ಮನೆ ಮುಂದೆ ಪಪ್ಪಾಯಿ ಗಿಡವಿದ್ರೆ, ದೆವ್ವ ಸೇರಿಕೊಳ್ಳಬಹುದಾ?

Published : Feb 13, 2025, 12:33 PM ISTUpdated : Feb 13, 2025, 01:07 PM IST
ಮನೆ ಮುಂದೆ ಪಪ್ಪಾಯಿ ಗಿಡವಿದ್ರೆ, ದೆವ್ವ ಸೇರಿಕೊಳ್ಳಬಹುದಾ?

ಸಾರಾಂಶ

ಹಿಂದೂ ಧರ್ಮದಲ್ಲಿ ಗಿಡಮರಗಳಿಗೆ ವಿಶೇಷ ಸ್ಥಾನ. ವಾಸ್ತು ಪ್ರಕಾರ ಮನೆ ಮುಂದೆ ಪಪ್ಪಾಯ ಗಿಡವಿರುವುದು ಅಶುಭ. ಇದು ಆರ್ಥಿಕ ಸಮಸ್ಯೆ, ಕಲಹ, ಅನಾರೋಗ್ಯ ತರುತ್ತದೆ. ಪಪ್ಪಾಯ ಗಿಡದಲ್ಲಿ ಪಿತೃಗಳ ವಾಸವೆಂಬ ನಂಬಿಕೆಯೂ ಇದೆ. ಮನೆ ಹಿಂದೆ ಅಥವಾ ಉತ್ತರ, ಪೂರ್ವ ದಿಕ್ಕಿನಲ್ಲಿ ನೆಡುವುದು ಶುಭಕರ. ತಾನಾಗೇ ಮನೆ ಮುಂದೆ ಚಿಗುರಿದರೆ, ದೂರ ಸ್ಥಳಾಂತರಿಸಿ.

ಹಿಂದೂ ಧರ್ಮ (Hinduism) ದಲ್ಲಿ ಗಿಡ- ಮರಕ್ಕೆ ಅದ್ರದೆ ಆದ ಮಾನ್ಯತೆ ಇದೆ. ಪ್ರತಿಯೊಂದು ಮರಕ್ಕೂ ವಿಶೇಷ ಧಾರ್ಮಿಕ ಮಹತ್ವವಿದೆ.  ಅನೇಕ ಗಿಡಗಳನ್ನು ಜನರು ಪೂಜೆ ಮಾಡ್ತಾರೆ. ಅವುಗಳಲ್ಲಿ ದೇವರು ವಾಸವಾಗಿದ್ದಾನೆಂದು ನಂಬ್ತಾರೆ. ಗಿಡಗಳನ್ನು ಸರಿಯಾದ ದಿಕ್ಕಿ (direction)ನಲ್ಲಿ ಹಾಗೂ ಸೂಕ್ತವಾದ ದಿನ ನೆಡೋದು ಬಹಳ ಮುಖ್ಯ. ನಮ್ಮ ಸುತ್ತಮುತ್ತ ಇರುವ ಪ್ರತಿಯೊಂದು ಗಿಡ – ಮರಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಜೀವನದ ಕಷ್ಟ, ಸಂತೋಷಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅವು ಕಾರಣ ಆಗ್ತವೆ. ತುಳಸಿ ಗಿಡ, ಗುಲಾಬಿ, ಅಲೋವೇರಾ, ದಾಸವಾಳ ಹೀಗೆ ಮನೆ ಮುಂದೆ ಒಂದಿಷ್ಟು ಗಿಡಗಳನ್ನು ಬೆಳೆಸುವ ನಾವು ಪಪ್ಪಾಯ ಗಿಡವನ್ನು ಕೂಡ ಬೆಳೆಸ್ತೇವೆ.  ಪಪ್ಪಾಯ (papaya) ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದ್ರ ಎಲೆ, ಕಾಯಿ ಸೇರಿದಂತೆ ಎಲ್ಲವನ್ನೂ ಔಷಧಿ ರೀತಿಯಲ್ಲಿ ಬಳಕೆ ಮಾಡಲಾಗುತ್ತೆ. ಆಪದ್ಬಾಂಧವನಂತೆ ಕೆಲಸ ಮಾಡುವ ಈ ಪಪ್ಪಾಯ ಗಿಡವನ್ನು ನಿಮ್ಮ ಮನೆ ಮುಂದೆ ಬೆಳೆಸಿದ್ರೆ, ಅದಕ್ಕಿರುವ ವಾಸ್ತು ನಿಯಮಗಳನ್ನು ತಿಳಿದ್ಕೊಳ್ಳಿ.

ಮನೆ ಮುಂದೆ ಪಪ್ಪಾಯ ಗಿಡವಿದ್ರೆ ಒಳ್ಳೆಯದಾ? : ವಾಸ್ತು ಶಾಸ್ತ್ರದ ಪ್ರಕಾರ ಮನೆ ಮುಂದೆ ಪಪ್ಪಾಯ ಗಿಡವಿರೊದು ಶುಭ ಸಂಕೇತವಲ್ಲ. ಪಪ್ಪಾಯ ಗಿಡ ಮನೆ ಮುಂದೆ ಇದ್ರೆ ಅನಿರೀಕ್ಷಿತ ಸಮಸ್ಯೆಗಳು ಬರ್ತಾನೆ ಇರುತ್ವೆ. ಆರ್ಥಿಕ ಸಮಸ್ಯೆ ಕುಟುಂಬಸ್ಥರನ್ನು ಕಾಡುತ್ತದೆ. ಮನೆಗೆ ಹರಿದು ಬರಲಿರುವ ಹಣದ ಹರಿವನ್ನು ಇದು ತಡೆಯುತ್ತೆ ಎನ್ನುವ ನಂಬಿಕೆ ಇದೆ. ಇದು ಮನೆಯ ಶಾಂತಿ ಹಾಗೂ ಸಮೃದ್ಧಿ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತೆ. ಮನೆಯಲ್ಲಿ ಸದಾ ಕಲಹ, ಅಶಾಂತಿ ಮನೆ ಮಾಡಿರುತ್ತದೆ. ಮನೆ ಮುಂದಿರುವ ಪಪ್ಪಾಯ ಗಿಡ, ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದ್ರಿಂದ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗುತ್ವೆ. ಮನೆಯ ದಕ್ಷಿಣ ದಿಕ್ಕಿನಲ್ಲಿ ಪಪ್ಪಾಯ ಗಿಡವಿದ್ರೆ, ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಇದು ರೋಗವನ್ನು ಆಕರ್ಷಿಸುತ್ತದೆ. ಒಬ್ಬರಾದ್ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗ್ತಾರೆ.

ಈ ಮೂಲಾಂಕದ ಹುಡುಗೀರು ಪುರುಷರಿಗಿಂತ ಜಾಸ್ತಿನೆ ಹಣ ಗಳಿಸ್ತಾರೆ

ಪಪ್ಪಾಯ ಗಿಡದಲ್ಲಿ ಪಿತೃಗಳ ವಾಸ : ಜ್ಯೋತಿಷ್ಯ ಶಾಸ್ತ್ರದಲ್ಲಿ, ಪಪ್ಪಾಯ ಗಿಡದಲ್ಲಿ ಪಿತೃಗಳು ವಾಸಿಸ್ತಾರೆ ಎನ್ನಲಾಗಿದೆ. ನೀವು ಮನೆ ಮುಂದೆ ಬೆಳೆಸಿದ ಪಪ್ಪಾಯ ಗಿಡದಲ್ಲಿ ನಿಮ್ಮ ಪೂರ್ವಜರು ವಾಸ ಶುರು ಮಾಡ್ಬಹುದು. ಪಿತೃರಿಗೆ ಸಂಬಂಧಿಸಿದ ವಸ್ತು ಮನೆ ಮುಂದೆ ಇದ್ರೆ  ಸಕಾರಾತ್ಮಕ ಶಕ್ತಿಯಲ್ಲಿ ಏರುಪೇರಾಗುತ್ತದೆ. ಕುಟುಂಬ ಸದಸ್ಯರು ಸಾಕಷ್ಟು ನೋವು ತಿನ್ಬೇಕಾಗುತ್ತದೆ. 

ತಾನಾಗೆ ಬಂದ ಪಪ್ಪಾಯ ಗಿಡವನ್ನು ಏನು ಮಾಡ್ಬೇಕು? : ನಿಮ್ಮ ಮನೆ ಮುಂದೆ ಪಪ್ಪಾಯದ ಚಿಕ್ಕ ಗಿಡವೊಂದು ಚಿಗುರಲು ಶುರುವಾಗಿದೆ ಅಂದ್ರೆ ಅದನ್ನು ತಕ್ಷಣ ತೆಗೆದು, ಮನೆಯಿಂದ ದೂರದ ಸ್ಥಳದಲ್ಲಿ ನೆಡಿ. ಹೀಗೆ ಮಾಡಿದ್ರೆ ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಪಡೆಯಬಹುದು.

ಈ ದಿನಗಳಲ್ಲಿ ಹುಟ್ಟಿದವರು ಯಾವ ಬಣ್ಣದ ಬಟ್ಟೆ ಹಾಕಬೇಕು ಗೊತ್ತಾ?

ಪಪ್ಪಾಯ ಗಿಡವನ್ನು ಎಲ್ಲಿ ನೆಡ್ಬೇಕು? : ಪಪ್ಪಾಯ ಗಿಡ ಬೆಳೆಸಬೇಕು ಎನ್ನುವವರು ಮನೆಯ ಹಿಂದೆ ಅಥವಾ ತೋಟದಲ್ಲಿ ಅದನ್ನು ನೆಡಬೇಕು. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಅದನ್ನು ಬೆಳೆಸೋದು ಶುಭಕರ. ಸರಿಯಾದ ದಿಕ್ಕಿನಲ್ಲಿ ಪಪ್ಪಾಯ ಗಿಡ ಬೆಳೆಸಿದ್ರೆ ಸಕಾರಾತ್ಮಕ ಶಕ್ತಿ ಕಡಿಮೆ ಆಗೋದಿಲ್ಲ ಜೊತೆಗೆ ಕುಟುಂಬಸ್ಥರ ಆರೋಗ್ಯದ ಮೇಲೆ ಯಾವ್ದೆ ಕೆಟ್ಟ ಪ್ರಭಾವ ಬೀರೋದಿಲ್ಲ. ಹಾಗಾಗಿ ಪಪ್ಪಾಯ ಗಿಡ ಬೆಳೆಸುವ ಮುನ್ನ ನೀವು, ಅದರ ದಿಕ್ಕು, ವಾಸ್ತು ನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. 
 

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ