Intelligent Zodiacs: ಈ ರಾಶಿಯವರು ಬುದ್ಧಿವಂತಿಕೆಯಲ್ಲಿ ಒಂದು ಕೈ ಮೇಲೆಯೇ..

Suvarna News   | Asianet News
Published : Mar 05, 2022, 12:01 PM IST
Intelligent Zodiacs: ಈ ರಾಶಿಯವರು ಬುದ್ಧಿವಂತಿಕೆಯಲ್ಲಿ ಒಂದು ಕೈ ಮೇಲೆಯೇ..

ಸಾರಾಂಶ

ನೀವು ಹಲವಾರು ಜನ ಬುದ್ಧಿವಂತರನ್ನು ನೋಡಿರುತ್ತೀರಿ. ಅವರ ರಾಶಿ ಯಾವುದಾಗಿರುತ್ತದೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯಾ? ಈ ಕೆಲವು ರಾಶಿಯವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಹಾಗೂ ಯಾವುದೇ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಜಾಣ್ಮೆ ಅವರಿಗಿರುತ್ತದೆ.

ನೀವು ಯಾವುದೇ ವಿಷಯವನ್ನು ಬಹಳ ಬುದ್ಧಿವಂತಿಕೆಯಿಂದ (Intelligent) ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಗುಣವನ್ನು ಹೊಂದಿದ್ದೀರಾ? ಯಾವುದೇ ಒಂದು ಸನ್ನಿವೇಶವನ್ನು (Situation) ಎಲ್ಲ ವಿಭಿನ್ನ ದೃಷ್ಟಿಕೋನದಿಂದ ಯೋಚಿಸಿ ಅರ್ಥ ಮಾಡಿಕೊಂಡು, ಅದಕ್ಕೆ ಪರಿಹಾರ ಸೂಚಿಸುವುದು ಚಾಣಾಕ್ಷತೆ ಎಲ್ಲರಲ್ಲಿಯೂ ಇರುವುದಿಲ್ಲ. ಈ ಕೆಲವು ರಾಶಿಯನ್ನು ಹೊಂದಿರುವ ಜನರಲ್ಲಿ ಇಂತಹ ವಿಭಿನ್ನ ಗುಣವು ಹುಟ್ಟಿನಿಂದಲೇ ಬಂದಿರುತ್ತದೆ. ಹಾಗೂ ಇವರು ತಮ್ಮ ಸುತ್ತಮುತ್ತಲಿನ ಜನರಲ್ಲಿ ಬುದ್ಧಿವಂತರು ಎಂದು ಕರೆಸಿಕೊಳ್ಳುತ್ತಾರೆ.

ಕನ್ಯಾ ರಾಶಿ (Virgo)

ಕನ್ಯಾ ರಾಶಿಯವರು ಬಹಳ ಬುದ್ಧಿವಂತರಾಗಿರುತ್ತಾರೆ ಹಾಗೂ ಅವರು ಅವರನ್ನು ಬುದ್ಧಿವಂತರು ಎಂದು ಜನರ ಎದುರು ಬಿಂಬಿಸಿಕೊಳ್ಳಲು (Portrait) ಪ್ರಯತ್ನಿಸುತ್ತಾರೆ. ಆದರೆ, ಇದು ಸತ್ಯ ಕೂಡ ಹೌದು. ಅವರು ಬಹಳ ಬುದ್ಧಿವಂತರಾಗಿರುತ್ತಾರೆ ಜೊತೆಗೆ, ತಮ್ಮ ಸುತ್ತಮುತ್ತಲಿನ ಜನರಿಗೆ ಸಂಬಂಧ (Relationship) ಹಾಗೂ ಗೆಳೆತನದ ಕುರಿತಾಗಿ ಹಲವಾರು ಉಪಯುಕ್ತ ಮಾರ್ಗದರ್ಶನವನ್ನು ಕೂಡ ನೀಡುತ್ತಾರೆ. ಯಾವುದೇ ಒಂದು ವಿಷಯವನ್ನು ಕೂಲಂಕುಷವಾಗಿ ಯೋಚಿಸಿ, ವಿಷ್ಲೇಶಿಸಿ ನಿರ್ಧಾರಗಳನ್ನು (Decision) ಕೈಗೊಳ್ಳುತ್ತಾರೆ. ಇವರ ಈ ಸ್ವಭಾವದಿಂದಾಗಿ ತಮ್ಮ ಸುತ್ತಮುತ್ತಲಿನ ಜನರಲ್ಲಿ ಹೆಸರು, ಪ್ರಸಿದ್ಧಿಯನ್ನು ಗಳಿಸಿರುತ್ತಾರೆ.

Scorpions ಸಂಬಂಧದಲ್ಲಿ ಈ ತಪ್ಪು ಮಾಡುತ್ತಾರೆ!

 ತುಲಾ ರಾಶಿ (Libra)

ಇವರು ಹೊರಗಿನ ಜನರಿಗೆ ಮೊಂಡುತನ ಹೊಂದಿರುವವರನ್ನು ಕಾಣುತ್ತಾರೆ. ಯಾವುದೇ ವಿಷಯವನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ (Give up). ಅದಕ್ಕೆ ಕಾರಣವೆಂದರೆ ಅವರು ಪ್ರತಿಯೊಂದು ವಿಷಯದ ಬಗ್ಗೆಯೂ ಸೂಕ್ಷ್ಮವಾಗಿ ಯೋಚಿಸಿ ಅದರ ಆಗುಹೋಗುಗಳ ಕುರಿತು ಕುಲಂಕುಶವಾಗಿ ತಿಳಿದುಕೊಂಡ ಬಳಿಕವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಆಡಿದ ಮಾತು ಹಾಗೂ ತೆಗೆದುಕೊಳ್ಳುವ ನಿರ್ಧಾರ ದೃಢವಾಗಿರುತ್ತದೆ (Strong). ಈ ಕಾರಣದಿಂದಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಬಹಳ ಬುದ್ಧಿವಂತರಾಗಿರುತ್ತಾರೆ.

 ಕಟಕ ರಾಶಿ (Cancer) 

 ಕಟಕ ರಾಶಿಯವರು ಕೂಡ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಆದರೆ, ಇವರು ತಮ್ಮ ಬುದ್ಧಿವಂತಿಕೆ ಹಾಗೂ ಜ್ಞಾನವನ್ನು (Knowledge) ಇತರರ ಮುಂದೆ ಪ್ರದರ್ಶಿಸಲು ಇಷ್ಟ ಪಡುವುದಿಲ್ಲ. ಇದರಿಂದಾಗಿ ಜನರು ಇವರ ಬುದ್ಧಿವಂತಿಕೆಯ ಬಗ್ಗೆ ಅನುಮಾನ ಇಟ್ಟುಕೊಂಡಿರಬಹುದು. ಆದರೆ, ಯಾವುದೇ ವಿಷಯವನ್ನು ಕೂಡ ಸರಿಯಾಗಿ ಯೋಚನೆ ಮಾಡದೆ, ವಿಶ್ಲೇಷಣೆ ಮಾಡದೆ ಇವರು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಹಾಗೂ ತಮ್ಮ ಸುತ್ತಮುತ್ತಲಿನ ಜನರ ಮನಸ್ಥಿತಿಯನ್ನು (Mentality) ಕೂಡ ಅರ್ಥ ಮಾಡಿಕೊಳ್ಳುವ ಜಾಣ್ಮೆ ಇವರಲ್ಲಿರುತ್ತದೆ.

Capricorn Personality Traits: ಹಟ, ಛಲ, ಮಹತ್ವಾಕಾಂಕ್ಷೆ.. ಇದು ಮಕರ ರಾಶಿಯವರ ಹುಟ್ಟುಗುಣ

 ಕುಂಭ ರಾಶಿ (Aquarius)

ಕುಂಭ ರಾಶಿಯ ಜನರು ಬುದ್ಧಿವಂತರಾಗಿರುತ್ತಾರೆ ಇದಕ್ಕೆ ಸಾಕ್ಷಿಯೆಂದರೆ ಅವರು ತಮ್ಮ ಭಾವನೆಗಳನ್ನು (Emotions) ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಹೊಂದಿರುತ್ತಾರೆ. ಇದರ ಯೋಜನೆ (Planning) ಹಾಗೂ ಆಲೋಚನೆಗಳು ವಯಸ್ಸನ್ನು (Age) ಮೀರಿದಷ್ಟು ಇರುತ್ತದೆ. ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಲವಾರು ದೃಷ್ಟಿಕೋನಗಳಿಂದ ಯೋಚಿಸುತ್ತಾರೆ ಹಾಗೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರ ಜಾಣ್ಮೆಯಿಂದಾಗಿ ಇವರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನಲ್ಲಿ ಇರುವವರಿಗೂ ಕೂಡ ಸಹಾಯವಾಗುತ್ತದೆ. ಯಾವುದೇ ವ್ಯಕ್ತಿಯನ್ನು ತಮ್ಮ ತಾರ್ಕಿಕ ಯೋಚನೆಯ ಮೂಲಕ ಸೋಲಿಸುವ ಶಕ್ತಿಯನ್ನು ಹೊಂದಿರುತ್ತಾರೆ.

ಹೀಗೆ ನಿಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಬುದ್ಧಿವಂತ ಜನರನ್ನು ಹೊಂದಿರುತ್ತೀರಿ. ಅವರ ವಿಶ್ಲೇಷಣೆ ಶಕ್ತಿಯಿಂದಾಗಿ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಆದರೆ ನಾವು ಇಂಥವರ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಸೋತಿರಬಹುದು. ಇಂಥ ಸ್ವಭಾವವು ಅವರ ರಾಶಿಯಿಂದ ಬಂದಿರುವ ಶಕ್ತಿ ಎಂದು ಹೇಳಬಹುದು. 

(ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.)

PREV
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ