ಜನಿವಾರ ಎಂದ ತಕ್ಷಣ ಉಪನಯನದ ನೆನಪಾಗುತ್ತದೆ. ಉಪನಯನ ಮಾಡಿದ ನಂತ್ರ ಜನಿವಾರ ಧರಿಸುವ ಪುರುಷರು ಕೆಲ ನಿಯಮ ಪಾಲನೆ ಮಾಡ್ತಾರೆ. ಈಗಿನ ಸಮಯದಲ್ಲಿ ಮಹಿಳೆಯರು ಕೂಡ ಜನಿವಾರ ಧರಿಸ್ತಿದ್ದಾರೆ. ಹಿಂದೂ ಧರ್ಮದಲ್ಲಿ ಇದ್ರ ಬಗ್ಗೆ ಏನಿದೆ ಗೊತ್ತಾ?
ಹಿಂದೂ ಧರ್ಮದಲ್ಲಿ ಜನಿವಾರ ಸಂಸ್ಕಾರ ಬಹಳ ಮುಖ್ಯವಾದ್ದಾಗಿದೆ. ಇದನ್ನು ಉಪನಯನ ಎಂದೂ ಕರೆಯುತ್ತಾರೆ. ಪುರುಷರಿಗೆ ಉಪನಯನ ಶಾಸ್ತ್ರವನ್ನು ಮಾಡಿ, ಜನಿವಾರ ಹಾಕಲಾಗುತ್ತದೆ. ಜನಿವಾರವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ನಂಬಲಾಗಿದೆ. ಈ ಪವಿತ್ರ ದಾರವನ್ನು ಮಹಿಳೆಯರು ಧರಿಸಬೇಕೆ, ಬೇಡ್ವೇ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಿದೆ. ಜನಿವಾರ ಮತ್ತು ಮಹಿಳೆಯರ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಕೆಲ ಮಹಿಳೆಯರು ಜನಿವಾರ ಧರಿಸಿದ್ರೆ ಏನಾಗುತ್ತೆ ಎಂದು ಪ್ರಶ್ನೆ ಮಾಡಿದ್ದಿದೆ. ಜನಿವಾರವನ್ನು ಮಹಿಳೆಯರು ಧರಿಸಬಾರದು ಎನ್ನುವುದು ಅನೇಕರಿಗೆ ತಿಳಿದಿದೆ. ಮಹಿಳೆಯರು ಕೂಡ ಜನಿವಾರವನ್ನು ಧರಿಸಬಹುದು. ಆದ್ರೆ ಎಲ್ಲ ಮಹಿಳೆಯರು ಜನಿವಾರ ಧರಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ನಾವಿಂದು ಮಹಿಳೆಯರು ಜನಿವಾರ ಧರಿಸಬೇಕಾ? ಬೇಡ್ವಾ ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಧಾರ್ಮಿಕ (Religious) ಗ್ರಂಥಗಳಲ್ಲಿ ಮಹಿಳೆ ಜನಿವಾರ (Janeu) ಧರಿಸೋದು ನಿಷೇಧ : ಹಿಂದೂ (Hindu) ಧರ್ಮದ ಎಲ್ಲಾ ಪುಸ್ತಕಗಳು ಅಥವಾ ಧರ್ಮಗ್ರಂಥಗಳಲ್ಲಿ ಮಹಿಳೆಯರಿಗೆ ಪವಿತ್ರ ಜನಿವಾರ ಧರಿಸುವುದನ್ನು ನಿಷೇಧಿಸಲಾಗಿದೆ . ಅದರ ಹಿಂದೆ ಮುಖ್ಯ ಕಾರಣವಿದೆ. ವಾಸ್ತವವಾಗಿ ಜನಿವಾರ ಸಂಸ್ಕಾರವನ್ನು ಉಪನಯನ (Upanayana)ದ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಜನಿವಾರ ಧರಿಸಿದವರು ಕೆಲ ನಿಯಮಗಳನ್ನು ಪಾಲನೆ ಮಾಡಬೇಕು. ಬೇಕು ಎಂದಾಗ ಅದನ್ನು ತೆಗೆಯುವ ಹಾಗೂ ಹಾಕುವ ನಿಯಮ ಕೂಡ ಇಲ್ಲ. ಜಾನಿವಾರ ಧರಿಸಿದವರು ಪಾಲಿಸಬೇಕಾದ ನಿಯಮಗಳನ್ನು ಎಲ್ಲ ಮಹಿಳೆ (Woman) ಯರು ಪಾಲಿಸಲು ಸಾಧ್ಯವಿಲ್ಲ. ಉದಾಹರಣೆಗೆ ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾದಾಗ, ಹೆರಿಗೆಯಾದಾಗ ಮಹಿಳೆ ಪರಿಶುದ್ಧವಾಗಿರುವುದಿಲ್ಲ. ಪರಿಶುದ್ಧ ಅಂದ್ರೆ ಬೇರೆ ಅರ್ಥವಿದೆ. ಮುಟ್ಟಿನ ಸಂದರ್ಭದಲ್ಲಿ ಅಥವಾ ಹೆರಿಗೆ (Childbirth) ಸಮಯದಲ್ಲಿ ಮಹಿಳೆಗೆ ಸರಿಯಾದ ಸಮಯಕ್ಕೆ ಸ್ನಾನ ಮಾಡಲಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಪೂಜೆ (Worship) ಮಾಡಲು ಸಾಧ್ಯವಾಗುವುದಿಲ್ಲ. ಸ್ನಾನ ಮಾಡಿ, ಪೂಜೆ ಮಾಡುವುದು ಜನಿವಾರ ಧರಿಸಿದವರು ಪಾಲಿಸಬೇಕಾದ ನಿಯಮ.
ಈ ಲಕ್ಷಣಗಳು ನಿಮ್ಮ ಮೇಷ ರಾಶಿಯ ಗೆಳೆಯನಲ್ಲಿದ್ದರೆ, ಆತ ನಿಮ್ಮ ಪ್ರೀತಿಯಲ್ಲಿದಾನೆ ಅಂತಲೇ ಅರ್ಥ!
ಅನಾರೋಗ್ಯ (Illness) ಹಾಗೂ ಮನೆ ಜವಾಬ್ದಾರಿಯಿಂದ ಇದನ್ನು ಸರಿಯಾಗಿ ಪಾಲಿಸಲು ಎಲ್ಲ ಮಹಿಳೆಯರಿಗೆ ಸಾಧ್ಯವಿಲ್ಲ. ಇದಲ್ಲದೇ ಜನಿವಾರ ಧರಿಸಿದ ನಂತರ ಪ್ರತಿ ಬಾರಿ ಮಲವಿಸರ್ಜನೆಗೆ ಹೋಗಿ ಬಂದ ನಂತ್ರ ಸ್ನಾನ ಮಾಡಬೇಕೆಂಬ ನಿಯಮವಿದೆ. ಇದೆಲ್ಲ ಮಹಿಳೆಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮಹಿಳೆ ಜನಿವಾರ ಧರಿಸಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಈ ಮಹಿಳೆ ಧರಿಸಬಹುದು ಜನಿವಾರ : ಮಹಿಳೆಯರು ಜನಿವಾರ ಧರಿಸುವುದನ್ನು ನಿಷೇಧಿಸಲಾಗಿದೆ ನಿಜ. ಆದಾಗ್ಯೂ, ಜನಿವಾರದ ನಿಯಮಗಳನ್ನು ಅನುಸರಿಸಬಹುದಾದ ಮಹಿಳೆಯರಿಗೆ ಜನಿವಾರ ಧರಿಸುವ ಅವಕಾಶವಿದೆ. ಮಹಿಳೆಯರು ಜಾನೆಯು ಧರಿಸುವುದನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಮಾತ್ರವಲ್ಲ ಕರ್ನಾಟಕ ಸೇರಿದಂತೆ ದೇಶದ ಕೆಲ ಜನಾಗಂದಲ್ಲಿ ಮಹಿಳೆಯರು ಜನಿವಾರ ಧರಿಸುತ್ತಾರೆ. ಹಾಗೆಯೇ ಅದನ್ನು ಧರಿಸಿದ ನಂತ್ರ ಪಾಲಿಸಬೇಕಾದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ.
ಕಿಚನ್‌ನಲ್ಲಿರೋ ಈ ಮಸಾಲೆ 2023ರಲ್ಲಿ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ
ಜನಿವಾರ ಧರಿಸುವುದ್ರಿಂದ ಆಗುವ ಲಾಭಗಳು : ಜನಿವಾರ ಕೇವಲ ಪವಿತ್ರ ದಾರ ಮಾತ್ರವಲ್ಲ. ಅದಕ್ಕೆ ಧಾರ್ಮಿಕ ಮಾನ್ಯತೆ ಮಾತ್ರವಿಲ್ಲ. ಇದನ್ನು ಆರೋಗ್ಯ ದೃಷ್ಟಿಯಿಂದಲೂ ನೋಡಲಾಗುತ್ತದೆ. ಜನಿವಾರ ಧರಿಸುವುದ್ರಿಂದ ಸ್ತ್ರೀಯರ ಮನಸ್ಸು ಶಾಂತವಾಗಿರುತ್ತದೆ. ಒತ್ತಡ ನಿವಾರಣೆಯಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ. ಮಹಿಳೆಯರೂ ಕೂಡ ಜನಿವಾರ ಧರಿಸಿದ ನಂತ್ರ ವಾತ, ಪಿತ್ತ ಮತ್ತು ಕಫದಂತ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ ಎನ್ನಲಾಗಿದೆ.
ಜನಿವಾರ ಧಾರಣೆ ಮಾಡುವುದ್ರಿಂದ ಹೃದಯ ಸಂಬಂಧಿ ಸಮಸ್ಯೆ ಕಡಿಮೆಯಾಗುತ್ತದೆ. ಉಳಿದ ವ್ಯಕ್ತಿಗಳಿಗಿಂತ ಜನಿವಾರ ಧರಿಸಿದ ಮಹಿಳೆಗೆ ಹೃದಯ ಖಾಯಿಲೆ ಹಾಗೂ ರಕ್ತದೊತ್ತಡ ಸಮಸ್ಯೆ ಕಡಿಮೆ ಎಂದು ಅಧ್ಯಯನಗಳಲ್ಲಿ ಹೇಳಲಾಗಿದೆ.