ಈ ರಾಶಿಯವರಷ್ಟು ನಿಷ್ಠೆಯ ಸಂಗಾತಿ ಸಿಕ್ಕರೆ ಅಪನಂಬಿಕೆಯ ಮಾತೇ ಇಲ್ಲ!

By Suvarna News  |  First Published May 17, 2022, 3:16 PM IST

ಎಲ್ಲ ಸಂಬಂಧಕ್ಕೂ ನಂಬಿಕೆಯೇ ತಳಹದಿ. ಸಂಬಂಧದಲ್ಲಿ ಸಂಗಾತಿಗಳಿಬ್ಬರೂ ಪ್ರಾಮಾಣಿಕವಾಗಿದ್ದರೆ ಅಲ್ಲಿ ನಂಬಿಕೆಯ ಕೊರತೆಯೇ ಇರುವುದಿಲ್ಲ. ಈ ಆರು ರಾಶಿಗಳು ಸಂಬಂಧದಲ್ಲಿ ನಿಷ್ಠರಾಗಿರುತ್ತಾರೆ. 


ಯಾವುದೇ ಸಂಬಂಧ(relationship) ಧೀರ್ಘ ಕಾಲ ಚೆನ್ನಾಗಿರಬೇಕೆಂದರೆ ಅದರಲ್ಲಿರುವವರಿಬ್ಬರೂ ಪರಸ್ಪರ ಪ್ರಾಮಾಣಿಕರಾಗಿರಬೇಕು. ಆಗಲೇ ನಂಬಿಕೆಯ ತಳಹದಿ ಬಲವಾಗುವುದು. ಪ್ರಾಮಾಣಿಕತೆ ಎಂದರೆ ಅದಕ್ಕೆ ಯಾವುದೇ ಮಾನದಂಡವಿಲ್ಲ. ಕೇವಲ ಮತ್ತೊಬ್ಬರ ಬಗ್ಗೆ ಯೋಚಿಸದವರು, ಅನೈತಿಕ ವರ್ತನೆ ತೋರದವರು ಮಾತ್ರವಲ್ಲ, ತಮ್ಮ ಭಾವನೆಗಳ ಬಗ್ಗೆ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರುವುದು ಕೂಡಾ ಮುಖ್ಯವಾಗುತ್ತದೆ. ಯಾವುದೇ ವಿಷಯವನ್ನು ಗುಟ್ಟು ಮಾಡದೇ, ನಾನೇ ನೀನು, ನೀನೇ ನಾನು ಎಂದು ನಂಬಿ ಬದುಕಬೇಕು. ಅಂಥ ಪ್ರಾಮಾಣಿಕ(Loyal)ರು ಯಾವ ರಾಶಿಗೆ ಸೇರಿರುತ್ತಾರೆ ನೋಡೋಣ. 

ವೃಷಭ(Taurus)
ವೃಷಭ ರಾಶಿಯವರು ಬಹಳ ಪ್ರಾಮಾಣಿಕರು. ಹಾಗೆಯೇ ಅಪ್ರಾಮಾಣಿಕ ಸಂಗಾತಿಯನ್ನು ಒಪ್ಪದವರು. ಇವರು ಒಬ್ಬರೊಂದಿಗೆ ಕಮಿಟ್ ಆದರೆಂದರೆ, ಆ ಸಂಬಂಧ ಗಟ್ಟಿಗೊಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ., ಧೀರ್ಘಕಾಲೀನ ಸಂಬಂಧದಲ್ಲಿ ನಂಬಿಕೆ ಉಳ್ಳ ಇವರು ಅರ್ಥ ಮಾಡಿಕೊಂಡು ಪ್ರೀತಿಸುವ ಉತ್ತಮ ಸಂಗಾತಿಯಾಗುತ್ತಾರೆ. ಆದರೆ, ಸಂಗಾತಿ(partner)ಯ ಅನೈತಿಕ ವರ್ತನೆಗಳನ್ನು ಕೊಂಚವೂ ಸಹಿಸಲಾರರು. 

Tap to resize

Latest Videos

ಸಿಂಹ(Leo)
ಇವರು ಹೆಚ್ಚು ಕುಟುಂಬ ಜೀವಿಗಳು. ಚೆಂದದ ಕುಟುಂಬ(Family) ಹೊಂದಿ ಸುಂದರವಾಗಿ ಜೀವನ ನಡೆಸಬೇಕೆಂದು ಬಯಸುವವರು ಸಿಂಹ ರಾಶಿಯವರು. ಬಹಳ ಸರಳ ನಡೆಯವರಾದ ಇವರು ಎಂಥದೇ ಪರಿಸ್ಥಿತಿ ಬಂದರೂ ತಮ್ಮ ಸಂಗಾತಿಯ ಬಗಲಿಗೆ ನಿಲ್ಲುತ್ತಾರೆ. ತಮ್ಮ ಪ್ರೀತಿಪಾತ್ರರಿಗೆ ಏನಾದರೂ ನೋವಾಯಿತೆಂದರೆ ಅವರಿಗಿಂತ ಹೆಚ್ಚು ನೋವು ಅನುಭವಿಸುತ್ತಾರೆ. ಸಿಂಹ ರಾಶಿಯವರು ಸಂಗಾತಿಯಿಂದ ಹೆಚ್ಚು ಪ್ರೀತಿ, ಗಮನ, ಮುದ್ದನ್ನು ಬಯಸುತ್ತಾರೆ. ಸಂಗಾತಿಯ ಮಾತುಗಳನ್ನು ಜಜ್ ಮಾಡದೆ ಕೇಳುವ ಇವರು ಸದಾ ಅವರಿಗೆ ಬೆಂಗಾವಲಾಗುತ್ತಾರೆ. ತಮ್ಮನ್ನು ತಾವು ಉತ್ತಮ ಪಡಿಸಿಕೊಳ್ಳಲು ತೆರೆದ ಮನಸ್ಥಿತಿಯವರಾಗಿರುತ್ತಾರೆ. 

Vastu Tips: ಮನೆಯಲ್ಲಿ ಈ ಸಸ್ಯಗಳಿದ್ದರೆ ಸಂಪತ್ತಿನ ಕೊರತೆ ಇರೋಲ್ಲ

ಕರ್ಕಾಟಕ(Cancer)
ಕರ್ಕಾಟಕ ರಾಶಿಯವರು ಹೆಚ್ಚು ಭಾವಜೀವಿಗಳಾಗಿದ್ದು, ತಮ್ಮ ಸಂಗಾತಿಯನ್ನು ಮೆಚ್ಚಿಸಲು ತುಂಬಾ ಪ್ರಯತ್ನ ಹಾಕುತ್ತಾರೆ. ನಿಜವಾದ ಪ್ರೀತಿ(love) ಹಾಗೂ ಯಾವಾಗಲೂ ಸುಖವಾಗಿರುವ ವಿಷಯಗಳಲ್ಲಿ ಇವರಿಗೆ ನಂಬಿಕೆ ಹೆಚ್ಚು. ವಿವಾಹ(marriage)ವಾದ ಮೇಲೆ ಸಂತೋಷದ ಜೀವನವಿರುತ್ತದೆ ಎಂದು ನಂಬಿರುವವರೂ, ಅದನ್ನು ಸಾಧಿಸಿ ತೋರಿಸಲು ಪ್ರಯತ್ನ ಹಾಕುವವರೂ ಇವರು. ಸದಾ ತಮಗೆ ತಕ್ಕ ಪ್ರೀತಿಯ ಹುಡುಕಾಟದಲ್ಲಿರುತ್ತಾರೆ. ಒಮ್ಮೆ ಅಂಥ ಸಂಗಾತಿ ಸಿಕ್ಕರೆ ಪ್ರಾಮಾಣಿಕತೆಗೆ ಮಿತಿಯೇ ಇಲ್ಲದಂತೆ ಸಂಗಾತಿಗೆ ನಿಷ್ಠೆ ತೋರುತ್ತಾರೆ. ಚೆನ್ನಾಗಿ ಹೊಂದಿಕೊಳ್ಳುತ್ತಾರೆ. 

ತುಲಾ(Libra)
ಸಾಮಾನ್ಯವಾಗಿ ಸಮತೋಲಿತ ಮನಸ್ಥಿತಿಯಲ್ಲಿರುವ ತುಲಾ ರಾಶಿಯವರು ಸಂಬಂಧಗಳಲ್ಲಿ ಕೂಡಾ ಬಹಳ ಸಮತೋಲಿತ ಮನಸ್ಥಿತಿಯಿಂದ ವರ್ತಿಸುತ್ತಾರೆ. ಅಭದ್ರತೆಗಳನ್ನು ಮೆಟ್ಟಿ ನಿಂತರೆಂದರೆ ಸಂಬಂಧಕ್ಕೆ ಬದ್ಧರಾಗಲು ಮತ್ತೆ ಸಮಯ ಬೇಡಲಾರರು ಇವರು. ಸಂಗಾತಿಯ ವಿಷಯದಲ್ಲಿ ತೀರಾ ಹಚ್ಚಿಕೊಂಡು ಪೊಸೆಸಿವ್ ಆಗುತ್ತಾರೆ. ಆದರೆ, ಅವರಿಗೆಂದಿಗೂ ವಂಚಿಸುವುದಿಲ್ಲ. 

ವೃಶ್ಚಿಕ(Scorpio)
ಬಹಳ ಗುಟ್ಟಿನ ಮನಸ್ಸಿನವರಾದ ವೃಶ್ಚಿಕ ರಾಶಿಯವರು, ಯಾವುದಾದರೂ ಒಂದು ಸಂಬಂಧಕ್ಕೆ ಕಮಿಟ್ ಆಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಸಂಬಂಧದ ಆರಂಭಿಕ ಹಂತಗಳಲ್ಲಿ ನಂಬಿಕೆಯ ವಿಷಯದಲ್ಲಿ ಅವರು ಸಂಗಾತಿಯನ್ನು ಬಹಳ ಅನುಮಾನದಿಂದ ನೋಡಬಹುದು. ಆದರೆ, ಅವನ್ನೆಲ್ಲ ಮೀರಿ ಅವರ ಪ್ರೀತಿ ಗಳಿಸಿದರೆ ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ವರ್ತಿಸುತ್ತಾರೆ ಹಾಗೂ ನಂಬಿಕೆಯ ಸಂಗಾತಿಯಾಗುತ್ತಾರೆ. ಇವರು ನಿಮ್ಮನ್ನು ಪ್ರೀತಿಸಲಿ ಅಥವಾ ಪ್ರೀತಿಸದೆ ಇರಲಿ, ನಂಬಿಕೆದ್ರೋಹ ಮಾತ್ರ ಎಂದಿಗೂ ಮಾಡಲಾರರು. ಆದರೆ, ನಿಮ್ಮಿಂದಲೂ ತಮ್ಮಂಥದೇ ನಿಷ್ಠೆ ಬಯಸುತ್ತಾರೆ. 

ಸಾವಿನ ಸಂದರ್ಭದಲ್ಲಿ ಮಾತ್ರ ಗರುಡ ಪುರಾಣ ಪಠಣ ಮಾಡುವುದೇಕೆ?

ಮಕರ(Capricorn)
ಸುಮ್ಮನೆ ಡೇಟ್ ಮಾಡುವುದು, ಫ್ಲರ್ಟ್ ಮಾಡುವುದು, ಕೆಲ ದಿನಗಳಿಗಾಗಿ ಕಮಿಟ್ ಆಗುವುದು- ಇಂಥ ಸಂಗತಿಗಳೆಲ್ಲ ಮಕರ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಇವರು ಯಾರೊಂದಿಗಾದರೂ ಡೇಟ್ ಮಾಡಿದರೆಂದರೆ ಆ ಸಂಬಂಧದ ಬಗ್ಗೆ ಬಹಳ ಗಂಭೀರವಾಗಿದ್ದಾರೆಂದೇ ಅರ್ಥ. ಸಂಗಾತಿಗೆ ಮೋಸ ಮಾಡುವುದು ಇವರಿಗೆ ಕನಸಿನಲ್ಲಿಯೂ ಸುಳಿಯದು. ತಮ್ಮ ಮನಸ್ಸಿನಲ್ಲಿರುವುದನ್ನು ಬಾಯಿ ಬಿಟ್ಟು ಹೇಳುವಲ್ಲಿ ಹಿಂದೆ ಬೀಳುತ್ತಾರಾದರೂ ಸಂಗಾತಿಯನ್ನು ಸಂತೋಷ ಪಡಿಸಲು ಸಾಕಷ್ಟು ಯತ್ನ ಹಾಕುತ್ತಾರೆ. 
 

click me!