವಾಸ್ತು ಶಾಸ್ತ್ರದ ಪ್ರಕಾರ ತ್ರಿಕೋನಾಕಾರದ ಪ್ಲಾಟ್ ನಲ್ಲಿ ಮನೆ ಕಟ್ಟುವುದು ಕೂಡ ಮಂಗಳಕರವಲ್ಲ. ಅದರಲ್ಲಿ ವಾಸಿಸುವ ಜನರು ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಜಾಗದಲ್ಲಿ ಮನೆ ಕಟ್ಟುವುದರಿಂದ ಜನರಿಗೆ ಮಾನಸಿಕ ಒತ್ತಡ ಉಂಟಾಗುತ್ತದೆ. ಮನೆಯಲ್ಲಿ ವಾಸಿಸುವ ಜನರು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಮನೆಯಲ್ಲಿ ಯಾವುದೇ ಆರ್ಥಿಕ ಪ್ರಗತಿ ಸಾಧ್ಯವಿಲ್ಲ. ಮನೆಯಲ್ಲಿ ಬಡತನ ಯಾವಾಗ್ಲೂ ಇರುತ್ತದೆ. ತ್ರಿಕೋನವಿರುವ ಜಾಗದಲ್ಲಿ ಮನೆ ಕಟ್ಟುವುದರಿಂದ ಸಾಮಾಜಿಕ ಪ್ರತಿಷ್ಠೆ ಕಡಿಮೆಯಾಗುತ್ತದೆ. ಈ ಎಲ್ಲಾ ಸಮಸ್ಯೆ ಕಾಡಬಾರದು ಎಂದಾದ್ರೆ ತ್ರಿಕೋನದ ಜಾಗದಲ್ಲಿ ಎಂದೂ ಮನೆ ನಿರ್ಮಾಣ ಮಾಡಬೇಡಿ. ಹಾಗೆ ತ್ರಿಕೋನ ಜಾಗದಲ್ಲಿ ನಿರ್ಮಿಸಿದ ಮನೆಯಲ್ಲಿ ಎಂದೂ ವಾಸಿಸಬೇಡಿ.
ಇದನ್ನೂ ಓದಿ: ಚಾಣಕ್ಯ ನೀತಿ: ಇವರನ್ನು ಕಾಲಿನಿಂದ ಸ್ಪರ್ಶಿಸಿದ್ರೆ ದುರಾದೃಷ್ಟವಂತರು ನೀವಾಗ್ತೀರಿ
ಈ ಪ್ಲಾಟ್ ವಾಸಕ್ಕೆ ಯೋಗ್ಯ :
ಆಯತಾಕಾರದ ಪ್ಲಾಟ್ : ಆಯತಾಕಾರದ ಪ್ಲಾಟ್‌ಗಳು ಮುಂಭಾಗದಲ್ಲಿ ಒಂದೇ ಉದ್ದ ಮತ್ತು ಅಗಲವನ್ನು ಹೊಂದಿರುತ್ತವೆ ಮತ್ತು ಮೂಲೆಗಳು 90 ಡಿಗ್ರಿಗಳಾಗಿರುತ್ತವೆ. ಅಂತಹ ಜಾಗದಲ್ಲಿ ನಿರ್ಮಿಸಲಾದ ಪ್ಲಾಟ್‌ಗಳಲ್ಲಿ ವಾಸಿಸುವುದು ಮಂಗಳಕರ. ಇಂಥ ಜಾಗದಲ್ಲಿ ವಾಸ ಮಾಡುವುದ್ರಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ. ಆದಾಗ್ಯೂ, ಕಥಾವಸ್ತುವಿನ ಉದ್ದ ಮತ್ತು ಅಗಲದ ಅನುಪಾತವು ತುಂಬಾ ಅಸಮತೋಲಿತವಾಗಿರಬಾರದು. ಅಂದರೆ, ಉದ್ದ-ಅಗಲದ ಅನುಪಾತವು 2 : 1 ಕ್ಕಿಂತ ಹೆಚ್ಚಿರಬಾರದು. ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ: Best Quotes: ಬುದ್ಧ ಹೇಳುವುದನ್ನ ಫಾಲೋ ಮಾಡಿದರೆ ಲೈಫ್ ಬಿಂದಾಸ್!
ಚೌಕ ಆಕಾರದ ಪ್ಲಾಟ್ : ಚೌಕಾಕಾರದ ಪ್ಲಾಟ್ ಉದ್ದ ಮತ್ತು ಅಗಲ ಸಮಾನವಾಗಿರುತ್ತದೆ ಮತ್ತು ಮೂಲೆಗಳು ಲಂಬ ಕೋನವಾಗಿರುತ್ತದೆ. ಇದನ್ನು ಚೌಕಾಕಾರದ ಪ್ಲಾಟ್ ಎಂದು ಕರೆಯಲಾಗುತ್ತದೆ. ಅಂತಹ ಜಾಗದಲ್ಲಿ ನಿರ್ಮಿಸಲಾದ ಮನೆಯಲ್ಲಿ ವಾಸಿಸುವುದು ಒಳ್ಳೆಯದು. ಇಂಥ ಮನೆಯಲ್ಲಿ ವಾಸಿಸುವ ಜನರು ಮಾನಸಿಕ ಶಾಂತಿ ಮತ್ತು ಆರ್ಥಿಕ ಸಮೃದ್ಧಿಯನ್ನು ಪಡೆಯುತ್ತಾರೆ. ಇಡೀ ಕುಟುಂಬವು ಸಂತೋಷದಿಂದ ಕೂಡಿರುತ್ತದೆ.