ಮನೆಯಲ್ಲಿರುವ ಹಿರಿಯರನ್ನು ಕಾಳಜಿ ಮಾಡುವುದು, ಅವರನ್ನು ಶ್ರದ್ಧೆಯಿಂದ ಆರೈಕೆ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅವರ ಕೆಲಸ ಅವರು ಮಾಡಿಕೊಳ್ಳಲಿ ಎಂದು ಬಿಟ್ಟುಬಿಡುವವರೇ ಹೆಚ್ಚು. ಆದರೆ, ಕೆಲವು ರಾಶಿಗಳ ಜನ ಇದರಲ್ಲಿ ಮುಂದಿರುತ್ತಾರೆ. ಹಿರಿಯರ ಆರೈಕೆ ಮಾಡುವುದು ಇವರಿಗೆ ಭಾರೀ ನೆಮ್ಮದಿ ನೀಡುವ ಕಾರ್ಯವಾಗಿರುತ್ತದೆ.
ಹಿರಿಯರಿಗೆ ಕಾಳಜಿಯ ಅಗತ್ಯವಿರುತ್ತದೆ, ಕೆಲ ಜನ ಅದಕ್ಕೆ ಮುಕ್ತ ಮನಸ್ಸಿನಿಂದ ಸಿದ್ಧವಿರುತ್ತಾರೆ. ಹಿರಿಯರಿಗೆ ಕಂಫರ್ಟ್ ಫೀಲ್ ಮಾಡಲು ಅವರು ಎಂದಿಗೂ ಕೆಲಸ ಮಾಡುತ್ತಾರೆ. ಅಂತಹ ಜನ ಸಾಮಾನ್ಯವಾಗಿ ನಾಲ್ಕು ರಾಶಿಗಳಲ್ಲಿ ಕಂಡುಬರುತ್ತಾರೆ. ಪರೋಪಕಾರ ಬುದ್ಧಿ ಎಲ್ಲರಲ್ಲೂ ಕಂಡುಬರುವುದಿಲ್ಲ. ಪರರಿಗೆ ಸಹಾಯ ನೀಡುವ ಮನೋಭಾವ ಹೊಂದಿದವರನ್ನು ನೀವು ನೋಡಿರಬಹುದು. ಬೀದಿ ಪ್ರಾಣಿಗಳ ಕುರಿತು ಕಾಳಜಿ ವಹಿಸುವವರು, ಸೂರಿಲ್ಲದವರಿಗೆ ಸಹಾಯ ನೀಡುವವರು, ಕಷ್ಟದಲ್ಲಿರುವವರಿಗೆ ಕೈಲಾದ ಸಹಕಾರ ನೀಡುವ ಮೂಲಕ ದಯಾಳು ಬುದ್ಧಿಯನ್ನು ಹಲವರು ಪ್ರದರ್ಶಿಸುತ್ತಾರೆ. ಅನೇಕ ಜನರಿಗೆ ಇದು ವಿಚಿತ್ರ ಎನಿಸಬಹುದಾದರೂ ಇವರಿಗೆ ಮಾತ್ರ ಇದು ಮನಸಾರೆ ಇಷ್ಟಪಟ್ಟು ಮಾಡುವ ಕಾರ್ಯವಾಗಿರುತ್ತದೆ. ಅಜ್ಜ-ಅಜ್ಜಿ, ವಯಸ್ಸಾದ ತಂದೆ-ತಾಯಿಯರನ್ನು ಎಲ್ಲರೂ ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಹಿರಿಯರನ್ನು ಕಂಡರೆ ಅನಾದರ ಮಾಡುವವರೇ ಹೆಚ್ಚು. ಅವರ ಬಳಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಪಡೆದುಕೊಳ್ಳಲು ಪ್ರಯತ್ನಿಸುವ ಜನ ಎಲ್ಲೆಲ್ಲೂ ತುಂಬಿದ್ದಾರೆ. ಆದರೆ, ಕೆಲವು ರಾಶಿಗಳ ಜನ ಹಾಗಲ್ಲ. ಇವರು ಸಹಜವಾಗಿ ತಮ್ಮೊಳಗೆ ಹಿರಿಯರ ಬಗ್ಗೆ ಕಾಳಜಿ ಹೊಂದಿರುತ್ತಾರೆ. ಇಂಥವರನ್ನು ಮಗ, ಸೊಸೆ, ಮಗಳಾಗಿ ಪಡೆಯುವವರು ಧನ್ಯರು.
• ವೃಷಭ (Taurus)
ವೃಷಭ ರಾಶಿಯ ಜನ ಕೌಶಲ್ಯಯುಕ್ತರಾಗಿದ್ದು (Skills), ಲೀಡರ್ ಶಿಪ್ (Leadership) ಗುಣ ಹೊಂದಿರುತ್ತಾರೆ. ಕುಟುಂಬದ ಜನರ ಮಧ್ಯೆ, ತಮ್ಮದೇ ಒಡಹುಟ್ಟಿದವರೊಂದಿಗೆ ಹೆಚ್ಚಾಗಿ ಬೆಳಕಿಗೆ ಬಾರದಿದ್ದರೂ ಪರೋಪಕಾರ (Philanthropist) ಬುದ್ಧಿಯಲ್ಲಿ ಇವರನ್ನು ಮೀರಿಸುವವರಿಲ್ಲ. ವೃದ್ಧಾಶ್ರಮ (Old Age Home) ಗಳಲ್ಲಾಗಲೀ, ಮನೆಯಲ್ಲಾಗಲೀ ಹಿರಿಯರಿಗೆ (Senior Citizens) ಸಹಾಯ ಮಾಡಲು ಈ ಗೂಳಿ (Bull) ಸದಾಕಾಲ ಮುನ್ನುಗ್ಗುತ್ತದೆ. ಹಾಗೆಯೇ, ವಯಸ್ಸಾದವರಿಗೆ ಸಾಕಷ್ಟು ಸ್ವಾತಂತ್ರ್ಯ (Independence) ಇರಬೇಕೆಂದು ಬಯಸುತ್ತಾರೆ. ಅವರು ಎಷ್ಟು ಕಂಫರ್ಟ್ (Comfort) ಆಗಿರಲು ಸಾಧ್ಯವೋ ಅಷ್ಟನ್ನೂ ನೀಡಲು ಮುಂದಾಗುತ್ತಾರೆ. ಕೆಲವೊಮ್ಮೆ ಮೂಡಿಯಾಗಿದ್ದರೂ, ಹಿರಿಯರ ಬಗ್ಗೆ ಕಾಳಜಿ (Care) ವಹಿಸುವುದು ಇವರ ದೊಡ್ಡ ಗುಣ.
undefined
Love Astrology: ಈ ರಾಶಿಗಳ ಪ್ರೀತಿ ಹೆಚ್ಚು ಕಾಲ ಬಾಳೋದಿಲ್ಲ, ಬೇಗ ಬ್ರೇಕಪ್ ಅನುಭವಿಸುವ ರಾಶಿಗಳಿವು..
• ಮಿಥುನ (Gemini)
ಎಲ್ಲರೊಂದಿಗೆ ಸುಲಭವಾಗಿ ಹೊಂದಾಣಿಕೆ (Adaptable) ಮಾಡಿಕೊಳ್ಳುತ್ತಾರೆ ಮಿಥುನ ರಾಶಿಯ ಜನ. ಆದರೆ, ಸಂಗಾತಿಯಿಂದ ತಿರಸ್ಕೃತವಾದ ಭಾವನೆಯಿಂದ ಬಹುಬೇಗ ಬೇಸರಕ್ಕೆ ಒಳಗಾಗುತ್ತಾರೆ. ಇದರಿಂದ ದೂರವಾಗಲು ಹಿರಿಯರ ಬಗ್ಗೆ ಕಾಳಜಿ ವಹಿಸುವ ಮೂಲಕ ಕುಟುಂಬದ ಜವಾಬ್ದಾರಿಯುತ (Responsible) ವ್ಯಕ್ತಿಯಾಗಿ ಬದಲಾಗುತ್ತಾರೆ. ತಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಮಿಥುನ ರಾಶಿಯ ಜನ ಹಿರಿಯರಿಗೆ (Elders) ಸಮಯ ನೀಡುತ್ತಾರೆ. ಹಿರಿಯ ಸ್ನೇಹಿತರೊಂದಿಗೆ ಮುಕ್ತವಾಗಿ ಒಡನಾಡುತ್ತಾರೆ. ತಂದೆತಾಯಿಗಳು ಒಂದೇ ರೀತಿಯ ಜೀವನದಿಂದ ಬೇಸರಕ್ಕೆ ತುತ್ತಾಗದಂತೆ ನೋಡಿಕೊಳ್ಳುತ್ತಾರೆ. ವಿವಿಧ ರೀತಿಯ ಹವ್ಯಾಸಗಳಲ್ಲಿ (Habits) ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಾರೆ.
• ಕರ್ಕಾಟಕ (Cancers)
ಮನೆಯಲ್ಲೇ ಇರಲು ಇಷ್ಟಪಡುತ್ತಾರೆ ಕರ್ಕಾಟಕ ರಾಶಿಯವರು. ವಯಸ್ಕರಾಗುವ ಹೊತ್ತಿಗೆ ಹಿರಿಯರನ್ನು ಕಾಳಜಿ ಮಾಡುವ ಗುಣ ಬೆಳೆಸಿಕೊಳ್ಳುತ್ತಾರೆ. ಕುಟುಂಬ (Family) ಮತ್ತು ಸ್ನೇಹಿತರಿಗೆ ಆದ್ಯತೆ ನೀಡುವ ಈ ಜನ ಹಿರಿಯರ ಕೇರ್ ಟೇಕರ್ಸ್ (Care Takers) ಆಗಿರುತ್ತಾರೆ. ಈ ಕಾರ್ಯ ಇವರಿಗೆ ಹೆಚ್ಚಿನ ಉತ್ಸಾಹ ನೀಡುತ್ತದೆ. ಪ್ರೀತಿಪಾತ್ರರಿಗಾಗಿ ಕೆಲಸ ಮಾಡಿ ದಣಿದಾಗ ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ.
ಅತಿಲೋಕ ಸುಂದರಿಯರು ಹೆಚ್ಚಾಗಿ ಈ 5 ರಾಶಿಯಲ್ಲೇ ಒಬ್ಬರಾಗಿರ್ತಾರೆ!
• ಸಿಂಹ (Leo)
ಬದ್ಧತೆಯುಳ್ಳ (Committed), ಪ್ರೀತಿಯುಳ್ಳ, ಹೆಚ್ಚಿನ ವರ್ಚಸ್ಸು (Charisma) ಹೊಂದಿರುವ ಸಿಂಹ ರಾಶಿಯ ಜನ ಕುಟುಂಬಕ್ಕೆ ಸಿಕ್ಕಾಪಟ್ಟೆ ಆದ್ಯತೆ ನೀಡುತ್ತಾರೆ. ಕುಟುಂಬದ ಇತಿಹಾಸವನ್ನು ಪದೇ ಪದೆ ನೆನಪಿಸಿಕೊಂಡು ಪ್ರೀತಿಪಾತ್ರರಿಗೆ ಅದನ್ನು ಹೇಳುತ್ತಿರುವುದು ಇವರಿಗೆ ಇಷ್ಟ. ತಮ್ಮನ್ನು ಅವಲಂಬಿಸಿರುವ ಸ್ನೇಹಿತರು ಹಾಗೂ ಮನೆಯ ಹಿರಿಯರ ಅಗತ್ಯಕ್ಕೆ ಸ್ಪಂದಿಸುವುದು (Respond) ಇವರಿಗೆ ಭಾರೀ ಖುಷಿ ಕೊಡುವ ಕಾರ್ಯ. ಜೀವನದ ಕೊನೆಯ ಭಾಗದಲ್ಲಿ ಸಮುದಾಯಕ್ಕೆ ಹೆಚ್ಚು ಸ್ಪಂದಿಸುವಲ್ಲಿ ನೆಮ್ಮದಿ ಕಾಣುತ್ತಾರೆ. ಇವರ ಕಾಳಜಿ ತಿರಸ್ಕರಿಸುವ ಹಿರಿಯರನ್ನು ಮಣಿಸಲು ಅಗತ್ಯಬಿದ್ದರೆ ಚಿಕ್ಕಪುಟ್ಟ ಡ್ರಾಮಾ (Drama) ಮಾಡುತ್ತಾರೆ.