ಹಿರಿಯರು ಹೇಳಿದ್ದೆಲ್ಲಾ ಮೂಢನಂಬಿಕೆ ಅಲ್ಲ! ಈ 5 ಸಂಪ್ರದಾಯಗಳ ಹಿಂದಿನ ಸತ್ಯ ತಿಳಿದ್ರೆ ಅಚ್ಚರಿಯಾಗುತ್ತೆ

Published : Nov 17, 2026, 10:21 PM IST
Indian traditional beliefs

ಸಾರಾಂಶ

Indian traditional beliefs: ಹಿರಿಯರು ಹೇಳುವ ಕೆಲವು ಸಂಪ್ರದಾಯ, ಪದ್ಧತಿಗಳನ್ನು ನಾವು ಮೂಢನಂಬಿಕೆ ಎಂದು ಇಗ್ನೋರ್ ಮಾಡುತ್ತೇವೆ. ಆದರೆ, ಆ ನಂಬಿಕೆ ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ ಅನ್ನೋದು ಗೊತ್ತಾ? ಅದನ್ನು ತಿಳಿದ್ರೆ, ನೀವು ಯಾವತ್ತೂ ಹಿರಿಯರ ಮಾತನ್ನು ತಳ್ಳಿ ಹಾಕೋದಿಲ್ಲ.

ಹಿರಿಯರು ಹೇಳಿದ್ದೆಲ್ಲಾ ಮೂಢನಂಬಿಕೆಯೇ?

ಕೆಲವೊಮ್ಮೆ ನಮ್ಮ ಹಿರಿಯರು ರಾತ್ರಿ ಹೊತ್ತು ತಲೆ ಬಾಚಬೇಡಿ, ಉಪ್ಪನ್ನು ಕೈಯಲ್ಲಿ ಕೊಡಬೇಡಿ, ಸ್ಮಶಾನಕ್ಕೆ ಹೋಗಿ ಬಂದರೆ ಸ್ನಾನ ಮಾಡಿಯೇ ಒಳಗೆ ಬನ್ನಿ ಎಂದು ಹೇಳುವಾಗ, ಇವರಿನ್ನೂ ಯಾವ ಕಾಲದಲ್ಲಿದ್ದಾರೆ, ಇದೆಲ್ಲಾ ಮೂಢ ನಂಬಿಕೆ ಎಂದು ಇಗ್ನೋರ್ ಮಾಡುತ್ತೇವೆ. ಆದರೆ ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ತಿಳಿಸಿದ್ರೆ ನಿಮಗೆ ಅಚ್ಚರಿಯಾಗಬಹುದು.

ರಾತ್ರಿ ಹೊತ್ತು ಕೂದಲು ಬಾಚಬಾರದು ಯಾಕೆ?

ರಾತ್ರಿ ಹೊತ್ತು ಕೂದಲು ಬಾಚಿದರೆ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾಳೆ . ಈ ಮಾತನ್ನ ಈ ಹಿಂದೆ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಇದನ್ನ ನೀವು ಮೂಢನಂಬಿಕೆ ಅಂತಾನೂ ಹೇಳಿದ್ದೀರಿ. ಆದರೆ ಹಿಂದಿನ ಕಾಲದಲ್ಲಿ ವಿದ್ಯುತ್ ಇರಲಿಲ್ಲ. ಆ ಸಂದರ್ಭದಲ್ಲಿ ರಾತ್ರಿ ಕೂದಲು ಬಾಚಿದರೆ ಅದು ಆಹಾರಕ್ಕೆ ಅಥವಾ ನೀರಿಗೆ ಬಂದು ಬೀಳುವ ಸಾಧ್ಯತೆ ಇರುತ್ತಿತ್ತು. ಇದರಿಂದ ಆರೋಗ್ಯಕ್ಕೆ ಸಮಸ್ಯೆ ಉಂಟಾಗುವ ಸಾಧ್ಯತೆ ಕೂಡ ಇತ್ತು. ಅಷ್ಟೇ ಅಲ್ಲದೆ ರಾತ್ರಿ ಹೊತ್ತು ಕೂದಲಿನಲ್ಲಿ ಕೀಟಗಳು ಬಂದು ಕೂರುವ ಸಾಧ್ಯತೆಯೂ ಇರುವುದರಿಂದ, ರಾತ್ರಿ ಹೊತ್ತು ಕೂದಲು ಬಾಚಬಾರದು ಎಂದು ಹೇಳಲಾಗುತ್ತಿತ್ತು .

ಸ್ಮಶಾನದಿಂದ ಬಂದ ತಕ್ಷಣ ಸ್ನಾನ ಮಾಡಬೇಕು ಯಾಕೆ?

ಇನ್ನು ಎರಡನೆಯದಾಗಿ ಶವ ಸಂಸ್ಕಾರ ಮುಗಿಸಿ ಬಂದ ಬಳಿಕ ಧರಿಸಿದ ಸಮೇತ ಸ್ನಾನ ಮಾಡಬೇಕು, ಇಲ್ಲದಿದ್ದರೆ ಪ್ರೇತಾತ್ಮ ನಮ್ಮ ದೇಹಕ್ಕೆ ಅಂಟಿಕೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಇದರ ನಿಜವಾದ ಅರ್ಥ ಏನೆಂದರೆ ಹಿಂದಿನ ಕಾಲದಲ್ಲಿ ಕಾಲರ, ಪ್ಲೇಗ್ ಮೊದಲಾದ ಸಾಂಕ್ರಾಮಿಕ ರೋಗಗಳಿಂದ ಸಾವು ಸಂಭವಿಸುತ್ತಿತ್ತು. ಈ ಬ್ಯಾಕ್ಟೀರಿಯಗಳು ಬಟ್ಟೆಯ ಮೂಲಕ ಮನೆಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಯೂ ಇತ್ತು. ಹಾಗಾಗಿ ಸ್ಮಶಾನದಿಂದ ಬಂದ ಬಳಿಕ ಬಟ್ಟೆ ಸಮೇತ ಸ್ನಾನ ಮಾಡಬೇಕು ಎನ್ನುವ ನಂಬಿಕೆ ಹಿಂದಿನಿಂದಲೂ ಬಂದಿದೆ.

ರಾತ್ರಿ ಮರದ ಕೆಳಗೆ ಮಲಗಬಾರದು ಎನ್ನುವುದರ ಹಿಂದಿನ ಕಾರಣವೇನು?

ಇದಲ್ಲದೆ ರಾತ್ರಿ ಹೊತ್ತು ಅರಳಿ ಮರದ ಕೆಳಗೆ ಮಲಗಿಕೊಂಡರೆ ದೆವ್ವ ಭೂತವೂ ಬರುತ್ತದೆ, ದೆವ್ವವು ಕುತ್ತಿಗೆ ಹಿಡಿಯುತ್ತದೆ ಎನ್ನುವ ಮಾತನ್ನ ಹಲವರು ಹೇಳಿರುವುದನ್ನು ನೀವು ಕೇಳಿರುವಿರಿ. ಅರಳಿಮರ ಸೇರಿ ಎಲ್ಲಾ ಮರಗಳು ಬೆಳಗಿನ ಹೊತ್ತು ಆಮ್ಲಜನಕವನ್ನು ನೀಡಿದರೆ ರಾತ್ರಿ ಹೊತ್ತು ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತವೆ. ರಾತ್ರಿ ಹೊತ್ತು ಆ ಮರದ ಕೆಳಗೆ ಮಲಗಿದರೆ ಇಂಗಾಲದ ಡೈಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುವ ಕಾರಣ ಉಸಿರು ಕಟ್ಟಿದ ಅನುಭವ, ತಲೆತರುಗಿದ ಅನುಭವ ಉಂಟಾಗುತ್ತಿತ್ತು, ಹಾಗಾಗಿ ಅದನ್ನೇ ದೆವ್ವ ಭೂತಕ್ಕೆ ಹೋಲಿಕೆ ಮಾಡಲಾಗಿದೆ.

ನೆಲದ ಮೇಲೆ ಕುಳಿತು ಊಟ ಮಾಡುವ ಪದ್ಧತಿ ಯಾಕೆ?

ಇನ್ನು ನೆಲದ ಮೇಲೆ ಕುಳಿತುಕೊಂಡು ತಿಂದರೆ ಮಾತ್ರ ಅನ್ನಪೂರ್ಣೇಶ್ವರಿ ದೇವಿ ಒಲಿಯುತ್ತಾಳೆ, ಸೋಫಾದ ಮೇಲೆ ತಿನ್ನಬಾರದು ಇದರಿಂದ ತಾಯಿ ಕೋಪಗೊಳ್ಳುತ್ತಾಳೆ ಎನ್ನುತ್ತಿದ್ದರು. ಇದರ ನಿಜವಾದ ಹಿನ್ನೆಲೆ ಏನೆಂದರೆ ನಾವು ನೆಲದ ಮೇಲೆ ಸುಖಾಸನದಲ್ಲಿ ಕುಳಿತು ತಿಂದಾಗ ರಕ್ತ ಸಂಚಾರವು ಜೀರ್ಣಾಂಗದ ಕಡೆಗೆ ಹರಿದು ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಕೂಡ ಬರುವುದಿಲ್ಲ. ಆರೋಗ್ಯವು ಉತ್ತಮವಾಗಿರುತ್ತಿತ್ತು.

ಉಪ್ಪನ್ನು ನೆಲಕ್ಕೆ ಚೆಲ್ಲಬಾರದು, ಕೈಯಲ್ಲಿ ಕೊಡಬಾರದು ಯಾಕೆ?

ಉಪ್ಪು ನೆಲಕ್ಕೆ ಚೆಲ್ಲಿದರೆ ಸಾಲ ಹೆಚ್ಚುತ್ತದೆ, ಕೈಯಿಂದ ಕೈ ಕೊಟ್ಟರೆ ಜಗಳ ಹೆಚ್ಚಾಗುತ್ತದೆ ಎನ್ನುವ ಮಾತು ಇವತ್ತಿಗೂ ಚಾಲ್ತಿಯಲ್ಲಿದೆ. ಆದರೆ ಇದನ್ನ ಹಿಂದಿನ ಜನ ಯಾಕೆ ಹೇಳಿದ್ರು ಗೊತ್ತಾ. ಹಿಂದಿನ ಕಾಲದಲ್ಲಿ ಉಪ್ಪಿನ ಬೆಲೆ ಚಿನ್ನದಷ್ಟೇ ದುಬಾರಿಯಾಗಿತ್ತು ಹಾಗಾಗಿ ಅದು ಚೆಲ್ಲಿದರೆ ಎಷ್ಟು ಹಣ ವ್ಯರ್ಥವಾಗುತ್ತಿತ್ತು ಎನ್ನುವ ಕಾರಣಕ್ಕೆ, ಇನ್ನು ಕೈಯಿಂದ ಕೈಗೆ ಉಪ್ಪನ್ನ ಕೊಟ್ಟರೆ ಕೈಯ ಬಿಸಿಯಿಂದಾಗಿ ಉಪ್ಪು ಕರಗಿ ಹೋಗಬಹುದು ಅಥವಾ ಹಾಳಾಗಬಹುದು. ಇದರಿಂದ ಉಪ್ಪು ವ್ಯರ್ಥವಾಗಬಹುದು ಎನ್ನುವ ಕಾರಣಕ್ಕೆ ಅದನ್ನ ಕೈಯಲ್ಲಿ ಕೊಡಬಾರದು ಎನ್ನಲಾಗುತ್ತಿತ್ತು

PREV
Read more Articles on
click me!

Recommended Stories

ಪ್ರಮೋಷನ್, ದುಪ್ಪಟ್ಟು ಲಾಭ, ಪಿತ್ರಾರ್ಜಿತ ಆಸ್ತಿ.. ನವೆಂಬರ್ 22ರಿಂದ ಈ 6 ರಾಶಿಗಳಿಗೆ ಕುಬೇರ ಯೋಗದ ಭರ್ಜರಿ ಫಲ!
ಇಂದಿನ ಜಾತಕ (ನವೆಂಬರ್ 17): ಬ್ಯಾಂಕ್ ಕೆಲಸಗಳಲ್ಲಿ ಯಶಸ್ಸು, ಹೊಸ ಜನರ ಭೇಟಿ ಮತ್ತು ಆರ್ಥಿಕ ಲಾಭ