ಲಲಿತಾ ಸಹಸ್ರನಾಮ ಜಪ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಸಮುದ್ರ ಮಧ್ಯದಲ್ಲಿ ಅಮೃತದ ಪಾತ್ರೆಯನ್ನು ಕೈಯಲ್ಲಿ ಹಿಡಿದಿರುವ ಲಲಿತಾ ದೇವಿಯನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ಸಹಸ್ರನಾಮವನ್ನು ಪಠಿಸಿದರೆ ವಿಷಕ್ಕೆ ಸಂಬಂಧಿಸಿದ ಯಾವುದೇ ರೋಗವಿದ್ದರೂ ಗುಣವಾಗುತ್ತದೆ ಎನ್ನಲಾಗುತ್ತದೆ. ಹೀಗೆಯೇ ಇನ್ನೂ ಅನೇಕ ಪ್ರಯೋಜನಗಳಿದ್ದು, ಶುಕ್ರವಾರ ಪಠಿಸಿದರೆ ಹೆಚ್ಚಿನ ಶ್ರೇಯೋಭಿವೃದ್ಧಿ ಇದೆ. ಲಲಿತಾ ಸಹಸ್ರನಾಮದ ಉಪಯೋಗಗಳ ಬಗ್ಗೆ ತಿಳಿಯೋಣ...
ಲಲಿತಾ ಸಹಸ್ರಮಾನದ (Lalitha Sahasranama) ಬಗ್ಗೆ ಬಹುತೇಕ ಎಲ್ಲರೂ ಕೇಳಿರುತ್ತಾರೆ. ಇದರ ಮಹತ್ವದ (Importance) ಬಗ್ಗೆ ಅಲ್ಪಸ್ವಲ್ಪ ಅರಿವನ್ನು ಇಟ್ಟುಕೊಂಡಿರುತ್ತಾರೆ. ಕೆಲವರು ಶ್ರದ್ಧಾ ಭಕ್ತಿಯಿಂದ ಪಠಿಸುತ್ತಾರಾದರೂ ಇದರಿಂದ ಯಾವ ಲಾಭಗಳಾಗುತ್ತವೆ ಎಂಬುದನ್ನು ತಿಳಿದುಕೊಂಡಿರುವುದಿಲ್ಲ. ಲಲಿತಾ ದೇವಿಯ ಸಾವಿರ (Thousand) ಹೆಸರುಗಳನ್ನು (Name) ಪಠಣ (Chanting) ಮಾಡುವ ಮೂಲಕ ಆರಾಧಿಸುವುದೇ (Worshipping) ಲಲಿತಾ ಸಹಸ್ರನಾಮ. ದೇವಿಯನ್ನು ಆರಾಧಿಸಿದರೆ ಸಕಲವೂ ಪ್ರಾಪ್ತವಾಗುತ್ತದೆ. ಲಲಿತಾ ಸಹಸ್ರನಾಮದ ಮೂಲಕ ಆ ತಾಯಿಯನ್ನು ವರ್ಣಿಸಲಾಗುತ್ತದೆ. ಲಲಿತಾ ತಾಯಿಯ ದೈವಿಕ ಸದ್ಗುಣ, ಶ್ರೇಷ್ಠತೆ, ಶಕ್ತಿ, ಮಾತೃ ಹೃದಯ (Heart) ಹೀಗೆ ಆಕೆಯ ಬಗ್ಗೆ ವರ್ಣಿಸಲಾಗುತ್ತದೆ. ಸಂಸ್ಕೃತದಲ್ಲಿರುವ (Sanskrit) ಈ ನಾಮಗಳನ್ನು ಶ್ರದ್ಧೆಯಿಂದ ಜಪಿಸಬೇಕು. ಆಗ ಮನಸ್ಸಿಗೆ ಇಷ್ಟವಾದ ಸಕಲ ಕೆಲಸ ಕಾರ್ಯಗಳು ಸಹ ಸಿದ್ಧಿಸುತ್ತವೆ. ಲಲಿತಾ ಸಹಸ್ರನಾಮ ನಿತ್ಯ ಪಠಣದಿಂದ ಆಗುವ ಲಾಭಗಳ (Benefit) ಬಗ್ಗೆ ನೋಡೋಣ...
ಶುಕ್ರವಾರ (Friday) ಪಠಿಸಿದರೆ ವಿಶೇಷ ಕೃಪೆ
ಲಲಿತಾ ಸಹಸ್ರನಾಮವನ್ನು ನಿತ್ಯ ಪಠಿಸಿದರೆ ದೇವಿ (Godess) ಕೃಪೆ (Blessings) ಸದಾ ಇರುತ್ತದೆ. ಅದರಲ್ಲೂ ವಿಶೇಷವಾಗಿ ಶುಕ್ರವಾರ ಪಠಣೆ ಮಾಡುವುದರಿಂದ ದೇವಿಯನ್ನು ಇನ್ನಷ್ಟು ಪ್ರಸನ್ನಗೊಳಿಸಬಹುದಾಗಿದ್ದು, ವಿಶೇಷ ಕೃಪೆಗೆ ಪಾತ್ರರಾಗಬಹುದಾಗಿದೆ. ದೇವಿಯ ಸಾವಿರ ಹೆಸರುಗಳನ್ನು ಪಠಿಸುವಾಗ ಒಮ್ಮೆ ಬಂದ ದೇವಿಯ ಹೆಸರು ಮತ್ತೊಮ್ಮೆ ಬರುವುದಿಲ್ಲ. ಲಲಿತಾ ಸಹಸ್ರನಾಮ ಎಂದರೆ ಇದು ದೇವಿ ಬಳಿ ಪ್ರಾರ್ಥನೆ (Prayer) ಮಾಡುವುದು. ಯಾರು ಬೇಕಾದರೂ ಯಾವುದೇ ಸಮಯದಲ್ಲಿ ಬೇಕಿದ್ದರೂ ಪಠಿಸಬಹುದಾಗಿದೆ. ಇದರಲ್ಲಿ ಬರುವ ಪ್ರತಿ ನಾಮಾವಳಿಗೂ ವಿಶೇಷ ಶಕ್ತಿಯಿದೆ.
ಇದನ್ನು ಓದಿ: Saturday Born Personality: ಶನಿವಾರ ಜನಿಸಿದವರಿಗಿರುತ್ತಾ ಶನಿ ಕೃಪೆ?
ಮಕ್ಕಳಾಗದಿದ್ದವರಿಗೆ (Child) ಸಂತಾನ ಪ್ರಾಪ್ತಿ
ದೇವರ ಮುಂದೆ ಶುದ್ಧ ತುಪ್ಪವನ್ನಿಟ್ಟು (Ghee) ಲಲಿತಾ ಸಹಸ್ರನಾಮವನ್ನು ಪಠಿಸಬೇಕು. ನಂತರ ಆ ತುಪ್ಪವನ್ನು ಸೇವಿಸಿದರೆ ನಪುಂಸಕತ್ವ ದೋಷವು ನಿವಾರಣೆಯಾಗಲಿದೆ. ಹೀಗಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ಇದಲ್ಲದೆ ಮಾಟ-ಮಂತ್ರಗಳ ಪ್ರಭಾವದಿಂದ ತೊಂದರೆಗೆ ಒಳಪಟ್ಟಿದ್ದರೆ, ಒಳಪಟ್ಟಿರಬಹುದು ಎಂಬ ಅನುಮಾನವಿದ್ದರೆ ಲಲಿತಾ ಸಹಸ್ರನಾಮವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಕೆಟ್ಟಶಕ್ತಿ ನಿವಾರಣೆಯಾಗುತ್ತದೆ.
ದಾನ-ಧರ್ಮದ ಪುಣ್ಯ (Donation)
ನಿತ್ಯವೂ ಶ್ರದ್ಧೆಯಿಂದ ಲಲಿತಾ ಸಹಸ್ರನಾಮವನ್ನು ಪಠಣೆ ಮಾಡುವುದರಿಂದ ಧಾರ್ಮಿಕ ಕ್ಷೇತ್ರ ದರ್ಶನ, ಪವಿತ್ರ ನದಿ ಸ್ನಾನ ಸೇರಿದಂತೆ ದಾನ-ಧರ್ಮಗಳನ್ನು ಮಾಡಿದರೆ ಬರುವ ಪುಣ್ಯ ಸಿಗುತ್ತದೆ.
ತಪಸ್ಸಿಗೆ ಸಮ
ಇದರ ನಿತ್ಯ ಪಠಣ ತಪಸ್ಸಿಗೆ ಸಮವಾಗಿದೆ. ಈ ನಾಮಗಳನ್ನು ಪಠಿಸುವುದರಿಂದ ಅಪೂರ್ಣವಾಗಿದ್ದ ಪೂಜೆ (Pooja) ಅಥವಾ ಯಾವುದಾದರೂ ಕಾರ್ಯಗಳಿಂದ ಬರುವ ತೊಂದರೆ (Difficulties) ನಿವಾರಣೆಯಾಗುತ್ತದೆ.
ಶತ್ರು ತೊಂದರೆ ನಿವಾರಣೆ
ನಿತ್ಯವೂ (Daily) ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಮನೆಯ ವಾತಾವರಣ ಶುದ್ಧಿಯಾಗುತ್ತದೆ. ದೇಹದ ನರನಾಡಿಗಳ ಕಾರ್ಯ ಚುರುಕಾಗುತ್ತದೆ. ಶರೀರದ ಸುಪ್ತ ಚೈತನ್ಯವನ್ನು ಜಾಗೃತಗೊಳಿಸುತ್ತದೆ. ಅಪಘಾತ, ಶತ್ರುವಿನಿಂದ ತೊಂದರೆಯನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಅಪಮೃತ್ಯುವನ್ನು ನಿವಾರಣೆ ಮಾಡುವುದಲ್ಲದೆ, ದೀರ್ಘಾಯಸ್ಸನ್ನು ಮತ್ತು ಆರೋಗ್ಯಕರ (Healthy life) ಜೀವನವನ್ನು ದಯಪಾಲಿಸುವ ಶಕ್ತಿ ಈ ಮಂತ್ರಕ್ಕಿದೆ. ಜ್ವರದಿಂದ ಬಳಲುತ್ತಿರುವವರ ಹಣೆಯ ಮೇಲೆ ಕೈಯಿಟ್ಟು, ಧಾರ್ಮಿಕ ವಿಧಿವಿಧಾನಗಳಿಂದ ಈ ಮಂತ್ರವನ್ನು ಪಠಿಸಿದರೆ ಜ್ವರ (Fever) ಶಮನವಾಗುತ್ತದೆ.
ಇದನ್ನು ಓದಿ: Personality Traits: ಮಾರ್ಚ್‌ನಲ್ಲಿ ಜನಿಸಿದವರ ಕ್ಯೂರಿಯಸ್ ಕಹಾನಿ!
ವಿಷ್ಣುವಿನ ಆಶೀರ್ವಾದ
ಲಲಿತಾ ಸಹಸ್ರನಾಮವು ದೇವಿ ಲಲಿತಾಂಬಿಕೆಯ ಪ್ರಸಿದ್ಧ ಮಂತ್ರಗಳಲ್ಲೊಂದಾಗಿದ್ದು, ಶಕ್ತಿಯುತ ಮಂತ್ರವಾಗಿದ್ದು, ಬೇರೆ ಯಾವ ತಂತ್ರ-ಮಂತ್ರಗಳಿಂದ ಆಗದ ಕಾರ್ಯಗಳು ಈ ನಾಮಾವಳಿಗಳನ್ನು ಪಠಿಸುವುದರಿಂದ ಆಗುತ್ತದೆ. ಶಿವವನ್ನು ಒಮ್ಮೆ ಜಪಿಸಿದರೆ, ವಿಷ್ಣುವನ್ನು ಸಾವಿರ ಬಾರಿ ಜಪಿಸಿದಂತೆ ಎಂಬ ಉಕ್ತಿ ಇದೆ. ಆದರೆ ದೇವಿಯ ನಾಮವನ್ನು ಒಮ್ಮೆ ಜಪಿಸಿದರೆ, ಶಿವನನ್ನು ಒಮ್ಮೆ, ವಿಷ್ಣುವನ್ನು ಸಹಸ್ರ ಬಾರಿ ಜಪಿಸಿದ ಪುಣ್ಯ ಬರುತ್ತದೆ. ಸಮಯವಾದಾಗ ಮನೆಮಂದಿಯೆಲ್ಲಾ ಕೂತು ಒಟ್ಟಾಗಿ ಈ ಸಹಸ್ರನಾಮವನ್ನು ಪಠಿಸಿದರೆ ಒಗ್ಗಟ್ಟನ್ನು, ಶಾಂತಿಯನ್ನು,ಉತ್ತಮ ಮನೋಸ್ಥೈರ್ಯವನ್ನು, ಸಮೃದ್ಧಿಯನ್ನು (Prosperity) ತಾಯಿ ಕರುಣಿಸುತ್ತಾಳೆ.
ನಿತ್ಯ ಪಠಣೆಯಿಂದ ಸಿರಿಸಂಪತ್ತು
ಯಾವ ಮನೆಯಲ್ಲಿ ಲಲಿತಾ ಸಹಸ್ರನಾಮವನ್ನು ನಿತ್ಯ ಪಠಿಸುತ್ತಾರೆಯೋ ಅಂಥ ಮನೆಯಲ್ಲಿ ಮೂಲ ಅಗತ್ಯತೆಗಳಿಗೆ, ಸಹಜ ಜೀವನಕ್ಕೆ ಎಂದೂ ಕೊರತೆಯಾಗುವುದಿಲ್ಲ. ಜೀವನಕ್ಕೆ (Life) ಬೇಕಾಗುವ ಎಲ್ಲ ಸಿರಿ ಸಂಪತ್ತನ್ನು ದಯ ಪಾಲಿಸುವ ಶಕ್ತಿ ಈ ಸಹಸ್ರನಾಮಕ್ಕಿದೆ.