
ಗ್ರಹಗಳ ಸಂಯೋಜನೆಯು ರಾಶಿಚಕ್ರಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಜುಲೈ 2022ರಲ್ಲಿ ಗ್ರಹಗಳ ಸ್ಥಾನವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ವಾಸ್ತವವಾಗಿ, ಈ ಸಮಯದಲ್ಲಿ ಬುಧ-ಶುಕ್ರ ಸಂಯೋಗವು ವೃಷಭ ರಾಶಿಯಲ್ಲಿ ಶುಕ್ರನ ಚಿಹ್ನೆಯಲ್ಲಿ ರೂಪುಗೊಳ್ಳುತ್ತದೆ. ಅದೇ ಸಮಯದಲ್ಲಿ, 30 ವರ್ಷಗಳ ನಂತರ, ನ್ಯಾಯದ ದೇವರು ಶನಿ(Saturn)ಯು ತನ್ನ ಮೂಲ ತ್ರಿಕೋನ ರಾಶಿಚಕ್ರವಾದ ಕುಂಭದಲ್ಲಿ ಇರುತ್ತಾನೆ. ಶನಿ ಮತ್ತು ಬುಧ-ಶುಕ್ರರ ಈ ಸ್ಥಾನವು 4 ರಾಶಿಗಳಲ್ಲಿ ಶಶ, ಮಾಳವ್ಯ ಮುಂತಾದ ರಾಜಯೋಗವನ್ನು ಉಂಟು ಮಾಡುತ್ತಿದೆ.
ಶನಿ ಗ್ರಹವು ಲಗ್ನ ಭಾವದಿಂದ ಅಥವಾ ಚಂದ್ರ (Moon) ಭಾವದಿಂದ ಕೇಂದ್ರ ಸ್ಥಾನದಲ್ಲಿದ್ದರೆ ಅಂದರೆ ಶನಿಯು ಲಗ್ನದಿಂದ ಅಥವಾ ಚಂದ್ರನಿಂದ 1, 4, 7 ಅಥವಾ 10ನೇ ಸ್ಥಾನದಲ್ಲಿ ತುಲಾ, ಮಕರ ಅಥವಾ ಕುಂಭ ರಾಶಿಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕದಲ್ಲಿ ಶಶ ಯೋಗ ಉಂಟಾಗುತ್ತದೆ. ಇನ್ನು ಶುಕ್ರ ಗ್ರಹವು ವೃಷಭ, ತುಲಾ ಅಥವಾ ಮೀನದಲ್ಲಿ ಮತ್ತು ಲಗ್ನದಿಂದ 1, 4, 7 ಅಥವಾ 10 ನೇ ಮನೆಯಾದ ಕೇಂದ್ರದ ಮನೆಗಳಲ್ಲಿ ಒಂದನ್ನು ಇರಿಸಿದಾಗ ಮಾಳವ್ಯ ಯೋಗ(Malavya Yoga)ವು ರೂಪುಗೊಳ್ಳುತ್ತದೆ.
ಈ ಯೋಗಗಳು ಈ ರಾಶಿಗಳ ಅದೃಷ್ಟವನ್ನು ಬದಲಾಯಿಸುತ್ತವೆ. ಆ ಅದೃಷ್ಟದ ರಾಶಿಗಳು(Lucky zodiacs) ಯಾವುವು ಎಂದು ತಿಳಿಯೋಣ.
ವೃಷಭ ರಾಶಿ(Taurus)
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವೃಷಭ ರಾಶಿಯ ಜನರ ಲಗ್ನ ಮನೆಯಲ್ಲಿ ರಾಜಯೋಗವು ರೂಪುಗೊಳ್ಳುತ್ತಿದೆ. ಇದು ಅವರ ವೃತ್ತಿಜೀವನದ ದಿಕ್ಕನ್ನು ಬದಲಾಯಿಸಬಹುದು. ಅವರು ದೊಡ್ಡ ಹುದ್ದೆಯನ್ನು ಪಡೆಯಬಹುದು. ದೊಡ್ಡ ಸಂಬಳ ಮತ್ತು ಹುದ್ದೆಯೊಂದಿಗೆ ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಬಡ್ತಿ ಸಿಗುವ ಸಾಧ್ಯತೆಗಳೂ ಇವೆ. ಉದ್ಯಮಿಗಳಿಗೂ, ಈ ಸಮಯವು ಸಾಧನೆಗಳನ್ನು ಮಾಡಿಸುತ್ತದೆ. ಇದರೊಂದಿಗೆ ಈ ಬಾರಿ ವೃಷಭ ರಾಶಿಯವರ ಪ್ರತಿಷ್ಠೆಯೂ ಹೆಚ್ಚಲಿದೆ.
ಹತ್ತಿರದವರು ಕನಸಲ್ಲಿ ಬಂದ್ರೆ ಅಪಾಯ ಕಾದಿದೆ ಎಂದರ್ಥವೇ?
ಸಿಂಹ ರಾಶಿ(Leo)
ಬುಧ- ಶುಕ್ರ, ಶನಿಯ ಸ್ಥಾನವು ಸಿಂಹ ರಾಶಿಯಲ್ಲಿ 2 ರಾಜಯೋಗಗಳನ್ನು ಉಂಟು ಮಾಡುತ್ತಿದೆ. ಈ ಯೋಗವು ಈ ರಾಶಿಯವರಿಗೆ ಹಠಾತ್ತನೆ ಬಹಳಷ್ಟು ಹಣವನ್ನು ತರುತ್ತದೆ. ಪಾಲುದಾರಿಕೆಯಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ಬಯಸುವವರು ಉತ್ತಮ ಲಾಭ ಪಡೆಯುತ್ತಾರೆ. ವಿದೇಶಕ್ಕೆ ಹೋಗುವ ಕನಸು ಈಡೇರಲಿದೆ. ಈ ಸಮಯದಲ್ಲಿ ಮಾಡಿದ ಹೂಡಿಕೆಯು ದೊಡ್ಡ ಲಾಭವನ್ನು ನೀಡುತ್ತದೆ. ಆಸ್ತಿ ವಿಷಯದಲ್ಲಿ ಜಯವನ್ನು ಪಡೆಯಬಹುದು. ಹೊಸ ಮನೆ ಪ್ರವೇಶಿಸುವ ಯೋಗವಿದೆ. ಸ್ವಂತ ಆಸ್ತಿ ಹೆಚ್ಚಲಿದೆ.
ವೃಶ್ಚಿಕ ರಾಶಿ(Scorpio)
ಗ್ರಹಗಳ ಸ್ಥಾನವು ವೃಶ್ಚಿಕ ರಾಶಿಯ ಜನರ ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಅವರು ಹೊಸ ಕೆಲಸ, ಇನ್ಕ್ರಿಮೆಂಟ್ ಪಡೆಯಬಹುದು. ದೀರ್ಘ ಕಾಲದಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದವರು ದೊಡ್ಡ ಲಾಭವನ್ನು ಪಡೆಯುತ್ತಾರೆ, ಇದು ಪರಿಹಾರವನ್ನು ನೀಡುತ್ತದೆ. ನೀವು ಹೊಸ ಮನೆ- ಕಾರು ಖರೀದಿಸಬಹುದು. ಆರ್ಥಿಕವಾಗಿ ಸದೃಢರಾಗಲಿದ್ದೀರಿ.
ನವಗ್ರಹ ದೋಷ; ದಾನವಷ್ಟೇ ಅಲ್ಲ, ಸ್ನಾನದಲ್ಲೂ ಇದೆ ಪರಿಹಾರ!
ಕುಂಭ ರಾಶಿ(Aquarius)
ಕುಂಭ ರಾಶಿಯಲ್ಲಿ ರಚನೆಯಾಗುತ್ತಿರುವ 2 ರಾಜಯೋಗಗಳು ಈ ರಾಶಿಯವರ ಜೀವನವನ್ನು ಸುಖಮಯವಾಗಿಸುತ್ತದೆ. ಅವರು ಐಷಾರಾಮಿ ಜೀವನವನ್ನು ಆನಂದಿಸುವರು. ನೀವು ಮನೆ ಕಾರು ಖರೀದಿಸಬಹುದು. ಮನೆಯಲ್ಲಿ ಕೆಲವು ಮಂಗಳಕರ ಕೆಲಸಗಳಿರಬಹುದು ಅಥವಾ ನೀವು ಪ್ರವಾಸಕ್ಕೆ ಹೋಗಬಹುದು. ಹೊಸ ರೀತಿಯಲ್ಲಿ ಆದಾಯವಿರುತ್ತದೆ. ಕೆಲಸದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.