ರಾಮಾಯಣ; ರಾಮನಿಗೆ ಹೆಸರಿಟ್ಟಿದ್ದು ಯಾರು? ಊರ್ಮಿಳೆ ಏಕೆ 14 ವರ್ಷ ನಿದ್ರಿಸಿದಳು?

By Suvarna News  |  First Published Jan 22, 2024, 2:32 PM IST

ಇಂದು ಅಯೋಧ್ಯೆ ರಾಮಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭವು ಪ್ರಧಾನಮಂತ್ರಿ ನರೇಂದ್ರ ಮೋದಿ ಯಜಮಾನಿಕೆಯಲ್ಲಿ ಸಂಪನ್ನವಾಯಿತು. ಈ ಸಮಯದಲ್ಲಿ ರಾಮಾಯಣದ ಕೆಲ ವಿಶೇಷ ವಿಷಯಗಳು ನಿಮಗಾಗಿ..


ಇಂದು ಅಯೋಧ್ಯೆ ರಾಮಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭವು ಪ್ರಧಾನಮಂತ್ರಿ ನರೇಂದ್ರ ಮೋದಿ ಯಜಮಾನಿಕೆಯಲ್ಲಿ ಸಂಪನ್ನವಾಯಿತು. 7,000 ಅತಿಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿನೀವು ತಿಳಿದಿರಬೇಕಾದ ರಾಮಾಯಣದ ಕೆಲವು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.

ಭಗವಾನ್ ರಾಮ ಎಂದು ಹೆಸರಿಟ್ಟವರು ಯಾರು?
ಪ್ರಧಾನ ಅರ್ಚಕ ವಶಿಷ್ಠರು ದಶರಥನ ಹಿರಿಯ ಮಗನಿಗೆ ರಾಮ ಎಂದು ಹೆಸರಿಸಿದರು. ಕೈಕೇಯಿಯ ಮಗನಿಗೆ ಭರತ, ಸುಮಿತ್ರೆಯ ಲಕ್ಷ್ಮಣ ಮತ್ತು ಶತ್ರುಘ್ನ ಎಂದು ಹೆಸರಿಟ್ಟರು.

Tap to resize

Latest Videos

ರಾಮಾಯಣದ ಪ್ರಕಾರ, ಲಕ್ಷ್ಮಣ 14 ವರ್ಷಗಳ ಕಾಲ ನಿದ್ರೆ ಮಾಡಲಿಲ್ಲ!
ತನ್ನ ಹಿರಿಯ ಸಹೋದರ ರಾಮ ಮತ್ತು ಅತ್ತಿಗೆ ಸೀತೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಲಕ್ಷ್ಮಣನು ವನವಾಸದ ಉದ್ದಕ್ಕೂ ಎಚ್ಚರವಾಗಿರಲು ನಿರ್ಧರಿಸಿದನು. ಲಕ್ಷ್ಮಣನು ನಿದ್ರಾ ದೇವಿಯನ್ನು ಸಂಪರ್ಕಿಸಿ ಮುಂದಿನ 14 ವರ್ಷಗಳವರೆಗೆ ತನ್ನನ್ನು ಕಡೆಗಣಿಸುವಂತೆ ವಿನಂತಿಸಿದನು. ನಿದ್ರಾ ಒಪ್ಪಿಕೊಂಡಳು. ಆದರೆ ಸಮತೋಲನವನ್ನು ಉಳಿಸಿಕೊಳ್ಳಲು ಲಕ್ಷ್ಮಣನ ಪರವಾಗಿ ಬೇರೊಬ್ಬರು ಮಲಗಬೇಕು ಎಂದು ಹೇಳಿದಳು. ಹಾಗಾಗಿ, ಲಕ್ಷ್ಮಣನ ಪತ್ನಿ ಊರ್ಮಿಳಾ 14 ವರ್ಷ ನಿದ್ರಿಸಿಯೇ ಕಳೆದಳು.

ಅಯೋಧ್ಯೆ ರಾಮಮಂದಿರ ಗರ್ಭಗುಡಿಯಲ್ಲಿ ಪ್ರಧಾನಿ ಮೋದಿಯಿಂದ ಪ್ರಾಣಪ್ರತಿಷ್ ...

ಲಂಕಾದ ರಾಕ್ಷಸ ರಾಜ ರಾವಣನು ರಾಕ್ಷಸ ಕುಲದಲ್ಲಿ ಹುಟ್ಟಿಲ್ಲ!
ರಾವಣನು ಋಷಿ ಪುಲತ್ಸ್ಯರ ಕುಲ. ರಾವಣನು ಸೀತೆಯನ್ನು ಮದುವೆಯಾಗಲು ಮನವೊಲಿಸುವ ಪ್ರಯತ್ನದಲ್ಲಿ ತನ್ನ ಕುಲದ ಹೆಸರನ್ನು ಬಳಸಿದನು.

ಸೀತೆ ಈ ದೇವರ ಅವತಾರ
ಸೀತೆ ಅನಘಾ ಅವತಾರ ಎಂದು ನಂಬಲಾಗಿದೆ. ಇದು ಲಕ್ಷ್ಮಿ ದೇವತೆಯ ಮತ್ತೊಂದು ಹೆಸರು. 

ರಾಮಾಯಣ ಮಹಾಕಾವ್ಯದಲ್ಲಿ ಇಷ್ಟು ಅಧ್ಯಾಯಗಳಿವೆ..
ರಾಮಾಯಣದಲ್ಲಿ ಏಳು 'ಕಾಂಡ'ಗಳಿವೆ. ಬಾಲ ಕಾಂಡ(ಬಾಲ್ಯ), ಅಯೋಧ್ಯಾ ಕಾಂಡ, ಅರಣ್ಯ (ವನವಾಸ) ಕಾಂಡ, ಕಿಷ್ಕಿಂದಾ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡ, ಮತ್ತು ಉತ್ತರ ಕಾಂಡ.

ಕುಬೇರ ರಾವಣನ ಸೋದರ
ರಾವಣನಿಗೆ ಎಂಟು ಜನ ಒಡಹುಟ್ಟಿದವರಿದ್ದರು. ಅವರೆಂದರೆ ಕುಂಭಕರ್ಣ, ವಿಭೀಷಣ, ಖರ್, ಅಹಿರಾವಣ, ಕುಬೇರ, ದೂಷಣ, ಶೂರ್ಪನಖಾ ಮತ್ತು ಖುಂಬಿನಿ.

ಶ್ರೀರಾಮ ಪ್ರಸಾದ ಸ್ವೀಕರಿಸುವ ಮೂಲಕ ಪ್ರಾಣಪ್ರತಿಷ್ಠೆಗೆ ಕೈಗೊಂಡ ಉಪವಾಸ ...

ಜಟಾಯು ಯಾರು
ಸೀತೆಯನ್ನು ರಕ್ಷಿಸಲು ಪ್ರಯತ್ನಿಸುವ ರಣಹದ್ದಿನಂಥ ಪಕ್ಷಿ ಜಟಾಯು. ರಾಮಾಯಣದ ಪ್ರಸಿದ್ಧ ಪಕ್ಷಿಯನ್ನು ವಿಷ್ಣುವಿನ ವಾಹನ ಗರುಡನ ಸಂಬಂಧಿ ಎಂದು ಹೇಳಲಾಗುತ್ತದೆ.

ವಾಲ್ಮೀಕಿಯ ನಿಜಹೆಸರು
ವಾಲ್ಮೀಕಿಯನ್ನು ಹಿಂದೆ ದರೋಡೆಕೋರ ರತ್ನಾಕರ ಎಂದು ಕರೆಯಲಾಗುತ್ತಿತ್ತು. ದರೋಡೆ ಬಿಟ್ಟ ನಂತರ ಅವರು ವಾಲ್ಮೀಕಿ ಮಹರ್ಷಿಯಾದರು.

click me!