ಭಕೂಟ ದೋಷವಿದ್ರೆ ಪತಿ-ಪತ್ನಿ ಸಂಬಂಧ ಅಷ್ಟಕ್ಕಷ್ಟೆ; ನಿವಾರಿಸ್ಕೊಳೊಕೆ ದಾರಿ ಇವೆ

By Suvarna News  |  First Published Apr 5, 2024, 4:26 PM IST

ಪತಿ-ಪತ್ನಿಯ ಜಾತಕಗಳಲ್ಲಿ ಭಕೂಟ ದೋಷವಿದ್ದರೆ ಸಂಬಂಧ ಚೆನ್ನಾಗಿರುವುದಿಲ್ಲ, ವೈವಾಹಿಕ ಅಡೆತಡೆಗಳು ನಿರಂತರವಾಗಿರುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಕೆಲವು ಕ್ರಿಯೆಗಳ ಮೂಲಕ ಭಕೂಟ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಪರಿಹಾರ ಸೂಚಿಸುತ್ತದೆ.
 


ಸಾಂಪ್ರದಾಯಿಕವಾಗಿ ಹಿರಿಯರು ನೋಡಿ ಮದುವೆ ಮಾಡುವ ಸನ್ನಿವೇಶದಲ್ಲಿ ಜಾತಕ ಅಥವಾ ಕುಂಡಲಿಗಳನ್ನು ಹೊಂದಾಣಿಕೆ ಮಾಡಿ ನೋಡುವುದು ಸಾಮಾನ್ಯವಾಗಿ ಬೆಳೆದುಕೊಂಡು ಬಂದಿರುವ ಪದ್ಧತಿ. ಹುಡುಗಿ ಮತ್ತು ಹುಡುಗನ ಜಾತಕಗಳಲ್ಲಿ ಅಷ್ಟಕೂಟ ಮಿಲನವನ್ನು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಭಕೂಟ ಕೂಟವನ್ನೂ ನೋಡಲಾಗುತ್ತದೆ. ಇದು ನಾಡಿ ಕೂಟದ ನಂತರ ಪರಿಗಣಿಸುವ ಪ್ರಮುಖ ಅಂಶವಾಗಿದೆ. ಭಕೂಟ ಕೂಟದಲ್ಲಿ ದೋಷಗಳಿದ್ದರೆ ಆ ಹುಡುಗ ಹುಡುಗಿಯ ಜಾತಕ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಭಕೂಟ ಎಂದರೆ ಸಂಸ್ಕೃತದ ಶಬ್ದವಾಗಿದ್ದು, ಚಂದ್ರನಿಗೆ ಸಂಬಂಧ ಪಟ್ಟಿದೆ. ವ್ಯಕ್ತಿಯ ಜಾತಕದಲ್ಲಿ ಚಂದ್ರನಿರುವ ಸ್ಥಾನವನ್ನು ಪರಿಗಣಿಸಿ ಹೊಂದಾಣಿಕೆ ಇದೆಯೆ ಇಲ್ಲವೇ ಎಂದು ನೋಡುವುದು ಇದರ ಉದ್ದೇಶ. ಇದು ಯಾವುದೇ ವ್ಯಕ್ತಿಯ ಭಾವನಾತ್ಮಕ, ಹಣಕಾಸು ಮತ್ತು ಒಟ್ಟಾರೆ ಪ್ರಗತಿಯನ್ನು ಸೂಚಿಸುತ್ತದೆ. ಹುಡುಗ ಮತ್ತು ಹುಡುಗಿಯ ಭಕೂಟಗಳು ಭಿನ್ನವಾಗಿರಬೇಕು. ಆಗ ವೈವಾಹಿಕ ಜೀವನದಲ್ಲಿ ಸಾಮರಸ್ಯ ಮತ್ತು ಸಂತಸಗಳು ತುಂಬಿರುತ್ತವೆ ಎಂದು ಹೇಳಲಾಗುತ್ತದೆ. ಒಂದೊಮ್ಮೆ ಭಕೂಟ ದೋಷವಿದ್ದಾಗ ಅಥವಾ ಚಂದ್ರ ಕೆಲವು ನಿರ್ದಿಷ್ಟ ಮನೆಗಳಲ್ಲಿ ಸ್ಥಿತನಾಗಿದ್ದಾಗ ವೈವಾಹಿಕ ಜೀವನ ಸುಖಮಯವಾಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಇಂತಹ ದೋಷಗಳ ಅರಿವಿಲ್ಲದೇ ಮದುವೆಯಾದ ಬಳಿಕ ಸಮಸ್ಯೆ ಎದುರಾಗಬಹುದು. ಆಗ ವೈವಾಹಿಕ ಜೀವನ ಕಷ್ಟಕರವಾಗಬಹುದು. 

ಒಂದೊಮ್ಮೆ ಭಕೂಟ (Bhakoot) ದೋಷವಿದ್ದರೂ (Dosha) ಪತಿ-ಪತ್ನಿ (Husband and Wife) ಸುಂದರ ಸಂಸಾರ ಹೊಂದಲು ಜ್ಯೋತಿಷ್ಯ ಶಾಸ್ತ್ರ ಕೆಲವು ರೀತಿಯ ಪರಿಹಾರಗಳನ್ನು (Remedies) ಸೂಚಿಸುತ್ತದೆ. ಹುಡುಗ-ಹುಡುಗಿಯ (Girl and Boy) ಜಾತಕದಲ್ಲಿ ಸಾಮಾನ್ಯವಾಗಿ 6-8, 9-5, 12-2ರ ಸ್ಥಾನಗಳಲ್ಲಿ ಚಂದ್ರ (Moon) ಸ್ಥಿತವಾಗಿದ್ದರೆ ವೈವಾಹಿಕ ಜೀವನ ಚೆನ್ನಾಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ದೋಷವನ್ನು ನಿವಾರಿಸಿಕೊಂಡು ಸುಖ ದಾಂಪತ್ಯ ಹೊಂದಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಸೂಚಿಸುತ್ತದೆ.

ಪ್ರೇಮ ಮತ್ತು ದಾಂಪತ್ಯದಲ್ಲಿ ಹೀಗೆ ಮಾಡಲೇಬೇಡಿ ಅನ್ನುತ್ತಾರೆ ಚಾಣಾಕ್ಯ

Tap to resize

Latest Videos

•    ಪೂಜೆ, ಆಚರಣೆ (Pujas, Rituals)
ಬ್ರಹ್ಮಾಂಡದ ಡಿವೈನ್ (Devine) ಶಕ್ತಿಯ ಆಶೀರ್ವಾದ ಪಡೆಯಲು ನಿರ್ದಿಷ್ಟ ಪೂಜೆ ಮತ್ತು ವಿವಿಧ ಪದ್ಧತಿಗಳನ್ನು ಅನುಸರಿಸುವ ಧರ್ಮಾಚರಣೆಗಳನ್ನು ಸೂಚಿಸಲಾಗುತ್ತದೆ. ಗ್ರಹದ (Planet) ಅಧಿಪತ್ಯ ಹೊಂದಿರುವ ದೇವತೆಗಳಿಗೆ ಪ್ರತಿದಿನ ಪ್ರಾರ್ಥನೆ ಸಲ್ಲಿಸುವುದರಿಂದ ಭಕೂಟ ದೋಷವಿದ್ದರೂ ಸಂಬಂಧದಲ್ಲಿ (Relation) ಧನಾತ್ಮಕತೆ ತಂದುಕೊಳ್ಳಲು ಸಾಧ್ಯ.

•    ಹರಳು ಧರಿಸುವುದು (Wear Gemstones)
ಪಚ್ಚೆ ಮತ್ತು ನೀಲಿ (Blue) ಹರಳುಗಳನ್ನು ಧರಿಸುವುದರಿಂದ ಸಂಗಾತಿಗಳು (Partners) ಪರಸ್ಪರ ಹೆಚ್ಚು ಅನುಕೂಲ ಹೊಂದಲು ಸಾಧ್ಯ. ಈ ಹರಳುಗಳು ಚಂದ್ರ ಗ್ರಹವನ್ನು ಪ್ರತಿನಿಧಿಸುತ್ತವೆ. ಇವುಗಳನ್ನು ಧರಿಸುವ ಮೂಲಕ ಪರಸ್ಪರ ಸಾಮರಸ್ಯ ಏರ್ಪಟ್ಟು ಭಕೂಟ ದೋಷದ ಕೆಟ್ಟ ಪರಿಣಾಮಗಳು ನಿವಾರಣೆಯಾಗುತ್ತವೆ. ವ್ಯಕ್ತಿಗೆ ಹೊಂದಾಣಿಕೆಯಾಗುವ ಹರಳುಗಳನ್ನು ಗುರುತಿಸಲು ಸರಿಯಾದ ಜ್ಯೋತಿಷ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಸಹ ಅಗತ್ಯ.

•    ಮಂತ್ರಗಳ ಉಚ್ಚಾರಣೆ (Chanting Mantras)
ಪ್ರತಿಯೊಂದು ರಾಶಿಗೂ ಅಧಿಪತ್ಯ ಹೊಂದಿರುವ ಗ್ರಹಗಳಿವೆ. ಆ ಗ್ರಹವನ್ನು ಆರಾಧಿಸುವ ಮಂತ್ರಗಳನ್ನು ದಿನವೂ ಹೇಳುವುದರಿಂದ ನೆಗೆಟಿವ್ (Negative) ಪರಿಣಾಮಗಳು ನಿವಾರಣೆಯಾಗುತ್ತವೆ. ಭಕ್ತಿಯಿಂದ ಇಂತಹ ಮಂತ್ರಗಳನ್ನು ದಿನವೂ ಪಠಿಸುವುದರಿಂದ ಸಂಬಂಧದಲ್ಲಿ ಶಾಂತಿ, ಸಮರಸ ನೆಲೆಸಲು ಅನುಕೂಲವಾಗುತ್ತದೆ.  

ಈ ರಾಶಿಯವರು ಅತೀ ಬುದ್ಧಿವಂತರು ತುಂಬಾ ಚತುರರು

•    ದಾನ (Charity)
ಚಾರಿಟಿ ಮತ್ತು ದಾನಧರ್ಮದ (Donations) ಕಾರ್ಯಗಳು ಹಲವಾರು ದೋಷಗಳನ್ನು ಪರಿಹರಿಸುತ್ತವೆ ಎನ್ನುವುದು ತಿಳಿದಿರುವ ಸಂಗತಿ. ಭಕೂಟ ದೋಷವು ಸಹ ಇಂತಹ ಕಾರ್ಯಗಳಿಂದ ತಿಳಿಯಾಗುತ್ತದೆ. ದಾನಧರ್ಮಗಳಿಗೆ ಭಕೂಟ ದೋಷದೊಂದಿಗೆ ಸಂಬಂಧ ಹೊಂದಿರುವ ಗ್ರಹವನ್ನು ಶಾಂತಗೊಳಿಸಲು  ಸಾಧ್ಯವಿದೆ. ನಿರ್ದಿಷ್ಟ ಗ್ರಹಗಳಿಗೆ ಮೀಸಲಾದ ಧಾನ್ಯ ಅಥವಾ ಇನ್ನಿತರ ಯಾವುದೇ ಆಹಾರ ವಸ್ತುಗಳನ್ನು ಅಗತ್ಯವುಳ್ಳವರಿಗೆ ದಾನ ಮಾಡುವುದರಿಂದ ಎನರ್ಜಿಗಳ ನಡುಗೆ ಸಮತೋಲನ ಏರ್ಪಟಲು ಸಾಧ್ಯವಾಗುತ್ತದೆ. ಸಂಬಂಧದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ. 

click me!