ಕುಂಭಮೇಳಕ್ಕೆ ಕೆಟ್ಟ ಹೆಸರು ತರಲು ಮತ್ತೊಂದು ರೀತಿಯ ವಿಕೃತಿ: ಮಹಿಳೆಯರ ಸ್ನಾನದ ವಿಡಿಯೋಗಳು ಸೇಲ್​!

Published : Feb 21, 2025, 07:26 PM ISTUpdated : Feb 22, 2025, 08:02 AM IST
ಕುಂಭಮೇಳಕ್ಕೆ ಕೆಟ್ಟ ಹೆಸರು ತರಲು ಮತ್ತೊಂದು ರೀತಿಯ ವಿಕೃತಿ: ಮಹಿಳೆಯರ ಸ್ನಾನದ ವಿಡಿಯೋಗಳು ಸೇಲ್​!

ಸಾರಾಂಶ

ಕುಂಭಮೇಳದಲ್ಲಿ ಮಹಿಳೆಯರ ಸ್ನಾನದ ವಿಡಿಯೋಗಳನ್ನು ಮಾರಾಟ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ವಿಡಿಯೋಗಳನ್ನು ಅಪ್‌ಲೋಡ್ ಅಥವಾ ಡೌನ್‌ಲೋಡ್ ಮಾಡಿದರೆ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಈಗಾಗಲೇ 17 ಜಾಲತಾಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಲು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ಕಾರ್ಯನಿರ್ವಹಿಸುತ್ತಿದೆ. ಪೊಲೀಸರು ಗಸ್ತು ತಿರುಗುತ್ತಿದ್ದು, ಭದ್ರತೆ ಹೆಚ್ಚಿಸಲಾಗಿದೆ.  

ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಇದಾಗಲೇ 55  ಕೋಟಿಗೂ ಅಧಿಕ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ಇನ್ನೂ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಇದೇ ವೇಳೆ ಕೆಲವು ಕಿಡಿಕೇಡಿಗಳು,  ಮಹಿಳೆಯರು ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿ ಅದನ್ನು ಮಾರಾಟ ಮಾಡುತ್ತಿರುವುದು ಆತಂಕ ಸೃಷ್ಟಿಸಿದೆ.  2-3 ಸಾವಿರಗಳಿಗೆ ಈ ವಿಡಿಯೋ ಮಾರಾಟ ಮಾಡುತ್ತಿದ್ದರೆ, ವಿಕೃತ ಮನಸ್ಥಿತಿಯವರು ಈ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಇಂಥ ವಿಡಿಯೋಗಳನ್ನು ಡೌನ್ ಲೋಡ್, ಅಥವಾ ಅಪ್ ಲೋಡ್ ಮಾಡಿದರೆ  ಬಂಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದಾಗಲೇ 17 ಜಾಲತಾಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. 
 
ಇದಾಗಲೇ ಹಲವಾರು ರೀತಿಯ ವಿಡಿಯೋ ವೈರಲ್​ ಆಗಗುತ್ತಿವೆ.  ಮಹಿಳೆಯರು ಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುವ ವಿಡಿಯೋಗಳನ್ನು ಶೂಟ್​ ಮಾಡಲಾಗುತ್ತಿದೆ. ಈ ವಿಕೃತ ಮನಸ್ಥಿತಿಯವರನ್ನು ಪತ್ತೆ ಹಚ್ಚುವಲ್ಲಿ  ಉತ್ತರ ಪ್ರದೇಶದ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡವು ಕಾರ್ಯನಿರತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. 

ಅಮ್ಮನನ್ನು ಮನೆಯಲ್ಲಿ ಕೂಡಿ ಹಾಕಿ, ಪಾಪ ತೊಳೆದುಕೊಳ್ಳಲು ಕುಂಭಮೇಳಕ್ಕೆ ಹೋದ ಪುತ್ರ! ಆಗಿದ್ದೇನು ನೋಡಿ...

ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ಈ ವಿಡಿಯೋ ಹಾಗೂ ಫೋಟೋಗಳನ್ನು ಪತ್ತೆಹಚ್ಚಿದ್ದು, ಕೊತ್ವಾಲಿ ಕುಂಭಮೇಳ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಾಗಲೇ ಹಲವಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರೂ ಪುಣ್ಯಸ್ನಾನ ಮಾಡುತ್ತಿದ್ದು, ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.  ಇಲ್ಲಿ ಪುಣ್ಯಸ್ನಾನ ಮಾಡಲು ಬರುವ ನಿಜವಾದ ಭಕ್ತಾದಿಗಳಿಗೆ ಇವುಗಳ ಅರಿವೇ ಇರುವುದಿಲ್ಲ. ಎಲ್ಲರೂ ಒಟ್ಟಾಗಿಯೇ ಸ್ನಾನ ಮಾಡಿದರೂ, ಇಂಥ ಕೆಟ್ಟ ಕಾಮುಕ ಭಾವನೆಗಳಿಗೆ ಇಲ್ಲಿ ಆಸ್ಪದವೇ ಇಲ್ಲ. ಆದರೆ ಇದಕ್ಕಾಗಿಯೇ ಕೆಲವು ವಿಕೃತ ಮನಸ್ಥಿತಿಗಳು ಬಂದು ಕುಂಭಮೇಳದ ಹೆಸರನ್ನು ಕೆಡಿಸಲು ಮುಂದಾಗಿದೆ. ಇದಾಗಲೇ ಕುಂಭಮೇಳಕ್ಕೆ ಜನರು ಬರದಂತೆ ತಡೆಯಲು ಹಲವಾರು ರೀತಿಯಲ್ಲಿ ಕುಕೃತ್ಯಗಳನ್ನು ಎಸಲಾಗಿದೆ. ಆದರೆ ಯೋಗಿ ಆದಿತ್ಯನಾಥ ಸರ್ಕಾರ ಒದಗಿಸಿರುವ ಕಟ್ಟುನಿಟ್ಟಿನ ಸೆಕ್ಯುರಿಟಿಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ.

ಜನರಲ್ಲಿ ಭಯ ಹುಟ್ಟಿಸುವ ಕಾರ್ಯ ಯಶಸ್ಸು ಕಾಣುತ್ತಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ವಿಕೃತಿ ಮೆರೆಯಲಾಗುತ್ತಿದೆ. ಇದೇ 17ರಂದು ಮಹಿಳಾ ಯಾತ್ರಿಕರ ಅನುಚಿತ ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿತ್ತು. ಇವರ ವಿರುದ್ಧ ಇದಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ.  ಇನ್‌ಸ್ಟಾಗ್ರಾಮ್ ಖಾತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ತಪ್ಪಿಕಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ.  ಖಾತೆ ನಿರ್ವಾಹಕರನ್ನು ಗುರುತಿಸಲು ಇನ್‌ಸ್ಟಾಗ್ರಾಮ್ ಅನ್ನು ಹೊಂದಿರುವ ಮತ್ತು ನಿರ್ವಹಿಸುವ ತಂತ್ರಜ್ಞಾನ ಸಮೂಹವಾದ ಮೆಟಾದಿಂದ ಮಾಹಿತಿ ಕೋರಲಾಗಿದೆ. ವಿವರಗಳನ್ನು ಸ್ವೀಕರಿಸಿದ ನಂತರ ಬಂಧನ ಸೇರಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ  ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸರ ತಂಡಗಳು ಬೋಟ್‌ಗಳ ಮೂಲಕ ನಿರಂತರವಾಗಿ ಗಂಗಾನದಿಯಲ್ಲಿ ಗಸ್ತು ಹೊಡೆಯುತ್ತಿವೆ. ಯಾವುದೇ ಅಘಾತಕಾರಿ ಘಟನೆ ಸಂಭವಿಸಿದರೂ ಕೂಡ ತಕ್ಷಣ ಕಾರ್ಯಪ್ರವೃತ್ತರಾಗಲು ಸಜ್ಜಾಗಿದ್ದಾರೆ.
 

ಕುಂಭಮೇಳದಲ್ಲಿ ಕಾಲ್ತುಳಿತಕ್ಕೊಳಗಾದವರು ಯಾರೂ ಸತ್ತಿಲ್ಲ... ಅವರಿಗೆ... ಬಾಬಾ ಬಾಗೇಶ್ವರ್​ ಸ್ಫೋಟಕ ಹೇಳಿಕೆ

PREV
click me!

Recommended Stories

ಸಾಲ, ಬಡತನ ಸಾಕಾಗಿದೆ ಅನ್ನೋರು ಹೊಸ ವರ್ಷದ ಮೊದಲಿಂದ್ಲೇ ಈ ಅಭ್ಯಾಸ ಬಿಟ್ಬಿಡಿ
2026 ರಲ್ಲಿ ಹಂಸ-ಮಾಳವ್ಯ ಡಬಲ್ ರಾಜಯೋಗ, ಈ ರಾಶಿ ಹಣದ ಪೆಟ್ಟಿಗೆ ಪಕ್ಕಾ ಫುಲ್