ಒಮಾನ್‌ನಲ್ಲಿ ಪುತ್ತಿಗೆ ಶ್ರೀಗಳ ಧರ್ಮಸಂವಾದ

By Kannadaprabha NewsFirst Published Mar 17, 2023, 10:08 AM IST
Highlights

ಹಲವು ಭಕ್ತರ ಮನೆಯಲ್ಲಿ ಶ್ರೀಕೃಷ್ಣನ ತೊಟ್ಟಿಲು ಸೇವೆ, ಹರಿವಾಣ ಸೇವೆಗಳನ್ನು ನಡೆಸುವ ಮೂಲಕ ವಿದೇಶದಲ್ಲೂ ಹಿಂದೂ ಸಂಸ್ಕೃತಿಯನ್ನು ಸಾರಿದರು. ಒಮಾನ್‌ನ ಬೇರೆ ಬೇರೆ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣನ ಪೂಜೆಯಲ್ಲಿ ಭಾಗಿಯಾಗಿ, ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ. 

ಒಮಾನ್‌(ಮಾ.17):  ಭಾರತದ ಧರ್ಮ, ಸಂಸ್ಕೃತಿಯ ಹಿರಿಮೆ, ಪ್ರೌಢಿಮೆಗಳನ್ನು ಸಾರಲು ವಿದೇಶಗಳಲ್ಲೂ ಧರ್ಮಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೊಲ್ಲಿ ರಾಷ್ಟ್ರ ಒಮಾನ್‌ಗೆ 9 ದಿನಗಳ ಪ್ರವಾಸ ಕೈಗೊಳ್ಳುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಮಾ.2ರಂದು ಒಮಾನ್‌ಗೆ ಪ್ರಯಾಣ ಕೈಗೊಂಡ ಸುಗುಣೇಂದ್ರ ತೀರ್ಥರು ಮಾ.11ರವರೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಹಲವು ಭಕ್ತರ ಮನೆಯಲ್ಲಿ ಶ್ರೀಕೃಷ್ಣನ ತೊಟ್ಟಿಲು ಸೇವೆ, ಹರಿವಾಣ ಸೇವೆಗಳನ್ನು ನಡೆಸುವ ಮೂಲಕ ವಿದೇಶದಲ್ಲೂ ಹಿಂದೂ ಸಂಸ್ಕೃತಿಯನ್ನು ಸಾರಿದರು. ಒಮಾನ್‌ನ ಬೇರೆ ಬೇರೆ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣನ ಪೂಜೆಯಲ್ಲಿ ಭಾಗಿಯಾಗಿ, ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು.

Pradosh Vrat March 2023: ರವಿ ಪ್ರದೋಷ ವ್ರತದಿಂದ ಆರೋಗ್ಯ, ಸಂತಾನ ಭಾಗ್ಯ

ಕೊನೆಯ ದಿನದ ಕಾರ್ಯಕ್ರಮದ ಬಳಿಕ ಮಾತನಾಡಿದ ಶ್ರೀಗಳು, ಉಡುಪಿಯ ಅಷ್ಟಮಠಗಳ ಇತಿಹಾಸದಲ್ಲಿ ಯಾವ ಶ್ರೀಗಳೂ ಸಮುದ್ರ ದಾಟಿ ವಿದೇಶಗಳಿಗೆ ಪ್ರಯಾಣಿಸಿಲ್ಲ. ಆದರೆ ಭಾರತದ ಧರ್ಮ, ಸಂಸ್ಕೃತಿಯನ್ನು ವಿದೇಶಗಳಲ್ಲೂ ಸಾರುವ ಸಲುವಾಗಿ ಅಮೆರಿಕ, ಕೆನಡಾ, ಲಂಡನ್‌, ಆಸ್ಪ್ರೇಲಿಯಾಗಳಲ್ಲೂ ಕೃಷ್ಣಮಠಗಳನ್ನು ಸ್ಥಾಪಿಸಿ, 48 ದೇಶಗಳಿಗೆ ತಾವು ಪ್ರಯಾಣ ಕೈಗೊಂಡಿರುವುದಾಗಿ ಹೇಳಿದರು.

click me!