ಶ್ರಾದ್ಧದ ತಟ್ಟೆಯಲ್ಲಿ ಈ ತರಕಾರಿ - ಮಸಾಲೆ ಅಪ್ಪಿತಪ್ಪಿಯೂ ಸೇರಿಸ್ಬೇಡಿ, ಪೂರ್ವಜರ ಕೋಪಕ್ಕೆ ಗುರಿಯಾಗ್ತೀರಿ ಎಚ್ಚರ

Published : Sep 28, 2026, 08:39 PM IST
Pitru Paksha Shraddha

ಸಾರಾಂಶ

ಪಿತೃಪಕ್ಷ ನಡೆಯುತ್ತಿದೆ. ಜನರು ತಮ್ಮ ಪೂರ್ವಜರ ಆತ್ಮಕ್ಕೆ ಶಾಂತಿಕೋರಿ, ಶ್ರಾದ್ಧ, ತರ್ಪಣ ಬಿಡುವ ಕೆಲ್ಸ ಮಾಡ್ತಿದ್ದಾರೆ. ಶ್ರಾದ್ಧದ ಸಮಯದಲ್ಲಿ ಕೆಲ ಆಹಾರವನ್ನು ತಯಾರಿಸಬಾರದು. ಅದು ಯಾವ್ದು ಗೊತ್ತಾ?

ಹಿಂದೂ ಧರ್ಮದಲ್ಲಿ ವರ್ಷದಲ್ಲಿ 16 ದಿನ ನಡೆಯುವ ಪಿತೃಪಕ್ಷ ನಡೆಯುತ್ತಿದೆ. ಸೆಪ್ಟೆಂಬರ್‌ 26 ರಿಂದ ಪಿತೃಪಕ್ಷ ಶುರುವಾಗಿದ್ದು, ಅಕ್ಟೋಬರ್ 10ರವರೆಗೆ ಪಿತೃಪಕ್ಷ ಇರಲಿದೆ. ಈ 16 ದಿನಗಳಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಿಂಡಪ್ರದಾನ, ತರ್ಪಣ ಮತ್ತು ಶ್ರಾದ್ಧ ಕಾರ್ಯಗಳನ್ನು ಮಾಡಲಾಗುತ್ತದೆ. ಶ್ರಾದ್ಧದಲ್ಲಿ ಯಾವ ಆಹಾರವನ್ನು ಹಿರಿಯರಿಗೆ ನೀಡಬಾರದು ಎನ್ನುವ ಮಾಹಿತಿ ಇಲ್ಲಿದೆ.

ಶ್ರಾದ್ಧದ ಊಟದಲ್ಲಿ ಸಾತ್ವಿಕ ಆಹಾರ

ಪಿತೃಪಕ್ಷದ ಮುಖ್ಯ ಉದ್ದೇಶ ಪೂರ್ವಜರನ್ನು ತೃಪ್ತಿಪಡಿಸುವುದು. ಅದಕ್ಕಾಗಿ ತಯಾರಿಸುವ ಆಹಾರ ಸರಳ, ಸಾತ್ವಿಕ ಮತ್ತು ಶುದ್ಧವಾಗಿರಬೇಕು ಎಂಬ ನಂಬಿಕೆಯಿದೆ. ಶ್ರಾದ್ಧದ ಊಟದಲ್ಲಿ ಕೆಲವು ತರಕಾರಿ, ಮಸಾಲೆ ಮತ್ತು ಬೇಳೆಗಳನ್ನು ಬಳಸಬಾರದು. ಅಡುಗೆ ಮಾಡುವಾಗಲೂ ಶ್ರದ್ಧೆ ಮತ್ತು ಪವಿತ್ರತೆಯ ಭಾವನೆ ಇರಬೇಕು. ವ್ರತ ಅಥವಾ ಶ್ರಾದ್ಧದ ಆಚರಣೆಗಳನ್ನು ಅನುಸರಿಸುವವರು ತಮ್ಮ ಕುಟುಂಬದ ಸಂಪ್ರದಾಯದ ಪ್ರಕಾರ ಆಹಾರವನ್ನು ತಯಾರಿಸುತ್ತಾರೆ.

ಶ್ರಾದ್ಧದ ಊಟದಲ್ಲಿ ಯಾವ ತರಕಾರಿಗಳನ್ನು ಬಳಸಬಾರದು?

ಕೆಲವು ಸಂಪ್ರದಾಯಗಳ ಪ್ರಕಾರ, ಪಿತೃಪಕ್ಷದ ಊಟದಲ್ಲಿ ಕೆಲವು ತರಕಾರಿಗಳನ್ನು ಬಳಸುವುದಿಲ್ಲ. ವಿಶೇಷವಾಗಿ ನೆಲದೊಳಗೆ ಬೆಳೆಯುವ ಕೆಲವು ತರಕಾರಿಗಳನ್ನು ತಪ್ಪಿಸಲಾಗುತ್ತದೆ. ನೆಲದೊಳಗೆ ಬೆಳೆಯುವ ತರಕಾರಿಗಳಾದ ಆಲೂಗಡ್ಡೆ, ಮೂಲಂಗಿ, ಕ್ಯಾರೆಟ್, ಬೀಟ್ರೂಟ್ ಮತ್ತು ಕೇಸುವಿನ ಗೆಡ್ಡೆ ಮುಂತಾದವುಗಳನ್ನು ಶ್ರಾದ್ಧದ ಊಟದಲ್ಲಿ ಬಳಸಬಾರದು ಎನ್ನಲಾಗುತ್ತದೆ. ಇದಲ್ಲದೆ ಬದನೆಕಾಯಿ, ಹಲಸು, ಎಲೆಕೋಸು ಮತ್ತು ಕಪ್ಪು ಕಡಲೆ ಮುಂತಾದವುಗಳನ್ನೂ ಈ ಸಂದರ್ಭದಲ್ಲಿ ಬಳಸುವುದಿಲ್ಲ.

ಶ್ರಾದ್ಧದ ಊಟದಲ್ಲಿ ಈ ಮಸಾಲೆ ಬಳಸಬಾರದು

ಶ್ರಾದ್ಧದ ಊಟದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಇದರ ಜೊತೆಗೆ ಕೆಂಪು ಮೆಣಸಿನಕಾಯಿ, ಕಪ್ಪು ಉಪ್ಪು ಮತ್ತು ಸಾಸಿವೆ ಬಳಸಬಾರದು. ಕೆಂಪು ಮೆಣಸಿನಕಾಯಿಗೆ ಬದಲಾಗಿ ಕಾಳುಮೆಣಸು ಹಾಗೂ ಸಾಮಾನ್ಯ ಉಪ್ಪಿನ ಬದಲಾಗಿ ಕಲ್ಲುಪ್ಪು ಬಳಸಬಹುದು.

ಈ ಬೇಳೆ ಬಳಸೋದಿಲ್ಲ

ಪಿತೃಪಕ್ಷದ ಸಂದರ್ಭದಲ್ಲಿ ಕೆಂಪು ಬೇಳೆ, ಕಡಲೆ ಬೇಳೆ, ಹುರುಳಿ ಬೇಳೆ ಮತ್ತು ರಾಜ್ಮಾ ಬಳಸಬಾರದು ಎಂಬ ನಂಬಿಕೆಯಿದೆ. ಇವುಗಳ ಬದಲಿಗೆ ಹೆಸರು ಬೇಳೆ ಅಥವಾ ಉದ್ದಿನ ಬೇಳೆಯನ್ನು ಬಳಸುವುದು ಸೂಕ್ತ. ಅದರಲ್ಲೂ ಉದ್ದಿನ ಬೇಳೆಯಿಂದ ತಯಾರಿಸುವ ವಡೆಗಳು ಪೂರ್ವಜರಿಗೆ ವಿಶೇಷವಾಗಿ ಇಷ್ಟ ಎಂಬ ನಂಬಿಕೆ ಇದೆ.

ಕುಟುಂಬದ ಸಂಪ್ರದಾಯ

ಪಿತೃಪಕ್ಷದಲ್ಲಿ ಶ್ರಾದ್ಧದ ಊಟವನ್ನು ತಯಾರಿಸುವಾಗ ಶುದ್ಧತೆ, ಸರಳತೆ ಮತ್ತು ಶ್ರದ್ಧೆಗೆ ಮಹತ್ವ ನೀಡಲಾಗುತ್ತದೆ. ಆದರೆ ಆಹಾರಕ್ಕೆ ಸಂಬಂಧಿಸಿದ ನಿಯಮಗಳು ಕುಟುಂಬದ ಸಂಪ್ರದಾಯ ಮತ್ತು ಆಚರಣೆಗೆ ಅನುಗುಣವಾಗಿ ಬದಲಾಗಬಹುದು. ಅದನ್ನು ಗಮನದಲ್ಲಿಟ್ಟುಕೊಂಡು ನೀವು ಶ್ರಾದ್ಧದ ಅಡುಗೆ ಮಾಡುವುದು ಬಹಳ ಮುಖ್ಯ.

PREV
Read more Articles on
click me!

Recommended Stories

ಶುಕ್ರನ ಉದಯದ ಬಳಿಕ ಈ 4 ರಾಶಿಗಳಿಗೆ ಶುಭದಿನಗಳು; ಹಣದ ಜೊತೆ ಉದ್ಯೋಗ-ವ್ಯವಹಾರದಲ್ಲೂ ಲಾಭ!
Pitru Paksha 2026: ಈ ಐದು ಜಾಗಗಳಲ್ಲಿ ಪಿಂಡದಾನ ಮಾಡಿದ್ರೆ, ಪಿತೃಗಳಿಗೆ ಸಿಗುತ್ತೆ ಮೋಕ್ಷ