ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ

By Suchethana D  |  First Published Dec 11, 2024, 1:06 PM IST

ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮದ ಜೊತೆ ಮಾತನಾಡಿರುವುದಾಗಿ ತಿಳಿಸಿರುವ ಡಾ.ರಾಮಚಂದ್ರ ಗುರೂಜಿ ಅವರು ಆ ಕುರಿತ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು?
 


ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಬದುಕಿದ್ದಾಗ ಇವರು ಮಾಡಿದ ಸಮಾಜಮುಖಿ ಕಾರ್ಯಗಳಿಗೆ ಲೆಕ್ಕವೇ ಇಲ್ಲ. ಹಲವರ ಪಾಲಿಗೆ ಬೆಳಕಾಗಿದ್ದ ಅಪ್ಪು, ಸಾವಿನಲ್ಲಿಯೂ ನಾಲ್ವರು ಅಂಧರ ಬಾಳಿಗೆ ಬೆಳಕಾಗಿ ಹೋದವರು. ಇವರ ನಿಧನದ ನಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು ಹಲವರು. ಅಪ್ಪು ಅವರ ಹಾದಿಯನ್ನೇ ಹಿಡಿಯುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಪುನೀತ್‌ ಅವರು ಹೃದಯಾಘಾತದಿಂದ ನಿಧನರಾದರೂ ಕೆಲವರು ಈ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಅವರ ಕೋಟ್ಯಂತರ ಅಭಿಮಾನಿಗಳು ಅಪ್ಪು ಮತ್ತೆ ಹುಟ್ಟಿ ಬನ್ನಿ ಎನ್ನುತ್ತಿದ್ದಾರೆ. 

ಹಾಗಿದ್ದರೆ ಅಪ್ಪು ಅವರು ನಿಜವಾಗಿಯೂ ಮೃತಪಟ್ಟಿದ್ದು ಹೇಗೆ? ಅವರು ಈಗ ಎಲ್ಲಿದ್ದಾರೆ? ಎಲ್ಲಾದರೂ ಪುನರ್ಜನ್ಮ ತಾಳಿದ್ದಾರಾ? ಪುನಃ ಹುಟ್ಟುವುದೇ ಆಗಿದ್ದರೆ ಎಲ್ಲಿ ಹುಟ್ಟುತ್ತಾರೆ...? ಹೀಗೆಲ್ಲಾ ಹಲವು ಪ್ರಶ್ನೆಗಳಿಗೆ ಡಾ.ರಾಮಚಂದ್ರ ಗುರೂಜಿ ಉತ್ತರಿಸಿದ್ದಾರೆ. ಅಪ್ಪು ಅವರು ಮೃತಪಟ್ಟ ಬಳಿಕ ಅವರ ಆತ್ಮದ ಜೊತೆ ತಾವು ಖಾಸಗಿಯಾಗಿ ಮಾತನಾಡಿರುವುದಾಗಿ ತಿಳಿಸಿರುವ ಗುರೂಜಿ ಅವರು ರಾಜೇಶ್‌ ಗೌಡ ಅವರ ಚಾನೆಲ್‌ ಜೊತೆಗಿನ ಮಾತುಕತೆಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

Tap to resize

Latest Videos

ಅಪ್ಪು ಬಣ್ಣ ಕಪ್ಪು ಎಂದವರಿಗೆ ಡಾ.ರಾಜ್‌ ಹೇಳಿದ್ದೇನು? ಕುತೂಹಲದ ಹಳೆಯ ವಿಡಿಯೋ ವೈರಲ್‌

'ಆತ್ಮಕ್ಕೆ ಎಂದಿಗೂ ಸಾವಿಲ್ಲ. ಅದೇ ರೀತಿ ನಾನು ಅಪ್ಪು ಆತ್ಮದ ಜೊತೆ ಅವರು ನಿಧನರಾದ ಹೊತ್ತಿಗೇ ಮಾತನಾಡಿದ್ದೇನೆ. ಅವರು ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದರಿಂದ, ಅವರ ಅಭಿಮಾನಿಗಳಲ್ಲಿ ಹಲವಾರು ಪ್ರಶ್ನೆಗಳು ಇದ್ದವು. ಆದ್ದರಿಂದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದ್ದುದರಿಂದ ಅವರ ಆತ್ಮದ ಜೊತೆಗಿನ ಸಂಭಾಷಣೆಯನ್ನು ನಾನು ಸಾರ್ವಜನಿಕಗೊಳಿಸಲಿಲ್ಲ. ಅವರ ಸಾವಿನ ಬಗ್ಗೆ ನನಗೆ ಖಾಸಗಿಯಾಗಿ ಕೆಲವು ಮಾಹಿತಿ ಬೇಕಿತ್ತು, ಅದಕ್ಕಾಗಿಯೇ ಆತ್ಮವನ್ನು ಕರೆಸಿ ಮಾತನಾಡಿದೆ' ಎಂದಿರುವ ಗುರೂಜಿ, ಅಪ್ಪು ಅವರ ಆತ್ಮ ಹೇಳಿದ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.  'ಅಪ್ಪು ಅವರ ಸಾವಿನ ಬಗ್ಗೆ ಹಲವಾರು ರೀತಿಯ ಸಂಶಯಗಳು ಇದ್ದುದರಿಂದ ನಿಜವಾಗಿ ಸಾವನ್ನಪ್ಪಿದ್ದು ಹೇಗೆ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು, ನಾನು ಸತ್ತಿರುವುದು ಹೃದಯದ ಸಮಸ್ಯೆಯಿಂದಲೇ, ಇದೇ ನಿಜ ಎಂದರು.  ದೇಹ ಬಿಟ್ಟು ಹೋದ ಮೇಲೆ ಈಗ ಎಲ್ಲಿದ್ದೀರಿ ಎಂದು ಪ್ರಶ್ನಿಸಿದೆ.  ಅದಕ್ಕೆ ಅವರು,  ನಾನು ಅಪ್ಪ- ಅಮ್ಮನ  ಹುಡುಕಾಟದಲ್ಲಿ ಇದ್ದೇನೆ ಎಂದರು. ಪುನಃ  ಹುಟ್ಟಿ ಬರುವಿರಾ ಎಂದು ಪ್ರಶ್ನಿಸಿದರು. ಅದಕ್ಕೆ ಅವರು, ಸದ್ಯ ಆ ಬಗ್ಗೆ ಆಲೋಚನೆ ಮಾಡಿಲ್ಲ. ಒಮ್ಮೆ ಹುಟ್ಟಿ ಬರುವುದೇ ಆದರೆ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ ಎಂದರು' ಎಂಬ ವಿಷಯವನ್ನು ರಾಮಚಂದ್ರ ಗುರೂಜಿ ಹಂಚಿಕೊಂಡಿದ್ದಾರೆ.  
 
ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಏಕೆ ಹೀಗಾಯ್ತು? ತುಂಬಾ ಒಳ್ಳೆಯವರಿಗೇ ಏಕೆ ಹೀಗೆ ಆಗುತ್ತದೆ ಎನ್ನುವ ಪ್ರಶ್ನೆಗೆ ಗುರೂಜಿ,  ಕೆಲವರು ಬದುಕಿದ್ದಾಗ ಸತ್ತಂತೆ ಇರುತ್ತಾರೆ. ಅವರಿಂದ ಯಾವುದೇ ಸಮಾಜ ಉಪಕಾರಿ ಕೆಲಸ ಆಗುವುದಿಲ್ಲ. ಆದರೆ ಕೆಲವರು ಸತ್ತ ಮೇಲೆ ಅಜರಾಮರ ಆಗುತ್ತಾರೆ. ಅವರ ಕಾರ್ಯಗಳಿಂದ ಅವರು ಗುರುತಿಸಲ್ಪಡುತ್ತಾರೆ. ಅಂಥ ಅಪರೂಪದ ವ್ಯಕ್ತಿ ಪುನೀತ್‌ ರಾಜ್‌ಕುಮಾರ್‌. ಅವರ ತಂದೆಗಿಂತಲೂ ಇವರಿಗೆ ಅಭಿಮಾನಿಗಳು ಹೆಚ್ಚು. ಅವರ ಕಾರ್ಯಗಳಿಂದ, ಅವರ ಸಮಾಜಮುಖಿ ಕೆಲಸಗಳಿಂದ ಅವರು ಅಜರಾಮರ ಆಗಿದ್ದಾರೆ. ಯಾವುದೇ ವ್ಯಕ್ತಿ ಸತ್ತಾಗ ಅವರ ಬಳಿ ಎಷ್ಟು ಕಾರುಗಳಿದ್ದವು, ಎಷ್ಟು ಸಿನಿಮಾಗಳಲ್ಲಿ ಆಕ್ಟ್‌ ಮಾಡಿದ್ದರು, ಎಷ್ಟು ಬಂಗಲೆ ಇದ್ದವು ಎಂಬುದೆಲ್ಲಾ ಲೆಕ್ಕಕ್ಕೆ ಬರುವುದಿಲ್ಲ. ಮಾಡಿರುವ ಸಾಮಾಜಿಕ ಕೆಲಸಗಳೇ ಕೊನೆಯವರೆಗೂ ಇರುತ್ತದೆ. ಅದಕ್ಕೆ ಅಪ್ಪು ಅವರೇ ಸಾಕ್ಷಿ ಎಂದಿದ್ದಾರೆ ಗುರೂಜಿ.  ಇಂಥ ಪುಣ್ಯವಂತರಿಗೆ ಸದ್ಗತಿ ಪ್ರಾಪ್ತವಾಗುತ್ತದೆ ಇಲ್ಲವೇ ಒಳ್ಳೆಯ ಜನ್ಮ ಪ್ರಾಪ್ತವಾಗುತ್ತದೆ ಎಂದಿದ್ದಾರೆ.  

undefined

ನೋಡಲು ಥೇಟ್‌ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್‌ ಟು ಸೇಮ್‌... ಅವನ ಮಾತು ಕೇಳಿ...

click me!