Character of Zodiac signs: ಬೆನ್ನಿಗೆ ಚೂರಿ ಹಾಕೋದು ಅಂತಾರಲ್ಲ, ಆ ತರ ಇವರು!

By Suvarna News  |  First Published Feb 25, 2022, 1:55 PM IST

ಒಬ್ಬ ವ್ಯಕ್ತಿಗೆ ಹಲವಾರು ಮುಖಗಳಿರುತ್ತವೆ. ನಿಮ್ಮ ಎದುರಿಗೆ ಒಂದು ರೀತಿಯ ವ್ಯಕ್ತಿತ್ವ ತೋರಿಸಿಕೊಂಡರೆ, ಹಿಂದಿನಿಂದ ಬೇರೆಯದೇ ರೀತಿಯಲ್ಲಿ ಮಾತನಾಡುತ್ತಾರೆ. ಇಂತಹ ಗುಣವನ್ನು ಅವರು ತಮ್ಮ ರಾಶಿಯಿಂದ ಹೊಂದಿರಬಹುದು. ಇಲ್ಲಿರುವ ಕೆಲವು ರಾಶಿಯ ಜನರಲ್ಲಿ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುವ ಅಭ್ಯಾಸ ಇರುತ್ತದೆ.


ಯಾವುದೇ ಒಬ್ಬ ವ್ಯಕ್ತಿಯನ್ನು ನಂಬುವುದು ಬಹಳ ಕಷ್ಟ. ಯಾರ ಮನಸ್ಸಿನಲ್ಲಿ ಎಂತೆಂತಹ ವಿಷಯಗಳು ಅಡಗಿರುತ್ತವೆ. ಎಂದು ಊಹಿಸುವುದೇ ಕಷ್ಟ. ನಿಮ್ಮ ಎದುರಿಗೆ ಒಳ್ಳೆಯವರಂತೆ ನಿಮಗೆ ಉಪಕಾರ (Help) ಮಾಡುವವರಂತೆ ಕಾಣಿಸಿಕೊಂಡರು ಹಿಂದಿನಿಂದ ನಿಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ ನಿಮ್ಮ ನಂಬಿಕೆಗೆ ಮೋಸ ಮಾಡುತ್ತಾರೆ. ಈಗಾಗಲೇ ನಿಮ್ಮ ಜೀವನದಲ್ಲಿ ಎಷ್ಟು ಜನರು ಇಂತಹ ವ್ಯಕ್ತಿತ್ವ ಹೊಂದಿರುವವರನ್ನು ನೀವು ಬೇಟಿ ಆಗಿರುತ್ತೀರಿ. ಅವರ ವ್ಯಕ್ತಿತ್ವಕ್ಕೆ ಅವರ ರಾಶಿಯು ಕಾರಣವಾಗಿರಬಹುದು.  ಜ್ಯೋತಿಷ್ಯದ ಪ್ರಕಾರ ಈ ಕೆಲವು ರಾಶಿಯನ್ನು ಹೊಂದಿರುವ ಜನರಲ್ಲಿ ನಂಬಿಕೆಗೆ ದ್ರೋಹ ಮಾಡುವ, ನಂಬಿದವರ ಬೆನ್ನಿನ ಹಿಂದೆ ನಿಂತು ಮಸಲತ್ತು ಮಾಡುವ (Backbite) ಗುಣ ಇರುತ್ತದೆ. ಇಂತಹ ರಾಶಿಯ ಜನರು ನಿಮ್ಮ ಸುತ್ತಮುತ್ತಲು ಇದ್ದರೆ ಅಂಥವರನ್ನು ನಂಬುವ ಮೊದಲು ಸ್ವಲ್ಪ ಯೋಚಿಸಿ. ಅಂತಹ ರಾಶಿಗಳು ಯಾವುವೂ ನೋಡೋಣ..

ಕನ್ಯಾ ರಾಶಿ (Virgo)
ಕನ್ಯಾರಾಶಿಯವರಿಗೆ ನಾವು ಯಾವಾಗಲೂ ಉತ್ತಮ (Higher) ಸ್ಥಾನದಲ್ಲಿರಬೇಕು ಎಂಬ ಸ್ವಾರ್ಥ ಇರುತ್ತದೆ. ಅದಕ್ಕಾಗಿ ಯಾವುದೇ ಜನರಿಗೂ ಕೂಡ ಅವರು ಹಿಂದಿನಿಂದ ನಂಬಿಕೆಗೆ ಮೋಸ ಮಾಡಿ ದ್ರೋಹ ಬಗೆಯಬಹುದು. ನಿಮ್ಮೆದುರಿಗೆ ಇವರು ಬಹಳ ಸಿಹಿಯಾದ ವರ್ತನೆಯನ್ನು ತೋರಿಸುತ್ತಾರೆ ಆದರೆ ಹಿಂದಿನಿಂದ ನಿಮ್ಮ ವಿರುದ್ಧ ಸಂಚು ಮಾಡುತ್ತಿರುತ್ತಾರೆ. ನಿಮ್ಮೊಂದಿಗೆ ಎಷ್ಟೇ ಚೆನ್ನಾಗಿ ನಡೆದುಕೊಂಡರೂ ಕೂಡ ನಿಮ್ಮ ವಿರುದ್ಧವಾಗಿ ಗೆಲ್ಲುವ ಅವಕಾಶ ಸಿಕ್ಕಾಗ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಹಾಗೂ ಇಂತಹ ವಿಷಯಗಳಿಂದ ಅವರು ಯಾವುದೇ ಬೇಸರ (Guilt) ಕೂಡ ಮಾಡಿಕೊಳ್ಳುವುದಿಲ್ಲ.
ಈ ರಾಶಿಯವರಿಗೆ ಸೋಲು ಎದುರಿಸುವ ಛಲ ಇರುವುದಿಲ್ಲ!

Tap to resize

Latest Videos

undefined

ಮಕರ ರಾಶಿ (Capricorn)
 ಈ ರಾಶಿಯನ್ನು ಹೊಂದಿರುವ ಜನರು ಕೂಡ ಬೇರೆಯವರನ್ನು ಹಿಮ್ಮೆಟ್ಟಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಆದರೆ, ಅವರ ಈ ಸ್ವಭಾವವು ಬೇರೆಯವರಿಗೆ ಕೆಡುಕು ಬಯಸುವ ಉದ್ದೇಶದಿಂದ ಅಲ್ಲ. ಬದಲಿಗೆ, ತಮ್ಮ ಗೆಲುವನ್ನು ಸಾಧಿಸುವುದರ (Achieve) ಕಡೆಗೆ ಅವರು ಹೆಚ್ಚಿನ ಗಮನ ನೀಡುತ್ತಾರೆ ಅಷ್ಟೇ. ಬೇರೆಯವರನ್ನು ದೂರುವುದು ಅವರ ಸ್ವಭಾವದಲ್ಲಿ ಬೆರೆತು ಹೋಗಿರುತ್ತದೆ. ಅವರು ತಮಗಾಗುವ ತೊಂದರೆಗಳಿಗೆ (Problem) ಇತರರು ಕಾರಣರಾಗಿರುತ್ತಾರೆ ಎಂದು ಭಾವಿಸುತ್ತಾರೆ ಹಾಗೂ ಅದೇ ಭ್ರಮೆಯಲ್ಲಿ ಬೇರೆಯವರನ್ನು ಬೈದುಕೊಳ್ಳುತ್ತಾರೆ.

ವೃಷಭ ರಾಶಿ (Taurus)
ಇವರು ಕೂಡ ತಮ್ಮ ಜೊತೆಗೆ ಕೆಲಸ ಮಾಡುವ ಇತರ ಕೆಲಸಗಾರರನ್ನು (Colleague) ಹಿಮ್ಮೆಟ್ಟಿಸಲು ಯೋಚಿಸುತ್ತಿರುತ್ತಾರೆ. ಬೇರೆಯವರನ್ನು ತುಳಿದು, ಅವರಿಗಿಂತ ಎತ್ತರಕ್ಕೆ ಬೆಳೆಯಬೇಕು ಎಂಬುದು ವೃಷಭ ರಾಶಿಯನ್ನು ಹೊಂದಿರುವ ಜನರ ಆಸೆಯಾಗಿರುತ್ತದೆ (Wish). ಇವರು ತಾವು ಗೆಲ್ಲುವುದಕ್ಕಾಗಿ ಏನನ್ನೂ ಮಾಡಲು ಸಿದ್ಧರಿರುತ್ತಾರೆ. ಇವರು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಆದರೆ, ಅದರಾ ಜೊತೆಗೆ ಇತರರ ದಾರಿಗೂ ಅಡ್ಡ ಹೋಗುತ್ತಾರೆ. ಒಟ್ಟಿನಲ್ಲಿ ಅವರಿಗೆ ತಮ್ಮ ಬಗ್ಗೆ ತಮ್ಮ ಕೆಲಸದ, ಬಗ್ಗೆ ಇತರರು ಗುರುತಿಸಬೇಕು ಹಾಗೂ ಪ್ರಶಂಸಿಸಬೇಕು.

Zodiac signs: ಈ ರಾಶಿಯವರಿಗೆ ಬೇರೆಯವರಷ್ಟು ನಿಷ್ಠೆ ಇರೋಲ್ಲ!

ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರು ಕೂಡ ಇತರರ ಬೆನ್ನುಹತ್ತಿ ತಾವು ಗೆಲ್ಲಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ಜನರು ಹಾಗೂ ತಮಗಿಂತ ಮೇಲ್ಮಟ್ಟದಲ್ಲಿರುವ ಜನರನ್ನು ಮೆಚ್ಚಿಸಲು ಬಯಸುತ್ತಾರೆ. ಅವರು ಮೆಚ್ಚುಗೆಯನ್ನು ಪಡೆಯುವುದಕ್ಕಾಗಿ ಯಾರ ಬಗ್ಗೆಯಾದರೂ ಧೂಷಣೆ (Blaming) ಮಾಡುತ್ತಾರೆ. ಈ ಜನರು ಬೇರೆಯವರಿಗೆ ಕೆಡುಕು ಬಯಸುವ ಉದ್ದೇಶ ಹೊಂದಿಲ್ಲದೆ ಇದ್ದರೂ ಕೂಡ, ತಮ್ಮ ಸಂತೋಷ ಹಾಗೂ ತಮ್ಮನ್ನು ಹೆಚ್ಚು ಜನರು ಪ್ರೀತಿಸಬೇಕು ಎಂಬ ಕಾರಣದಿಂದಾಗಿ ಬೇರೆಯವರಿಗೆ ಕೆಡುಕು ಉಂಟು ಮಾಡುತ್ತಾರೆ.

 ನೀವು ಎಂತಹ ಜನರ ಸಹವಾಸ ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಗಮನ ನೀಡಿ. ಹಾಗೂ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುವ ಜನರ ಬಳಿ ಸ್ವಲ್ಪ ಜಾಗರೂಕವಾಗಿ ವರ್ತಿಸಿ.

click me!