ಭಗವದ್ಗೀತೆಯನ್ನು ಪ್ರತಿ ದಿನವೂ ಓದುವುದರಿಂದ ಮಾನಸಿಕ ನೆಮ್ಮದಿ, ಜ್ಞಾನ ವೃದ್ಧಿ ಜತೆಗೆ ಮಾನಸಿಕ ನೆಮ್ಮದಿಗೆ ಪೂರಕವಾಗಿದೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
ಶೃಂಗೇರಿ (ಆ.10) : ಭಗವದ್ಗೀತೆಯನ್ನು ಪ್ರತಿ ದಿನವೂ ಓದುವುದರಿಂದ ಮಾನಸಿಕ ನೆಮ್ಮದಿ, ಜ್ಞಾನ ವೃದ್ಧಿ ಜತೆಗೆ ಮಾನಸಿಕ ನೆಮ್ಮದಿಗೆ ಪೂರಕವಾಗಿದೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾದಿಂದ ಶ್ರೀಮಠದ ಗುರುಭವನದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಜಗದ್ಗುರುಗಳ ಗುರುದರ್ಶನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಯಾವುದೇ ಶ್ರಮ, ಖರ್ಚಿಲ್ಲದೇ ದೊಡ್ಡ ಲಾಭ ನೀಡುವ ಭಗವದ್ಗೀತೆ ಪಠಣ ಇನ್ಮುಂದೆ ಎಷ್ಟುಸಾಧ್ಯವೋ ಅಷ್ಟುಮಾಡಬೇಕು. ಭಗವದ್ಗೀತೆಯಲ್ಲಿ 18 ಅಧ್ಯಾಯ ವಿದ್ದು, ಒಂದು ಅಧ್ಯಾಯವನ್ನಾದರೂ ಓದಬೇಕು. ಮತ್ತೆ ಮತ್ತೆ ಓದುವುದರಿಂದ ಅದು ಕಂಠಪಾಠವಾಗುವುದಲ್ಲದೇ, ಅದರಿಂದ ನೆಮ್ಮದಿ ದೊರಕುತ್ತದೆ. ಸುಖ ಬೇಕು ಎಂದು ಎಲ್ಲರೂ ಹಾತೊರೆಯುತ್ತಾರೆ. ದೊಡ್ಡ ಲಾಭ ನೀಡುವ ಗೀತೆಯನ್ನು ಸಮಯ ಹೊಂದಿಸಿಕೊಂಡು ಓದಬೇಕು. ಅದರಲ್ಲಿ ಭಗವಂತನ ಮಹಿಮೆ ವಿಸ್ತಾರವಾಗಿ ಹೇಳಲಾಗಿದೆ.
undefined
ಕಾಶ್ಮೀರದ ತೀತ್ವಾಲ್‌ಗೆ ಶೃಂಗೇರಿ ಶ್ರೀಗಳು: ಶಾರದಾಂಬೆಗೆ ವಿಧುಶೇಖರ ಸ್ವಾಮೀಜಿಯಿಂದ ವಿಶೇಷ ಪೂಜೆ
ನಮ್ಮಲ್ಲಿರುವ ಅಂತರಿಕ ಶತೃಗಳನ್ನು ಮೊದಲು ನಿಗ್ರಹಿಸಬೇಕು. ನಾವು ಗಟ್ಟಿಇದ್ದರೆ ಮಾತ್ರ ಹೊರಗಿನ ಶತೃ ನಿಗ್ರಹಿಸಬಹುದು. ಅಹಂಕಾರ ಮನುಷ್ಯನ ಶತೃ. ನಾವು ಪ್ರತಿ ದಿನವೂ ಉತ್ಸಾಹದಿಂದ ಇರಬೇಕು. ಯಾವುದೇ ಕೆಲಸ ಮಾಡಲು ಉತ್ಸಾಹ ಮುಖ್ಯ. ನಾವು ಮಾಡುವ ಕೆಲಸಕ್ಕೆ ನಿರೀಕ್ಷಿತ ಫಲ ದೊರಕದಿದ್ದರೂ, ಸಮಚಿತ್ತ ಕಾಪಾಡಿಕೊಳ್ಳಬೇಕು. ಫಲದ ಬಗ್ಗೆ ಚಿಂತಿ ಸದೆ, ಶ್ರದ್ಧೆಯಿಂದ ಕರ್ತವ್ಯ ಮಾಡಿದರೆ ಯಶಸ್ಸು ಖಚಿತ. ಹೆಬ್ಬಾರ ಸಮಾಜ ಬಂಧುಗಳು ಪ್ರತಿ ವರ್ಷ ಸಾಮೂಹಿಕವಾಗಿ ಬಂದು ಗುರುದರ್ಶನ ಮಾಡುತ್ತಿದ್ದು, ಶ್ರೀಮಠದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದರು.
ಜಗದ್ಗುರುಗಳ ಆದೇಶದಂತೆ ಕೋಟಿ ಶ್ರೀ ಗಾಯತ್ರಿ ಜಪದ ಮೂರನೇ ಆವೃತ್ತಿ ಚಾಲ್ತಿಯಲ್ಲಿದ್ದು, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ ಯಜ್ಞ ನಡೆಯುತ್ತಿದೆ. ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಯಜ್ಞ ಹಾಗೂ ಅಡಕೆ ಬೆಳೆಗಾರರ ಸಂಕಷ್ಟಪರಿಹಾರಕ್ಕೆ ಕೋಟಿ ಕುಂಕುಮಾರ್ಚನೆಯೂ ಸುಸೂತ್ರವಾಗಿ ನಡೆದಿದೆ ಎಂದರು.
ಡಿಕೆ ಶಿವಕುಮಾರ್ ಮನೆಗೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ!
ಇದೇ ಸಂದರ್ಭದಲ್ಲಿ ಸಮಾಜದಿಂದ ಫಲ ಸಮರ್ಪಣೆ, ಬಿಕ್ಷಾ ವಂದನೆ, ಪಾದಪೂಜೆ ನಡೆಸಲಾಯಿತು. ಶ್ರೀಮಠದ ಅನ್ನಸಂತರ್ಪಣೆ ನಿಧಿಗೆ 1.75 ಲಕ್ಷ ರು. ದೇಣಿಗೆಯನ್ನು ಅಡೇಕಂಡಿ ಲಕ್ಷ್ಮೀನಾರಾಯಣ ಕುಟುಂಬ ಹಾಗೂ ಶೆಟ್ಟಿಹಳ್ಳಿ ಸೂರ್ಯನಾರಾಯಣರಾವ್ ಕುಟುಂಬ ನೀಡಿದರು. ಸಮಾಜದ ಮುಖಂಡರಾದ ಗುಡ್ಡೇತೋಟ ಗೋಪಾಲಕೃಷ್ಣ, ಚರಣ್ ಹೆಬ್ಬಾರ್, ಶಿವಶಂಕರ್, ಕೀಳಂಬಿ ರಾಜೇಶ್, ಯಡಗೆರೆ ಗೋಪಾಲ್, ಹೆಬ್ಬಿಗೆ ಗಣೇಶ್, ರಾಜೇಶ್ ಮೊದಲಾದವರು ಇದ್ದರು.